ಕಚ್ಛ್ ಬ್ಲೌಸ್‌


Team Udayavani, Mar 17, 2017, 3:50 AM IST

17-MAHILA-5.jpg

ಸೀರೆ ಹೇಗೆ ಬೇಕಾದ್ರೂ ಇರಲಿ. ಜೊತೆಗಿರುವ ಬ್ಲೌಸ್‌ ಮಾತ್ರ ಸೀರೆಗಿಂತ ಭರ್ಜರಿಯಾಗಿರಬೇಕು! ಇದು ಈ ಕಾಲದ ಸ್ಟೇಟ್‌ಮೆಂಟ್‌. ಹಿಂದೆ ಸೀರೆ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಹೆಚ್ಚಿದ್ದರು. ಸದ್ಯಕ್ಕೀಗ ಸೀರೆಗೆ ಸಂಬಂಧವೇ ಇಲ್ಲದ ಬ್ಲೌಸ್‌ಗಳನ್ನು ಹಾಕ್ಕೊಳ್ಳೋದು ಸ್ಟೈಲ್‌. ನಮ್ಮೂರ ಮಳೆಗಾಲದಲ್ಲಿ ಬಿಸಿಲುನಾಡು ಗುಜರಾತ್‌ನ ಕಚ್ಛ್ ಬ್ಲೌಸ್‌ ತೊಟ್ಟರೆ “ವಿರುದ್ಧ ಧ್ರುವಗಳ ಆಕರ್ಷಣೆ’ ಥಿಯರಿ ಜಾರಿಗೆ ಬಂದ ಹಾಗೆ…

ಮಹಿಳೆಯರು ಇಂದು ಬ್ಲೌಸ್‌ಗಳ ಆಯ್ಕೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್‌ ಬ್ಲೌಸ್‌ಗಳನ್ನು ಹೊಲಿಸಿಕೊಳ್ಳುವುದಲ್ಲದೆ, ಆಕರ್ಷಕವಾದ ನೆಕ್‌, ಕುಸುರಿಗಳನ್ನು ಬ್ಲೌಸ್‌ಗಳ ಮೇಲೆ ಅರಳಿಸಿ ಸೌಂದರ್ಯವತಿಯಾಗಿ ಕಾಣಲು ಬಯಸುತ್ತಾರೆ.

ಬ್ಲೌಸ್‌ನಲ್ಲಿ ಸ್ಲಿವ್‌ಲೆಸ್‌ ಬ್ಲೌಸ್‌, ಉದ್ದ ತೋಳಿನ ಬ್ಲೌಸ್‌, ಮೊಣಗಂಟಿನವರೆಗೆ ತೋಳು, ಡೀಪ್‌ನೆಕ್‌ ಬ್ಲೌಸ್‌, ಫುಲ್‌ಸ್ಲಿವ್ಸ್‌ ಬ್ಲೌಸ್‌, ಬ್ಯಾಕ್‌ಲೆಸ್‌ ಬ್ಲೌಸ್‌, ಬ್ಯಾಕ್‌ಬಟನ್‌ ಬ್ಲೌಸ್‌, ಹೈನೆಕ್‌- ಹೀಗೆ ಹಲವಾರು ಡಿಸೈನುಗಳಲ್ಲಿ ಬ್ಲೌಸ್‌ಗಳನ್ನು ಹೊಲಿಯಲಾಗುತ್ತದೆ. ಆದರೀಗ ಸೀರೆ ಹೇಗೆ ಬೇಕಾದ್ರೂ ಇರಲಿ, ಜೊತೆಗಿರುವ ಬ್ಲೌಸ್‌ ಮಾತ್ರ ಸೀರೆಗಿಂತ ಭರ್ಜರಿಯಾಗಿರಬೇಕು! ಇದು ಈ ಕಾಲದ ಸ್ಟೇಟ್‌ಮೆಂಟ್‌. ಹಿಂದೆ ಸೀರೆ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಹೆಚ್ಚಿದ್ದರು. ಸದ್ಯಕ್ಕೀಗ ಸೀರೆಗೆ ಸಂಬಂಧವೇ ಇಲ್ಲದ ಬ್ಲೌಸ್‌ಗಳನ್ನು ಹಾಕ್ಕೊಳ್ಳೋದು ಸ್ಟೈಲ್‌.

