ಪನೀರ್‌ ಪರಿಮಳ

Team Udayavani, Apr 1, 2020, 12:55 PM IST

ಪನೀರ್‌ ಪರಿಮಳ

ಮೊದಲೆಲ್ಲ ರೆಸ್ಟೋರೆಂಟ್‌ಗಳಿಗೆ ಹೋದಾಗ ತಪ್ಪದೇ ಪನೀರ್‌ಖಾದ್ಯಗಳನ್ನು ಆರ್ಡರ್‌ ಮಾಡುತ್ತಿದ್ದೆವು. ಆದರೀಗ ಎಲ್ಲರ ಮನೆಯಲ್ಲೂ ಪನೀರ್‌ತಿನಿಸುಗಳು ಸಿದ್ಧಗೊಳ್ಳುತ್ತಿವೆ. ಕೆಲವರು ರೆಡಿಮೇಡ್‌ ಪನೀರ್‌ ಅನ್ನು ಶಾಪ್‌ಗ್ಳಿಂದ ತಂದರೆ, ಮತ್ತೆ ಕೆಲವರು ಮನೆಯಲ್ಲೇ ಪನೀರ್‌ ತಯಾರಿಸುತ್ತಾರೆ. ಪನೀರ್‌ನಿಂದ ಮಾಡಬಹುದಾದ ಕೆಲವು ಖಾದ್ಯಗಳ ರೆಸಿಪಿ ಇಲ್ಲಿದೆ.

ಪನೀರ್‌ ಬಟರ್‌ ಮಸಾಲ :

ಬೇಕಾಗುವ ಸಾಮಗ್ರಿ: 200 ಗ್ರಾಮ್‌ ಪನೀರ್‌, 1 ಈರುಳ್ಳಿ, 1 ಟೊಮೇಟೊ, ಗೋಡಂಬಿ, ಲವಂಗ, ಚಕ್ಕೆ, ಉಪ್ಪು, ಖಾರದ ಪುಡಿ, ಗರಂ ಮಸಾಲ, ಬೆಣ್ಣೆ.

 ಮಾಡುವ ವಿಧಾನ: ಬಾಣಲೆಗೆ ಸ್ವಲ್ಪಎಣ್ಣೆ ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ. ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ಟೊಮೇಟೊ ಹಾಕಿ ಬೇಯಿಸಿ. ಅವುಗಳ ಜೊತೆಗೆ ಹುರಿದ ಗೋಡಂಬಿ, ಲವಂಗ, ಚಕ್ಕೆ ಕೂಡ ಸೇರಿಸಿ ಪಕ್ಕಕ್ಕೆ ಇಡಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಪುನಃ ಬಾಣಲೆಗೆ ಈ ಮಿಶ್ರಣವನ್ನು ಹಾಕಿ. ಬಿಸಿಯಾದ ನಂತರ, ಚೌಕಾಕಾರಕ್ಕೆ ಕತ್ತರಿಸಿದ ಪನೀರ್‌ ತುಂಡುಗಳನ್ನು ಹಾಕಿ 10 ನಿಮಿಷ ಬೇಯಿಸಿದರೆ ಮಿಶ್ರಣ ಹಾಗೂ ಪನೀರ್‌ ಬೆರೆತುಕೊಳ್ಳುತ್ತದೆ. ನಂತರ, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಗರಂ ಮಸಾಲ ಹಾಕಿ 5 ನಿಮಿಷ ಕುದಿಸಿರಿ. ಕೊನೆಯಲ್ಲಿ ಬೆಣ್ಣೆ ಹಾಕಿದರೆ, ಪನೀರ್‌ ಬಟರ್‌ ಮಸಾಲ ಸಿದ್ಧ.

