ಪರೀಕ್ಷೆ .. ಐ ಲವ್‌ ಯೂ!

Team Udayavani, Mar 14, 2017, 3:50 AM IST

14-JOSH-10.jpg

ಪರೀಕ್ಷೆ ಎಂದರೆ ಭಯ, ಆತಂಕ, ಆವೇಗ, ಗಲಿಬಿಲಿ, ಇತ್ಯಾದಿ ಇತ್ಯಾದಿ. ಇದು ಎಲ್ಲರಿಗೂ ಕಾಡುವ ಸಾಮಾನ್ಯ ಸಂಗತಿ. ಈ ಭಯದಿಂದ ಹೊರ ಬಂದು ಪರೀಕ್ಷೆ ಬರೆಯುವುದಾದರೂ ಹೇಗೆ ಎಂಬುದೇ ಈಗ ಬಿಲಿಯನ್‌ ಡಾಲರ್‌ ಪ್ರಶ್ನೆ! ಕೆಲವರಿರುತ್ತಾರೆ ಬಿಡಿ, ಅವರೆಲ್ಲರೂ ಜೀನಿಯಸ್ಸುಗಳು. ನಾನು ಮಾತನಾಡುತಿರುವುದು ಲಾಸ್ಟ್… ಬೆಂಚಿನವರ ಬಗ್ಗೆ.

ಯಾವುದೇ ವಿಷಯದ ಬಗ್ಗೆ ನಮಗೆ ಅರಿವಿರದಿದ್ದಾಗ ಭಯ ಸಾಮಾನ್ಯ. ರಸ್ತೆಯೇ ಇಲ್ಲದ ಊರಿಗೆ ಹೊರಟಾಗ ಅಳುಕು ಕಾಡುತ್ತದೆ, ಹೋಗಿ ಬಂದು, ಹೋಗಿ ಬಂದು ಅಭ್ಯಾಸವಾಗಿಬಿಟ್ಟರೆ ಆನೆ ನಡೆದದ್ದೇ ದಾರಿ ಎಂಬಂತೆ ಸಣ್ಣ ಕಾಲುದಾರಿಯೇ ಮುಂದೊಂದು ದಿನ ಹೆ¨ªಾರಿಯಾಗುತ್ತದೆ.

ಪರೀಕ್ಷೆ ಎದುರಿಸಲು ಸುಲಭೋಪಾಯವೆಂದರೆ ಆರಂಭದಿಂದ ಓದಲು ಶುರು ಮಾಡುವುದು. ಸರಿಯಾದ ವೇಳಾಪಟ್ಟಿಯನ್ನು ಅನುಸರಿಸುವುದು. ತರಗತಿಗೆ ಗೈರಾಗದಿರುವುದು. ಹೆಚ್ಚೆಚ್ಚು ಬಾರಿ ಪುನರಾವರ್ತನೆ ಮಾಡುವುದು. ಅಣಕು ಪರೀಕ್ಷೆಗಳಲ್ಲಿ ಭಾಗವಹಿಸುವುದು. ಇದಕ್ಕೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಪರಾಮರ್ಶಿಸುವುದು. ಹಿರಿಯ ವಿದ್ಯಾರ್ಥಿಗಳ ಸಲಹೆ- ಮಾರ್ಗದರ್ಶನ
ಪಡೆಯುವುದು. ಮೊಬೈಲ… ಬಳಕೆಗೆ ಸ್ವಯಂ ನಿಷೇಧ ವಿಧಿಸುವುದು. ಲೈಬ್ರರಿಯಲ್ಲಿ ಸೆರೆಯಾಗುವುದು. ವಿಷಯ ಜ್ಞಾನವನ್ನು ವೃದ್ದಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸ್ವಯಂ ಶಿಸ್ತು ಅಳವಡಿಸಿಕೊಳ್ಳುವುದು. ಏಕೆಂದರೆ “ಹೇಳಿಕೊಟ್ಟ ಬುದ್ದಿ; ಕಟ್ಟಿ ಕೊಟ್ಟ ಬುತ್ತಿ’ ಎಲ್ಲಿಯವರೆಗೆ ಬಂದಾವು ಅಲ್ಲವೇ?!

