ಮನದ ತಂತಿಗಳನ್ನೆಲ್ಲಾ ಮೀಟಿನುಡಿಸಿದ್ದಳು “ಸಂಗೀತ’ವನ್ನು…

Team Udayavani, Feb 21, 2017, 3:45 AM IST

ನನ್ನ ಮನದ ಕುತೂಹಲಕ್ಕೆ ಕೊನೆಯೇ ಇಲ್ಲವಾಯಿತು, ಪುಸ್ತಕ ಕೈಯಲ್ಲಿದ್ದರೂ ಓದದಾದೆ, ಕಣ್ಣಲ್ಲಿ ನಿದ್ರೆಯ ಸ್ಪಷ್ಟ ಸೂಚನೆಗಳಿದ್ದರೂ ಮಲಗದಾದೆ. ಹೀಗೇಕೆ ಆಗುತ್ತಿದೆ ಎಂದು ಯೋಚಿಸುವ ಮೊದಲೇ ನಾನು ಅವಳ ಮನದೊಳಗೆ ಮುಳುಗಿದ್ದೆ… ನಾಳೆಯವರೆಗೂ ಕಾಯುವುದು ಅತಿ ಕಷ್ಟ ಅನ್ನಿಸಿತು. ಮಧ್ಯಾಹ್ನ ಊಟ ಮುಗಿಸಿ ಟಿ.ವಿ ಕಡೆಗೆ ಕಣ್ಣು ಹಾಯಿಸುತ್ತಿದ್ದೆ, ಆಗಲೇ ಇನ್ನೊಮ್ಮೆ ಮೊಬೈಲ್‌ ರಿಂಗಣಿಸಿತು…

“ಓಹ್‌.. ನೀನು ಹರೀಶ್‌ ಅಲ್ವಾ..?’ ಒಂದು ದಿನ ಶಿವಮೊಗ್ಗ ಸಿಟಿಯಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕೇಳಿದಳು ಹುಡುಗಿಯೊಬ್ಬಳು. ನನಗವಳ ಪರಿಚಯವಿರಲಿಲ್ಲ. ಎಲ್ಲೋ ನೋಡಿದ ನೆನಪೂ ಇಲ್ಲ. ಸಾಮಾಜಿಕ ಜಾಲತಾಣದಲ್ಲೂ ಆ ಮುಖವನ್ನು ಎಂದಿಗೂ ನೋಡಿರಲಿಕ್ಕಿಲ್ಲ. ಅವಳು ಮತ್ತೆ ಕೇಳಿದಳು: “ನೀನು ಹರೀಶ್‌ ಅಲ್ವ?’ ನಾನು ಹೌದೆಂದೆ…ನನ್ನನ್ನು ಅವಳೇ ಮತ್ತೂಮ್ಮೆ ಕೇಳಿದಳು: “ನನ್ನ ನೆನಪಿದೆಯೇ?’. ನಾನು “ಇಲ್ಲ’ ಎಂದೆ. ಅವಳು “ಈ ಹುಡುಗರೇ ಹೀಗಿರಬಹುದು. ಎಷ್ಟೋ ಹುಡುಗಿಯರನ್ನು ದಿನವೂ ನೋಡುವ ನಿನಗೆ ನನ್ನ ನೆನಪೆಲ್ಲಿರಬೇಕು’ ಎಂದು ಹೂಮಳೆಯಂತಹ ಮುಗುಳುನಗೆ ಚೆಲ್ಲಿದಳು… ನಂತರ ಅವಳೇ ನೆನಪಿಸಿದಳು, ಒಂದು ದಿನ, ಎರಡು ವರ್ಷದ ಹಿಂದೆ ನಾನು ಓದಿದ ಕಾಲೇಜಿನಲ್ಲಿ ಜರುಗಿದ ವಿಜ್ಞಾನ ವಸ್ತುಪ್ರದರ್ಶನ ನೋಡಲು ತಾನು ಬಂದಾಗ ನನ್ನನ್ನು ಮಾತನಾಡಿಸಿದ್ದಳೆಂದು… ಆ ನೆನಪೆಲ್ಲಿರಬೇಕು ನನಗೆ? ಆ ದಿನ ಆ ಪ್ರದರ್ಶನ ನೋಡಲು ಬಂದಿದ್ದವರು ಒಬ್ಬರೇ? ಇಬ್ಬರೇ…!?

