ಅಷ್ಟಾದಶ ಸಿದ್ಧಿಗಳಾವುವು?

Team Udayavani, Dec 15, 2018, 8:20 AM IST

ಅಣಿಮಾ ಎಂದರೆ ದೇಹವು ಸೂಕ್ಷ್ಮರೂಪವನ್ನು ಹೊಂದುವ ಶಕ್ತಿ. ಮಹಿಮಾ ಎಂದರೆ ಅತಿ ದೊಡ್ಡರೂಪವನ್ನು ಹೊಂದುವ ಶಕ್ತಿ ಮತ್ತು ಲ ಮಾ ಎಂದರೆ ದೇಹವು ಗಾಳಿಯಲ್ಲಿ ತೇಲುವಷ್ಟು ಭಾರ ಕಳೆದುಕೊಳ್ಳುವ (ಹಗುರವಾಗುವ) ಶಕ್ತಿ. ಉಳಿದವು ಇಂದ್ರಿಯಗಳಿಗೆ ಸಂಬಂಧಿಸಿದ ಸಿದ್ಧಿಗಳಾಗಿವೆ. 

ಸಿದ್ಧಿ ಎಂದರೆ ಯಶಸ್ಸು, ಗೆಲುವು, ಬಯಸಿದ್ದನ್ನು ಪಡೆಯುವುದು, ವಿಶೇಷ ಶಕ್ತಿಯನ್ನು ಹೊಂದುವುದು, ಪ್ರಾಪ್ತಿ, ಸಫ‌ಲತೆ ಮೊದಲಾದ ಅರ್ಥಗಳಿವೆ. ಆಧ್ಯಾತ್ಮಿಕವಾಗಿ ಪರಮಾತ್ಮತಣ್ತೀವನ್ನು ಪಡೆಯಲು ಇರಬೇಕಾದ ಶಕ್ತಿಯೇ ಸಿದ್ಧಿ. ಪರಮಾತ್ಮನ ಅಂಶದಿಂದಲೇ ವಿಶ್ವದಲ್ಲಿರುವುದೆಲ್ಲವೂ ಸೃಷ್ಟಿಯಾಗಿವೆ. ಈ ವಿಶ್ವವು ಪರಮತಣ್ತೀದಿಂದಲೇ ರಚಿತವಾದುದು. ಇದರ ಪರಮಾತ್ಮನು ಹೊರಗೂ ಇ¨ªಾನೆ; ಒಳಗೂ ಇ¨ªಾನೆ. ಇಂತಹ ಸರ್ವವ್ಯಾಪಿಯಾದ ಪರಮಾತ್ಮನು ಸೃಷ್ಟಿಯನ್ನು ಮಾಡಿದ ಸಮಷ್ಟಿತಣ್ತೀದಲ್ಲಿ ಸಾಧಕನು ತನ್ನನ್ನು ಏಕಾಕಾರ ಮಾಡಿಕೊಂಡು ಅದಕ್ಕುನುಸಾರವಾಗಿ ಆ ವಿಶೇಷ ಶಕ್ತಿಯನ್ನು ಪಡೆದುಕೊಳ್ಳುವುದೇ ಸಿದ್ಧಿ ಎಂಬುದಾಗಿ ಮದ್ಭಾಗವತದಲ್ಲಿ ಹೇಳಲಾಗಿದೆ.

ಈ ಸಿದ್ಧಿಗಳನ್ನು ಹದಿನೆಂಟು ಪ್ರಕಾರಗಳಲ್ಲಿ ಹೇಳಲಾಗಿದೆ. ಅವುಗಳಲ್ಲಿ ಮುಖ್ಯವಾದ ಅಷ್ಟಸಿದ್ಧಿಗಳೆಂದರೆ ಅಣಿಮಾ, ಮಹಿಮಾ, ಲ ಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತಾ, ವಶಿತಾ ಮತ್ತು ಕಾಮಾವಸಾಯಿತಾ. ಇವು ಭಗವಂತನಲ್ಲಿಯೇ ಇರುವಂಥವು  ಹಾಗೂ ಸಾಧಕನಿಗೆ ಭಗವಂತನಿಂದಲೇ ದೊರೆಯುವಂಥವುಗಳಾಗಿವೆ. ಇನ್ನುಳಿದ ಹತ್ತು ಸಿದ್ಧಿಗಳು ಸಣ್ತೀಗುಣದ ವಿಕಾಸದಿಂದ ದೊರೆಯುತ್ತವೆ. ಮೊದಲ ಮೂರು ಸಿದ್ಧಿಗಳು ಅಂದರೆ ಅಣಿಮಾ, ಮಹಿಮಾ ಮತ್ತು ಲ ಮಾ ಶರೀರಕ್ಕೆ ಸಂಬಂಧಿಸಿದವುಗಳಾಗಿವೆ.

