ಉಪ್ಪಿನಂಗಡಿಯಲ್ಲಿ ಚಂದ್ರೋದಯ !ಮಬ್ಬು ಬೆಳಕಲ್ಲಿ ಕಬ್ಜವಾದಾಗ…

ಮಬ್ಬು ಬೆಳಕಲ್ಲಿ ಕಬ್ಜವಾದಾಗ..

Team Udayavani, Jan 24, 2020, 3:00 PM IST

“ನನಗೆ “ಓಂ’ ಚಿತ್ರದ ಶೂಟಿಂಗ್‌ ದಿನಗಳು ನೆನಪಾಗುತ್ತಿದೆ …’ಹೀಗೆ ಹೇಳಿ ಪಕ್ಕದಲ್ಲಿದ್ದ ನಿರ್ದೇಶಕ ಆರ್‌.ಚಂದ್ರು ಮುಖ ನೋಡಿದರು ಉಪೇಂದ್ರ. ಚಂದ್ರು ಮೊಗದಲ್ಲಿ ಖುಷಿ ಮತ್ತಷ್ಟು ಹೆಚ್ಚಿತು. ಉಪೇಂದ್ರ ಹೀಗೆ ಹೇಳಲು ಕಾರಣ ಕೂಡಾ ಆರ್‌.ಚಂದ್ರು. ನಿಮಗೆ ಗೊತ್ತಿರುವಂತೆ ಆರ್‌.ಚಂದ್ರು “ಕಬ್ಜ’ ಎಂಬ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ನಿರ್ಮಾಣದ ಜೊತೆಗೆ ನಿರ್ದೇಶನ ಕೂಡಾ ಅವರದೇ. ಪ್ಯಾನ್‌ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿರುವ ಈ ಚಿತ್ರವನ್ನು ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಂದ್ರು ಹೊರಟಿದ್ದಾರೆ. ಅದಕ್ಕಾಗಿ ಸಿನಿಮಾದ ಮೇಕಿಂಗ್‌ ಅನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಿನರ್ವ ಮಿಲ್‌ನಲ್ಲಿ ಹಾಕಲಾದ ಸೆಟ್‌ಗೆ ಪತ್ರಕರ್ತರನ್ನು ಆಹ್ವಾನಿಸಿªದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಉಪೇಂದ್ರ ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದರು. “ನನಗೆ ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಂತೆ ಭಾಸವಾಗುತ್ತಿದೆ. ನಿರ್ದೇಶಕ ಚಂದ್ರು ಆ ತರಹದ ಒಂದು ಸೆಟಪ್‌ ಮಾಡಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿಬರುತ್ತಿದೆ. ಇಡೀ ತಂಡ ಒಂದೊಂದು ದೃಶ್ಯವನ್ನೂ ಎಂಜಾಯ್‌ ಮಾಡುತ್ತಿದೆ.

ಈ ಹಿಂದೆ “ಓಂ’ ಮಾಡುವಾಗ ನಾವು ಇದೇ ರೀತಿ ಎಂಜಾಯ್‌ ಮಾಡಿ, ಶೂಟ್‌ ಮಾಡಿದ್ದೆವು. ಅದು ಮತ್ತೆ “ಕಬ್ಜ’ ಸೆಟ್‌ನಲ್ಲಿ ನೆನಪಿಗೆ ಬಂತು. ಕಥೆ, ಮೇಕಿಂಗ್‌, ಸೆಟ್‌ ಎಲ್ಲವೂ ವಿಭಿನ್ನವಾಗಿದೆ’ ಎನ್ನುವುದು ಉಪೇಂದ್ರ ಮಾತು. “ಕಬ್ಜ’ ತಂಡದಲ್ಲಿ ಅವರಿಗೆ ಆ ಗೆಲುವು ಕಾಣುತ್ತಿದೆಯಂತೆ. ನಿರ್ದೇಶಕ ಚಂದ್ರು ಚಿತ್ರೀಕರಣಕ್ಕೆ ಮುನ್ನ ದಿನವೇ ಎಕ್ಸೆ„ಟ್‌ ಆಗಿ, ಯಾವ ದೃಶ್ಯವನ್ನು ಹೇಗೆ ತೆಗೆಯಬೇಕೆಂದು ಮಾತನಾಡುತ್ತಿರುತ್ತಾರಂತೆ. ಅದು ನನಗೆ ಖುಷಿ ಕೊಟ್ಟಿದೆ’ ಎನ್ನುವುದು ಉಪೇಂದ್ರ ಮಾತು.

