Udayavni Special

ಕೊಡೆಯ ಕೆಳಗೆ ನಮ್ಮಿಬ್ಬರ ಆ ನಡೆ…


Team Udayavani, Aug 6, 2019, 5:00 AM IST

shutterstock_258817016

ಈಗಲೂ ಅಷ್ಟೇ; ನಿನ್ನ ಭೇಟಿಗೆಂದು ಹೊರಡುವ ಮುನ್ನ, ದೇವರೇ ಪ್ಲೀಸ್‌ ಮಳೆ ಬರಲಿ, ಜೊತೆಗೆ ಅವಳು ಕೊಡೆ ಮರೆತು ಬರಲಿ ಎಂದು ಪ್ರಾರ್ಥಿಸುತ್ತೇನೆ.

ಅಂದು ನಾವಿಬ್ಬರೂ ಭೇಟಿಯಾಗುತ್ತೇವೆಂಬ ಸಣ್ಣ ನಿರೀಕ್ಷೆಯೂ ಇರಲಿಲ್ಲ. ಎಲ್ಲಿಗೋ ಹೊರಟಿದ್ದ ನಾನು, ನನ್ನ ದಾರಿಯನ್ನು ನಿನ್ನೆಡೆಗೆ ತಿರುಗಿಸಲು, ನಿನ್ನ ಸಣ್ಣ ಆಹ್ವಾನವಷ್ಟೇ ಸಾಕಾಗಿತ್ತು. ಅದು ಹೇಳಿ ಕೇಳಿ ಮಳೆಗಾಲ. ಮಳೆಯ ಬಿರುಸಿಗೆ, ರಸ್ತೆಯಲ್ಲಿದ್ದ ವಾಹನಗಳು ಏದುಸಿರು ಬಿಡುತ್ತಾ ಇಷ್ಟಿಷ್ಟೇ ಮುಂದಕ್ಕೆ ಸಾಗುತ್ತಿದ್ದವು. ಆ ಟ್ರಾಫಿಕ್‌ ಜಾಮಿನ ಸಿಕ್ಕಿನಿಂದ ಬಿಡಿಸಿಕೊಂಡು ತಲುಪುವಷ್ಟರಲ್ಲಿ ಉಸ್ಸಪ್ಪಾ ಎಂದೆನಿಸಿದರೂ, ನಿನ್ನನ್ನು ನೋಡುತ್ತಿದ್ದಂತೆ ಆ ಆಯಾಸವೆಲ್ಲಾ ಮಂಗಮಾಯ.

ಆ ಬೀದಿಯಲ್ಲಿ ನಾವು ಮಾತಿನ ಮಳೆಗೆರೆಯುತ್ತಾ ಸಾಗುತ್ತಿದ್ದರೆ, ಮಳೆ ತಾನು ಸುರಿಯುವುದನ್ನೇ ಮರೆತು ಬಿಟ್ಟಿತ್ತು ! ಕೊನೆಗೆ, ಅದಕ್ಕೂ ನಮ್ಮ ಜೊತೆಗೆ ಹೆಜ್ಜೆ ಹಾಕಬೇಕೆಂಬ ಬಯಕೆ ಅತಿಯಾಗಿ ನಮ್ಮನ್ನು ಹಿಂಬಾಲಿಸಿಯೇ ಬಿಟ್ಟಿತು. ಮಾತುಗಳ ಮಳೆಯಲ್ಲಿ ಆಗಲೇ ತೊಯ್ದು ಹೋಗಿದ್ದ ನಮಗೆ, ಇನ್ನು ಈ ಮಳೆಯಲ್ಲೂ ನೆನೆದರೆ ನೆಗಡಿಯಾದೀತೇನೋ ಎಂಬ ಭಯದಿಂದ ಕೊಡೆ ಅರಳಿಸೋಣವೆಂದರೆ ಅಂದು, ನೀ ಕೊಡೆಯನ್ನೇ ತಂದಿರಲಿಲ್ಲ. “ಅಯ್ಯೋ ತಂದಿಲ್ಲ, ಪಿ.ಜಿಯಲ್ಲೇ ಮರೆತು ಬಂದಿದ್ದೇನೆ’ ಎಂದು ಹೇಳುತ್ತಿರಬೇಕಾದರೆ ನನಗೇ ಅರಿವಿಲ್ಲದಂತೆ, ಕೊಡೆಗೂ ಮುಂಚಿತವಾಗಿ ನನ್ನ ಮನಸ್ಸು ಅರಳಿ ನಿಂತಿತು!

