ಮೈಗ್ರೇನ್‌ ಸಮಸ್ಯೆಗಳಿಗೆ ಹೋಮಿಯೋಕೇರ್‌ ಪರಿಹಾರ

Team Udayavani, Jun 5, 2019, 6:00 AM IST

ಸುಮಾರು 32 ವರ್ಷ ವಯಸ್ಸಿನ ಸಾಫ್ಟ್ವೇರ್‌ ಉದ್ಯೋಗಿ ನಮ್ಮ ಕ್ಲಿನಿಕ್‌ಗೆ ಬಂದರು. ಆತ ಕೆಲವು ಕಾಲದಿಂದ ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದರು. ನೋವು ಶುರುವಾದರೆ ಬಹಳ ತೀವ್ರವಿರುತ್ತದೆ. ಮತ್ತು ನೋವು ಒಂದೇ ಕಡೆ ಇರುತ್ತದೆ. ಆ ಸಂದರ್ಭದಲ್ಲಿ ದೈನಂದಿನ ಕೆಲಸ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ವಾಕರಿಕೆ ಬಂದ ಹಾಗೆ ಅನಿಸುವುದು. ಬೆಳಕು ನೋಡುವುದಕ್ಕೆ ಆಗುತ್ತಿಲ್ಲ. ಶಬ್ದಗಳನ್ನು ಸರಿಯಾಗಿ ಕೇಳಿಸಿಕೊಳ್ಳಲೂ ಆಗುತ್ತಿಲ್ಲ. ವೈದ್ಯರನ್ನು ಸಂಪರ್ಕಿಸಿದಾಗ ಮೈಗ್ರೇನ್‌ ಎಂದು ಹೇಳಿದ್ದಾರೆ. ಔಷಧ ಉಪಯೋಗಿಸಿದಾಗ ತಾತ್ಕಾಲಿಕವಾಗಿ ನೋವು ಕಡಿಮೆಯಾಗುತ್ತದೆ. ನಂತರ ಮತ್ತೆ ತಲೆನೋವು ಶುರು.

ಮೇಲಿನ ಲಕ್ಷಣಗಳಿಂದ ಅವರು ಪಾರ್ಶ್ವ ತಲೆ ನೋವಿನಿಂದ ಬಳಲುತ್ತಿದ್ದಾರೆಂದು ಅರ್ಥವಾಯಿತು. ಪಾರ್ಶ್ವ ತಲೆ ನೋವು ಎಂದರೆ ಬಹಳ ತೀವ್ರವಾದ ತಲೆ ನೋವು. ಸಾಮಾನ್ಯವಾಗಿ ಒಂದು ಕಡೆ ತಲೆ ನೋವು ಬರುವುದನ್ನು ನೋಡುತ್ತೇವೆ. ಸಾಧಾರಣವಾಗಿ ಇದು ಕುತ್ತಿಗೆಯ ಹಿಂಭಾಗದಲ್ಲಿ ಪ್ರಾರಂಭವಾಗಿ ಕಣ್ಣುಗಳವರೆಗೆ ವಿಸ್ತಾರವಾಗಿರುತ್ತದೆ. ಮೈಗ್ರೇನ್‌ ನೋವಿಗೆ ಕಾರಣವಾದ ಜೀವ ಪ್ರಕ್ರಿಯೆ ವ್ಯವಸ್ಥೆ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರಗಳು ಈವರೆಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ತಲೆಯಲ್ಲಿರುವ ನರಗಳಲ್ಲಿ ಕೆಲವು ರೀತಿಯ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಆದಾ ಕಾರಣ ಪಾರ್ಶ್ವ ತಲೆ ನೋವು ಬರುತ್ತದೆ ಎಂಬುದಷ್ಟೇ ತಿಳಿದಿರುವುದು. ಇದಕ್ಕೆ ಉದ್ವೇಗರಾಗುವ ಅವಶ್ಯಕತೆಯಿಲ್ಲ. ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ ಚಿಕಿತ್ಸೆಯಿಂದ ನಿಮ್ಮ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುವ ಅವಕಾಶವಿದೆ. ಹೋಮಿಯೋಕೇರ್‌ ಇಂಟರ್‌ನ್ಯಾಷನಲ್‌ನಲ್ಲಿ ಐದು ತಿಂಗಳು ಚಿಕಿತ್ಸೆ ತೆಗೆದುಕೊಂಡ ಮೇಲೆ ವಾಕರಿಕೆ ಕಡಿಮೆ ಆಗಿದೆ, ತಲೆ ನೋವಿನಲ್ಲಿ ಸ್ವಲ್ಪ ಗಮನಾರ್ಹ ಇಳಿಕೆ ಕಂಡುಬಂದಿದೆ.

