ನಿನ್ನ ವಂಚನೆಯನ್ನು ಕ್ಷಮಿಸ್ತೀನಿ…

Team Udayavani, Mar 5, 2019, 12:30 AM IST

3-letter-nagaraja.jpg

ನಿನ್ನ ಚಿಂತೆಯಲ್ಲಿಯೇ ನಾನು ಕೊರಗುತ್ತಾ ಕುಳಿತಿಲ್ಲ. ಸಾಧನೆಯ ಮೊದಲ ಮೆಟ್ಟಿಲನ್ನು ಏರಿದ್ದಾಗಿದೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಅದಕ್ಕೆ ನೀನೇ ಕಾರಣ. ನನ್ನನ್ನು ಕಟೆದು ಮೂರ್ತಿಯನ್ನಾಗಿ ಮಾಡುತ್ತಿರುವ ನಿನಗೆ ಥ್ಯಾಂಕ್ಸ್‌. 

ಏ ಬೆಳಗಾವಿ ಹುಡುಗ,
ಏನಪ್ಪಾ, ಮತ್ತೆ ಯಾಕೆ ಪತ್ರ ಬರೀತಾ ಇದಾಳೆ ಅಂತ ಯೋಚೆ ಮಾಡ್ತಾ ಇದ್ದೀಯ? ನಿಂಗೆ ಗೊತ್ತಿಲ್ವಾ ನಾನು ಮನೆಯಿಂದ ಹೊರಗೇ ಬರದ ಹುಡುಗಿ ಅಂತ. ಮನೆ, ಕಾಲೇಜು, ಓದು ಇದಿಷ್ಟೇ ನನ್ನ ಜೀವನವಾಗಿತ್ತು. ಎಲ್ಲ ವಿಷಯದಲ್ಲೂ ಅನುಸರಿಸಿಕೊಂಡು ಹೋಗುವ ಹುಡುಗಿಯಾಗಿದ್ದೆ. ನೀನು ನನ್ನ ಜೀವನದಲ್ಲಿ ಬಂದ ಮೇಲೆ ನಾನು ಬದುಕುವ ರೀತಿಯೇ ಬದಲಾಯ್ತು. ಯಾವತ್ತೂ, ಯಾವುದಕ್ಕೂ ಹಠ ಹಿಡಿಯದ ನಾನು, ನಿನ್ನ ವಿಷಯದಲ್ಲಿ ಹಠ ಹಿಡಿದು ಕುಳಿತಿದ್ದೇನೆ. ಕಾರಣ, ನಿನ್ನ ಮೇಲಿನ ಪ್ರೀತಿ! 

ನೀನಂದ್ರೆ ನಂಗೆ ಒಂದು ರೀತಿಯ ಭಯ ಇತ್ತು. ಅದಕ್ಕೂ ಮಿಗಿಲಾಗಿ ಪ್ರೀತಿ ಇತ್ತು. ನನ್ನ ಹೃದಯದ ಒಡೆಯ ಎಂಬ ಭ್ರಮೆ ಇತ್ತು. ಪ್ರೀತಿಯ ಅರಿವು ಕೂಡ ಇಲ್ಲದ ನನಗೆ, “ಪ್ರೀತಿ ಅಂದ್ರೆ ಏನು?’ ಅಂತ ಕೇಳಿದ್ರೆ, ಕಣ್ಮುಚ್ಚಿ ನಿನ್ನ ಹೆಸರು ಹೇಳುತ್ತಿದ್ದೆ. ಅವತ್ತೂಂದಿನ, “ನಾನು ನಿನ್ನ ಜೀವನದಲ್ಲಿ ಬಂದಿರೋದೇ ನಿನ್ನನ್ನು ಕೊನೆಯವರೆಗೆ ಸಂತೋಷದಿಂದ ಇಡೋಕೆ’ ಅಂತ ನೀನು ಹೇಳಿದ್ದೆ. ಆದರೀಗ, “ನೀನು ಯಾರು?’ ಅಂತ ಕೇಳ್ತಾ ಇದ್ದೀಯಲ್ಲ! ನಾನೆಲ್ಲಿಗೆ ಹೋಗಲಿ ಹೇಳು?