ಹನಿ ಮಳೆ, ತಂಪು ಗಾಳಿ, ಮೋಡ ಕವಿದ ಮಬ್ಬೆಳಕಿನ ಅಲಂಕಾರದೊಂದಿಗೆ ಒಂದೇ ಕೊಡೆಯ ಅಡಿಯಲ್ಲಿ ಜೊತೆ ಜೊತೆಯಾಗಿ ಮುಂದಡಿ ಇಡುತ್ತಿದ್ದರೆ ರೋಮಾಂಚನ. ಇಂಥ ಆಸೆ ಕಂಠಪೂರ್ತಿ ಇದ್ದರೂನೂ, ಕೊಡೆಯನ್ನು ನಿನಗೇ ಕೊಟ್ಟು, ನಾನು ಹಾಗೇ ನಡೆದುಕೊಂಡು ಬರುತ್ತೇನೆ ಎಂತ ಹೇಳುವ ಮೂಲಕ, ನಿನ್ನ ದೃಷ್ಟಿಯಲ್ಲಿ ನಾನು ತೀರಾ ಸಂಭಾವಿತ ಎಂದೆನಿಸಿಕೊಳ್ಳಲು ಪ್ರಯತ್ನಿಸಿದ್ದೆ. ” ನೀನು ನನ್ನ ಮಳೆಯಲ್ಲಿ ನೆನೆಯಲು ಬಿಡದೇ, ಒಳ ಕರೆದೇ ಕರೆಯುತ್ತೀಯಾ’ ಎಂಬ ನನ್ನ ಬಲವಾದ ವಿಶ್ವಾಸ ಹುಸಿಯಾಗಲಿಲ್ಲ.

ಹಾಗಂತ, ಅದೇನೂ ನಾವು ಎಂದೂ ಸಾಗದ ಬೀದಿಏನಲ್ಲ. ಆದರೆ ಒಂದೇ ಕೊಡೆಯ ಕೆಳಗೆ, ನಿನ್ನೊಂದಿಗೆ ಹೆಜ್ಜೆ ಹಾಕುತ್ತಾ ಸಾಗುವಾಗ ಸುತ್ತಲೂ ಕಣ್ಣು ಹಾಯಿಸುತ್ತಿದ್ದರೆ ಎಲ್ಲವೂ ನವನವೀನ.

ಅದೇ ಮೊದಲ ಬಾರಿಗೆ ನಾವು ಮೈಗೆ ಮೈ ಸೋಕುವಷ್ಟು ಹತ್ತಿರ ನಿಂತು ಅಷ್ಟು ದೂರ ಕ್ರಮಿಸಿದ್ದು ಮತ್ತು ಹತ್ತಿರವಿದ್ದಿದ್ದಕ್ಕೇ ಇರಬೇಕು ಆ ದಾರಿಯ ದೂರ ಅರಿವಿಗೇ ಬಂದಿರಲಿಲ್ಲ.

ಎಷ್ಟು ದೂರ ಆದರೂ ಸರಿ, ನಡೆಯುತ್ತೇವೆ ಎಂಬ ಆ ಕ್ಷಣದ ಹುಮ್ಮಸ್ಸಿನಲ್ಲಿ ಹೆಜ್ಜೆ ಹಾಕಿ ದಾರಿ ತಪ್ಪಿ, ತುಸು ಪೀಕಲಾಟಕ್ಕೆ ಒಳಗಾದದ್ದು ಇಂದಿಗೂ ಒಂದು ಪಾಠವೇ. ಕೊನೆಗೆ ನಮ್ಮ ನಮ್ಮ ಹಾದಿ ಹಿಡಿದು ಹೊರಡುವಾಗ ಮಳೆ ನಿಂತಿತ್ತು, ಅರಳಿದ ಕೊಡೆ ಮುದುಡಿತ್ತು,

ಅದರೊಂದಿಗೆ ಮನಸ್ಸೂ ಕೂಡಾ!

ಈಗಲೂ ಅಷ್ಟೇ; ನಿನ್ನ ಭೇಟಿಗೆಂದು ಹೊರಡುವ ಮುನ್ನ, ದೇವರೇ ಪ್ಲೀಸ್‌ ಮಳೆ ಬರಲಿ, ಜೊತೆಗೆ ಅವಳು ಕೊಡೆ ಮರೆತು ಬರಲಿ ಎಂದು ಪ್ರಾರ್ಥಿಸುತ್ತೇನೆ. ಹಾಗಾದರೂ, ಸಣ್ಣಗೆ ಸುರಿಯುವ ಮಳೆಯಲ್ಲಿ , ಒಂಟಿ ಕೊಡೆಯ ಕೆಳಗೆ ಒಟ್ಟೊಟ್ಟಿಗೆ ನಿಲ್ಲುವ ಅನುಭೂತಿಯನ್ನು ಮತ್ತೂಮ್ಮೆ ದಕ್ಕಿಸಿಕೊಳ್ಳುವ ಹಿತವಾದ ಹಪಾಹಪಿಯದು.