ಅಷ್ಟರದ್ದಾಗಲೇ ನನ್ನ ಹೃದಯಮಿಡಿತ ಜೋರಾಗಿತ್ತು. ಜಿಟಿಜಿಟಿ ಮಳೆ ಜಿನುಗುತ್ತಿತ್ತು ಮೈಮೇಲೆ. ಮುಂಗಾರು ಮಳೆಯ ನೈಜ ದರ್ಶನವಾಗುತ್ತಿತ್ತು ಮಲೆನಾಡಿನಲ್ಲಿ. ನಾನು ಪರಿಚಿತ ನಾಗಬೇಕೆಂದುಕೊಂಡೆ- “ನಿಮ್ಮ ಹೆಸರು?’ ಎಂದು ಮುಗಟಛಿವಾಗಿ ಕೇಳಿದೆ, ಅವಳೂ ನಿಸ್ಸಂಕೋಚವಾಗಿ ಹೇಳಿದಳು. ಬಳುಕೋ ಬಳ್ಳಿಯಂತಹ ಮೈಮಾಟ, ಪಕ್ಕಾ ಗ್ರಾಮೀಣ ಉಡುಪು- ಶೈಲಿ, ನಖಶಿಖಾಂತದವರೆಗೂ ಬೆಳೆದಿದ್ದ ಕೂದಲು, ಆ ಮುಖದ ತುಂಬೆಲ್ಲಾ ಹರಡಿದ್ದ ಮುಗುಳುನಗು, ಮೂಗುತಿ ಸುಂದರಿ, ಐದೂವರೆ ಅಡಿ ಎತ್ತರದ ನೀಳಕಾಯ, ಬೊಟ್ಟಿಟ್ಟು ಕುಂಕುಮವಿಟ್ಟಿದ್ದ ಹಣೆ, ವಾವ್‌, ನಾನು ನನ್ನ ಮನದಲ್ಲಿ ಹೇಗೆ ಬಯಸಿದ್ದೆನೋ, ಹಾಗೆ ಇರುವ ಹುಡುಗಿ ಪ್ರತ್ಯಕ್ಷವಾಗಿದ್ದಳು ಕಣ್ಣ ಮುಂದೆ, ನಂಬದಾದೆ ನನ್ನ ಕಣ್ಣುಗಳನ್ನೇ!!!

ಅವಳ ಹೆಸರನ್ನಾಗಲೇ ಹೇಳಿದ್ದಳು. ಸಂಗೀತಾ! ಅದಾಗಲೇ ನನ್ನ ಮನಸ್ಸಿನ ತಂತಿಗಳನ್ನೆಲ್ಲಾ ಮೀಟಿ ನುಡಿಸಿದ್ದಳು “ಸಂಗೀತ’ವನ್ನು, ಹೀಗೆ ಪರಿಚಯವಾಯಿತು…

ಪಕ್ಕದಲ್ಲೇ ಇದ್ದ ಕೆಫೆಯಲ್ಲಿ ಮುಂಗಾರು ಮಳೆಯ ಆ ಸಮಯ, ಹಿತವಾದ ತಂಗಾಳಿ, ಚಳಿಗಳ ನಡುವೆ ಕಾμ ಕುಡಿಯುತ್ತಾ ಮಾತಿನಲ್ಲಿ ಮಗ್ನಳಾಗಿದ್ದಳು.. ಮಾತು ಸ್ವಲ್ಪ ಹೆಚ್ಚೇ.. ಮಳೆನಿಂತರೂ ಮಾತುಗಳು ನಿಲ್ಲುವ ಸೂಚನೆಯಿಲ್ಲ, ಪೋನ್‌ ನಂಬರ್‌ ಹಸ್ತಾಂತರವಾಯಿತು, ವಾಟ್ಸಾಪ್‌ ಸಂದೇಶಗಳ ವಿನಿಮಯವೂ ಆಯಿತು. ಇದ್ದಕ್ಕಿದ್ದಂತೆ ಒಂದು ದಿನ ರಾತ್ರಿ 10.30ಕ್ಕೆ     ಮೊಬೈಲ್‌ ರಿಂಗಣಿಸಿತು.. sangeeeeeeeeetha ಎಂದು ಬರೆದಿದ್ದ ನಂಬರ್‌ ಕಣ್ಣಿಗೆ ಬಿತ್ತು!! ರಿಸೀವ್‌ ಮಾಡಿದೆ, ಉಭಯ ಕುಶಲೋಪರಿಯ ಮಾತುಗಳು ಕೇಳಿಬಂದವು.

“ಏನೋ ಹೇಳಬೇಕಿತ್ತು…’

“ಏನು?’

