ಫೆಡರರ್‌ಗೆ ಬೆವರಿಳಿಸಿದ ಭಾರತ ಸುಮಿತ್‌!

ವಿಶ್ವ ದಿಗ್ಗಜನ ನಡುಗಿಸಿದ ಮೊದಲ ಭಾರತೀಯ ಟೆನಿಸ್‌ ಆಟಗಾರ

Team Udayavani, Aug 31, 2019, 5:02 AM IST

ಭಾರತ ಟೆನಿಸ್‌ ಲೋಕದ ಇತಿಹಾಸದಲ್ಲಿ ನಾವು ಮೂರು ಖ್ಯಾತನಾಮರ ಹೆಸರನ್ನು ನೋಡಿದ್ದೇವೆ. ಲಿಯಾಂಡರ್‌ ಪೇಸ್‌, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ ಈ ದಿಗ್ಗಜರು.

ಈ ಮೂವರು ಸವ್ಯಸಾಚಿ ತಾರೆಯರಿಂದ ಭಾರತ ಟೆನಿಸ್‌ ಹೆಚ್ಚು ಶ್ರೀಮಂತಗೊಂಡಿದೆ. ಈ ದಿಗ್ಗಜರನ್ನು ಹೊರತುಪಡಿಸಿ ವಿಶ್ವ ಶ್ರೇಯಾಂಕಿತ ಆಟಗಾರರನ್ನೇ ನಡುಗಿಸಬಲ್ಲ ಭಾರತ ಮತ್ತೂರ್ವ ಸಿಂಗಲ್ಸ್‌ ತಾರೆ ಉದಯಿಸಿರಲಿಲ್ಲ. ಬಹುತೇಕ ಆ ನೋವಿನ ದಿನಗಳು ಕಡಿಮೆಯಾಗುವ ಸಾಧ್ಯತೆ ಗೊಚರಿಸುತ್ತಿದೆ. ಹೌದು, ಸುಮಿತ್‌ ನಗಾಲ್‌ ಎಂಬ ಅದ್ಭುತ ಪ್ರತಿಭೆ ದೇಶಕ್ಕೆ ಈಗ ಪರಿಚಯವಾಗಿದೆ. ಕಿರಿಯ ಆಟಗಾರ 20 ಗ್ರ್ಯಾನ್‌ಸ್ಲಾಮ್‌ ವಿಜೇತ ಸ್ವಿಜರ್ಲೆಂಡ್‌ನ‌ ರೋಜರ್‌ ಫೆಡರರ್‌ಗೆà ಬಿಸಿ ಮುಟ್ಟಿಸಿದ್ದಾರೆ. ವಿಶ್ವವ್ಯಾಪ್ತಿ ಸುದ್ದಿಯಾಗಿದ್ದಾರೆ. ಫೆಡರರ್‌ ವಿರುದ್ಧ 1 ಸೆಟ್‌ ಗೆದ್ದಿದ್ದಲ್ಲದೆ ಬಲಿಷ್ಠ ಆಟಗಾರನ ಬೆವರಿಳಿಸಿದ ನಗಾಲ್‌ ಆಟಕ್ಕೆ ಎಲ್ಲ ಕಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಿರಿಯ ಆಟಗಾರನ ಎದುರು ಕಷ್ಟಪಟ್ಟು ಗೆದ್ದ ಫೆಡರರ್‌ ಕೂಡ ಅಚ್ಚರಿಗೆ ಒಳಗಾಗಿದ್ದಾರೆ. ನಗಾಲ್‌ ಭವಿಷ್ಯದಲ್ಲಿ ದೊಡ್ಡ ಟೆನಿಸಿಗ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊದಲ ಸಿಂಗಲ್ಸ್‌ನಲ್ಲೇ ಗಮನ ಸೆಳೆದ:
ಸುಮಿತ್‌ ನಗಾಲ್‌ ಇದೇ ಮೊದಲ ಬಾರಿ ಪುರುಷರ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದಲ್ಲೇ ದೈತ್ಯ ಪ್ರತಿಭೆ ವಿರುದ್ಧ ಸೆಣಸಾಟಕ್ಕೆ ಇಳಿದಿದ್ದರು. ತನ್ನ ಎದುರು ಆಡುತ್ತಿರುವುದು 20 ಗ್ರ್ಯಾನ್‌ಸ್ಲಾಮ್‌ ವಿಜೇತ ಎಂದು ತಿಳಿದಿದ್ದರೂ ಸುಮಿತ್‌ ಕಿಂಚಿತ್ತೂ ಧೈರ್ಯ ಕಳೆದುಕೊಳ್ಳಲಿಲ್ಲ. ಸೋಲಿನ ನಡುವೆಯೂ ಅದ್ಭುತ ಫ‌ಲಿತಾಂಶ ಪಡೆದರು.