ನಿರ್ದೇಶಕ ಕಂ ನಿರ್ಮಾಪಕ ಚಂದ್ರು ಕೂಡಾ ಸಿನಿಮಾದ ಬಗ್ಗೆ ಮಾತನಾಡಿದರು. ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವ ತಯಾರಿ, ಅದ್ಧೂರಿ ಸೆಟ್‌ಗಳು, ದುಬಾರಿ ಬಜೆಟ್‌, ಅದಕ್ಕೆ ಸಾಥ್‌ ನೀಡುತ್ತಿರುವ ಸ್ನೇಹಿತರ ಬಗ್ಗೆ ಚಂದ್ರು ಮಾತನಾಡಿದರು. ಚಂದ್ರು ಇಲ್ಲಿ ಪ್ರತಿ ದೃಶ್ಯವನ್ನು ಎಂಜಾಯ್‌ ಮಾಡಿಕೊಂಡು ಮಾಡುತ್ತಿರುವುದಾಗಿ ಹೇಳಿದರು.

ಚಿತ್ರದಲ್ಲಿ ಜಾನ್‌ ಕೊಕೇನ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮತ್ತೂಮ್ಮೆ ಚಂದ್ರು ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ಹಂಚಿಕೊಂಡರು. ಇನ್ನು, ಚಿತ್ರದ ಸಾಹಸ ದೃಶ್ಯಗಳನ್ನು ರವಿವರ್ಮ ಸಂಯೋಜಿಸುತ್ತಿದ್ದು, ಕಥೆ ಕೇಳಿದ ಕೂಡಲೇ ಎಕ್ಸೆ„ಟ್‌ ಆಗಿ ಚಿತ್ರದ ಎಲ್ಲಾ ಸಾಹಸ ದೃಶ್ಯಗಳನ್ನು ಸಂಯೋಜಿಸಲು ಮುಂದಾದರಂತೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಏನ್‌ ಸಖತ್‌ ಗುರು ಅವ್ನು....' - ಸಿನಿಮಾ ನೋಡಿ ಹೊರಬಂದವರು ಹೀಗೆ ಹೇಳಬೇಕು. ಅಂಥದ್ದೊಂದು ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಹೀಗೆ ಹೇಳುತ್ತಾ...

  • ಎರಡು ಹಾಡುಗಳನ್ನು ಫಾರಿನ್‌ನಲ್ಲಿಪ್ಲ್ಯಾನ್‌ ಮಾಡಿದ್ದೇವೆ... | ಚಿತ್ರದ ಮುಕ್ಕಾಲು ಭಾಗ ವಿದೇಶದಲ್ಲೇ ನಡೆಯಲಿದೆ.. | ವಿದೇಶದಲ್ಲಿ ಯಾರೂ ಮಾಡದ ಲೊಕೇಶನ್‌ನಲ್ಲಿ...

  • "ಟಗರು' ಚಿತ್ರದ "ಡಾಲಿ' ಪಾತ್ರದ ಮೂಲಕ ಅಬ್ಬರಿಸಿದ "ಡಾಲಿ' ಅಂದಿನಿಂದ ಇಂದಿನವರೆಗೆ ತಿರುಗಿ ನೋಡಿಲ್ಲ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ....

  • "ಸಿನಿಮಾ ಅಂದ್ರೆ ಅದು ಒಬ್ಬರಿಂದ ಆಗುವ ಕೆಲಸವಲ್ಲ. ಅಲ್ಲಿ ಹತ್ತಾರು ಜನರಿಸುತ್ತಾರೆ. ನೂರಾರು ಯೋಚನೆಗಳಿರುತ್ತವೆ. ಸಾವಿರಾರು ಚರ್ಚೆಗಳಾಗುತ್ತವೆ. ಅವೆಲ್ಲವೂ...

  • ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರು ವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ...

ಹೊಸ ಸೇರ್ಪಡೆ