Udayavni Special

ಬೊಂಬಾಟ್‌ ಬದನೆ


Team Udayavani, Jul 17, 2019, 5:27 AM IST

badane-kai

ವರ್ಷವಿಡೀ ಕಡಿಮೆ ಬೆಲೆಗೆ ಸಿಗುವ ತರಕಾರಿಯೆಂದರೆ ಬದನೆ. ಅದನ್ನು ಬಡವರ ಬಾದಾಮಿ ಎಂದೂ ಕರೆಯುವುದುಂಟು.
ರುಚಿಕರ ತರಕಾರಿಗಳ ಸಾಲಿನಲ್ಲಿ ಬದನೆಕಾಯಿಗಂತೂ ಪ್ರಮುಖ ಸ್ಥಾನ ಇದ್ದೇ ಇದೆ. ವಾಂಗೀಬಾತ್‌, ರೊಟ್ಟಿ- ಎಣ್ಣೆಗಾಯಿಯ ರುಚಿ ನೋಡಿದವರು ಈ ಮಾತನ್ನು ತಕರಾರಿಲ್ಲದೆ ಒಪ್ಪಿಕೊಳ್ಳುತ್ತಾರೆ. ಎಣ್ಣೆಗಾಯಿಯಷ್ಟೇ ಅಲ್ಲದೆ, ಬದನೆಯಿಂದ ತಯಾರಿಸಬಹುದಾದ ಇನ್ನೂ ಕೆಲವು ಸ್ವಾದಿಷ್ಟ ಖಾದ್ಯಗಳ ರೆಸಿಪಿ ಇಲ್ಲಿದೆ.

1. ಬೆಣ್ಣೆ ಬದನೆಕಾಯಿ
ಬೇಕಾಗುವ ಸಾಮಗ್ರಿ: ಎಳೆ ಬದನೆಕಾಯಿ- ಕಾಲು ಕೆ.ಜಿ, ಹಸಿ ಮೆಣಸು-6, ಈರುಳ್ಳಿ-2, ಬೆಣ್ಣೆ- ಅರ್ಧ ಕಪ್‌, ಕರಿಬೇವು- 2 ಎಸಳು, ಇಂಗು ಮತ್ತು ಜೀರಿಗೆ ತಲಾ ಎರಡು ಚಮಚ, ಸಾಸಿವೆ, ಕಡಲೇಬೇಳೆ, ಸಕ್ಕರೆ ಮತ್ತು ಉದ್ದಿಬೇಳೆ ತಲಾ ಒಂದು ಚಮಚ, ಹುಣಸೇಹಣ್ಣು, ಅರಿಶಿಣ, ಉಪ್ಪು, ಬೆಲ್ಲ, ಗರಂ ಮಸಾಲೆ, ಕೊತ್ತಂಬರಿ ಸೊಪ್ಪು ರುಚಿಗೆ ತಕ್ಕಷ್ಟು, ಹುರಿದ ಶೇಂಗಾ ಪುಡಿ ಮತ್ತು ತುರಿದ ಕೊಬ್ಬರಿ ತಲಾ ಒಂದು ಕಪ್‌.

ಮಾಡುವ ವಿಧಾನ: ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ಮಧ್ಯದಲ್ಲಿ ಸೀಳಿ, ಬಿಸಿ ನೀರಿನಲ್ಲಿಟ್ಟು ಐದು ನಿಮಿಷ ಬೇಯಿಸಬೇಕು. ಈರುಳ್ಳಿ, ಹಸಿ ಮೆಣಸಿನಕಾಯಿ, ಹುಣಸೇ ಹಣ್ಣು, ಜೀರಿಗೆ, ಉಪ್ಪು, ಬೆಲ್ಲ, ಅರಿಶಿಣ, ಗರಂ ಮಸಾಲೆ ಪೌಡರ್‌, ಹುರಿದ ಶೇಂಗಾ ಪುಡಿ ಮತ್ತು ತುರಿದ ಕೊಬ್ಬರಿ ಹಾಕಿಯನ್ನು ರುಬ್ಬಿ, ಪೇಸ್ಟ್‌ ತಯಾರಿಸಿ, ಆ ಮಿಶ್ರಣವನ್ನು ಬದನೆಕಾಯಿಯ ಮಧ್ಯೆ ಇಡಬೇಕು. ನಂತರ, ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಬೆಣ್ಣೆ ಹಾಕಬೇಕು. ಅದು ಕರಗಿದ ನಂತರ ಉದ್ದಿನಬೇಳೆ, ಕಡಲೇಬೇಳೆ, ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಅವುಗಳು ಬಿಸಿಯಾದ ನಂತರ ಸ್ಟಫ್ ಮಾಡಿಟ್ಟುಕೊಂಡಿರುವ ಬದನೆಕಾಯನ್ನು ಅದರಲ್ಲಿ ಹಾಕಿ, ತಳ ಹತ್ತದಂತೆ ಕೈಯಾಡಿಸಿ. ಒಲೆಯ ಉರಿ ಚಿಕ್ಕದಾಗಿರಲಿ. ಬದನೆಕಾಯಿಗಳು ಬೆಂದು ಮೆತ್ತಗಾದ ನಂತರ, ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ.