ಫೆಡರರ್‌ ಅಭಿಮಾನಿಗಳಿಗೆ ಶಾಕ್‌:
ಸುಮಿತ್‌ ನಗಾಲ್‌ ಮುಖ್ಯ ಸುತ್ತಿಗೆ ಪ್ರವೇಶ ಪಡೆದಾಗ ಈತ ಫೆಡರರ್‌ ವಿರುದ್ಧ ಸುಲಭವಾಗಿ ಸೋಲು ಅನುಭವಿಸುತ್ತಾನೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಆದರೆ 22 ವರ್ಷದ ನವದೆಹಲಿ ಆಟಗಾರ ನಗಾಲ್‌ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. 190ನೇ ಶ್ರೇಯಾಂಕಿತ ಭಾರತೀಯ ಆಟಗಾರ ವಿಶ್ವ 3ನೇ ಶ್ರೇಯಾಂಕಿತ ಆಟಗಾರರನ್ನು ಮೊದಲ ಸೆಟ್‌ನಲ್ಲಿ 6-4 ಅಂತರದಿಂದ ಸೋಲಿಸಿ 1-0 ಅಚ್ಚರಿಯ ಮುನ್ನಡೆ ಪಡೆದಿದ್ದರು. ಬಹುಶಃ ಎಳೆಯ ಹುಡುಗನಿಂದ ಇಂತಹದೊಂದು ಪ್ರಬಲ ಸ್ಪರ್ಧೆಯನ್ನು 38 ವರ್ಷದ ರೋಜರ್‌ ಫೆಡರರ್‌ ನಿರೀಕ್ಷಿಸಿರಲಿಲ್ಲ. ಒಟ್ಟಾರೆ ಹೋರಾಟ 2 ಗಂಟೆ 50 ನಿಮಿಷ ಸಾಗಿತು. ಸಾಕಷ್ಟು ಪರದಾಟ ನಡೆಸಿದ ನಂತರ ಫೆಡರರ್‌ ಮುಂದಿನ ಸೆಟ್‌ ಗೆದ್ದು ಸಮಾಧಾನಕ್ಕೆ ಒಳಗಾದರು. ಆದರೆ ಆ ಗೆಲುವಿಗಾಗಿ ಹುಡುಗನ ಎದುರು ಬರೋಬ್ಬರಿ ಮ್ಯಾರಾಥಾನ್‌ ಸೆಣಸಾಟ ನಡೆಸಬೇಕಾಯಿತು.
ಭಾರತದ ಟೆನಿಸ್‌ ಮಟ್ಟಿಗೆ ಇದು ಅತಿ ಮಹತ್ವದ ಸಾಧನೆ. ಇಲ್ಲಿಯವರೆಗೆ ಒಟ್ಟಾರೆ ನಾಲ್ಕು ಗ್ರ್ಯಾನ್‌ಸ್ಲಾéಮ್‌ಗಳಲ್ಲಿ ಆಡಿರುವ ಆಟಗಾರರ ಸಂಖ್ಯೆಯೇ 5. ಅದರಲ್ಲಿ ಒಂದು ಸೆಟ್ಟನ್ನು ಗೆಲ್ಲಲು ನಾಲ್ವರಿಗೆ ಸಾಧ್ಯವಾಗಿದೆ. ಅದರಲ್ಲಿ ನಗಾಲ್‌ ಒಬ್ಬರು. ಇದರಲ್ಲಿ ಗಮನಾರ್ಹ ಸಂಗತಿಯೆಂದರೆ, ಇಂತಹ ಸಾಧನೆಯನ್ನು ನಗಾಲ್‌, ರೋಜರ್‌ ಫೆಡರರ್‌ ವಿರುದ್ಧ ಮಾಡಿದ್ದಾರೆನ್ನುವುದು.