ಅಣಿಮಾ ಎಂದರೆ ದೇಹವು ಸೂಕ್ಷ್ಮರೂಪವನ್ನು ಹೊಂದುವ ಶಕ್ತಿ. ಮಹಿಮಾ ಎಂದರೆ ಅತಿ ದೊಡ್ಡರೂಪವನ್ನು ಹೊಂದುವ ಶಕ್ತಿ ಮತ್ತು ಲ ಮಾ ಎಂದರೆ ದೇಹವು ಗಾಳಿಯಲ್ಲಿ ತೇಲುವಷ್ಟು ಭಾರ ಕಳೆದುಕೊಳ್ಳುವ (ಹಗುರವಾಗುವ) ಶಕ್ತಿ. ಉಳಿದವು ಇಂದ್ರಿಯಗಳಿಗೆ ಸಂಬಂಧಿಸಿದ ಸಿದ್ಧಿಗಳಾಗಿವೆ. ಬಯಸಿ¨ªೆಲ್ಲವೂ ದೊರೆಯುವ ಶಕ್ತಿಯೇ ಪ್ರಾಪ್ತಿ. ಪ್ರಾಕಾಮ್ಯವೆಂದರೆ ಲೌಕಿಕ ಮತ್ತು ಪರಲೌಕಿಕ ವಸ್ತುಗಳನ್ನು ಇಚ್ಛಾನುಸಾರ ಅನುಭವಿಸುವ ಶಕ್ತಿ. ಮಾಯೆ ಹಾಗೂ ಅದರ ಕಾರ್ಯಗಳನ್ನು ನಮ್ಮ ಇಚ್ಛಾನುಸಾರ ನಿಯಂತ್ರಿಸುವ ಸಿದ್ಧಿಯೇ ಈಶಿತಾ. ವಿಷಯಗಳ ನಡುವೆ ಇದ್ದರೂ ಅವುಗಳೆಡೆಗೆ ಆಸಕ್ತನಾಗದಿರುವಂತಹ ವಿಶೇಷ ಸದ್ಧಿಯೇ ವಶಿತಾ. ಯಾವು ಯಾವುದನ್ನು ಕಾಮಿಸುವನೋ ಅದರ ಸೀಮೆಯ ತನಕ ಮುಟ್ಟುವ ಸಿದ್ಧಿಯೇ ಕಾಮಾವಸಾಯಿತಾ. ಈ ಅಷ್ಟಸಿದ್ಧಿಗಳು ಭವಗವಂತನಲ್ಲಿ ಸ್ವಭಾವತಃ ಇದ್ದು, ಭಗವಂತನು ಇವನ್ನು ಅನುಗ್ರಹಿಸಿದವನಿಗೆ ಇವುಗಳು ಅಂಶತಃ ಪ್ರಾಪ್ತವಾಗುತ್ತವೆ.

ಉಳಿದ ಹತ್ತು ಸಿದ್ಧಿಗಳನ್ನು ಸಣ್ತೀಗುಣವನ್ನು ಬೆಳೆಸಿಕೊಂಡು ಗುಣಾತೀತನಾಗುವ ಮೂಲಕ ಪಡೆಯಬಹುದಾಗಿದೆ. ಅವುಗಳೆಂದರೆ, ಶರೀರದಲ್ಲಿ ಹಸಿವು, ಬಾಯಾರಿಕೆ, ಕಾಮ, ಕ್ರೋಧಗಳು ಉಂಟಾಗದಿರುವುದು, ಅತಿ ದೂರದ ವಸ್ತುಗಳನ್ನೂ ನೋಡುವುದು, ತುಂಬಾ ದೂರದ ಮಾತನ್ನೂ ಕೇಳಿಸಿಕೊಳ್ಳುವುದು, ಮನಸ್ಸಿನೊಂದಿಗೇ ಶರೀರದಿಂದ ಇನ್ನೊಂದು ಪ್ರದೇಶವನ್ನು ತಲುಪುವುದು, ಇಚ್ಛಿಸಿದ ರೂಪವನ್ನು ಹೊಂದುವುದು, ಬೇರೆಯವರ ಶರೀರವನ್ನು ಪ್ರವೇಶಿಸುವುದು, ಇಚ್ಛಾಮರಣಿಯಾಗುವುದು, ದೇವತೆಗಳ ಕ್ರೀಡೆಯನ್ನು ದರ್ಶಿಸುವುದು, ಎಣಿಸಿದ ಸಂಕಲ್ಪ ಸಿದ್ಧಿ, ಎಲ್ಲ ಕಡೆಗಳಲ್ಲಿ ಎಲ್ಲರ ಮೂಲಕ ಆಜ್ಞಾಪಾಲನೆ. ಇವು ರಜೋತಮೋ ಗುಣಗಳನ್ನು ತ್ಯಜಿಸಿದ ಸಣ್ತೀಗುಣದ ವಿಶೇಷ ವಿಕಾಸದಿಂದ ಮಾತ್ರ ಹೊಂದಲು ಸಾಧ್ಯ.

