Udayavni Special

ನನ್ನುಸಿರು ಇರೋವರೆಗೂ ನೀನು ಜೀವಂತ…


Team Udayavani, Aug 14, 2018, 6:00 AM IST

11.jpg

ಒಮ್ಮೆ ಯಾವುದೋ ಬೇಸರದಲ್ಲಿ ರೈಲು ಹಳಿಗಳ ಮಧ್ಯದಲ್ಲಿ ಒಂಟಿಯಾಗಿ ನಾಲ್ಕೈದು ಕಿಲೋಮೀಟರ್‌ ನಡೆದೇ ಹೋಗಿದ್ದೆ. ಸಾಯಬೇಕೆಂದು ಹಠಹಿಡಿದು ಆತ್ಮಹತ್ಯೆಯ ದಾರಿ ಹಿಡಿದು ಹೊರಟವಳಿಗೆ, ಆ ಹಾದಿಯುದ್ದಕ್ಕೂ ನೆನಪಾಗಿದ್ದು ನಿನ್ನ ಅಮೃತದಂಥ ಮಾತುಗಳು, ನೀ ಸುರಿದು ಹೋದ ಪ್ರೀತಿ… 

ಬೆಳದಿಂಗಳಿನಂಥವನೇ ಕೇಳಿಲ್ಲಿ,
ಪ್ರೀತಿಯ ಬಗ್ಗೆ ನಿನಗದೆಷ್ಟು ಗೌರವ, ಪ್ರೀತಿ ಎಂದರೆ ನಿನ್ನ ಪಾಲಿಗೆ ಬರಿಯ ಪ್ರೀತಿಯಲ್ಲ; ಗುಡಿಯಲ್ಲಿ ಪೂಜಿಸಿಕೊಳ್ಳುವ ದೇವರಷ್ಟೇ ಪ್ರೀತಿಯೂ ಶ್ರೇಷ್ಠ. ಜಗತ್ತಿನ ಎಲ್ಲಾ ಪ್ರೇಮಕಾವ್ಯಗಳನ್ನೂ ನೀನು ಸಲೀಸಾಗಿ ಅರಗಿಸಿಕೊಂಡಿದ್ದೆಯೋ ಏನೋ ಎಂಬ ಪ್ರಶ್ನೆಯೊಂದು ಈ ಕ್ಷಣಕ್ಕೂ ನನ್ನಲ್ಲಿ ಉಳಿದುಬಿಟ್ಟಿದೆ. ನಾ ಕಂಡ ಜಗತ್ತಿನಲ್ಲಿ ಪ್ರೀತಿ ಎಂದರೆ ಕೇವಲ ಹೆಣ್ಣು-ಗಂಡುಗಳ ನಡುವಿನ ಆಕರ್ಷಣೆ, ದೇಹಗಳ ಹಸಿವ ಇಂಗಿಸಲು ಸಿಗುವ ಸುಲಭ ದಾರಿಯಷ್ಟೇ. ಇಲ್ಲಿ ಪ್ರೀತಿ ಎಂಬ ಮಹಾ ಪದದ ಅರ್ಥವೇ ಬುಡಮೇಲಾಗಿದೆ. ಅದಿರಲಿ ಬಿಡು, ನಾನು ಈಗ ಬದುಕುತ್ತಿರುವುದು ನೀನು ಅಮ್ಮನಂತೆ ಬೆರಳ ಹಿಡಿದು ನಡೆಸಿ ಹೋದ ಅದೇ ದಾರಿಯಲ್ಲಿ. ಹಾಗಾಗಿ ನನಗಿಲ್ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. 

ಪ್ರೇಮಿಸುವುದನ್ನಷ್ಟೇ ಅಲ್ಲ, ಬದುಕಿಗೆ ಬೇಕಾದ ಎಲ್ಲವನ್ನೂ ಕಲಿಸಿಕೊಟ್ಟೆ, ಅರ್ಥಮಾಡಿಸಿದೆ. ಈ ಕಗ್ಗಲ್ಲನ್ನೂ ಕಡೆದು ಆಕಾರ ಕೊಟ್ಟು, ಜೀವ ತುಂಬಿದ ಹೆಗ್ಗಳಿಕೆ ನಿನಗೇ ಸಲ್ಲಬೇಕು. ಅಳುವುದಕ್ಕೂ ಸರಿಯಾಗಿ  ಬಾರದ ಅಂದಿನ ನಾನು, ಈ ಪರಿ ಬದಲಾಗಿದ್ದೇನೆಂದರೆ ನೀನು ನಂಬುವುದಿಲ್ಲ. ನೀನೇನು? ನಾನೇ ಆಗಾಗ ನಿಲುವುಗನ್ನಡಿಯ ಮುಂದೆ ನಿಂತು, ಇದು ನಾನೇ ಎಂಬುದನ್ನು ಖಾತರಿ ಮಾಡಿಕೊಳ್ಳುತ್ತೇನೆ.