ಫೇಸ್‌ ಬುಕ್‌ ಗೆಳೆಯನ ಜತೆ ವಿಂಬಲ್ಡನ್‌ ಗೆದ್ದಿದ್ದ ನಗಾಲ್‌
2015ರಲ್ಲಿ ಟೆನಿಸ್‌ ವಿಶ್ವಕಪ್‌ ಎಂದೇ ಖ್ಯಾತಿ ಪಡೆದಿದ್ದ ವಿಂಬಲ್ಡನ್‌ ಪಂದ್ಯಾವಳಿಯ ಡಬಲ್ಸ್‌ನಲ್ಲಿ ನಗಾಲ್‌ ಗೆದ್ದು ಐತಿಹಾಸಿನ ಸಾಧನೆ ಮಾಡಿದ್ದರು. ಆಗ ಅವರಿಗೆ 17 ವರ್ಷ ಆಗಿತ್ತು. ವಿಯೆಟ್ನಾಂ ಯುವ ಪ್ರತಿಭೆ ನಾಮ್‌ ಹೊವಾಂಗ್‌ ಲೀ ಜತೆಗೂಡಿ ಚಾಂಪಿಯನ್‌ ಆಗಿದ್ದರು. ವಿಶೇಷವೆಂದರೆ ಈ ಇಬ್ಬರಿಗೂ ಫೇಸ್‌ಬುಕ್‌ನಲ್ಲಿ ಪರಸ್ಪರ ಪರಿಚಯವಾಗಿತ್ತು. ಕೊನೆಗೂ ಕಿರಿಯರ ವಿಂಬಲ್ಡನ್‌ನಲ್ಲಿ ಒಟ್ಟಾಗಿ ಡಬಲ್ಸ್‌ ಆಡುವ ನಿರ್ಧಾರಕ್ಕೆ ಬಂದಿದ್ದರು. ನೋಡನೋಡುತ್ತಿದ್ದಂತೆ ಇಬ್ಬರೂ ದೈತ್ಯ ಆಟಗಾರರನ್ನೆಲ್ಲ ಸೋಲಿಸಿ ಫೈನಲ್‌ ಹಂತಕ್ಕೆ ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನಲ್ಲಿ ಅಮೆರಿಕದ ರಿಲ್ಲಿ ಒಪೆಲ್ಯಾ, ಜಪಾನ್‌ನ ಅಕೀರಾ ಸ್ಯಾಂಟಲೀನ್‌ ಜೋಡಿಯನ್ನು 7-6, 6-4 ಅಂತರದಿಂದ ಸೋಲಿಸಿದರು. ಈ ಹಿಂದೆ ಭಾರತದ ಖ್ಯಾತ ಟೆನಿಸಿಗರಾದ ರಾಮನಾಥನ್‌ ರಾಮಕೃಷ್ಣನ್‌. ಲಿಯಾಂಡರ್‌ ಪೇಸ್‌, ಸಾನಿಯಾ ಮಿರ್ಜಾ, ಯೂಕಿ ಭಾಂಬ್ರಿ ಅವರು ವಿಂಬಲ್ಡನ್‌ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಇತರೆ ಸಾಧಕರಾಗಿದ್ದಾರೆ.