ಪಾಲಕ್‌ ಪನೀರ್‌ :

ಬೇಕಾಗುವ ಸಾಮಗ್ರಿ: ಪಾಲಕ್‌ ಸೊಪ್ಪು, 200 ಗ್ರಾಮ್‌ ಪನೀರ್‌, 1 ಈರುಳ್ಳಿ, 1 ಟೊಮೇಟೊ, ಲವಂಗ, ಚಕ್ಕೆ, ಉಪ್ಪು, ಖಾರದ ಪುಡಿ, ಗರಂ ಮಸಾಲ.

ಮಾಡುವ ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ಟೊಮೇಟೊ ಹಾಕಿ ಬೇಯಿಸಿ. ಅವುಗಳ ಜೊತೆಗೆ ಪಾಲಕ್‌ ಸೊಪ್ಪನ್ನು ಹಾಕಿ ಫ್ರೈ ಮಾಡಿ, ಲವಂಗ, ಚಕ್ಕೆ ಕೂಡ ಸೇರಿಸಿ ಪಕ್ಕಕ್ಕೆ ಇಡಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಪುನಃ ಬಾಣಲೆಗೆ ಈ ಮಿಶ್ರಣವನ್ನು ಹಾಕಿ. ಅದು ಬಿಸಿಯಾದ ಮೇಲೆ, ಚೌಕಾಕಾರಕ್ಕೆ ಕತ್ತರಿಸಿದ ಪನೀರ್‌ ತುಂಡುಗಳನ್ನು ಹಾಕಿ 10 ನಿಮಿಷ ಬೇಯಿಸಿದರೆ ಮಿಶ್ರಣ ಹಾಗೂ ಪನೀರ್‌ ಬೆರೆತುಕೊಳ್ಳುತ್ತದೆ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಗರಂ ಮಸಾಲ ಹಾಕಿ 5 ನಿಮಿಷ ಕುದಿಸಿ.

ಬುರ್ಜಿ :

ಬೇಕಾಗುವ ಸಾಮಗ್ರಿ: 200 ಗ್ರಾಮ್‌ ತುರಿದ ಪನೀರ್‌, 1 ಈರುಳ್ಳಿ, 1 ಟೊಮೇಟೊ, 1 ಕ್ಯಾಪ್ಸಿಕಂ, ಜೀರಿಗೆ, ಇಂಗು, ಜಿಂಜರ್‌ ಗಾರ್ಲಿಕ್‌ ಪೇಸ್ಟ್‌, ಉಪ್ಪು, ಖಾರದ ಪುಡಿ.

ಮಾಡುವ ವಿಧಾನ: ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಒಗ್ಗರಣೆಗೆ ಜೀರಿಗೆ, ಇಂಗು ಹಾಕಿದ ನಂತರ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ.ನಂತರ, ಜಿಂಜರ್‌ ಗಾರ್ಲಿಕ್‌ ಪೇಸ್ಟ್‌ ಹಾಕಿ. ಅದರ ಹಸಿ ವಾಸನೆ ಹೋದ ಮೇಲೆ ಟೊಮೇಟೊ ಹಾಕಿ. ಅದು ಮೆತ್ತಗಾದ ಮೇಲೆ ಕ್ಯಾಪ್ಸಿಕಂ ಹಾಕಿ ಬೇಯಿಸಿ, ಉಪ್ಪು- ಖಾರ ಸೇರಿಸಿ. ನೀರು ಹಾಕಬಾರದು, ಎಣ್ಣೆಯಲ್ಲೇ ಬೇಯಿಸಿದರೆ ರುಚಿ ಜಾಸ್ತಿ. ನಂತರ ತುರಿದ ಪನೀರ್‌ ಹಾಕಿ 8-10 ನಿಮಿಷ ಮಗುಚಿದರೆ ಪನೀರ್‌ ಬುರ್ಜಿ ರೆಡಿ.

ಸುಪ್ರೀತಾ ವೆಂಕಟ್

ಟಾಪ್ ನ್ಯೂಸ್

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

16

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ; ಓರ್ವ ಸಾವು

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

16

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.