– ಸಂದೇಶ್‌ ಎಚ್‌ ನಾಯ್ಕ…, ಹಕ್ಲಾಡಿ, ಕುಂದಾಪುರ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಲಸಿಕೆ ವಿತರಣೆಗೆ ಸಮಿತಿ ರಚಿಸಿ: ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

ಕೋವಿಡ್ ಲಸಿಕೆ ವಿತರಣೆಗೆ ಸಮಿತಿ ರಚಿಸಿ: ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

ಪುಲ್ವಾಮಾ ದಾಳಿಯಲ್ಲಿ ಇಮ್ರಾನ್‌ ಪಾತ್ರ ; ಠಿನ ಕ್ರಮ ಅಗತ್ಯ

ಪುಲ್ವಾಮಾ ದಾಳಿಯಲ್ಲಿ ಇಮ್ರಾನ್‌ ಪಾತ್ರ ; ಠಿನ ಕ್ರಮ ಅಗತ್ಯ

ನಮ್ಮದೇ ಕಣ್ಣುಗಳಿಂದ ಕಾಣುವ ನಮ್ಮ ಬದುಕು

ನಮ್ಮದೇ ಕಣ್ಣುಗಳಿಂದ ಕಾಣುವ ನಮ್ಮ ಬದುಕು

ಯಕ್ಷಗಾನ ಮೇಳಗಳ ತಿರುಗಾಟ; ಕ್ಷೇತ್ರಗಳಲ್ಲೇ ಪ್ರದರ್ಶನಕ್ಕೆ  ಒತ್ತು

ಯಕ್ಷಗಾನ ಮೇಳಗಳ ತಿರುಗಾಟ; ಕ್ಷೇತ್ರಗಳಲ್ಲೇ ಪ್ರದರ್ಶನಕ್ಕೆ  ಒತ್ತು

ಶ್ವಾನ-ಮನುಷ್ಯನ ಗೆಳೆತನ ಪುರಾತನ!

ಶ್ವಾನ-ಮನುಷ್ಯನ ಗೆಳೆತನ ಪುರಾತನ!

ಸೇನೆಯಿಂದ ವಾಟ್ಸ್‌ಆ್ಯಪ್‌ ಮಾದರಿಯ ಅಪ್ಲಿಕೇಶನ್‌

ಸೇನೆಯಿಂದ ವಾಟ್ಸ್‌ಆ್ಯಪ್‌ ಮಾದರಿಯ ಅಪ್ಲಿಕೇಶನ್‌

ಏಕ ಭಾರತದ ಅಮೃತ ಪುರುಷ ಪಟೇಲರು

ಏಕ ಭಾರತದ ಅಮೃತ ಪುರುಷ ಪಟೇಲರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-4

ಕಂಬ್ಳಿ ಹುಳದ ಪುರಾಣ

josh-tdy-3

ಬಾರೋ ಸಾಧಕರ ಕೇರಿಗೆ :ಕಾಫ್ಕನೂ, ಪುಟ್ಟಿಯ ಗೊಂಬೆಯೂ…

josh-tdy-2

ಸೋತುಹೋದೆ ಎಂದು ಮನಸ್ಸಿಗೆ ಹೇಳಬೇಡಿ…

josh-tdy-1

ಫೇಕ್‌ ಇಟ್‌ ಈಸಿ!

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

ಕೋವಿಡ್ ಲಸಿಕೆ ವಿತರಣೆಗೆ ಸಮಿತಿ ರಚಿಸಿ: ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

ಕೋವಿಡ್ ಲಸಿಕೆ ವಿತರಣೆಗೆ ಸಮಿತಿ ರಚಿಸಿ: ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

ಪುಲ್ವಾಮಾ ದಾಳಿಯಲ್ಲಿ ಇಮ್ರಾನ್‌ ಪಾತ್ರ ; ಠಿನ ಕ್ರಮ ಅಗತ್ಯ

ಪುಲ್ವಾಮಾ ದಾಳಿಯಲ್ಲಿ ಇಮ್ರಾನ್‌ ಪಾತ್ರ ; ಠಿನ ಕ್ರಮ ಅಗತ್ಯ

ನಮ್ಮದೇ ಕಣ್ಣುಗಳಿಂದ ಕಾಣುವ ನಮ್ಮ ಬದುಕು

ನಮ್ಮದೇ ಕಣ್ಣುಗಳಿಂದ ಕಾಣುವ ನಮ್ಮ ಬದುಕು

ಯಕ್ಷಗಾನ ಮೇಳಗಳ ತಿರುಗಾಟ; ಕ್ಷೇತ್ರಗಳಲ್ಲೇ ಪ್ರದರ್ಶನಕ್ಕೆ  ಒತ್ತು

ಯಕ್ಷಗಾನ ಮೇಳಗಳ ತಿರುಗಾಟ; ಕ್ಷೇತ್ರಗಳಲ್ಲೇ ಪ್ರದರ್ಶನಕ್ಕೆ  ಒತ್ತು

ಶ್ವಾನ-ಮನುಷ್ಯನ ಗೆಳೆತನ ಪುರಾತನ!

ಶ್ವಾನ-ಮನುಷ್ಯನ ಗೆಳೆತನ ಪುರಾತನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.