ಮನೆ ತಿಂಡಿಗೆ ಮನಸು ಮಾಡಿ


Team Udayavani, Dec 5, 2018, 6:00 AM IST

d-10.jpg

ಚಳಿಗಾಲದ ಈ ಸಮಯದಲ್ಲಿ, ಸಂಜೆ ಕಾಫಿಯ ಜೊತೆಗೆ ಏನಾದರೂ ಬಿಸಿಬಿಸಿ ತಿನ್ನಬೇಕಂತ ಆಸೆಯಾಗುವುದು ಸಹಜ. ಅಂಗಡಿಯಿಂದ ತರುವ ಕುರುಕಲು ತಿನಿಸುಗಳು ಆರೋಗ್ಯಕ್ಕೆ ಒಳ್ಳೆಯದಲ್ಲವಾದ್ದರಿಂದ, ಮನೆಯಲ್ಲೇ ಸ್ನ್ಯಾಕ್ಸ್‌ ತಯಾರಿಸುವುದು ಉತ್ತಮ. ಆಲೂಗಡ್ಡೆಯಿಂದ ಮಾಡಬಹುದಾದ ಕೆಲವು ತಿನಿಸುಗಳು ಹೀಗಿವೆ.

1. ಆಲೂಗಡ್ಡೆ ಚಕ್ಕುಲಿ
ಬೇಕಾಗುವ ಪದಾರ್ಥ: ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ-3, ಅಕ್ಕಿ ಹಿಟ್ಟು- 1 ಬಟ್ಟಲು, ಉದ್ದಿನ ಹಿಟ್ಟು- 1/2 ಬಟ್ಟಲು, ಬೆಣ್ಣೆ ಅಥವಾ ತುಪ್ಪ- 5 ಚಮಚ, ಓಂ ಕಾಳು- 1/2 ಚಮಚ, ಜೀರಿಗೆ- 1/2 ಚಮಚ, ಬಿಳಿ ಎಳ್ಳು- 1 ಚಮಚ, ಮೆಣಸಿನ ಪುಡಿ- 1 ಚಮಚ, ಉಪ್ಪು ಮತ್ತು ಎಣ್ಣೆ. 

ಮಾಡುವ ವಿಧಾನ: ಬೇಯಿಸಿದ ಆಲೂಗಡ್ಡೆಯನ್ನು ಕಿವುಚಿ, ಮೇಲೆ ಹೇಳಿದ ಎಲ್ಲಾ ಪದಾರ್ಥಗಳ ಜೊತೆ ಸೇರಿಸಿ, ನೀರು ಚಿಮುಕಿಸುತ್ತಾ ಚೆನ್ನಾಗಿ ನಾದಿ ಕಣಕ ಮಾಡಿಕೊಳ್ಳಿ. ನಂತರ ಹಿಟ್ಟನ್ನು ಉಂಡೆ ಮಾಡಿ, ಚಕ್ಕುಲಿಯ ಅಚ್ಚಿಗೆ ಎಣ್ಣೆ ಸವರಿ, ಉಂಡೆಯನ್ನು ಹಾಕಿ ಚಕ್ಕುಲಿಯ ಆಕಾರದಲ್ಲಿ ಒತ್ತಿ. ನಂತರ ಚಕ್ಕುಲಿಗಳನ್ನು ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. 

2. ಸ್ಪೈಸಿ ಆಲೂಗಡ್ಡೆ ನಗೆಟ್ಸ್‌ 
ಬೇಕಾಗುವ ಸಾಮಗ್ರಿ:
ಬೇಯಿಸಿ ತುರಿದ ಆಲೂಗಡ್ಡೆ- 1 ಬಟ್ಟಲು, ತುರಿದ ಚೀಸ್‌- 1/2 ಬಟ್ಟಲು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌- 1 ಚಮಚ, ಪಾವ್‌ಬಾಜಿ ಮಸಾಲ ಪುಡಿ- 1ಚಮಚ, ಗರಂಮಸಾಲ ಪುಡಿ- 1/2 ಚಮಚ, ಮೆಣಸಿನ ಪುಡಿ- 1 ಚಮಚ, ಬ್ರೆಡ್‌ ಕ್ರಂಬ್ಸ್ (ಬ್ರೆಡ್‌ ಪುಡಿ)- 1/2 ಬಟ್ಟಲು, ಜೋಳದಹಿಟ್ಟು- 2ಚಮಚ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸು- 1 ಚಮಚ, ಲಿಂಬೆ ರಸ- 1 ಚಮಚ, ಕಾಳುಮೆಣಸಿನ ಪುಡಿ- 1/2 ಚಮಚ, ಉಪ್ಪು ಮತ್ತು ಎಣ್ಣೆ.

