ಪಿಯಾ ಪಿಯಾ ಹೋ ಪಿಯಾ!

Team Udayavani, Mar 31, 2017, 3:45 AM IST

Piaa-Bajpai.jpg

ಪಿಯಾ ಬಾಜಪೇಯಿ ಎಂಬ ಹೆಸರು ಬಾಲಿವುಡ್‌ಗೆ ಹೊಸತಾಗಿರಬಹುದು. ಆದರೆ ಇತ್ತ ತಮಿಳು, ಮಲಯಾಳ ಮತ್ತು ತೆಲುಗಿನಲ್ಲಿ ಜನಪ್ರಿಯ ನಟಿ ಪಿಯಾ ಬಾಜಪೇಯಿ. ಹೆಸರೇ ಹೇಳುವಂತೆ ಉತ್ತರ ಭಾರತೀಯಳಾದರೂ ಈಕೆಯನ್ನು ಕರೆದು ಸ್ಟಾರ್‌ ಮಾಡಿದ್ದು ತಮಿಳು ಚಿತ್ರರಂಗ. ಚೆನ್ನಾಗಿ ಕಲಿತು, ಯಾವುದಾದರೊಂದು ಉದ್ಯೋಗ ಹಿಡಿದ ಬಳಿಕ ಮದುವೆಯಾಗಿ ಗೃಹಿಣಿಯಾಗಲಿ ಎಂದು ತಂದೆ-ತಾಯಿ ಬಯಸಿದರೆ ಪಿಯಾಳ ತುಡಿತವಿದ್ದುದೇ ಬೇರೆ ಕಡೆ. 

ಮನೆಯವರ ಒತ್ತಾಯಕ್ಕೆಂದು ಕಂಪ್ಯೂಟರ್‌ ಸಯನ್ಸ್‌ ಓದಿದಳು. ಇದರಲ್ಲೊಂದು ಪದವಿ ಪಡೆದು ರಿಸೆಪ್ಷನಿಸ್ಟ್‌ , ಅದು ಇದು ಎಂದು ಕೆಲವು ನೌಕರಿಗಳನ್ನು ಮಾಡಿದಳು. ಆದರೆ, ಯಾವುದರಲ್ಲೂ ಮನಸು ನಿಲ್ಲಲಿಲ್ಲ. ಕೈಯಲ್ಲಿ ನಾಲ್ಕು ಕಾಸು ಜಮೆಯಾದದ್ದೇ ತಡ ಯಾರಿಗೂ ಹೇಳದೆ ಕೇಳದೆ ದಿಲ್ಲಿಯಿಂದ ಮುಂಬಯಿಯ ರೈಲು ಹತ್ತಿದಳು. ಸಂಪೂರ್ಣ ಹೊಸ ಊರು ಜನಾರಣ್ಯದಂತಹ ಶಹರದಲ್ಲಿ ಅವಳಿಗೆ ಕರೆದು ಕೆಲಸ ಕೊಡುವವರು ಯಾರೂ ಇರಲಿಲ್ಲ. ಆದರೂ ಪ್ರಯತ್ನ ಬಿಡದ ಪಿಯಾ ಸ್ಟುಡಿಯೊಗಳಿಗೆ ಎಡತಾಕ ತೊಡಗಿದಳು. ಕೈಯಲ್ಲಿದ್ದ ಹಣವೆಲ್ಲ ಮುಗಿದು ಇನ್ನು ಒಂದೋ ಮರಳಿ ಹೋಗಬೇಕು ಅಥವಾ ಕೈಗೆ ಸಿಕ್ಕಿದ ಯಾವುದಾದರೂ ನೌಕರಿ ಹಿಡಿಯಬೇಕೆಂದು ನಿರ್ಧರಿಸುವಷ್ಟರಲ್ಲಿ ಜಾಹೀರಾತಿನಲ್ಲಿ ನಟಿಸಲು ಬುಲಾವ್‌ ಬಂತು. 

ಹೀಗೆ ಮೊದಲ ಸಲ ಬಣ್ಣ ಹಚ್ಚಿದ ಪಿಯಾ ಅನಂತರ ಬಹಳ ಕಷ್ಟಪಟ್ಟು ಒಂದೊಂದೇ ಮೆಟ್ಟಿಲೇರಿದಳು. ಚೆನ್ನಾಗಿ ಹಿಂದಿ ಮಾತನಾಡುತ್ತಿದ್ದ ಕಾರಣ ಡಬ್ಬಿಂಗ್‌ಗೆ ಅವಕಾಶ ಸಿಕ್ಕಿತು. ಹೀಗೆ ತಮಿಳು ಚಿತ್ರವೊಂದನ್ನು ಹಿಂದಿಗೆ ಡಬ್ಬಿಂಗ್‌ ಮಾಡುತ್ತಿದ್ದಾಗ ತಮಿಳರ ಕಣ್ಣಿಗೆ ಬಿದ್ದು ಪೊಲಿ ಸೊಲಲ ಪೋರಮ್‌ ಎಂಬ ಚಿತ್ರಕ್ಕೆ ನಾಯಕಿಯಾದಳು. ಇದೆಲ್ಲ ಒಂಬತ್ತು ವರ್ಷದ ಹಿಂದಿನ ಮಾತು. ಮೊದಲ ಚಿತ್ರ ಹಿಟ್‌ ಆದದ್ದೇ ತಡ ತಮಿಳಿನಲ್ಲಿ ಧಾರಾಳ ಅವಕಾಶಗಳು ಸಿಕ್ಕಿದವು. ಅಲ್ಲಿಂದ ಮಲಯಾಳಂಗೆ ಜಿಗಿದಳು. ತೆಲುಗಿನಲ್ಲೂ ನಾಲ್ಕೈದು ಅವಕಾಶ ಸಿಕ್ಕಿತು. ನಟಿಯಾಗಿ ನಾಲ್ಕು ಮಂದಿ ಗುರುತಿಸುವಂತಾದ ಮೇಲೆ ಬಾಲಿವುಡ್‌ನಿಂದ ಕರೆ ಬಂದು ಮುಂಬಯಿ-ದಿಲ್ಲಿ- ಮುಂಬಯಿ ಎಂಬ ಚಿತ್ರದಲ್ಲಿ ನಟಿಸಿದಳು. ಚಿತ್ರ ಬಿಡುಗಡೆಯಾಗದ ಕಾರಣ ಪಿಯಾಳ ಬಾಲಿವುಡ್‌ ಕನಸು ಕನಸಾಗಿಯೇ ಉಳಿಯಿತು. ಕಳೆದ ವರ್ಷ ಲಾಲ್‌ ರಂಗ್‌ ಎಂಬ ಚಿತ್ರದಲ್ಲಿ ನಟಿಸಿದರೂ ಇದು ಸೋತು ಹೋಯಿತು. ಇದೀಗ ಮಿರ್ಜಾ ಜೂಲಿಯಟ್‌ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಚಿತ್ರದ ಕತೆಯ ಪಿಯಾಳಿಗೆ ಬಹಳ ಮೆಚ್ಚುಗೆಯಾಗಿದೆ. ಹೆಚ್ಚುಕಡಿಮೆ ನನ್ನ ಬದುಕಿನಂತಿದೆ ಕತೆ ಎಂದು ಸಂಭ್ರಮಪಟ್ಟುಕೊಳ್ಳುತ್ತಿದ್ದಾಳೆ ಪಿಯಾ. 

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.