2. ಬದನೆಕಾಯಿ ಎಳ್ಳು ಹುಳಿ
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆ, ಎಳ್ಳು- ಎರಡು ಚಮಚ, ಒಣಮೆಣಸಿನಕಾಯಿ-4, ಈರುಳ್ಳಿ- 1, ರುಚಿಗೆ ತಕ್ಕಷ್ಟು ಹುಣಸೆಹಣ್ಣು, ಬೆಲ್ಲ, ಉಪ್ಪು, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ, ರಸ ತೆಗೆಯಿರಿ. ಬದನೆಕಾಯಿಯನ್ನು ಬೆಂಕಿಯಲ್ಲಿ ಸುಟ್ಟು, ಅದು ತಣ್ಣಗಾದ ಬಳಿಕ ಸಿಪ್ಪೆ ಸುಲಿದು ತಿರುಳನ್ನು ತೆಗೆದಿಟ್ಟುಕೊಳ್ಳಿ. ಎಳ್ಳು ಹಾಗೂ ಒಣಮೆಣಸನ್ನು ಪುಡಿ ಮಾಡಿಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಒಗ್ಗರಣೆಯ ಸಾಮಗ್ರಿಗಳನ್ನು ಸೇರಿಸಿ. ಅವು ಚೆನ್ನಾಗಿ ಎಣ್ಣೆಯಲ್ಲಿ ಹುರಿದ ಬಳಿಕ ಹೆಚ್ಚಿದ ಈರುಳ್ಳಿ ಬೆರೆಸಿ, ಬಣ್ಣ ಬದಲಾಗುವವರೆಗೂ ಹುರಿಯಿರಿ. ನಂತರ ಹುಣಸೆ ರಸ ಸೇರಿಸಿ ಮುಚ್ಚಿಡಿ. ಹುಳಿಯಲ್ಲಿ ಬೇಯುವಾಗ ಅದಕ್ಕೆ ಬದನೆ ತಿರುಳು, ಉಪ್ಪು, ಎಳ್ಳು, ಮೆಣಸಿನ ಪುಡಿ, ಬೆಲ್ಲ ಹಾಕಿ ಕುದಿಸಿ. ಮಿಶ್ರಣ ಕುದ್ದ ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ.

3. ಬದನೆಕಾಯಿ ಮಂಚೂರಿ
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆಕಾಯಿ, ನಾಲ್ಕು ತುಣುಕು ಬ್ರೆಡ್‌, ಈರುಳ್ಳಿ-2, ಹಸಿಮೆಣಸು- 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್‌, ಟೊಮೆಟೋ ಸಾಸ್‌, ಮೈದಾ ಹಿಟ್ಟು- ತಲಾ 2 ಚಮಚ, ಸಾಸಿವೆ, ಖಾರದ ಪುಡಿ, ತೆಂಗಿನ ತುರಿ, ಧನಿಯಾ ಪುಡಿ, ಜೀರಿಗೆ- ತಲಾ 1 ಚಮಚ, ಅರಿಶಿಣ, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, ಎಣ್ಣೆ ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಬ್ರಡ್‌ ತುಣುಕನ್ನು ಪುಡಿ ಮಾಡಿಕೊಳ್ಳಿ. ಬದನೆಕಾಯಿಯನ್ನು ಬೇಯಿಸಿ, ನುಣ್ಣಗೆ ಮಾಡಿಕೊಂಡು, ಅದಕ್ಕೆ ಉಪ್ಪು, ಖಾರ, ಶುಂಠಿ -ಬೆಳ್ಳುಳ್ಳಿ ಪೇಸ್ಟ್‌, ಅರಿಶಿಣ, ಮೈದಾ ಹಿಟ್ಟು ಹಾಕಿ ಮಿಶ್ರ ಮಾಡಿ. ಈ ಮಿಶ್ರಣವನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿ, ಬ್ರೆಡ್‌ ಪುಡಿಯಲ್ಲಿ ಹೊರಳಿಸಿ, ಎಣ್ಣೆಯಲ್ಲಿ ಫ್ರೆç ಮಾಡಿ ತೆಗೆದಿಟ್ಟುಕೊಳ್ಳಿ. ಬೇರೊಂದು ಬಾಣಲೆಗೆ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಸಾಸಿವೆ ಹಾಕಿ ಅವು ಸಿಡಿದ ನಂತರ ಹೆಚ್ಚಿದ ಈರುಳ್ಳಿ ಹಾಕಿ. ಅದು ಮೆತ್ತಗಾದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ತೆಂಗಿನ ತುರಿ, ಧನಿಯಾ ಪುಡಿ ಹಾಕಿ ಸ್ವಲ್ಪ ಕಾಲ ಮುಚ್ಚಿಡಿ. ಬಳಿಕ, ಈಗಾಗಲೇ ಕರಿದಿರುವ ಬದನೆಕಾಯಿ ಉಂಡೆ, ಟೊಮೇಟೊ ಸಾಸ್‌, ಕೊತ್ತಂಬರಿ ಸೊಪ್ಪು ಹಾಕಿ, ಸಣ್ಣ ಉರಿಯಲ್ಲಿ ಐದು ನಿಮಿಷ ಬಿಸಿ ಮಾಡಿ ಕೆಳಗಿಳಿಸಿದರೆ ಮಂಚೂರಿ ರೆಡಿ.