ಬಟ್ಟೆಯ ಮೇಲೆ ವಿವಿಧ ದಾರಗಳ ಮೆರುಗು ಮೂಡಿಸುವ ಎಂಬ್ರಾಯರಿ ವಿನ್ಯಾಸದಲ್ಲಿ ಬೆಳಗುವ ದಿರಿಸು ತೊಡುವುದು ಎಂದರೆ ಈಗ ವಿಶೇಷ ಸಂಭ್ರಮ! ಹಾಗಾಗಿಯೇ ಇದೀಗ ಗುಜರಾತ್‌ ಮೂಲದ ಚಿತ್ರವಿನ್ಯಾಸ ಹಾಗೂ ಬಣ್ಣಗಳ ವೈವಿಧ್ಯದಲ್ಲಿ ಮೂಡಿಬರುವ ಕಚ್ಛ್ ಸಾಂಪ್ರದಾಯಿಕ ವಿನ್ಯಾಸದ ಬ್ಲೌಸ್‌ಗಳು ಮಹಿಳೆಯರ ಮನಸ್ಸನ್ನು ಸೆಳೆದಿವೆ. ತಮ್ಮ ಹತ್ತಿರದ ಬಟ್ಟೆಯ ಅಂಗಡಿ, ಮ್ಯಾಚಿಂಗ್‌ ಸೆಂಟರ್‌ಗಳಲ್ಲಿ ಕಚ್ಛ್ ಬ್ಲೌಸ್‌ಗಾಗಿ ಹುಡುಕಾಡಿ ಅವು ಅಲ್ಲಿ ದೊರಕದೆ ಇದ್ದಾಗ, ಉತ್ತರಭಾರತದ ಕಡೆಯವರ ಸೇಲ್‌ ಬಂದಾಗ ಕಾದು ಕುಳಿತು ಹೋಗಿ ಖರೀದಿಸುತ್ತಾರೆ.   

ಇದೀಗ ಕಚ್ಛ್ ಬ್ಲೌಸ್‌ಗಳು ಮತ್ತೆ ಫಾಶ್ಯನ್‌ ಆಗಿ ಸುದ್ದಿಯಲ್ಲಿವೆ. ಅಂತೆಯೇ ಕಚ್ಛ್ ಮೂಲದ ವಿವಿಧ ಬಗೆಯ ಎಂಬ್ರಾಯxರಿ ವಿನ್ಯಾಸ ಇರುವ ಈ ಬ್ಲೌಸ್‌ಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ಯಾಕೆಂದರೆ, ಕಾಂಟ್ರಾಸ್ಟ್‌ ಬ್ಲೌಸ್‌ಗಳ ಸಾಲಿನಲ್ಲಿ ಕಚ್ಛ್ ಬ್ಲೌಸ್‌ಗಳು ಪಾರಂಪರಿಕ ಲುಕ್‌ ನೀಡುವ ಜೊತೆಗೆ ಸಿಂಪಲ್‌ ಸೀರೆಗಳಿಗೂ ರಿಚ್‌ ಲುಕ್‌ ನೀಡುತ್ತವೆ. ಕಾಂಟೆಪರರಿ ಫ್ಯಾಶನ್‌ ಯುಗದಲ್ಲಿ ಕಚ್ಛ್ ಬ್ಲೌಸ್‌ಗಳು ಎಥಿ°ಕ್‌ ಲುಕ್‌ ನೀಡುವ ಇವುಗಳನ್ನು ಬೇರೆ ಬೇರೆ ಸೀರೆಗಳಿಗೆ ಧರಿಸಬಹುದು.