ಈ ಎಲ್ಲಾ ಸಂಗತಿಗಳು ನಿಮಗೆ ಗೊತ್ತಿಲ್ಲದವೇನಲ್ಲ. ಆದರೆ ಅವುಗಳನ್ನು ಅನುಸರಿಸದಿರುವುದೇ ನಾವು ಮಾಡುವ ಪರಮ ಪಾಪದ ಕೆಲಸ. ಇಲ್ಲಿ ಮುಖ್ಯವಾಗಿ ಒಂದು ಮಾತನ್ನು ಚೆನ್ನಾಗಿ ನೆನಪಿಡಿ. ನಾವು ಆಯ್ದುಕೊಂಡ ಕೋರ್ಸ್‌ ಬಗ್ಗೆ ನಮಗೆ ಅಪಾರ ಪ್ರೀತಿ ಇರಬೇಕು. ಎಷ್ಟೆಂದರೆ ಹರೆಯದಲ್ಲಿ ಹುಡುಗಿಯೊಬ್ಬಳೆಡೆಗೆ ಇರುವಷ್ಟು (ಹುಡುಗಿಯರಿಗೂ ಈ ಮಾತು ಅನ್ವಯಿಸುತ್ತದೆ).
ನಾವು ನಮ್ಮ ಕೋರ್ಸನ್ನು ಪ್ರೀತಿಸಬೇಕು. ಅದನ್ನು ಚೆನ್ನಾಗಿ ಅರಿಯಬೇಕು. ನಮ್ಮ ಕೋರ್ಶೇ ನಮಗೆ ಸರ್ವಸ್ವ. ಜಗತ್ತಿನಲ್ಲಿ ನಮ್ಮ ಅಧ್ಯಯನದ ಸಂಗತಿ ಬಿಟ್ಟರೆ ಬೇರೇನೂ ಇಲ್ಲವೆಂದು ತೀರ್ಮಾನಿಸಬೇಕು. “ನನ್ನ ಗುರಿ ತಲುಪಲು ನಾನೇ ಹೋರಾಡುತ್ತೇನೆ’ ಎಂದು ಅಂದುಕೊಂಡ ಘಳಿಗೆಯಲ್ಲಿ ಅಡಗಿದೆ ನೋಡಿ ಯಶಸ್ಸಿನ ಸೀಕ್ರೆಟ್‌. ಹೇಗೆ ಅರ್ಜುನನಿಗೆ ಮರದ ಮೇಲೆ ಕುಳಿತ ಪಕ್ಷಿಯ ಕಣ್ಣಿನ ಹೊರತು ಬೇರೇನೂ ಕಾಣಿಸಲಿಲ್ಲವೋ, ಹಾಗೆಯೇ ನಮಗೆ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರದ ಹೊರತು ಬೇರೇನೂ 
ಕಾಣದಂತಿರಬೇಕು. ಇವತ್ತಿನ ಹೈ ಸ್ಪೀಡ್‌ ಕಾಂಪಿಟೇಶನ್‌ ಯುಗದಲ್ಲಿ, ನೀನು ಅಂದ್ರೆ ನಿಮ್ಮಪ್ಪಅನ್ನುವವರೇ ಹೆಚ್ಚಾಗಿರುವಾಗ ನಾವು ಬೆಪ್ಪರಾಗುವುದು ತಪ್ಪಲ್ಲವೇ?! ಇಷ್ಟೆಲ್ಲಾ ಸಿದ್ದತೆ ಮಾಡಿಕೊಂಡ ಮೇಲೂ ಅಫ್ಟರ್‌ಆಲ… ಪರೀಕ್ಷೆಗೆ ಹೆದರಬೇಕೆ? ಜೋರಾಗಿ ಒಮ್ಮೆ ಪ್ರಳಯವಾಗುವಂತೆ ಕೂಗಿ: “ಪರೀಕ್ಷೆ… ಐ ಲವ್‌ ಯೂ!’ ಎದೆಯೊಳಗಿನ ಅಳುಕನ್ನು ಅಳಿಸಿಹಾಕಿ “ಜೋಶ್‌’ನಿಂದ ಪರೀಕ್ಷೆ ಬರೆಯಿರಿ. ಆಲ…ದ ಬೆಸ್ಟ್….

ಎಡೆಯೂರು ಸೋಮಣ್ಣ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.