Udayavni Special

ಹೆಣ್ಣುಮಕ್ಕಳ ಅಮ್ಮಂದಿರು


Team Udayavani, Feb 22, 2019, 12:30 AM IST

22.jpg

ಹೆಣ್ಣುಮಗುವಿನ ಅಮ್ಮನಾಗುವುದೆಂದರೆ ಗಂಡು ಮಗುವಿನ ಅಮ್ಮನಾಗುವುದಕ್ಕಿಂತ ಸವಾಲಿನ ಕೆಲಸ. ಗಂಡು-ಹೆಣ್ಣು ಸಮಾನರು ಎಂಬುದು ಉಳಿದೆಲ್ಲ  ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಸರಿ. ಆದರೆ, ಹೆಣ್ಣಿನ ಬಾಳಿನ ವಿಶೇಷವಾದ ಹಂತಗಳಿಂದಾಗಿ ಅಮ್ಮಂದಿರು ಮತ್ತು ಹೆಣ್ಣುಮಕ್ಕಳ ನಡುವಿನ ಸಂಬಂಧ ಸ್ವಲ್ಪ ಹೆಚ್ಚು ಆಳವಾಗುತ್ತದೆ. ಗಂಡುಮಕ್ಕಳ ಅಮ್ಮನಾಗುವುದು ಹೊಣೆಗಾರಿಕೆಯ ದೃಷ್ಟಿಯಲ್ಲಿ ಸುಲಭ.