“ಏನಿಲ್ಲ, ನಾಳೆ ಹೇಳುವೆ..!’ ಎಂದು ಮಾತು ಮುಗಿಸಿದ್ದಳು.

ನನ್ನ ಮನದ ಕುತೂಹಲಕ್ಕೆ ಕೊನೆಯೇ ಇಲ್ಲವಾಯಿತು, ಪುಸ್ತಕ ಕೈಯಲ್ಲಿದ್ದರೂ ಓದದಾದೆ, ಕಣ್ಣಲ್ಲಿ ನಿದ್ರೆಯ ಸೂಚನೆಗಳಿದ್ದರೂ ಮಲಗದಾದೆ. ಹೀಗೇಕೆ ಆಗುತ್ತಿದೆ ಎಂದು ಯೋಚಿಸುವ ಮೊದಲೇ ನಾನು ಅವಳ ಮನದೊಳಗೆ ಮುಳುಗಿದ್ದೆ..ನಾಳೆಯವರೆಗೂ ಕಾಯುವುದು ಅತಿ ಕಷ್ಟ, ಮಧ್ಯಾಹ್ನ ಊಟ ಮುಗಿಸಿ ಟಿ.ವಿ ಕಡೆಗೆ ಕಣ್ಣು ಹಾಯಿಸುತ್ತಿದ್ದೆ,ಇನ್ನೊಮ್ಮೆ ಮೊಬೈಲ್‌  ರಿಂಗಣಿಸಿತು..!!! ಎಂದೂ ಕಾಣದ ಹರುಷ ಇಂದು ನಾನು ಕಂಡೆನಲ್ಲ ಎಂಬ ಸವಿನಾದದ ರಿಂಗ್‌ ಟೋನ್‌ ಕೇಳಿಸಿತು.. ನೋಡಿದೆ,sangeeeeeetha, ರಿಸೀವ್‌ ಮಾಡಿದೆ!

“ಹೇಗಿದಿಯಾ?’ ಎಂದಳು,

“ಚೆನ್ನಾಗಿದ್ದೀನಿ.. ನಿನ್ನೆ ಏನೋ ಹೇಳಬೇಕೆಂದಿದ್ದೆ

ನೀರವ ಮೌನ ಆ ಕಡೆ.

“ನನ್ನ ಜೀವನದ ಕೊನೆಯವರೆಗೂ ಜೊತೆಯಾಗಿರು’

“ಓಕೆ ಆಯಿತು’ ಎಂದೆ. ಆಗಲ್ಲ ಎಂದು ಹೇಳಿ ಯಾರ ಮನಸ್ಸನ್ನೂ ನೋಯಿಸುವ ಮನಸ್ಥಿತಿಯವನಲ್ಲ ನಾನು. ಆದರೆ ಆ ಬೆಡಗಿ ಯಾಕೆ ಹೀಗೆ ಹೇಳಿದಳು? ಎಂದು ಯೋಚಿಸಿದೆ, ಯೋಚಿಸುತ್ತಾ ಕುಳಿತೆ… ವಿಭಿನ್ನ ಪ್ರಶ್ನೆಗಳೇ ಎದುರಾಗತೊಡಗಿದವು… ಇದೆಲ್ಲದರ ನಡುವೆ ಹತ್ತುದಿನಗಳ ಕಾಲ ಅವಳ ಕಡೆಯಿಂದ ಸಂದೇಶಗಳೇ ಇಲ್ಲ. ಎಂದೂ ಕಾಣದ ಹರುಷ ಅಂದು ನಾನು ಕಾಣಲೇ ಇಲ್ಲ’. ಹನ್ನೊಂದನೆಯ ದಿನ ಕಂಡೆ ಆ ಹರುಷವ… ಅವಳ ಕಾಲ್‌ ಬಂದಿತ್ತು. ಮಾತುಗಳು ಬದಲಾಗಿದ್ದವು, ವಿನೋದದಿಂದ ಮಾತನಾಡಿದೆ. “ಈ ಜನ್ಮದಲ್ಲಿ ನಿನಗೆ ಬುದ್ದಿ ಬರಲ್ಲ’ ಎನ್ನುವ ಅವಳ ಮಾಮೂಲಿ ಡಯಲಾಗ್‌ ಹೇಳಿದಳು. ಅವಳ ಆ ಮುಗ್ಧತೆಯೇ ನಾನು ಅವಳಿಗೆ ಮನಸೋಲಲು ಕಾರಣವಾಗಿತ್ತು…

