ಬಬಲ್‌ ಧಮಾಕಾ


Team Udayavani, Jun 5, 2019, 6:00 AM IST

bubble

ಒಂದಿಂಚು ಉದ್ದದ, ಸಕ್ಕರೆಯ ಬಿಲ್ಲೆಯಂಥ, ಎಳೆದಷ್ಟೂ ಉದ್ದವಾಗುವ, ನಾಲಿಗೆಯಿಂದ ಮುಂದೆ ತಳ್ಳಿ ಊದಿದರೆ ಗುಳ್ಳೆ ಸೃಷ್ಟಿಸುವ ಅದನ್ನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಂತೆ. ಯಾವುದಪ್ಪಾ ಅದು ಅಂದಿರಾ? ನಾವು ಹೇಳಿದ್ದು ಬಬಲ್‌ ಗಮ್‌/ಚಿವಿಂಗ್‌ ಗಮ್‌ ಬಗ್ಗೆ. ಸುಮ್ಮನೆ ಟೈಮ್‌ಪಾಸ್‌ಗೆ ಅಂತ ಬಾಯಿಗೆ ಹಾಕ್ಕೊಂಡು, ಒಂದಷ್ಟು ಹೊತ್ತು ಜಗಿದು ಉಗೀತೀವಲ್ಲ ಆ ಬಬಲ್‌ ಗಮ್‌ನಿಂದ ಕೂಡಾ ಅನೇಕ ಉಪಯೋಗಗಳಿವೆ.

ಬಬಲ್‌ಗ‌ಮ್‌ ಜಗಿಯುವುದರಿಂದ ಆಲಸಿತನ, ನಿದ್ದೆ ದೂರವಾಗಿ, ಏಕಾಗ್ರತೆ ಹೆಚ್ಚುತ್ತದೆ. ಹಲ್ಲು ಮತ್ತು ಬಾಯಿಯ ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿ, ಬೆಳ್ಳುಳ್ಳಿಯಂಥ ಪದಾರ್ಥಗಳನ್ನು ತಿಂದ ನಂತರ ಬಬಲ್‌ಗ‌ಮ್‌ ಜಗಿದರೆ ಬಾಯಿ ವಾಸನೆಯಿಂದ ಮುಕ್ತರಾಗಬಹುದು. ಸದಾ ಕುರುಕಲು ತಿನ್ನಬೇಕು ಅಂತ ಹಪಹಪಿಸುವ ಮಂದಿಯ ಬಾಯಿ ಚಪಲವನ್ನೂ ಬಬಲ್‌ಗ‌ಮ್‌ ದೂರ ಮಾಡುತ್ತದೆ. ಬಬಲ್‌ ಗಮ್‌ ಜಗಿಯುತ್ತಾ ಗಂಟೆಗೆ 11 ಕ್ಯಾಲೊರಿ ಕಳೆದುಕೊಳ್ಳಬಹುದು ಅಂತಾವೆ ಸಮೀಕ್ಷೆಗಳು. ಅಂದರೆ, ಬಬಲ್‌ಗ‌ಮ್‌ನಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಅಂತಾಯ್ತು.
ಬಬಲ್‌ಗ‌ಮ್‌ ಜಗಿಯುವುದರಿಂದ, ಮೆದುಳಿಗೆ ರಕ್ತ ಸಂಚಾರ ಸರಾಗವಾಗಿ ನೆನಪಿನ ಶಕ್ತಿಯೂ ವೃದ್ಧಿಸುತ್ತದಂತೆ. 2011ರಲ್ಲಿ ನಡೆದ ಸಂಶೋಧನೆಯ ಪ್ರಕಾರ, ದಿನವೂ ಬಬಲ್‌ಗ‌ಮ್‌ ಜಗಿಯುವುದರಿಂದ ಒತ್ತಡ, ಖನ್ನತೆಯಂಥ ಮಾನಸಿಕ ರೋಗಗಳನ್ನು ಹತೋಟಿಯಲ್ಲಿಡಬಹುದಂತೆ. ಬಬಲ್‌ಗ‌ಮ್‌ ಅನ್ನು ಜಗಿಯುವಾಗ ಬಿಡುಗಡೆಯಾಗುವ ಲಾಲಾರಸವು, ಹೊಟ್ಟೆಯಲ್ಲಿನ ಆ್ಯಸಿಡ್‌ಗಳನ್ನು ನಿಯಂತ್ರಿಸಿ ಜೀರ್ಣಶಕ್ತಿಯನ್ನು ಸರಾಗಗೊಳಿಸುತ್ತದೆ. ಅಷ್ಟೇ ಅಲ್ಲದೆ, ಸಿಗರೇಟ್‌-ಗುಟ್ಕಾ ಮುಂತಾದ ದುಶ್ಚಟಗಳಿಂದ ದೂರವಾಗಲು ಬಬಲ್‌ಗ‌ಮ್‌ ಸಹಾಯ ಮಾಡುತ್ತದೆ. ಬಬಲ್‌ಗ‌ಮ್‌ ಜಗಿಯುವುದರಿಂದ ಮುಖದ ಸ್ನಾಯುಗಳಿಗೆ ವ್ಯಾಯಾಮ ಸಿಕ್ಕಂತಾಗಿ, ಮುಖದ ಸೌಂದರ್ಯವೂ ಇಮ್ಮಡಿಸುತ್ತದಂತೆ.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.