ಹಾಲು ಜೇನು: ಮುತ್ತಿನಂಥ ಕಂದನಿಗೆ ಎದೆಹಾಲೇ ಅಮೃತ

Team Udayavani, Aug 8, 2018, 6:00 AM IST

ಎದೆಹಾಲು ಅಮೃತ. ಚೆನ್ನಾಗಿ ಮತ್ತು ಹೆಚ್ಚಾಗಿ ಎದೆಹಾಲು ಕುಡಿದು ಬೆಳೆಯುವ ಮಕ್ಕಳು ಎಲ್ಲ ರೀತಿಯಿಂದಲೂ ಗಟ್ಟಿಮುಟ್ಟಾಗಿ ಇರುತ್ತಾರೆ. ಎದೆಹಾಲು ಕುಡಿಸಿದ ಸಂದರ್ಭದಲ್ಲಿ ತಾಯಿಗೆ ಧನ್ಯತಾಭಾವವೂ, ಮಗುವಿಗೆ ಅಮೃತ ಸವಿದಂಥ ಸಂತೋಷವೂ ಜೊತೆಯಾಗುತ್ತದೆ. 

ಹಾಲುಣಿಸುವುದು ಎಂದರೆ ಮಗುವಿನ ಬಾಯಿ ಮೊಲೆಗೆ ತಾಕುವಂತೆ ಮಲಗಿಸಿಕೊಳ್ಳುವುದಷ್ಟೇ ಅಲ್ಲ. ಅದು ದೈಹಿಕ ಸ್ಪರ್ಶಕ್ಕಿಂತ ಮಿಗಿಲಾದ ಪ್ರಕ್ರಿಯೆ. ಎರಡು ಹೃದಯಗಳ ನಡುವಿನ ಮೌನ ಸಂಭಾಷಣೆ ಅದು. ಇಂದು ಮಾರ್ಕೆಟಿಂಗ್‌ ಅನ್ನೋದು ಯಾವ ಹಂತ ಮುಟ್ಟಿದೆಯೆಂದರೆ ಅನಾದಿ ಕಾಲದಿಂದಲೂ ಮಗುವಿಗೆ ಹಾಲೂಡಿಸಿಕೊಂಡು ಬಂದಿರುವ ನಮಗೆ ಇವತ್ತು, ತಾಯಿ ಹಾಲಿಗಿಂತ ಖಾಸಗಿ ಕಂಪನಿಗಳ ಅತ್ಯಾಕರ್ಷಕ ಉತ್ಪನ್ನಗಳು ಶ್ರೇಷ್ಟ ಎನ್ನಿಸತೊಡಗಿವೆ. ಖಾಸಗಿ ಕಂಪನಿ ಜಾಹಿರಾತುಗಳ ಭರಾಟೆಯ ನಡುವೆಯೂ ಸ್ತನ್ಯಪಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸಗಳು ಅಲ್ಲಲ್ಲಿ ಆಗುತ್ತಿದೆ ಎನ್ನುವುದೇ ಖುಷಿ. ಯುನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 120 ದೇಶಗಳಲ್ಲಿ ಅಗಸ್ಟ್‌ ತಿಂಗಳ ಮೊದಲ ವಾರವನ್ನು ಸ್ತನ್ಯಪಾನ ಸಪ್ತಾಹವೆಂದು ಘೋಷಿಸಲಾಗಿದೆ. 

