ವೈಯಾರದ ಮಾನಿನಿ ಕಿಯಾರಾ ಆಡ್ವಾಣಿ 

Team Udayavani, Mar 17, 2017, 3:50 AM IST

17-MAHILA-3.jpg

1994ರಲ್ಲಿ ಬಂದ ಮೊಹ್ರಾ ಚಿತ್ರದ ತು ಚೀಝ್ ಬಡಿ ಹೈ ಮಸ್ತ್ ಮಸ್ತ್  ಹಾಡಿನ ಮೋಡಿಗೆ ಒಳಗಾದವರು ಯಾರು. ರವೀನಾ ಟಂಡನ್‌ ಮತ್ತು ಅಕ್ಷಯ್‌ ಕುಮಾರ್‌ ಸೊಂಟ ಬಳುಕಿಸಿ ಕುಣಿದಿದ್ದ ಈ ಮಾದಕ ಹಾಡು ಈಗಲೂ ಪಡ್ಡೆ ಹುಡುಗರಿಗೆ ಅಚ್ಚುಮೆಚ್ಚು. ದ ಮೆಶಿನ್‌ ಚಿತ್ರದಲ್ಲಿ ಮತ್ತೂಮ್ಮೆ ತು ಚೀಝ್ ಬಡಿ ಹೈ ಮಸ್ತ್ ಮಸ್ತ್  ಹಾಡು ಮತ್ತೂ ಮಾದಕವಾಗಿ ಇನ್ನೊಮ್ಮೆ ಮೋಡಿ ಹಾಕಲು ಬರುತ್ತಿದೆ. ಅಂದಹಾಗೆ ದ ಮೆಶಿನ್‌ನಲ್ಲಿ ರವೀನಾ ಜಾಗದಲ್ಲಿ ಈ ಹಾಡಿಗೆ ಕಿಯಾರಾ ಆಡ್ವಾಣಿ ಸೊಂಟ ಕುಲುಕಿಸಿದ್ದಾಳೆ. ಯಾರೀಕೆ ಕಿಯಾರಾ ಆಡ್ವಾಣಿ ಎಂದು ಕೇಳಿದಿರಾ?