ಮಾಡುವ ವಿಧಾನ: ಬೇಯಿಸಿದ ಆಲೂಗಡ್ಡೆ, ಚೀಸ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಪಾವ್‌ಬಾಜಿ ಮಸಾಲ, ಗರಂಮಸಾಲ, ಚಿಲ್ಲಿ ಪೌಡರ್‌, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಲಿಂಬೆ ರಸ, ಸ್ವಲ್ಪ ಎಣ್ಣೆ ಹಾಗೂ ಉಪ್ಪನ್ನು ಒಂದು ಪಾತ್ರೆಗೆ ಹಾಕಿ, ಚೆನ್ನಾಗಿ ನಾದಿ, ಹಿಟ್ಟು ತಯಾರಿಸಿ. ಮತ್ತೂಂದು ಬಟ್ಟಲಿನಲ್ಲಿ ಕಾಳುಮೆಣಸಿನ ಪುಡಿ 1/2 ಚಮಚ, ಜೋಳದ ಹಿಟ್ಟು, ಚಿಟಿಕೆ ಉಪ್ಪು, ಸ್ವಲ್ಪ ನೀರನ್ನು ಸೇರಿಸಿ ತೆಳುವಾಗಿ ಕಲಸಿಕೊಳ್ಳಿ ಹಾಗೂ ಒಂದು ಸಣ್ಣ ತಟ್ಟೆಯಲ್ಲಿ ಬ್ರೆಡ್‌ ಕ್ರಂಬ್ಸ್ ತೆಗೆದುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಎಣ್ಣೆ ಕಾಯುವಷ್ಟರಲ್ಲಿ, ಕಲಸಿದ ಆಲೂ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ, ಜೋಳ ಮಿಶ್ರಿತ ಹಿಟ್ಟಿನಲ್ಲಿ ಅದ್ದಿ, ಬ್ರೆಡ್‌ಕ್ರಂಬ್ಸ್ನಲ್ಲಿ ಹೊರಳಿಸಿ, ಕಂದು ಬಣ್ಣ ಬರುವವರೆಗೆ ಕರಿಯಿರಿ. ರುಚಿಯಾದ ಸ್ಪೈಸಿ ಆಲೂ ನಗೆಟ್ಸ್‌ಅನ್ನು, ಟೊಮೆಟೊ ಸಾಸ್‌ ಅಥವಾ ಪುದೀನ ಚಟ್ನಿಯೊಂದಿಗೆ ಸವಿಯಬಹುದು. 

3. ಆಲೂ ವೆಜ್‌ 65
ಬೇಕಾಗುವ ಸಾಮಗ್ರಿ:
ಕತ್ತರಿಸಿದ ಆಲೂಗಡ್ಡೆ- 1 ಕಪ್‌, ಮೊಸರು- 1/2 ಕಪ್‌, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌- 1/2 ಚಮಚ, ಗರಂಮಸಾಲ ಪುಡಿ- 1/2 ಚಮಚ, ಮೆಣಸಿನ ಪುಡಿ- 1 ಚಮಚ, ಕಾಳು ಮೆಣಸಿನ ಪುಡಿ- 1/2 ಚಮಚ, ಜೋಳದ ಹಿಟ್ಟು- 2 ಚಮಚ, ಮೈದಾಹಿಟ್ಟು- 2 ಚಮಚ, ಕೊತ್ತಂಬರಿ ಸೊಪ್ಪು- 2 ಚಮಚ, ಕತ್ತರಿಸಿದ ಈರುಳ್ಳಿ- 3 ಚಮಚ, ಕತ್ತರಿಸಿದ ಹಸಿಮೆಣಸು- 1 ಚಮಚ, ಕರಿಬೇವಿನ ಸೊಪ್ಪು, ಜೀರಿಗೆ ಪುಡಿ- 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ.

ಮಾಡುವ ವಿಧಾನ: ಆಲೂಗಡ್ಡೆಯನ್ನು ಸಣ್ಣ ಸಣ್ಣ ಬಿಲ್ಲೆಯಾಗಿ ಕತ್ತರಿಸಿ, ಕುದಿಯುವ ನೀರಿಗೆ ಹಾಕಿ 5 ನಿಮಿಷ ಬೇಯಿಸಿ. ಬೆಂದ ಆಲೂವನ್ನು ಪಾತ್ರೆಗೆ ವರ್ಗಾಯಿಸಿ, ಮೈದಾಹಿಟ್ಟು, ಜೋಳದ ಹಿಟ್ಟು, ಕಾಳುಮೆಣಸಿನ ಪುಡಿ, ಚಿಟಿಕೆ ಉಪ್ಪು ಸೇರಿಸಿ, ನೀರಿಲ್ಲದೆ ಗಟ್ಟಿಯಾಗಿ ಕಲಸಿಕೊಳ್ಳಿ. ಕಲಸಿದ ಆಲೂವನ್ನು, ಕಂದುಬಣ್ಣ ಬರುವವರೆಗೆ ಕರಿದು, ನಂತರ ಟಿಶ್ಯೂ ಪೇಪರ್‌ ಮೇಲೆ ವರ್ಗಾಯಿಸಿಕೊಳ್ಳಿ. ನಂತರ ಮತ್ತೂಂದು ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಹಸಿಮೆಣಸು, ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಜೀರಿಗೆ ಪುಡಿ, ಮೊಸರು, ಕತ್ತರಿಸಿದ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಸಾಲೆ ತಯಾರಿಸಿ. ಆ ಮಸಾಲೆಗೆ ಕರಿದ ಆಲೂವನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ, 5 ನಿಮಿಷ ಬಿಟ್ಟರೆ ಆಲೂ ವೆಜ್‌ 65 ಸಿದ್ಧ. 