ನೀ ಹೋದ ಮೇಲೆ ಈ ಬದುಕೆಂಬ ದೊಂಬರ ನನ್ನನ್ನು ಹೇಗೆಲ್ಲಾ ಕುಣಿಸಿಬಿಟ್ಟ ಗೊತ್ತಾ? ಜಗತ್ತೇ ಬೇಡವೆಂದು ರೋಸಿಹೋಗುವಷ್ಟು. ಒಮ್ಮೆ ಯಾವುದೋ ಬೇಸರದಲ್ಲಿ ರೈಲು ಹಳಿಗಳ ಮಧ್ಯದಲ್ಲಿ ಒಂಟಿಯಾಗಿ ನಾಲ್ಕೈದು ಕಿಲೋಮೀಟರ್‌ ನಡೆದೇ ಹೋಗಿದ್ದೆ. ಸಾಯಬೇಕೆಂದು ಹಠಹಿಡಿದು ಆತ್ಮಹತ್ಯೆಯ ದಾರಿ ಹಿಡಿದು ಹೊರಟವಳಿಗೆ, ಆ ಹಾದಿಯುದ್ದಕ್ಕೂ ನೆನಪಾಗಿದ್ದು ನಿನ್ನ ಅಮೃತದಂಥ ಮಾತುಗಳು, ನೀ ಸುರಿದು ಹೋದ ಪ್ರೀತಿ, ಬದುಕಿನೆಡೆಗೆ ನಿನಗಿದ್ದ ಗೌರವ, ಕಷ್ಟಗಳಿಗೆ ಸೆಡ್ಡು ಹೊಡೆಯುತ್ತಿದ್ದ ಆ ನಿನ್ನ ಛಲ. ಕೊನೆಗೆ ನಿನ್ನಂಥ ನೀನಿಲ್ಲದೆಯೂ ಬದುಕಲು ಕಲಿತವಳಿಗೆ ಇದ್ಯಾವ ಮಹಾ ಕಷ್ಟವೆನಿಸಿ ಹೋದ ದಾರಿಯಲ್ಲೇ ವಾಪಸ್‌ ಬಂದಿದ್ದೆ. ಇಲ್ಲದಿದ್ದರೆ ಇವತ್ತು, ಹೀಗೆ, ನಿನ್ನ ನೆನಪುಗಳನ್ನು ಹಾಳೆಗಿಳಿಸಲು ನಾನಿರುತ್ತಿರಲಿಲ್ಲ.

ಹೀಗೆ ಪ್ರೇಮಿಯೊಬ್ಬ ಹೆಸರಿಗಷ್ಟೇ ಪ್ರೇಮಿಯಾಗಿರದೆ ಇಹವ ತೊರೆದ ಮೇಲೂ ಪ್ರೇಮಿಸಿದವಳ ಬದುಕಿಗೆ ಸಕಲವೂ ಆಗಿರುವುದೇ ಪ್ರೀತಿ ಎಂದು ತೋರಿಸಿಕೊಟ್ಟ ನನ್ನ ಪಾಲಿನ ಪುಣ್ಯ ನೀನು. ನನ್ನ ಹೃದಯದ ಪ್ರತಿ ಮಿಡಿತವೂ ನಿನ್ನ ಹೆಸರನ್ನೇ ಜಪಿಸುತ್ತಿರುವಾಗ, ನಿಂತು ಹೋಗಿದ್ದು ನಿನ್ನುಸಿರಷ್ಟೇ; ನನ್ನುಸಿರು ನಿಲ್ಲುವವರೆಗೂ ನೀನು ಜೀವಂತ! 

