ಸಿನಿಮಾ ಬಗ್ಗೆ ಯೋಚಿಸೋ ಸಮಯ ಇದಲ್ಲ..

ದರ್ಶನ್‌ ಲಾಕ್‌ಡೌನ್‌ ಟೈಮ್ ಹೇಗಿದೆ ಗೊತ್ತಾ...

Team Udayavani, Apr 17, 2020, 10:15 AM IST

SUCHITRA-TDY-1

ಲಾಕ್‌ ಡೌನ್‌ನಿಂದಾಗಿ ಎಲ್ಲರೂ ಮನೆಯೊಳಗೆ ಕಳೆಯುವಂತಾಗಿದೆ. ಸದಾ ಬಿಝಿಲೈಫ್‌ನಲ್ಲಿದ್ದವರು ಕೂಡಾ ಎಲ್ಲವನ್ನು ಬದಿಗಿಟ್ಟು ನಾಲ್ಕು ಗೋಡೆಯ ಮಧ್ಯೆ ಕೂರುವಂತಾಗಿದೆ. ಇಲ್ಲಿ  ಶ್ರೀಸಾಮಾನ್ಯ, ಸ್ಟಾರ್‌ ಎಂಬ ಯಾವುದೇ ಭೇದವಿಲ್ಲದೇ ಎಲ್ಲರೂ ಮನೆ ಸೇರಿದ್ದಾರೆ. ಅದೇನೇ ಆದರೂ ಅಭಿಮಾನಿಗಳಿಗೆ ಮಾತ್ರ ತಮ್ಮ ನೆಚ್ಚಿನ ನಟ ಏನು ಮಾಡುತ್ತಿರಬಹುದು ಎಂಬ ಕುತೂಹಲ ಸಹಜ. ಇದರಿಂದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿಮಾನಿಗಳು ಕೂಡಾ ಹೊರತಲ್ಲ.

ತಮ್ಮ ನೆಚ್ಚಿನ ಡಿ ಬಾಸ್‌ ಏನು ಮಾಡುತ್ತಿರಬಹುದು, ಬೆಂಗಳೂರಿನಲ್ಲಿದ್ದಾರಾ. ಮೈಸೂರಿನಲ್ಲಿದ್ದಾರಾ ಎಂಬ ಕುತೂಹಲವಿರುತ್ತದೆ. ದರ್ಶನ್‌ ಸದ್ಯ ಬೆಂಗಳೂರಿನ ಮನೆಯಲ್ಲೇ ಇದ್ದಾರೆ. ಎಲ್ಲರಂತೆ ಅವರು ಕೂಡಾ ನಾಲ್ಕು ಗೋಡೆ ಮಧ್ಯೆ ಬಂಧಿಯಾಗಿದ್ದಾರೆ. ತಮ್ಮ ದಿನಚರಿ ಬಗ್ಗೆ ದರ್ಶನ್‌ ಉದಯವಾಣಿ ಜೊತೆ ಮಾತನಾಡಿದ್ದಾರೆ.