4. ಆಲೂ ಮಂಚೂರಿಯನ್‌
ಬೇಕಾಗುವ ಸಾಮಗ್ರಿ:
ಕತ್ತರಿಸಿದ ಆಲೂಗಡ್ಡೆ- 1 ಬೌಲ್‌, ಟೊಮೆಟೋ ಸಾಸ್‌- 4 ಚಮಚ, ಸೋಯ ಸಾಸ್‌- 1 ಚಮಚ, ವಿನೇಗರ್‌- 1 ಚಮಚ,  ಚಿಲ್ಲಿ ಸಾಸ್‌- 1 ಚಮಚ, ಅಚ್ಚಮೆಣಸಿನ ಪುಡಿ- 1 ಚಮಚ, ಮೈದಾ ಹಿಟ್ಟು – 2 ಚಮಚ, ಅಕ್ಕಿಹಿಟ್ಟು – 2 ಚಮಚ, ಜೋಳದ ಹಿಟ್ಟು- 2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌- 1 ಚಮಚ, ಉಪ್ಪು, ಕತ್ತರಿಸಿದ ಈರುಳ್ಳಿ-1, ಕತ್ತರಿಸಿದ ಕ್ಯಾಪ್ಸಿಕಮ್‌-1, ಕತ್ತರಿಸಿದ ಹಸಿಮೆಣಸು- 2, ಕೊತ್ತಂಬರಿ ಸೊಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಆಲೂಗಡ್ಡೆಯನ್ನು ಸಣ್ಣ ಸಣ್ಣ ಬಿಲ್ಲೆಯಾಗಿ ಕತ್ತರಿಸಿ, ಕುದಿಯುವ ನೀರಿಗೆ ಹಾಕಿ 5 ನಿಮಿಷ ಬೇಯಿಸಿ. ಬೆಂದ ಆಲೂವನ್ನು ಪಾತ್ರೆಗೆ ವರ್ಗಾಯಿಸಿ. ಮತ್ತೂಂದು ಪಾತ್ರೆಗೆ ಮೈದಾ ಹಿಟ್ಟು, ಅಕ್ಕಿಹಿಟ್ಟು, ಜೋಳದ ಹಿಟ್ಟು, ಶುಂಠಿ- ಬೆಳ್ಳುಳ್ಳಿ ಪೇಸ್ಟ್‌- 1/2 ಚಮಚ, ಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಆ ಹಿಟ್ಟಿಗೆ ಬೇಯಿಸಿದ ಆಲೂ ಬಿಲ್ಲೆಯನ್ನು ಒಂದೊಂದಾಗಿ ಅದ್ದಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ನಂತರ ಮತ್ತೂಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಅದು ಕಾದ ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ 1/2 ಚಮಚ, ಕತ್ತರಿಸಿದ ಕ್ಯಾಪ್ಸಿಕಮ್‌, ಮೆಣಸಿನ ಪುಡಿ 1/2 ಚಮಚ, ವಿನೇಗರ್‌, ಎಲ್ಲಾ ಬಗೆಯ ಸಾಸ್‌, ರುಚಿಗೆ ತಕ್ಕಷ್ಟು ಉಪ್ಪು ಹಾಗೂ 1/2 ಚಮಚ ಜೋಳದ ಹಿಟ್ಟನ್ನು ಕಲಸಿಕೊಂಡು, ಅದನ್ನು ಒಗ್ಗರಣೆಗೆ ಸೇರಿಸಿ ಮಸಾಲೆ ತಯಾರಿಸಿ. ಆ ಮಸಾಲೆಗೆ ಕರಿದ ಆಲೂವನ್ನು ಸೇರಿಸಿ, ಚೆನ್ನಾಗಿ ಕೈಯಾಡಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸಾಸ್‌ನೊಂದಿಗೆ ಸವಿಯಿರಿ. 

ರೂಪಾ ವಿಶ್ವನಾಥ್‌

ಟಾಪ್ ನ್ಯೂಸ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.