ಅರೆ, ಇದೇನಿದು, ಇವರಿಗೇನು ವಿಶೇಷತೆ? ಗಂಡುಮಕ್ಕಳ ಅಮ್ಮಂದಿರಿಗಿಂತ ಇವರು ಭಿನ್ನರೇ?- ಎಂಬ ಸಂದೇಹ ನಿಮ್ಮಲ್ಲಿ ಮೂಡಿರಬಹುದು. ಅಮ್ಮಂದಿರು ಎಂದೂ ಅಮ್ಮಂದಿರೇ. ಆದರೆ, ಮಗು ಹೆಣ್ಣಾದಾಗ ಆಕೆ ಗಂಡುಮಗುವಿನ ತಾಯಿಗಿಂತ ಕೆಲವಾರು ವಿಷಯಗಳಲ್ಲಿ ಭಿನ್ನವಾಗಿರುತ್ತಾಳೆ. ಗಂಡುಮಕ್ಕಳಿಗಿಂತ ಅವಳಿಗೆ ಹೆಣ್ಣುಮಗುವಿನ ವಿಷಯದಲ್ಲಿ ಆತಂಕ ಹೆಚ್ಚು. ಹೆಣ್ಣುಮಗುವಿಗೆ ಚಂದದ ಅಂಗಿ ತೊಡಿಸಿ, ಬಣ್ಣ ಬಣ್ಣದ ಬಳೆ, ಮಣಿಸರ ತೊಡಿಸಿ, ಕೂದಲಿಗೆ ಪುಟ್ಟ ಜುಟ್ಟು ಕಟ್ಟಿ, ಬಣ್ಣ ಬಣ್ಣದ ಹೇರ್‌ಬ್ಯಾಂಡ್‌ ಹಾಗೂ ಹೇರ್‌ ಕ್ಲಿಪ್‌ಗ್ಳನ್ನು ಹಾಕಿಸಿ, ಕಾಲಿಗೆ ಘಲ… ಘಲ… ಎನ್ನುವ ಗೆಜ್ಜೆ ತೊಡಿಸಿ ಅದರ ಅಂದ ನೋಡುವುದೇ ಅವಳಿಗೊಂದು ಸಂಭ್ರಮ. ಗಂಡು ಮಕ್ಕಳಿಗೆ ಈ ಪರಿ ಅಲಂಕಾರಗಳಿಲ್ಲದಿರುವುದರಿಂದ ಆ ಅಮ್ಮಂದಿರಿಗೆ ಈ ಒಂದು ಸಂಭ್ರಮ ಅನುಭವಕ್ಕೆ ಬರುವುದಿಲ್ಲ. ಹೆಣ್ಣು ಮಗುವಿನ ಆಟಗಳೂ ವಿಶಿಷ್ಟವಾಗಿರುತ್ತವೆ. ಗೊಂಬೆಯೊಂದನ್ನು ಮಗುವಿನಂತೆ ಎತ್ತಿಕೊಂಡು ನಡೆಯುವುದು, ಅದನ್ನು ಸ್ನಾನ ಮಾಡಿಸುವುದು, ನಿದ್ದೆ ಮಾಡಿಸುವುದು ಇತ್ಯಾದಿ ಆಟಗಳನ್ನು ನೋಡುವಾಗ ಅಮ್ಮಂದಿರ ಮನಸ್ಸು ತುಂಬದೇ ಇರದು. ಅಮ್ಮನ ಪೌಡರ್‌, ಕಾಜಲ್, ಲಿಪ್‌ಸ್ಟಿಕ್‌, ನೇಲ್ ಪಾಲಿಶ್‌ ಇತ್ಯಾದಿಗಳನ್ನು ಬೇಕಾಬಿಟ್ಟಿ ಹಚ್ಚಿಕೊಂಡು ಅಮ್ಮನಿಗೆ ಸಿಟ್ಟಿನ ಜೊತೆ ನಗುವನ್ನು ತರಿಸುವ ಕೆಲಸ ಹೆಣ್ಣು ಮಕ್ಕಳಷ್ಟೇ ಮಾಡಬಲ್ಲರು. ಮುಖ, ಮೈತುಂಬಾ  ಮೇಕಪ್‌ ಮಾಡಿ ನಿಂತಿರುವ ಅವರನ್ನು ಕಂಡಾಗ ವಸ್ತುಗಳು ಹಾಳಾದರೂ ಸಹಿಸಿಕೊಂಡು ಆ ಮಗುವನ್ನೆತ್ತಿ ಮುದ್ದು ಮಾಡದಿರಲು ಅಮ್ಮನಿಗೆ ಸಾಧ್ಯವಿಲ್ಲ. ಎರಡು-ಮೂರು ವರ್ಷ ಪ್ರಾಯದ ನಂತರ ಹೆಣ್ಣು ಮಗುವಿಗೆ ಅಮ್ಮನ ಹಾಗೆ ಕಾಣಬೇಕೆಂಬ ಆಸೆ ಶುರುವಾಗುತ್ತದೆ. ಅಮ್ಮನ ಹಾಗೆ ಸೀರೆ ಉಡಿಸಬೇಕೆಂದು ಅದು ಹಟ ಮಾಡುತ್ತದೆ. ಚೂಡಿದಾರದ ಶಾಲನ್ನು ಬಳಸಿ ಸೀರೆ ಉಡಿಸಿದರಂತೂ ಅದರ ಸಂತೋಷ ಹೇಳತೀರದು. ಅಂತೂ ಶೈಶವ ಹಾಗೂ ಬಾಲ್ಯದಲ್ಲಿ ಹೆಣ್ಣುಮಕ್ಕಳ ಚಟುವಟಿಕೆಗಳು ಹೆಚ್ಚು ಮುದ್ದಾಗಿದ್ದು ಅಮ್ಮಂದಿರನ್ನು ರಂಜಿಸುತ್ತದೆ. 

ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಅಮ್ಮಂದಿರು ಕುರಿ, ಆಡು, ಕೋಳಿಗಳನ್ನು ಸಾಕುತ್ತಿದ್ದರು. ಅದರ ಹಿಂದಿನ ಮುಖ್ಯ ಉದ್ದೇಶ ಅದನ್ನು ಮಾರಿ ಮಗಳಿಗೆ ಕಾಲ್ಗೆಜ್ಜೆ ಅಥವಾ ಕಿವಿಯೋಲೆ ತೆಗೆದುಕೊಳ್ಳುವುದಾಗಿತ್ತು. ಹೆಣ್ಣುಮಕ್ಕಳಿಗೆ ಚಿನ್ನದ ಒಡವೆ ಮಾಡಿಸಲಿಕ್ಕಾಗಿಯೇ ಟೈಲರಿಂಗ್‌ ಮಾಡುತ್ತಿದ್ದ, ದನ ಸಾಕಿ ಹಾಲು ಮಾರುತ್ತಿದ್ದ ಮಹಿಳೆಯರನ್ನು ನನ್ನ ಬಾಲ್ಯದಲ್ಲಿ ನಾನು ನೋಡಿದ್ದೆ. ನನ್ನ ಅಮ್ಮನೂ ಅವರÇÉೊಬ್ಬಳಾಗಿದ್ದಳು. ಆಡು ಸಾಕಿ ಅದನ್ನು ಮಾರಿ ಕಾಲ್ಗೆಜ್ಜೆ ತಂದು ನನ್ನ ಕಾಲಿಗೆ ಹಾಕಿದಾಗ ಅಮ್ಮನ ಕಣ್ಣಲ್ಲಿ ಮೂಡಿದ ಸಂತೋಷ, ಸಂತೃಪ್ತಿಯ ಹೊಳಪು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹೆಣ್ಣುಮಕ್ಕಳ ಕೂದಲ ಮೇಲೂ ಅಮ್ಮಂದಿರು ಕೆಲವು ಸೌಂದರ್ಯ ಪ್ರಯೋಗಗಳನ್ನು ಮಾಡುತ್ತಾರೆ. ನೆತ್ತಿಯ ಮೇಲೊಂದು ಪುಟ್ಟ ಜುಟ್ಟು ಕಟ್ಟಿ ಮಗು ಮತ್ತಷ್ಟು ಮುದ್ದಾಗಿ ಕಾಣುತ್ತಿದೆಯೆಂದು ಹೆಮ್ಮೆ ಪಡುವುದು, ಇನ್ನೂ ಮೋಟಾಗಿರುವ ಕೂದಲನ್ನು ಹರಸಾಹಸ ಪಟ್ಟು ಎರಡು ಜುಟ್ಟುಗಳಾಗಿ ಕಟ್ಟುವುದು, ವಿವಿಧ ಬಣ್ಣಗಳ ಹೇರ್‌ಬ್ಯಾಂಡ್‌, ರಬ್ಬರ್‌ ಬ್ಯಾಂಡ್‌, ಹೇರ್‌ ಕ್ಲಿಪ್ಪುಗಳನ್ನು ಹಾಕಿ ಮಗುವಿನ ಅಂದ ಹೆಚ್ಚಿತೆಂದು ಸಂಭ್ರಮ ಪಡುವುದು ಹೆಣ್ಣು ಮಕ್ಕಳ ಅಮ್ಮಂದಿರ ನಿತ್ಯದ ಕಾಯಕ. ಮಗಳು ಸ್ವಲ್ಪ$ದೊಡ್ಡವಳಾದಾಗ ಸಣ್ಣಪುಟ್ಟ ಕೆಲಸಗಳಲ್ಲಿ ತನಗೆ ನೆರವಾಗುವಾಗ ಅವಳಿಗೆ ಹೆಣ್ಣು ಮಗುವಿನ ಅಮ್ಮನಾಗಿದ್ದಕ್ಕೆ ಸಂತೋಷ. ಮಗಳು ಹದಿಹರೆಯಕ್ಕೆ ಬಂದಾಗ ಅಮ್ಮನಿಗೆ ಒಂದಿಷ್ಟು ಆತಂಕ. ಯಾವಾಗ ಮಗಳು ಮೈನೆರೆಯುವಳ್ಳೋ, ಆ ಹೆಣ್ತನದ ಲಕ್ಷಣಕ್ಕೆ ಅವಳನ್ನು ಹೇಗೆ ಮಾನಸಿಕವಾಗಿ ಸಿದ್ಧಗೊಳಿಸುವುದೋ ಎಂಬ ಚಿಂತೆ ಅವಳಿಗೆ. ಆ ಬಳಿಕ ಮಗಳಿಗೆ ಆ ದಿನಗಳು ಹೊಟ್ಟೆನೋವು ಇತ್ಯಾದಿಗಳಿಲ್ಲದೇ ನಿರಾತಂಕವಾಗಿ ಕಳೆದುಹೋಗಲಿ ಎಂಬ ಪ್ರಾರ್ಥನೆ ಶುರುವಾಗುತ್ತದೆ. ನೋಡನೋಡುತ್ತಿದ್ದಂತೆ ಮಗಳು ಬೆಳೆದು ತನ್ನಷ್ಟು ಎತ್ತರವಾದಾಗ ಅವಳ ಯೌವನದ ಕುರಿತು ಹೊಸ ಚಿಂತೆ ಶುರುವಾಗುತ್ತದೆ. ಪುಂಡುಪೋಕರಿಗಳ ಚುಡಾಯಿಸುವಿಕೆಗೆ ಗುರಿಯಾಗದೇ, ಅನಪೇಕ್ಷಿತ ಪ್ರೇಮಸಂಬಂಧಗಳಿಗೆ ಸಿಲುಕದೇ ಮಗಳನ್ನು ಕಾಪಾಡು ಎಂಬ ಆತಂಕಭರಿತ ಪ್ರಾರ್ಥನೆ ಆಗ ಶುರುವಾಗುತ್ತದೆ. ನಿನ್ನೆ ಮೊನ್ನೆ ಮಗುವಾಗಿದ್ದವಳು ಈಗ ಬೆಳೆದು ಮದುವೆಯ ಪ್ರಾಯಕ್ಕೆ ಬಂದಾಗ ಉತ್ತಮ ಸಂಬಂಧ ಕೂಡಿಬರಲಿ, ಮಗಳನ್ನು ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುವ ಗಂಡ ಸಿಗಲಿ ಎಂಬ ಅವಳ ಹಂಬಲ, ನಂತರ ಮಗಳಿಗೆ ಒಂದು ಮಗುವಾಗಲಿ ಎಂಬಲ್ಲಿಗೆ ತಲುಪುತ್ತದೆ. ತುಂಬು ಗರ್ಭಿಣಿ ಮಗಳಿಗೆ ಹೆರಿಗೆ ನೋವು ಶುರುವಾದರೆ ಅದಕ್ಕಿಂತಲೂ ತೀವ್ರವಾದ ಚಡಪಡಿಕೆ ಅನುಭವಿಸುವವಳು ಅಮ್ಮ. ಮಗಳು ಅಮ್ಮನಾದರೂ ಅಮ್ಮನಲ್ಲಿರುವ ತಾಯ್ತನದ ವರ್ತನೆ ಬದಲಾಗುವುದಿಲ್ಲ. ಮಗಳನ್ನೂ ಮೊಮ್ಮಗುವನ್ನೂ ಆರೈಕೆ ಮಾಡುವುದರಲ್ಲಿ ಅವಳು ಸಾರ್ಥಕತೆ ಕಾಣುತ್ತಾಳೆ. ಈ ವಿಶಿಷ್ಟವಾದ ಹಲವು ವಿಷಯಗಳು ಹೆಣ್ಣು ಮಕ್ಕಳಿಗಷ್ಟೇ ಸಂಬಂಧಪಟ್ಟಿರುವುದರಿಂದ ಹೆಣ್ಣುಮಕ್ಕಳ ಅಮ್ಮಂದಿರು ಗಂಡು ಮಕ್ಕಳ ಅಮ್ಮಂದಿರಿಗಿಂತ ಭಿನ್ನವಾಗಿರುತ್ತಾರೆ. 