ಒಂದು ಕಟ್ಟಡ ಎಷ್ಟೇ ಮಹಡಿಗಳನ್ನು ಹೊಂದಿರಬಹುದು, ಎಷ್ಟೇ ಆಧುನಿಕ ಸವಲತ್ತುಗಳನ್ನು ಒಳಗೊಂಡಿರಬಹುದು. ಆದರೆ ಕಟ್ಟಡದ ಬುನಾದಿ ಗಟ್ಟಿಯಾಗಿಲ್ಲದೇ ಹೋದರೆ ಮೇಲಿಂದ ಮೇಲೆ ಮಹಡಿಗಳನ್ನು ಕಟ್ಟಲು ಸಾಧ್ಯವಿಲ್ಲ. ತಳಹದಿ ಎಷ್ಟು ಸದೃಢವಾಗಿದೆ ಎನ್ನುವುದರ ಮೇಲೆಯೇ ಕಟ್ಟಡ ಭವಿಷ್ಯ ಇರೋದು. ಅದೇ ರೀತಿ ಮಗುವಿನ ಭವಿಷ್ಯ ಅಡಗಿದೆ ತಾಯಿಯ ಹಾಲಿನಲ್ಲಿ. ತಾಯಿಯ ಹಾಲು ಮಗುವಿನ ಭವಿಷ್ಯಕ್ಕೆ ಬುನಾದಿ ಇದ್ದಂತೆ. ಅದು ದೈಹಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿಯೂ ಮಗುವನ್ನು ಸದೃಢವಾಗಿಸುತ್ತೆ. ಮೆದುಳಿನ ಬೆಳವಣಿಗೆಗೆ ಯಾವೆಲ್ಲಾ ಪೋಷಕಾಂಶಗಳು ಬೇಕಿದೆಯೋ ಅವೆಲ್ಲವನ್ನೂ ಪ್ರಕೃತಿ ತಾಯಿಯ ಹಾಲಿನಲ್ಲಿ ಇರಿಸಿದೆ. ಮಗು ಹುಟ್ಟಿದ 6 ತಿಂಗಳವರೆಗೆ ತಾಯಿ ಹಾಲನ್ನೇ ನೀಡಬೇಕು ಎನ್ನುತ್ತದೆ ವೈದ್ಯಕೀಯ ವಿಜ್ಞಾನ. ಹೀಗಾಗಿ ತಾಯಿಯ ಹಾಲು ಪ್ರತಿಯೊಂದು ಮಗುವಿನ ಹಕ್ಕು ಎನ್ನಬಹುದು. ಅಚ್ಚರಿಯ ವಿಷಯ ಎಂದರೆ ಇಷ್ಟೆಲ್ಲಾ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದರೂ ಶೇ. 42.7ರಷ್ಟು ತಾಯಂದಿರು ತಮ್ಮ ಮಗುವಿಗೆ ಹಾಲುಣಿಸದೇ ಇರುವುದು. ಎದೆಹಾಲು ಕುಡಿಸಿದರೆ ತಮ್ಮ ಸೌಂದರ್ಯ ಕುಂದಿ ಹೋಗುತ್ತದೆ. ಸ್ತನಗಳ ಆಕಾರದಲ್ಲಿ ವ್ಯತ್ಯಾಸ ಆಗಿಬಿಡುವ ಸಾಧ್ಯತೆಯಿದೆ ಎಂಬಂಥ ನಂಬಿಕೆಗಳಿಂದ ಈ ಜಮಾನಾದ ಹಲವು ತಾಯಂದಿರು ಮಕ್ಕಳಿಗೆ ಎದೆಹಾಲಿನ ಬದಲು, ಬದಲಿ ಆಹಾರ ನೀಡುತ್ತಿದ್ದಾರೆ. ಆಹಾರ ಉತ್ಪಾದನೆಯ ಕಂಪನಿಗಳು ಪ್ರದರ್ಶಿಸುವ ಬಣ್ಣದ ಜಾಹೀರಾತು ಕೂಡ ಈ ಕಾಲದ ಅಮ್ಮಂದಿರನ್ನು ದಾರಿ ತಪ್ಪಿಸುತ್ತಿವೆ. ಇಂಥ ಸಂದರ್ಭದಲ್ಲಿಯೇ ಪ್ಯಾಕ್‌ ಮಾಡಿದ ಆಹಾರಕ್ಕಿಂತ, ಬಾಟಲಿಯ ಹಾಲಿಗಿಂತ ಎದೆ ಹಾಲೇ ಶ್ರೇಷ್ಠ ಎಂದು ಸಾರಲು ಸ್ತನ್ಯಪಾನ ಸಪ್ತಾಹದಂಥ ಕಾರ್ಯಕ್ರಮಗಳು ಆರಂಭವಾಗಿವೆ. ರೆಡಿಮೇಡ್‌ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನೇ ಕಳೆದುಕೊಂಡು ಮಕ್ಕಳು ಕಳೆಗುಂದಿರುವ ಈ ಸಂದರ್ಭದಲ್ಲಿ ಇಂಥಾ ಜಾಗೃತಿ ಕಾರ್ಯಕ್ರಮಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. 