ಗೋಡೆ ಮಧ್ಯೆ ದಾಸ ವಾಸ… :  ನಿಮಗೆ ಗೊತ್ತಿರುವಂತೆ ದರ್ಶನ್‌ ಸದಾ ಬಿಝಿಯಾಗಿ ಓಡಾಡಿಕೊಂಡಿದ್ದವರು. ಸಿನಿಮಾ ಚಿತ್ರೀಕರಣವಿಲ್ಲದ ಸಮಯದಲ್ಲಿ ದರ್ಶನ್‌ ತಮ್ಮ ಸ್ನೇಹಿತರ ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿ ಬೆಂಬಲಿಸುತ್ತಿದ್ದರು. ಅದು ಬಿಟ್ಟರೆ ಮೈಸೂರು. ತಮ್ಮ ತೋಟದ ಮನೆಯಲ್ಲಿ ಪ್ರಾಣಿ ಪಕ್ಷ, ಫ್ರೆಂಡ್ಸ್‌ ಎಂದು ಜಾಲಿಯಾಗಿರುತ್ತಿದ್ದ ದರ್ಶನ್‌ ಕೂಡಾ ಈಗ ಲಾಕ್‌ ಡೌನ್‌ನಿಂದ ಮನೆಯಲ್ಲೇ ಇರುವಂತಾಗಿದೆ. ಈ ಬಗ್ಗೆ ಮಾತನಾಡುವ ದರ್ಶನ್‌, ನಾನು ಕೂಡಾ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದೇನೆ. ಎದ್ದು ಗೋಡೆ ನೋಡುವುದರಲ್ಲೇ ಸಮಯ ಹೋಗುತ್ತಿದೆ. ಮನೆಯಲ್ಲೇ ಇದ್ದೇನೆ. ಇಡೀ ಪ್ರಪಂಚವೇ ಕೋವಿಡ್ 19 ವಿರುದ್ಧ ಹೋರಾಡುತ್ತಿದೆ. ನಾನು ಕೂಡಾ ಮನೆಯಲ್ಲೇ ಇದ್ದು, ಫೆ„ಟ್‌ ಮಾಡುತ್ತಿದ್ದೇನೆ. ಟೈಮ್ ಪಾಸ್‌ಗೆ ಸಿನಿಮಾ ನೋಡುತ್ತೇನೆ, ಕಾರ್‌ ವಾಶ್‌ ಮಾಡಿದೆ. ಎಲ್ಲೂ ಹೋಗಲಾಗುತ್ತಿಲ್ಲ ಎಂದು ನಾನು ಬೇಸರ ಮಾಡಿಕೊಂಡಿಲ್ಲ. ಏಕೆಂದರೆ ಇದು ನನಗೊಬ್ಬನಿಗೆ ಬಂದ ತೊಂದರೆಯಲ್ಲ. ಇಡೀ ದೇಶವೇ ಇದರ ವಿರುದ್ಧ ಹೋರಾಡುತ್ತಿದೆ. ಈ ಸಮಯದಲ್ಲಿ ನಾವು ಮನೆಯಲ್ಲಿದ್ದು, ನಮ್ಮ ಕರ್ತವ್ಯ ಮಾಡಬೇಕು ಅನ್ನೋದು ದರ್ಶನ್‌ ಮಾತು.

ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುವ ಸಮಯ ಇದಲ್ಲ :  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರ ಇಷ್ಟೊತ್ತಿಗೆ ತೆರೆಕಾಣಬೇಕಿತ್ತು. ಏಪ್ರಿಲ್‌ 9ರಂದು ಚಿತ್ರ ತೆರೆಗೆ ಬರುವುದು ಬಹುತೇಕ ಪಕ್ಕಾ ಆಗಿತ್ತು. ಆದರೆ ಕೋವಿಡ್ 19ದಿಂದ ಚಿತ್ರ ಬಿಡುಗಡೆ ಅನಿರ್ದಿಷ್ಟಾವಧಿ ಮುಂದೆ ಹೋಗಿದೆ. ಲಾಕ್‌ಡೌನ್‌ ಸಂಪೂರ್ಣ ತೆರವಾಗಿ ಚಿತ್ರಪ್ರದರ್ಶನಕ್ಕೆ ಅವಕಾಶ ಸಿಗಬೇಕು. ಈ ಬಗ್ಗೆ ಮಾತನಾಡುವ ದರ್ಶನ್‌, ಇದು ಸಿನಿಮಾ ಬಗ್ಗೆ ಮಾತನಾಡುವ ಸಮಯವಲ್ಲ. ಲಾಕ್‌ಡೌನ್‌ ತೆರವಾಗಬೇಕು, ಸಿನಿಮಾ ಪ್ರದರ್ಶನ ಆರಂಭವಾಗಬೇಕು. ಮುಖ್ಯವಾಗಿ ಜನ ಟೆನ್ಷನ್ ಮರೆತು ಆರಾಮವಾಗಿ ಓಡಾಡುವಂತಾಗಬೇಕು. ನಾವು ಸಿನಿಮಾ ಮಾಡೋದು ಜನರಿಗಾಗಿ. ಹೀಗಿರುವಾಗ ಜನರ ಪರಿಸ್ಥಿತಿ ಸಂಪೂರ್ಣ ಸುಧಾರಿಸದೇ ಇರುವಾಗ ನಾವು ಚಿತ್ರ ಬಿಡುಗಡೆ ಮಾಡೋದು ಕೂಡಾ ಕಷ್ಟ. ಹಾಗಾಗಿ, ಸಿನಿಮಾ ಬಿಡುಗಡೆ ಬಗ್ಗೆ ಈಗ ಮಾತನಾಡುವಂತಿಲ್ಲ ಎನ್ನುವುದು ದರ್ಶನ್‌ ಮಾತು.