ಕ್ರಿಕೆಟಿಗ ಧೋನಿಯ ಜೀವನ ಕುರಿತು ಬಂದ ಎಂ. ಎಸ್‌. ಧೋನಿ- ದ ಅನ್‌ಟೋಲ್ಡ್‌ ಸ್ಟೋರಿಯಲ್ಲಿ ಧೋನಿಯ ಹೆಂಡತಿ ಸಾಕ್ಷಿಯಾಗಿ ನಟಿಸಿದ ಚೆಲುವೆ. ಇದು ಕಿಯಾರಾಳ ಎರಡನೇ ಚಿತ್ರ. ಇದಕ್ಕೂ ಮೊದಲು ಫ‌ಗ್ಲಿ ಎಂಬ ಥ್ರಿಲ್ಲರ್‌ ಕಮ್‌ ಕಾಮೆಡಿ ಚಿತ್ರದಲ್ಲಿ ನಟಿಸಿದ್ದಳು. ಮೊದಲ ಚಿತ್ರ ನೆಲಕಚ್ಚಿದರೆ ಎರಡನೇ ಚಿತ್ರದಲ್ಲಿ ಧೋನಿಯೇ ಮುಖ್ಯವಾಗಿದ್ದ ಕಾರಣ ಕಿಯಾರಾಳ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಸಿಗಲಿಲ್ಲ. ಅಲ್ಲದೆ ಧೋನಿಯ ಮೊದಲ ಲವರ್‌ ಪಾತ್ರದಲ್ಲಿ ನಟಿಸಿದ ದಿಶಾ ಪಠಾನಿಯ ಗ್ಲಾಮರ್‌ ಎದುರು ಕಿಯಾರಾ ತುಸು ಕಳೆಗುಂದಿದ್ದಳು. ಹೀಗಾಗಿ ಧೋನಿಯ ಶೇ. 90 ಕ್ರೆಡಿಟ್‌ ಸುಶಾಂತ್‌ ಸಿಂಗ್‌ ರಜಪೂತನಿಗೂ ಶೇ. 10 ಕ್ರೆಡಿಟ್‌ ದಿಶಾ ಪಠಾನಿಗೂ ಹೋಯಿತು. ಸಾಕ್ಷಿ ಧೋನಿಯಾಗಿ ನಟಿಸಿದ ಕಿಯಾರಾ ಎಲೆಮರೆಯ ಕಾಯಿಯಾಗಬೇಕಾಯಿತು. ಇದೀಗ ತು ಚೀಝ್ ಬಡಿ ಹೈ ಮಸ್ತ್ ಮಸ್ತ್  ಹಾಡಿನ ರಿಮೇಕ್‌ ಕಿಯಾರಾಳಿಗೆ ಭರ್ಜರಿ ಪಬ್ಲಿಸಿಟಿ ಸಿಕ್ಕಿದೆ. ರವೀನಾಳಿಗಿಂತಲೂ ಒಂದು ತೂಕ ಹೆಚ್ಚೇ ಮಾದಕವಾಗಿ ಕುಣಿದಿದ್ದಾಳೆ ಎಂಬ ತಾರೀಫ‌ು ಕೂಡ ಸಿಕ್ಕಿದೆ. ಇದರ ಬೆನ್ನಿಗೆ ಕಿಯಾರಾಳಿಗೆ ತೆಲುಗು ಚಿತ್ರರಂಗದಿಂದ ಆಫ‌ರ್‌ಗಳ ಮೇಲೆ ಆಫ‌ರ್‌ಗಳು ಬರತೊಡಗಿದೆ. ಅಂದ ಹಾಗೆ ಕಿಯಾರಾ ಯಾರೆಂದೇ ಪರಿಚಯಿಸಲಿಲ್ಲ. ಸಿನೆಮಾ ಲೋಕದ ಏನೇನೂ ಸಂಬಂಧವಿಲ್ಲದ ಮಧ್ಯಮ ವರ್ಗದ ಕುಟುಂಬದಿಂದ ಬಂದವಳು ಕಿಯಾರಾ. ಮುಂಬಯಿಯ ಸಿಂಧಿ ಕುಟುಂಬದಲ್ಲಿ ಜನಿಸಿದ ಕಿಯಾರಾಳ ತಂದೆ ವ್ಯಾಪಾರಿ ಹಾಗೂ ತಾಯಿ ಗೃಹಿಣಿ. ತಂದೆ ಮಕ್ಕಳನ್ನು ಬಹಳ ಕಟ್ಟುನಿಟ್ಟಿನಿಂದ ಬೆಳೆಸಿದ್ದರು. ಆದರೆ 3 ಈಡಿಯಟ್ಸ್‌ ಚಿತ್ರ ನೋಡಿದ ಬಳಿಕ ತಂದೆಯ ನಿರ್ಧಾರಗಳು ಬದಲಾದವಂತೆ. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರಕ್ಕೆ ಕಳುಹಿಸಬೇಕೆಂಬ ತೀರ್ಮಾನಕ್ಕೆ ಬಂದರು. ಹೀಗಾಗಿ ಕಿಯಾರ ಚಿತ್ರರಂಗಕ್ಕೆ ಬರುವುದು ಸಾಧ್ಯವಾಯಿತು. 

ಅನುಪಮ್‌ ಖೇರ್‌ ಆ್ಯಕ್ಟಿಂಗ್‌ ಸ್ಕೂಲ್‌ನಲ್ಲಿ ಆರು ತಿಂಗಳ ಕೋರ್ಸ್‌ ಮಾಡಿದ್ದು ಬಿಟ್ಟರೆ ಕಿಯಾರಳಿಗೆ ನಟನೆ ಬಗ್ಗೆ ಬೇರೇನೊ ಗೊತ್ತಿರಲಿಲ್ಲ. ಆದರೆ ಅಭಿನಯಿಸುವ ಕಲೆ ಅದೇಗೋ ಒಲಿದು ಬಂದಿತ್ತು. ಇದಕ್ಕೂ ಮಿಗಿಲಾಗಿ ಮನ ಸೆಳೆಯುವ ಗ್ಲಾಮರ್‌ ಲುಕ್‌ ಇದೆ. ಬಾಲಿವುಡ್‌ನ‌ಲ್ಲಿ ಮಿಂಚಲು ಇನ್ನೇನು ಬೇಕು? 

ಟಾಪ್ ನ್ಯೂಸ್

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-uv-fusion

Movie Review: ಜೀವನ ಒಂದು ಹೋರಾಟ, ಆ ಹೋರಾಟ ನಿರಂತರ

3-uv-fusion

Life Lesson: ಜಾತ್ರೆಯಲ್ಲಿ ಸಿಕ್ಕಾಕೆ ಕಲಿಸಿದ ಪಾಠ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

2-uv-fusion

UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.