ಸ್ತನ್ಯಪಾನದ ಕೆಲ ಪ್ರಯೋಜನಗಳು
– ಉತ್ತಮ ರೋಗನಿರೋಧಕ ಮತ್ತು ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.   
– ಅಪೌಷ್ಟಿಕತೆಯನ್ನು ನಿವಾರಿಸುತ್ತದೆ ಮತ್ತು ಸ್ಥೂಲಕಾಯವನ್ನು  ತಡೆಗಟ್ಟುತ್ತದೆ.
 - ಮಗುವಿನ ಬುದ್ಧಿಶಕ್ತಿ ಮತ್ತು ಬುದ್ಧಿಕ್ಷಮತೆಯನ್ನು ಚುರುಕಾಗಿಸುತ್ತದೆ.
– ತಾಯಿ ಮತ್ತು ಮಗುವಿನ ಮಧ್ಯೆ ಆರೋಗ್ಯಕರ ಬಾಂಧವ್ಯ ಬೆಳೆಯುತ್ತದೆ
– ಉಸಿರಾಟ ಸಂಬಂಧಿ ಖಾಯಿಲೆಗಳನ್ನು ತಡೆಗಟ್ಟುತ್ತದೆ
– ಹೃದಯ ಸಂಬಂಧಿ ಖಾಯಿಲೆ ಮತ್ತು ಡಯಾಬಿಟೀಸ್‌ ತಡೆಗಟ್ಟುತ್ತದೆ

ಹಾಲಲ್ಲಿರುವ ಅಂಶಗಳು(100 ಎಂ.ಎಲ್‌.ನಲ್ಲಿ)
ಎನರ್ಜಿ- 340
ಪ್ರೋಟೀನ್‌- 1.3 
ಕೊಬ್ಬು- 4.2
ಕಾರ್ಬೊಹೈಡ್ರೇಟ್‌- 7
ಸೋಡಿಯಂ- 15
ಕ್ಯಾಲ್ಸಿಯಂ- 35
ಫಾಸ್ಫರಸ್‌- 15
ಕಬ್ಬಿಣ- 76
ವಿಟಮಿನ್‌ ಎ- 60
ವಿಟಮಿನ್‌ ಸಿ- 3.8
ವಿಟಮಿನ್‌ ಡಿ- 0.01                       

ಡಾ. ಆಶಾ ಬೆನಕಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊದಲೆಲ್ಲಾ ಕ್ಲೀನ್‌ ಶೇವ್‌ ಮಾಡಿದ ಹುಡುಗನನ್ನು ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ರು. ಆದ್ರೆ ಕಾಲ ಕಳೆದಂತೆ ಹುಡುಗಿಯರ ಅಭಿರುಚಿಗಳೂ ಬದಲಾಗಿವೆ. ಈಗ ಕುರುಚಲು...

  • ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ಮೊಬೈಲ್‌ ಆ್ಯಪ್‌ಗಳಿಗೆ ದಾಸರಾಗಿದ್ದೇವೆ. ನಮ್ಮ ಎಲ್ಲ ಚಟುವಟಿಕೆಗಳು, ಇಷ್ಟ-ಕಷ್ಟಗಳು, ಬೇಕು-ಬೇಡಗಳು, ಖಾಸಗಿ ಮಾಹಿತಿಗಳು ಅವಕ್ಕೆ...

  • ಒರಳು ಕಲ್ಲಿನಲ್ಲಿ ಬೆಳಗಿನ ದೋಸೆಗೆ ಹಿಟ್ಟು ರುಬ್ಬಿ, ಬಿಸಿ ಬಿಸಿ ದೋಸೆ ಹೊಯ್ದು ಮನೆಯವರಿಗೆಲ್ಲ ಬಡಿಸುತ್ತಿದ್ದ ಅಮ್ಮನಿಗೆ, ಕೊನೆಗೆ ದೋಸೆಯೇ ಉಳಿಯುತ್ತಿರಲಿಲ್ಲ....

  • ಒಳ್ಳೆ ಜರಿ ಪೀತಾಂಬರದ ಲಂಗ, ಇದ್ದ ಬದ್ದ ಒಡವೆಗಳನ್ನೆಲ್ಲ ಹಾಕಿ, ದಸರಾ ಬೊಂಬೆಗಳಂತೆ ಸಾಲಾಗಿ ಕೂರಿಸುತ್ತಿದ್ದರು, ಕೈಯಲ್ಲೊಂದು ಕರ್ಚೀಫ್ ಇಟ್ಟು...  ಆಗೆಲ್ಲಾ...

  • ಅಂಗಡಿಯಿಂದ ತಂದ ಸಕ್ಕರೆ ಬಳಸುತ್ತೇನೆ ಅಂತ, ದಿನಸಿ ಸಾಮಗ್ರಿಗಳಿದ್ದ ರಟ್ಟಿನ ಪೆಟ್ಟಿಗೆ ತೆಗೆದೆ. ವಸ್ತುಗಳನ್ನು ಒಂದೊಂದಾಗಿ ಆಚೆಗಿಡತೊಡಗಿದೆ. ಸಕ್ಕರೆ ಸಿಗಲಿಲ್ಲ....

ಹೊಸ ಸೇರ್ಪಡೆ