ತಡವಾಗಲಿದೆ ರಾಜವೀರ ಮದಕರಿನಾಯಕ :  ಸದ್ಯ ದರ್ಶನ್‌ ರಾಬರ್ಟ್‌ ಮುಗಿಸಿಕೊಂಡು ರಾಜವೀರ ಮದಕರಿ ನಾಯಕ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಆದರೆ, ಈಗ ಲಾಕ್‌ ಡೌನ್‌ನಿಂದಾಗಿ ಚಿತ್ರೀಕರಣ ಮುಂದೋಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರವಷ್ಟೇ ಚಿತ್ರೀಕರಣ ಆರಂಭ. ಹೀಗಾಗಿ ಈ ವರ್ಷ ರಾಬರ್ಟ್‌ ನಂತರ ದರ್ಶನ್‌ ಸಿನಿಮಾ ಬಿಡುಗಡೆಯೂ ತಡವಾಗಲಿದೆ. ಹಾಗಾಗಿ ಸುದೀರ್ಘ‌ ಗ್ಯಾಪ್‌ ತುಂಬಿಸಲು ರಾಬರ್ಟ್‌ ಸ್ವಲ್ಪ ತಡವಾಗಿ ಬಂದರೂ ಬರಬಹುದು. ಈ ಮೂಲಕ ದರ್ಶನ್‌ ಸಿನಿಮಾಗಳ ಬಿಡುಗಡೆ, ಚಿತ್ರೀಕರಣ ಎಲ್ಲದರಲ್ಲೂ ವ್ಯತ್ಯಯವಾಗಲಿದೆ.

-ರವಿ ರೈ

ಟಾಪ್ ನ್ಯೂಸ್

Central Govt ರಫ್ತು ನಿರ್ಬಂಧ ತೆರವು: ಈರುಳ್ಳಿ ದರ ಏರಿಕೆ

Central Govt ರಫ್ತು ನಿರ್ಬಂಧ ತೆರವು: ಈರುಳ್ಳಿ ದರ ಏರಿಕೆ

naksal (2)

Chhattisgarh; ಮತ್ತೆ 12 ನಕ್ಸಲೀಯರ ಹತ್ಯೆ: ಈ ವರ್ಷ ಒಟ್ಟು 103 ಬೇಟೆ

Mangaluru Airport ಸಿಬಂದಿ ರಜೆ: 4 ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಸಂಚಾರ ರದ್ದು

Mangaluru Airport ಸಿಬಂದಿ ರಜೆ: 4 ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಸಂಚಾರ ರದ್ದು

Sullia ಪಯಸ್ವಿನಿಯಲ್ಲಿ ಮೀನುಗಳ ಸಾವು; ವಿಷ ಪ್ರಾಶನ ಶಂಕೆ

Sullia ಪಯಸ್ವಿನಿಯಲ್ಲಿ ಮೀನುಗಳ ಸಾವು; ವಿಷ ಪ್ರಾಶನ ಶಂಕೆ

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Central Govt ರಫ್ತು ನಿರ್ಬಂಧ ತೆರವು: ಈರುಳ್ಳಿ ದರ ಏರಿಕೆ

Central Govt ರಫ್ತು ನಿರ್ಬಂಧ ತೆರವು: ಈರುಳ್ಳಿ ದರ ಏರಿಕೆ

naksal (2)

Chhattisgarh; ಮತ್ತೆ 12 ನಕ್ಸಲೀಯರ ಹತ್ಯೆ: ಈ ವರ್ಷ ಒಟ್ಟು 103 ಬೇಟೆ

Mangaluru Airport ಸಿಬಂದಿ ರಜೆ: 4 ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಸಂಚಾರ ರದ್ದು

Mangaluru Airport ಸಿಬಂದಿ ರಜೆ: 4 ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಸಂಚಾರ ರದ್ದು

Sullia ಪಯಸ್ವಿನಿಯಲ್ಲಿ ಮೀನುಗಳ ಸಾವು; ವಿಷ ಪ್ರಾಶನ ಶಂಕೆ

Sullia ಪಯಸ್ವಿನಿಯಲ್ಲಿ ಮೀನುಗಳ ಸಾವು; ವಿಷ ಪ್ರಾಶನ ಶಂಕೆ

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.