ಗುಜರಾತ್‌ನ ಕಚ್ಛ್ ಜಿಲ್ಲೆಯ ಬುಡಕಟ್ಟು ಜನಾಂಗದವರ ಸಿಗ್ನೇಚರ್‌ ಆರ್ಟ್‌ ಈ ಕಚ್ಛ್ ಎಂಬ್ರಾಯಿಡರಿ. ಭಾರತೀಯ ಪರಂಪರೆಯಲ್ಲಿ ಕಚ್ಛ್ ಎಂಬ್ರಾಯಿಡರಿಗೆ ಅಗ್ರಸ್ಥಾನ. ಕಾಟನ್‌ ಬಟ್ಟೆಗಳ ಮೇಲೆ ರೇಷ್ಮೆ ಅಥವಾ ಹತ್ತಿಯ ನೂಲುಗಳಿಂದ ಕನ್ನಡಿಗಳನ್ನು ಉಪಯೋಗಿಸಿ ಮಾಡುವ ಈ ಎಂಬ್ರಾಯಿಡರಿಗೆ ಅಂತಾರಾಷ್ಟ್ರೀಯ ಮಾನ್ಯತೆ ಇದೆ. ಪ್ರತಿಯೊಂದು ಎಳೆಯನ್ನೂ ಕೈಯಿಂದಲೇ ನೇಯುವ ಕಾರಣ ಡಿಸೈನ್‌ನಲ್ಲಿ ಸಾಮ್ಯತೆಯಿದ್ದರೂ ಪ್ರತಿಯೊಂದು ಬ್ಲೌಸ್‌ನಲ್ಲೂ  ಅನನ್ಯತೆ ಅಥವಾ ಯುನಿಕ್‌ನೆಸ್‌ ಇದೆ.

90ರ ದಶಕದಲ್ಲಿ ಬಾಲಿವುಡ್‌ಗೆ ರಂಗು ತುಂಬಿದ್ದು ಈ ಕಚ್ಛ್ ಬ್ಲೌಸ್‌. ಒಂದು ಬಗೆಯ ಎಥಿ°ಕ್‌ ಲುಕ್‌ ಈ ಬ್ಲೌಸ್‌ಗಿದ್ದಿದ್ದು ಸುಳ್ಳಲ್ಲ. ಈಗ ಮತ್ತೆ ರೆಟ್ರೋ ಸ್ಟೈಲ್‌ ಥರ ಈ ಕಚ್ಛ್ ಬ್ಲೌಸ್‌ ಬಂದಿದೆ. ಅದಕ್ಕೆ ಕಾರಣ ಸಾಕಷ್ಟಿವೆ. ಸೀರೆಗೆ ಕಾಂಟ್ರಾಸ್ಟ್‌ ಬ್ಲೌಸ್‌ ತೊಡುವ ಸ್ಟೈಲ್‌ ಬಂದು ಸಾಕಷ್ಟು ಕಾಲವಾಯ್ತು. ಈ ಬ್ಲೌಸ್‌ಗಳಲ್ಲಿ ಬಣ್ಣಗಳು ನಾಲ್ಕೈದು. ನೀವು ನಾಲ್ಕೈದು ಬಗೆಯ ಸೀರೆಗೆ  ಈ ಬ್ಲೌಸ್‌ ತೊಡಬಹುದು.

ಕಾರಣಗಳು ಏನೇ ಇರಲಿ, ಈಗ ಕಚ್ಛ್ ಸೀರೆ ಬ್ಲೌಸ್‌ಗಳು ಸಖತ್‌ ಫೇಮಸ್‌ ಆಗುತ್ತಿವೆ. ಪ್ಲೇನ್‌ ಕಾಟನ್‌ ಸೀರೆಗೆ ಈ ಕಚ್ಛ್ ಬ್ಲೌಸ್‌ ಹಾಕ್ಕೊಂಡರೆ ಅದರ ಗತ್ತೇ ಬೇರೆ. ತಿಳಿಬಣ್ಣದ ಲೆನಿನ್‌ ಸೀರೆಗಳಿಗೆ ಕಚ್ಛ್ ಬ್ಲೌಸ್‌ ಕಾಂಬಿನೇಶನ್‌ ಬ್ಯೂಟಿಫ‌ುಲ್‌. ಇದಲ್ಲದೇ ತಿಳಿಬಣ್ಣದ ಪ್ಲೇನ್‌ ಶಿಫಾನ್‌, ಜಾರ್ಜೆಟ್‌ಗೂ ಕಚ್ಛ್ ಬ್ಲೌಸ್‌ ಚೆನ್ನಾಗಿರುತ್ತೆ.