ಸತ್ಯಾ ಗಿರೀಶ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

smith

ಪಂಜಾಬ್–ರಾಜಸ್ಥಾನ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಮಿತ್ ಪಡೆ

ಇಲ್ಲಿ ರಾತ್ರಿ ಚಿರತೆ ಸಂಚಾರ ! ಹಟ್ಟಿಯಲ್ಲಿದ್ದ ಕರು ಸಾವು, ಆತಂಕದಲ್ಲಿ ಗ್ರಾಮಸ್ಥರು

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

rock-1

ಮಾನವ ನಿರ್ಮಿತ ರಾಕ್ ಗಾರ್ಡನ್: ಇದರ ಸೌಂದರ್ಯಕ್ಕೆ ಮನಸೋಲದವರಿಲ್ಲ !

riga-1

ಮನಮೋಹಕ ಪ್ರವಾಸಿ ತಾಣ: ಚಿಕ್ಕದಾದರೂ ಚೊಕ್ಕದಾದ ದೇಶ ರೀಗಾ ಲಾಟ್ಟಿಯಾ !

ಸಾಲಭಾದೆ ತಾಳಲಾರದೆ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ನೊಂದ ರೈತ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಮಂಡ್ಯ ಕೋವಿಡ್ ಸೋಂಕಿಗೆ ಓರ್ವ ಸಾವು, 274 ಹೊಸ ಪ್ರಕರಣ ದೃಢ, 64 ಮಂದಿ ಗುಣಮುಖ

ಮಂಡ್ಯ ಕೋವಿಡ್ ಸೋಂಕಿಗೆ ಓರ್ವ ಸಾವು, 274 ಹೊಸ ಪ್ರಕರಣ ದೃಢ, 64 ಮಂದಿ ಗುಣಮುಖ

ವಿಜಯಪುರ ಬಾರಿ ಮಳೆಗೆ ಮನೆ ಕುಸಿದು ಬಾಲಕಿ ಸಾವು: ಕೃಷ್ಣಾ ನದಿಯಲ್ಲಿ ತೇಲಿಬಂತು ವ್ಯಕ್ತಿಯ ಶವ

ವಿಜಯಪುರ ಭಾರಿ ಮಳೆಗೆ ಮನೆ ಕುಸಿದು ಬಾಲಕಿ ಸಾವು: ಕೃಷ್ಣಾ ನದಿಯಲ್ಲಿ ತೇಲಿಬಂತು ವ್ಯಕ್ತಿಯ ಶವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ರೋಗ ನಿರೋಧಕ-ಕರಿಬೇವು

ರೋಗ ನಿರೋಧಕ-ಕರಿಬೇವು

josh-tdy-1

ಹೇಳ್ರೀ ನನ್ನ ಕಂಡ್ರೆ ನಿಮಗೇನನ್ನಿಸುತ್ತೆ?

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

“ಕೋವಿಡ್‌ ರೋಗಿಗಳ ಖಾಸಗಿ ಆಸ್ಪತ್ರೆ ದಾಖಲು ಬಗ್ಗೆ ಮಾಹಿತಿ ಅಗತ್ಯ’

“ಕೋವಿಡ್‌ ರೋಗಿಗಳ ಖಾಸಗಿ ಆಸ್ಪತ್ರೆ ದಾಖಲು ಬಗ್ಗೆ ಮಾಹಿತಿ ಅಗತ್ಯ’

smith

ಪಂಜಾಬ್–ರಾಜಸ್ಥಾನ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಮಿತ್ ಪಡೆ

sm-tdy-1

ಫಾರ್ಮಾಸಿಸ್ಟ್‌ಗಳ ಸೇವೆ ಗಮನಾರ್ಹ

ಇಲ್ಲಿ ರಾತ್ರಿ ಚಿರತೆ ಸಂಚಾರ ! ಹಟ್ಟಿಯಲ್ಲಿದ್ದ ಕರು ಸಾವು, ಆತಂಕದಲ್ಲಿ ಗ್ರಾಮಸ್ಥರು

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

ಪ್ರತಿಭಟನೆ ಶಾಂತಿಯುತವಾಗಿರಲಿ

ಪ್ರತಿಭಟನೆ ಶಾಂತಿಯುತವಾಗಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.