ನಗಾಲ್‌ಗೆ ಅದ್ಭುತ ಭವಿಷ್ಯವಿದೆ: ಫೆಡರರ್‌
ಪಂದ್ಯದಲ್ಲಿ ಸೋತರೂ ದಂತಕಥೆ, ರೋಜರ್‌ ಫೆಡರರ್‌ರಿಂದ ನಗಾಲ್‌ ಹೊಗಳಿಸಿಕೊಂಡಿದ್ದಾರೆ. ನಗಾಲ್‌ಗೆ ಏನು ಮಾಡಬೇಕೆಂದು ಗೊತ್ತಿದೆ. ಆದ್ದರಿಂದ ಅವರಿಗೆ ಅದ್ಭುತ ಭವಿಷ್ಯವಿದೆ. ಹೌದು, ಇದೇನು ಭಾರೀ ಅಚ್ಚರಿ ಹುಟ್ಟಿಸಿದ ಪಂದ್ಯವಲ್ಲ. ಆದರೆ ಆಟದಲ್ಲಿ ಬಹಳ ಸ್ಥಿರತೆಯಿತ್ತು. ನಗಾಲ್‌ ತುಂಬಾ ಅದ್ಭುತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು. ಅವರ ವಿಶೇಷವೇನೆಂದರೆ ಸಂದರ್ಭವನ್ನು ನಿಭಾಯಿಸುವ ಕಲೆ. ಶ್ರೇಷ್ಠ ಆಟವನ್ನು ಆಡುವುದು ಸುಲಭವೇನಲ್ಲ. ಅಂತಹ ಸವಾಲನ್ನು ನಗಾಲ್‌ ಸರಿಯಾಗಿ ಬಳಸಿಕೊಂಡಿದ್ದಾರೆ ಎಂದು ಫೆಡರರ್‌ ಮನಸ್ಸು ಬಿಚ್ಚಿ ಹೇಳಿದ್ದಾರೆ. ಪಂದ್ಯದ ವೇಳೆ ತಾನು ಸ್ವಲ್ಪ ನಿಧಾನವಾಗಿದ್ದೆ, ಅನಂತರ ಚುರುಕಾದೆ ಎಂದು ಫೆಡರರ್‌ ಹೇಳಿಕೊಂಡಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ದ.ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಈಗ ಮೊದಲಿನ ತಾಕತ್ತಿಲ್ಲ ಎನ್ನುವುದು ಸತ್ಯವೇ. ಆದರೆ ಅದು ಈ ತಾತ್ಕಾಲಿಕ ದುಸ್ಥಿತಿಯಿಂದ ಹೊರಬಂದು ಮತ್ತೆ ವಿಶ್ವದ ಪ್ರಬಲ ತಂಡಗಳಲ್ಲಿ...

  • ಇಂದು ಭಾರತದ ಬ್ಯಾಡ್ಮಿಂಟನ್‌ ಎಂದಿನಂತಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಪ್ರತಿಭೆಗಳ ಗಣಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇದೆಲ್ಲ ಸಾಧ್ಯವಾಗಿದ್ದು ಪಿ.ಗೋಪಿಚಂದ್‌...

  • ಕೆಲವು ದೈವಿಕ ಕ್ಷೇತ್ರಗಳ ದರುಶನದಿಂದ ಎರಡು ರೀತಿಯ ನೆಮ್ಮದಿ ಸಿಗುತ್ತದೆ. ಒಂದು, ದೇವರ ಉಪಾಸನೆಯಿಂದ ಸಿಕ್ಕ ಸಂತೃಪ್ತಿ; ಮತ್ತೂಂದು, ಅಲ್ಲಿನ ರಮ್ಯ ಪರಿಸರದಲ್ಲಿ...

  • ತ್ರಿವಿಧ ದಾಸೋಹ ನಡೆಸುತ್ತಿರುವ ನಾಡಿನ ಪ್ರಸಿದ್ಧ ಮಠಗಳಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಒಂದು. ಇಲ್ಲಿ ನೆಲೆಸಿರುವ ಶ್ರೀ ಕಾಲಭೈರವೇಶ್ವರ "ಅನ್ನದಾನಿ ಭೈರವ'...

  • - ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ ಮನಸ್ಸಿನ ಅಂತಃಸಾಕ್ಷಿಗೆ ಅನುಸಾರವಾಗಿ ನಡೆಯುವವನು ಎಂದೂ ಪಾಪಿಯಾಗಲಾರ....

ಹೊಸ ಸೇರ್ಪಡೆ