 ನನ್ನಮ್ಮನಿಗೆ ನಾವು ನಾಲ್ವರು ಹೆಣ್ಣುಮಕ್ಕಳು, ಒಬ್ಬ ಮಗ. ನಮ್ಮ ಬಾಲ್ಯದಲ್ಲಿ ನಮ್ಮ ನೆಂಟರಿಷ್ಟರೆಲ್ಲ ಅಮ್ಮನ ಕುರಿತು ಅನುಕಂಪ ವ್ಯಕ್ತಪಡಿಸುತ್ತಿದ್ದರು. ಕಾರಣ ಹೆಣ್ಣು ಮಕ್ಕಳು ಜಾಸ್ತಿ ಇ¨ªಾರೆಂಬುದು. ನಮ್ಮಲ್ಲಿ ಹೆಣ್ಣನ್ನು ಮದುವೆ ಮಾಡಿಕೊಟ್ಟಾಗ ಹೆಚ್ಚಿನ ಪ್ರಮಾಣದ ಚಿನ್ನ ಹಾಗೂ ಹಣ ನೀಡಬೇಕಾಗುತ್ತಿತ್ತು. ನಾಲ್ಕು ಜನರಿಗೆ ವರದಕ್ಷಿಣೆ ಕೊಟ್ಟು ಅಪ್ಪಅಮ್ಮ ಹೈರಾಣಾಗುತ್ತಾರೆ ಎಂಬ ಕಳಕಳಿಯೇ ಅವರ ಅನುಕಂಪದ ರೂಪದಲ್ಲಿ ವ್ಯಕ್ತವಾಗುತ್ತಿತ್ತು. ಎಲ್ಲರ ಮಾತುಗಳನ್ನು ಕೇಳುವಾಗ ಅಮ್ಮನಿಗೂ ಒಂಚೂರು ಚಿಂತೆಯಾಗುತ್ತಿದ್ದರೂ, ಹಾಗೇನೂ ಇಲ್ಲ, ಹೆಣ್ಣು ಮಕ್ಕಳು ಮುಂದೆ ಅಮ್ಮಂದಿರಿಗೆ ಆಸರೆಯಾಗುತ್ತಾರೆ. ಗಂಡು ಮಕ್ಕಳಿಗಿಂತ ಹೆಚ್ಚಾಗಿ ಅಮ್ಮನ ನೋವು ಹೆಣ್ಣು ಮಕ್ಕಳಿಗೆ ಅರ್ಥವಾಗುತ್ತದೆ. ವಯಸ್ಸಾದ ಅಮ್ಮನೊಂದಿಗೆ ಗಂಡು ಮಕ್ಕಳಿಗಿಂತ ಆಪ್ತವಾಗಿ ವರ್ತಿಸುವವರು ಹೆಣ್ಣುಮಕ್ಕಳು ಎಂದು ನಮ್ಮನ್ನು ಸಮಾಧಾನಿಸುತ್ತಿದ್ದರು. ನಮ್ಮ ಬಾಲ್ಯದಲ್ಲಿ ನನ್ನಮ್ಮನಿಗೆ ಹೊಸ ಸೀರೆಯ ಆಸೆ ಬಹಳವಿತ್ತು. ಆದರೆ, ಆಗಾಗ ಸೀರೆ ಕೊಳ್ಳುವ ಪರಿಸ್ಥಿತಿ ಇರಲಿಲ್ಲ. ವರ್ಷಕ್ಕೆ ಒಂದು ಸೀರೆ ಸಿಗುವುದೇ ದೊಡ್ಡದು. ಆದರೆ ನಾವು ಹೆಣ್ಣುಮಕ್ಕಳೆಲ್ಲ ಬೆಳೆದು ಉದ್ಯೋಗಕ್ಕೆ ಹೋಗತೊಡಗಿದ ನಂತರ ನನ್ನಮ್ಮನ ಕಪಾಟು ಸೀರೆಗಳಿಂದ ತುಂಬಿತು. ದೂರದಲ್ಲಿದ್ದರೂ ನಾವೆಲ್ಲ ಅಮ್ಮನಲ್ಲಿ ಫೋನ್‌ ಮಾಡಿ ಕಷ್ಟ-ಸುಖ ವಿಚಾರಿಸುವಾಗ, ಆಗಾಗ ಅವರನ್ನು ಭೇಟಿಯಾಗಲು ಹೋದಾಗ ಹೆಣ್ಣುಮಕ್ಕಳನ್ನು ಹೆತ್ತದ್ದು ಸಾರ್ಥಕವಾಯಿತು ಎಂಬ ಭಾವ ಅವರಲ್ಲಿ ಮೂಡುತ್ತದೆ.

ಗಂಡುಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣುಮಕ್ಕಳು ಅಮ್ಮನ ಮುದಿ ಪ್ರಾಯದಲ್ಲಿ ಹತ್ತಿರವಾಗಲು ಕಾರಣಗಳಿವೆ. ಹೆಣ್ಣುಮಗಳು ಅಮ್ಮನಾಗುವಾಗ ಅವಳಿಗೆ ಅಮ್ಮ ಒಂದು ಮಗುವಿಗಾಗಿ ಎಷ್ಟು ಕಷ್ಟ ಪಡುತ್ತಾಳೆ ಎಂಬುದರ ಅನುಭವವಾಗುತ್ತದೆ. ಅಮ್ಮ ಬಾಲ್ಯದಿಂದ ಯೌವನದವರೆಗೆ, ಮದುವೆಯಾಗುವವರೆಗೆ ಅಷ್ಟೇ ಅಲ್ಲ, ತನ್ನ ತಾಯ್ತನದ ಸಂದರ್ಭದಲ್ಲೂ ಎಷ್ಟೊಂದು ಕಷ್ಟ, ತ್ಯಾಗಗಳನ್ನು ಅನುಭವಿಸುತ್ತಾಳೆ ಎಂಬ ಅರಿವಿರುವ ಹೆಣ್ಣುಮಗಳಿಗೆ ಅಮ್ಮನ ಬೆಲೆಯ ಅರಿವಿರುತ್ತದೆ. ಇಂತಹ ತ್ಯಾಗಮಯಿ ಅಮ್ಮನನ್ನು ಮರೆಯುವ ಹೆಣ್ಣುಮಕ್ಕಳು ವಿರಳವಾಗಿಯಾದರೂ ಇದ್ದಾರೆ. ಹಾಗೆಯೇ ಅಮ್ಮನೇ ದೇವರೆಂದು ಕಾಣುವ ಗಂಡು ಮಕ್ಕಳೂ ಇರುತ್ತಾರೆ. ಆದರೆ ಕಡಿಮೆ. 