ಮತ್ತೆ ಆರು ತಿಂಗಳು ಚಿಕಿತ್ಸೆ ತೆಗೆದುಕೊಂಡಲ್ಲಿ ಕ್ರಮವಾಗಿ ತಲೆ ನೋವು ಕಡಿಮೆಯಾದುದರ ಜೊತೆಗೆ, ಆತನು ಬೆಳಕನ್ನು ನೋಡಬಲ್ಲ ಸಾಮರ್ಥ್ಯ ಮತ್ತು ಶಬ್ದಗಳನ್ನು ಕೇಳಬಲ್ಲ ಸಾಮರ್ಥ್ಯವು ಹಿಂದಿರುಗಿ ಬಂದಿತು. ಈಗ ಆತನಿಗೆ ಯಾವ ತೊಂದರೆಯೂ ಇಲ್ಲ. ತನ್ನೆಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆ.

ಹೋಮಿಯೋಕೆರ್‌ ಇಂಟರ್‌ನ್ಯಾಷನಲ್‌ನಲ್ಲಿ ನೀಡುವ ಜೆನೆಟಿಕ್‌ ಕಾನ್ಸ್‌ಟಿಟ್ಯೂಷನಲ್‌ ಚಿಕಿತ್ಸಾ ವಿಧಾನದಿಂದ ರೋಗಿಯ ಮಾನಸಿಕ ಹಾಗೂ ಶಾರೀರಿಕ ಲಕ್ಷಣಗಳನ್ನು ಪರಿಗಣಿಸಿ ಚಿಕಿತ್ಸೆ ನೀಡುವುದರಿಂದ ಪಾರ್ಶ್ವನೋವಿಂದ ಪರಿಹಾರ ಪಡೆಯಬಹುದು. ಅಲ್ಲದೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸುರಕ್ಷಿತವಾಗಿ ಚಿಕಿತ್ಸೆ ಕೊಡಲಾಗುವುದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಒಂದೆರಡು ಮಳೆ ಬಿದ್ದ ಕೂಡಲೇ, ವಸುಂಧರೆಯ ಒಡಲಲ್ಲಿ ಹಸಿರು ಚಿಗುರುತ್ತದೆ. ಖಾಲಿ ನಿವೇಶನಗಳಲ್ಲಿ, ರಸ್ತೆ ಬದಿಯಲ್ಲಿ ಹುಟ್ಟಿಕೊಳ್ಳುವ ಗಿಡಗಳಲ್ಲಿ ತಗತೆ ಸೊಪ್ಪು...

  • ಇಪ್ಪತ್ತೈದು ವರುಷದ ಸೀಮಾಗೆ ರಾತ್ರಿ ನಿದ್ದೆ ಹತ್ತುವುದಿಲ್ಲ. ತಲೆಯ ಹಿಂಭಾಗದಲ್ಲಿ ಮಂಜುಗಟ್ಟಿದ ಅನುಭವ. ಎದೆಯಲ್ಲಿ ಸಣ್ಣದಾಗಿ ಕಂಪನ. ಓಡಾಡಲು ಆಗದಂತೆ ಒಮ್ಮೊಮ್ಮೆ...

  • ಎರಡು ದಿನ ಬಿಸಿಲು ಬರದೇ, ಬಟ್ಟೆ ಒಣಗದೇ ಇದ್ದರೆ ಮನೆಯ ಪರಿಸ್ಥಿತಿ ಹೇಗಾಗುತ್ತದೆ ನೋಡಿ. ಮನೆ ತುಂಬಾ ಒದ್ದೆ ಬಟ್ಟೆ. ಸರಿಯಾಗಿ ಒಣಗದ ಬಟ್ಟೆಯಿಂದ ಬರುವ ಒಂಥರಾ ವಾಸನೆ,...

  • ನಮ್ಮಲ್ಲಿ ಕಪ್ಪು ಎಂದರೆ ಅಶುಭ, ನಿಷಿದ್ಧ, ಪ್ರತಿಭಟನೆ ಮುಂತಾದ ಅರ್ಥಗಳಿರುವುದರಿಂದ ಅದನ್ನು ತೊಡಲು ಹಿಂದೆಮುಂದೆ ನೋಡುತ್ತಿದ್ದರು. ಆದರೆ, ಈಗ ಹಾಗಿಲ್ಲ. ಜನರ...

  • ಆಷಾಢದ ನೆಪದಲ್ಲಿ ಕುಣಿದಾಡಿಕೊಂಡೇ ತೌರಿಗೆ ಬಂದ ನವವಧುವಿನ ಸಂಭ್ರಮ ಎರಡೇ ದಿನಗಳಿಗೆ ಮುಗಿದು ಹೋಗುತ್ತಿತ್ತು. ತವರು ಮನೆಯ ನೂರು ಸಂಭ್ರಮದ ಮಧ್ಯೆಯೂ ಗಂಡ ನೆನಪಾಗುತ್ತಿದ್ದ....

ಹೊಸ ಸೇರ್ಪಡೆ