ಕಚ್ಛ್ ಬ್ಲೌಸ್‌ನಲ್ಲಿ ಸೂಕ್ಷ್ಮವಾಗಿ ನೋಡಿದರೆ ಸಾಕಷ್ಟು ವೆರೈಟಿಗಳು ಕಾಣುತ್ತವೆ. ಬ್ಲೌಸ್‌ನ ಕೈಗೆ ಮಾತ್ರ ಕಚ್ಛ್ ಡಿಸೈನ್‌ ಇರುವ ಬ್ಲೌಸ್‌ಗಳದ್ದು ಒಂದು ಕತೆಯಾದರೆ, ಮೈಯಿಡೀ ಎಂಬ್ರಾಯಿಡರಿ ಇರುವ ಬ್ಲೌಸ್‌ಗಳ ಚೆಂದವೇ ಬೇರೆ. ಎದ್ದುಕಾಣುವ ಗಾಢ ಬಣ್ಣಗಳು ಅಥವಾ ಪಾರಂಪರಿಕ ಡೀಸೆಂಟ್‌ ಲುಕ್‌ ಇರುವ ಹದವಾದ ಬಣ್ಣ . ನಿಮ್ಮ ದೇಹಶೈಲಿ, ವ್ಯಕ್ತಿತ್ವಕ್ಕೆ ಚೆಂದ ಕಂಡದ್ದನ್ನು ಆರಿಸಿಕೊಳ್ಳಬಹುದು. ಅಥವಾ ನಿಮ್ಮಲ್ಲಿರುವ ಸೀರೆಗೆ ತಕ್ಕಂಥ ಕಚ್ಛ್ ಬ್ಲೌಸ್‌ನ° ಆರಿಸಿಕೊಳ್ಳಬಹುದು. 

ಆಯ್ಕೆ  ಹೀಗಿರಲಿ
.ಪ್ಲೇನ್‌ ಕಾಟನ್‌ ಸೀರೆಗೆ ಈ ಕಚ್ಛ್ ಬ್ಲೌಸ್‌ ಹಾಕ್ಕೊಂಡರೆ ಚೆನ್ನಾಗಿರುತ್ತೆ. ಬ್ಲ್ಯಾಕ್‌ ಬಟ್ಟೆಗೆ ಕಚ್ಛ್ ಡಿಸೈನ್‌ ಇರುವ ಬ್ಲೌಸ್‌ಗಳನ್ನು ಹೆಚ್ಚಿನ ಸೀರಗೆಗಳಿಗೆ ಮ್ಯಾಚ್‌ ಆಗುತ್ತವೆ. 

ಸಾಧಾರಣ ಮೈಕಟ್ಟಿನ ಕೃಷ್ಣವರ್ಣದವರು ನೀವಾದರೆ ಮೈತುಂಬ ಎಂಬ್ರಾಯಿಡರಿ ಇರುವ ಕಚ್ಛ್ ಬ್ಲೌಸ್‌ ಬೆಸ್ಟ್‌. 

.ಸ್ವಲ್ಪ ದಪ್ಪ , ಬಿಳಿ ಬಣ್ಣದವರಾಗಿದ್ದರೆ ಕೈಗೆ ಮಾತ್ರ ಕಚ್ಛ್ ಡಿಸೈನ್‌ ಇರುವ ಬ್ಲೌಸ್‌ ಚೆನ್ನಾಗಿರುತ್ತೆ. 
.ಈ ಬ್ಲೌಸ್‌ನಲ್ಲೇ ರಿಚ್‌ನೆಸ್‌ ಇರುವ ಕಾರಣ ಸೀರೆ ಸಿಂಪಲ್‌ ಆಗಿರಲಿ. 

.ಎಥಿಕ್‌ ಹ್ಯಾಂಗಿಂಗ್ಸ್‌ ಚೆನ್ನಾಗಿರುತ್ತೆ. 
.ಹೀಲ್ಸ್‌ ಇರೋ ಸ್ಯಾಂಡಲ್ಸ್‌ ತೊಟ್ಟುಕೊಳ್ಳಿ. 
.ಮುಖಕ್ಕೆ ಮೇಕಪ್‌ ಇರಲಿ

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.