ಈ ಜೀವ, ಜೀವನ ಎಲ್ಲವೂ ನೀನೇ ಎಂದು ನಂಬಿದ್ದ ನನಗೆ, ಹುಚ್ಚಿಯಂತೆ ನಿನ್ನನ್ನು ಪ್ರೀತಿಸುತ್ತಿದ್ದ ನನಗೆ ಪ್ರತಿಯಾಗಿ ಸಿಕ್ಕಿದ್ದೇನು? ಬರೀ ನೋವು. ಆದರೆ, ನಿನ್ನ ಚಿಂತೆಯಲ್ಲಿಯೇ ನಾನು ಕೊರಗುತ್ತಾ ಕುಳಿತಿಲ್ಲ. ಸಾಧನೆಯ ಮೊದಲ ಮೆಟ್ಟಿಲನ್ನು ಏರಿದ್ದಾಗಿದೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಅದಕ್ಕೆ ನೀನೇ ಕಾರಣ. ನನ್ನನ್ನು ಕಟೆದು ಮೂರ್ತಿಯನ್ನಾಗಿ ಮಾಡುತ್ತಿರುವ ನಿನಗೆ ಥ್ಯಾಂಕ್ಸ್‌. ಕೊನೆಯದಾಗಿ ಒಂದು ಮಾತು; ನಾವು ಕಂಡ ಕನಸುಗಳಿಗೆ ನೀರುಣಿಸಿ, ಹಳೆ ಬೇರನ್ನು ಹೊಸದಾಗಿ ಚಿಗುರಿಸುವ ಆಸೆ ನಿನ್ನಲ್ಲಿದ್ದರೆ ಮತ್ತೆ ಮರಳಿ ಬಾ. ನನ್ನ ಹೃದಯದ ಬಾಗಿಲು ನಿನಗಾಗಿ ಯಾವತ್ತೂ ತೆರೆದಿರುತ್ತದೆ. ನಿನ್ನ ಮೇಲಿನ ಪ್ರೀತಿ ನನ್ನಲ್ಲಿ ಇನ್ನೂ ಜೀವಂತವಾಗಿದೆ.

ನಿನ್ನ ಪ್ರೀತಿಯ ನಿರೀಕ್ಷೆಯಲ್ಲಿ
ಅಚ್ಚು

ಟಾಪ್ ನ್ಯೂಸ್

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

randeep surjewala

ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ

IT companies

ದಿಗ್ಗಜ ಐಟಿ ಕಂಪನಿಗಳ “ವರ್ಕ್‌ ಫ್ರಮ್‌ ಹೋಮ್”‌ ಅಂತ್ಯ?

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

1-bbm

ಹಾನಗಲ್ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ : ಸಿಎಂ ತಿರುಗೇಟು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನೂಜಿಬಾಳ್ತಿಲ ಶಾಲೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆ; ತಪ್ಪಿದ ಭಾರೀ ದುರಂತ

udayavani youtube

ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ಬಂದರೂ ಶಿಕ್ಷಕರು ಬರಲೇ ಇಲ್ಲ : ಪೋಷಕರಿಂದ ಪ್ರತಿಭಟನೆ

udayavani youtube

ಶಾಲಾ ಪ್ರಾರಂಭೋತ್ಸವ : ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

ಹೊಸ ಸೇರ್ಪಡೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 145 ಅಂಕ ಜಿಗಿತ, 18 ಸಾವಿರದ ಗಡಿ ದಾಟಿದ ನಿಫ್ಟಿ

24koppala

ಕುಷ್ಟಗಿ: ರಕ್ತದಾನ ಮಾಡಿ ಮಾದರಿಯಾದ ತಹಶಿಲ್ದಾರ್

randeep surjewala

ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ

IT companies

ದಿಗ್ಗಜ ಐಟಿ ಕಂಪನಿಗಳ “ವರ್ಕ್‌ ಫ್ರಮ್‌ ಹೋಮ್”‌ ಅಂತ್ಯ?

ತೋಟ ವಿಸ್ತರಣೆ ಮಾಡದೇ ಅಡಕೆ ಮಾನ ಕಾಪಾಡಿಕೊಳ್ಳಿ

ತೋಟ ವಿಸ್ತರಣೆ ಮಾಡದೇ ಅಡಕೆ ಮಾನ ಕಾಪಾಡಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.