ಹೆಣ್ಣುಮಗುವಿನ ಅಮ್ಮನಾಗುವುದೆಂದರೆ ಗಂಡು ಮಗುವಿನ ಅಮ್ಮನಾಗುವುದಕ್ಕಿಂತ ಸವಾಲಿನ ಕೆಲಸ. ಗಂಡು-ಹೆಣ್ಣು ಸಮಾನರು ಎಂಬುದು ಉಳಿದೆಲ್ಲ  ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಸರಿ. ಆದರೆ, ಹೆಣ್ಣಿನ ಬಾಳಿನ ವಿಶೇಷವಾದ ಹಂತಗಳಿಂದಾಗಿ ಅಮ್ಮಂದಿರು ಮತ್ತು ಹೆಣ್ಣುಮಕ್ಕಳ ನಡುವಿನ ಸಂಬಂಧ ಸ್ವಲ್ಪ ಹೆಚ್ಚು ಆಳವಾಗುತ್ತದೆ. ಗಂಡುಮಕ್ಕಳ ಅಮ್ಮನಾಗುವುದು ಜವಾಬ್ದಾರಿಯ ಲೆಕ್ಕದಲ್ಲಿ ಸುಲಭ. ಹಾಗಾಗಿ ಇರಲಿ, ಹೆಣ್ಣುಮಕ್ಕಳ ಅಮ್ಮಂದಿರಿಗೊಂದು ಅಭಿಮಾನದ ನಮಸ್ಕಾರ.

ಜೆಸ್ಸಿ ಪಿ.ವಿ.

ಟಾಪ್ ನ್ಯೂಸ್

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

k-20

ಸೆರಗು-ಲೋಕದ ಬೆರಗು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.