ಹೀಗೇ ಮುಂದುವರೆದಿತ್ತು ಟೆಲಿಫೋನ್‌ ಗೆಳತಿಯ ಮಾತು, ಮುಗುಳು ನಗು, ಮನದ ಮಾತುಗಳು ಬರಲಾರಂಭಿಸಿದ್ದವು. ಆಗಿದ್ದ ಧಾಟಿ, ನಿಸ್ಸಂಕೋಚದ ಮಾತುಗಳು ಇಂದಿಗೂ ಮುಂದುವರೆದಿವೆ. ಪ್ರೀತಿಯ ಮಾತುಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ. ನಾನೇ ಏಕೋ ಮಾತನಾಡಲು ತಡವರಿಸುತ್ತೇನೆ, ಮನಸ್ಸಿನ ಹಠವೋ? ಗುರಿಯಡೆಗಿನ ಛಲವೋ? ಗೊತ್ತಿಲ್ಲ!! ಒಟ್ಟಿನಲ್ಲಿ ಎಂದಿಗೂ ಅವಳಷ್ಟು ನಾನು ಮಾತನಾಡಲಾರೆ. ನನಗೇನೋ ಅವಳು ಬದಲಾಗಿದ್ದಾಳೆ ಅನಿಸುತ್ತದೆ. ಆದರೆ ಬದಲಾಗಿದ್ದು ಅವಳ್ಳೋ? ನಾನೋ?
ತಿಳಿಯದು..

ಬಹುಷಃ ನಾನೇ ಇರಬೇಕು… !!!

– ಹರೀಶ್‌, ಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪ್ರೀತಿ ಅನ್ನೋದು ಆಳವಾದ ಸಮುದ್ರ ಕಣೋ. ಕೆರೆ, ಬಾವಿ, ನದಿಗಳ ನೀರು ಬತ್ತಬಹುದು, ಆದರೆ, ಸಮುದ್ರದ ನೀರು ಎಂದೂ ಬತ್ತಲ್ಲ; ಬತ್ತಿದ ಬಗ್ಗೆ ಮಾಹಿತಿಯೂ ಇಲ್ಲ ಬಿಡು. ಅಂಥ‌...

  • ನಮ್ಮೂರು ಹೀಗಿರಬೇಕು ಅಂತ ಕನಸು ಕಂಡ ಮೇಲೆ ಈ ಗುಂಪು ಸಮ್ಮನೆ ಕೂರಲಿಲ್ಲ. ಊರಿನ ಗಲ್ಲಿ ಗಲ್ಲಿ ತಿರುಗಿ, ಕಸ, ನೀರಿನ ಮಹತ್ವ ತಿಳಿಸುವುದರ ಜೊತೆಗೆ ತಾವೇ ಸ್ವತ್ಛತಾ...

  • ಪ್ರಿಯ ಇವನೇ, ನನಗಂತೂ ಇತ್ತೀಚಿಗೆ ಮೊಬೈಲ್‌ ಗೀಳು. ಅವರಿವರ ಮೇಸೇಜು, ಪ್ರೊಫೈಲ್‌ ತಡಕಾಡುವುದು,ಅಪಡೇಟ್‌ ನೋಡುವ ಕೆಲಸವಲ್ಲ. ನೀನೇನಾದರೂ ಫೇಸ್‌ಬುಕ್ಕಲ್ಲಿ ಫ್ರೆಂಡ್‌...

  • ಚೈತ್ರಮಾಸ, ಪುನರ್ವಸು ನಕ್ಷತ್ರ, ನವಮಿ ತಿಥಿಯಲ್ಲಿ ಹುಟ್ಟಿದ ಶ್ರೀರಾಮ ಜೀವಿಸಿದ್ದ ಕಾಲಾವಧಿ ಯಾವುದು? ಅದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಈಗ ಐದು ಸಾವಿರ...

  • ಮಳೆಗಾಲ ಎಂದರೆ ಮಕ್ಕಳ ಮನಸ್ಸು ಗಾಂಧೀ ಬಜಾರು. ಶಾಲೆ ಮುಂದೆ ಹರಿಯುವ ಝರಿಯಲ್ಲಿ ಆಟವಾಡುವುದು, ಹೆಂಚುಗಳ ಅಂಚಿಂದ ಸುರಿಯುವ ನೀರ ಕೆಳಗೆ ಕುಣಿಯುವುದು, ಮಳೆ ಹೆಚ್ಚಾಗಲಿ,...

ಹೊಸ ಸೇರ್ಪಡೆ