ಇವುಗಳಷ್ಟೇ ಅಲ್ಲದೆ ಇನ್ನೂ ಐದು ಸಿದ್ಧಿಗಳನ್ನು ಯೋಗಿಯಾದವನು ಪಡೆಯಲು ಸಾಧ್ಯ ಎಂದು ಭಗವಾನ… ಶ್ರೀಕೃಷ್ಣನು ಹೇಳಿ¨ªಾನೆ. ಭೂತ, ಭವಿಷ್ಯ ಮತ್ತು ವರ್ತಮಾನದ ಮಾತನ್ನು ತಿಳಿದುಕೊಳ್ಳುವುದು, ಶೀತ ಉಷ್ಣ, ಸುಖ ದುಃಖ, ರಾಗ ದ್ವೇಷ ಮೊದಲಾದ ದ್ವಂದ್ವಗಳಿಗೆ ವಶನಾಗದಿರುವುದು, ಬೇರೆಯವರ ಮನಸ್ಸಿನ ಮಾತನ್ನು ಅರಿತುಕೊಳ್ಳುವುದು, ಅಗ್ನಿ, ಸೂರ್ಯ, ಜಲ, ವಿಷ ಮುಂತಾದವುಗಳ ಶಕ್ತಿಯನ್ನು ಸ್ತಂಭಿತಗೊಳುಸುವುದು ಮತ್ತು ಯಾರಿಂದಲೂ ಸೋಲದಿರುವುದು.  ಈ ಐದೂ ಸಿದ್ಧಿಗಳು ಯೋಗಧಾರಣೆಯಿಂದ ಪ್ರಾಪ್ತವಾಗುತ್ತವೆ.

ಜಗತ್ತಿನಲ್ಲಿ ಭೋಗ ಲಾಲಸೆಗಳು ಬಹಳವಾಗಿಯೇ ತುಂಬಿಕೊಂಡಿದೆ. ಅವುಗಳಿಂದ ದೇಹವನ್ನೂ, ಮನಸ್ಸನ್ನೂ ದೂರವಿಡಲು ಇಂತಹ ಸಿದ್ಧಿಗಳು ಸಹಾಯಕ ಸಾಧನಗಳು. ಆ ಹದಿನೆಂಟು ಸಿದ್ಧಿಗಳನ್ನು ಪಡೆಯಲಿಕ್ಕಾಗದೇ ಹೋದರೂ,  ಕೊನೆಯ ಐದು ಸಿದ್ಧಿಗಳನ್ನು ಪಡೆಯುವ ಪ್ರಯತ್ನವನ್ನು ಮನುಷ್ಯ ಮಾಡಬೇಕು. ನಮ್ಮೊಳಗಿನ ನಾನು ಮತ್ತು ಪರರೊಳಗಿನ ಅವನು ಯಾವತ್ತೂ ಬೇರೆಯಲ್ಲ. ಎರಡೂ ಒಂದೇ; ಒಬ್ಬನೇ. ಇವನ್ನೆಲ್ಲ ವಿಶ್ವವ್ಯಾಪಿಯಾಗಿ ಅರಿಯುವ ಜ್ಞಾನಕ್ಕಾಗಿ, ಎಲ್ಲರೂ ಒಂದಾಗುವ, ಎಲ್ಲರನ್ನೂ ಒಂದಾಗಿಸುವ ಸಿದ್ಧಿಯ ಸಾûಾತ್ಕಾರಕ್ಕಾಗಿ ಎಲ್ಲರೂ ಸನ್ಮಾರ್ಗದಲ್ಲಿಯೇ ನಡೆಯಬೇಕು; ಯೋಗಸಾಧನೆಯಲ್ಲಿ ಸಾಗಬೇಕು.

ಶ್ರೀ ಕೃಷ್ಣನು ಸೃಷ್ಟಿಯು ಒಳಗೊಂಡಿರುವ ಮತ್ತು ಅವುಗಳಿಂದಲೇ ಆತ್ಮಕಲ್ಯಾಣವಾಗುವ ಇಪ್ಪತ್ತೆಂಟು ತಣ್ತೀಗಳನ್ನು ಹೇಳಿ¨ªಾನೆ. ಆ ಇಪ್ಪತ್ತೆಂಟು ತಣ್ತೀಗಳೆಂದರೆ ಪ್ರಕೃತಿ, ಪುರುಷ, ಮಹತಣ್ತೀ,ಅಹಂಕಾರ, ಪಂಚತನ್ಮಾತ್ರೆಗಳು (ಒಟ್ಟು ಒಂಭತ್ತು), ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಒಂದು ಮನಸ್ಸು (ಒಟ್ಟು ಹನ್ನೊಂದು), ಪಂಚಮಹಾಭೂತಗಳು, ತ್ರಿಗುಣಗಳು (ಒಟ್ಟು ಎಂಟು). ಎಲ್ಲವೂ ಸೇರಿ ಒಟ್ಟಿಗೆ ಇಪ್ಪತ್ತೆಂಟು. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ...

  • ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುತ್ತಾರೆ....

  • ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ...

  • ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ....

  • ಅರಿ ಎಂದರೆ ಶತ್ರು ಎಂದರ್ಥ.ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ....

ಹೊಸ ಸೇರ್ಪಡೆ