4. ಬದನೆ  ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆಕಾಯಿ, ಹೆಚ್ಚಿದ ಈರುಳ್ಳಿ- 1 ಕಪ್‌, ಒಣ ಮೆಣಸಿನಕಾಯಿ-3, ಹಸಿಮೆಣಸಿನಕಾಯಿ-3 ಹುಣಸೆಹಣ್ಣು, ಉಪ್ಪು, ಅರಿಶಿಣ, ಕರಿಬೇವು ಸ್ವಲ್ಪ, ಜೀರಿಗೆ, ಸಾಸಿವೆ, ಉದ್ದಿನಬೇಳೆ- ತಲಾ 2 ಚಮಚ, ಇಂಗು- ಅರ್ಧ ಚಮಚ, ಎಣ್ಣೆ- ನಾಲ್ಕು ಚಮಚ.

ಮಾಡುವ ವಿಧಾನ: ಬದನೆಕಾಯಿಯನ್ನು ಎಣ್ಣೆ ಹಚ್ಚಿ ಸುಟ್ಟು, ಸಿಪ್ಪೆ ಸುಲಿದು ಅದರ ಒಳಗಿನ ತಿರುಳನ್ನು ನುಣ್ಣಗೆ ಮಾಡಿಕೊಳ್ಳಿ. ಅದಕ್ಕೆ, ಹೆಚ್ಚಿದ ಈರುಳ್ಳಿ ಸೇರಿಸಿ ಸರಿಯಾಗಿ ಕಲಸಿ. ಆನಂತರ ಒಣಮೆಣಸು, ಹಸಿಮೆಣಸು, ಹುಣಸೆಹಣ್ಣು, ಉಪ್ಪು, ಅರಿಶಿಣ ಮಿಶ್ರ ಮಾಡಿ ಸಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ನಂತರ ಸಿದ್ಧ ಮಾಡಿಟ್ಟುಕೊಂಡ ಎರಡೂ ಮಿಶ್ರಣವನ್ನು ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಎರಡು ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿದರೆ ಚಟ್ನಿ ರೆಡಿ.

– ಶಿವಲೀಲಾ ಸೊಪ್ಪಿಮಠ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

ಸುಳ್ಯ: ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

101

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಟಾಸ್ ಗೆದ್ದ ಧೋನಿ ಪಡೆ ಬ್ಯಾಟಿಂಗ್ ಆಯ್ಕೆ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

avalu-tdy-4

ಚರ್ಚೆ ಓಕೆ, ಜಗಳ ಯಾಕೆ?

avalu-tdy-3

ನವರಾತ್ರಿಯ ಸಂಭ್ರಮಕ್ಕೂ ಕಂಟಕ ಆಯ್ತು ಕೋವಿಡ್

AVALU-TDY-2

ಅಡುಗೆ ಮನೆ ಮಾತ್ರ ಯಾವಾಗಲೂ ಓಪನ್‌…!

ನಾನು ಯಾರು? ಯಾವ ಊರು?

ನಾನು ಯಾರು? ಯಾವ ಊರು?

ಉರಿದು ಹೋಗುವುದೇ ಬದುಕಲ್ಲ…

ಉರಿದು ಹೋಗುವುದೇ ಬದುಕಲ್ಲ…

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavaniಹೊಸ ಸೇರ್ಪಡೆ

ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ; ಪ್ರೇಮ ಪ್ರಕರಣ ಶಂಕೆ

ಸುಳ್ಯ: ಲಾಡ್ಜ್ ನಲ್ಲಿ ಯುವಕ, ಯುವತಿ ಆತ್ಮಹತ್ಯೆ

.0.

ಹಬ್ಬದ ಸಮಯದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಿ : ಸಚಿವ ಡಾ.ಕೆ.ಸುಧಾಕರ್

MallaKhamba

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ; ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಕಾಲದ ಇತಿಹಾಸ

news-tdy-01

ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.