Udayavni Special

ಗರ್ಭಿಣಿ ಸ್ತ್ರೀಯರಿಗೆ ನೀಡುವ ಸಹಾಯಧನದ ಕುರಿತು…


Team Udayavani, Feb 3, 2017, 3:45 AM IST

Pregnancy.jpg

ಈ ಸಹಾಯಧನವನ್ನು ಏಕೆ ಕೊಡಬೇಕು? ಇದರ ಉಪಯೋಗವೇನು? ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿ, ಬಾಣಂತಿಯರ, ಶಿಶುಗಳ ತಪಾಸಣೆ ಮತ್ತು ಹೆರಿಗೆ ಉಚಿತವಲ್ಲವೆ?

ಹೌದು. ಸರ್ಕಾರಿ ಕೇಂದ್ರಗಳಲ್ಲಿ ಸೌಲಭ್ಯಗಳು ಉಚಿತವೇ. ಗರ್ಭಿಣಿಯರಿಗೆ ಬೇಕಾದ ಉತ್ತಮ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ಸರ್ಕಾರ ಪೂರೈಸುವುದಿಲ್ಲ. ಈ ಹಣ ಅದಕ್ಕೆ ವಿನಿಯೋಗವಾಗಬಹುದಲ್ಲ !

ಡಿಸೆಂಬರ್‌ 31, 2016ರಂದು ಪ್ರಧಾನಮಂತ್ರಿ ಮೋದಿಯವರು ತಮ್ಮ ಭಾಷಣದಲ್ಲಿ ಜನತೆಗೆ ಕೊಡುವ ಕೆಲವು ಹೊಸ ಸೌಲಭ್ಯಗಳ ಬಗ್ಗೆ ಮಾತನಾಡಿದರು. ಅವುಗಳಲ್ಲಿ ಒಂದು ವಿಷಯ ಗರ್ಭಿಣಿ ಸ್ತ್ರೀಯರಿಗೆ ನೋಂದಾವಣೆಯಿಂದ ಹೆರಿಗೆಯವರೆಗಿನ ಖರ್ಚುಗಳಿಗಾಗಿ ಸರಕಾರದಿಂದ ದೊರೆಯುವ ಆರು ಸಾವಿರ ರೂಪಾಯಿಗಳ ಸಹಾಯಧನ. ಇದು ನೇರವಾಗಿ ಮಹಿಳೆಯ ಬ್ಯಾಂಕಿನ ಖಾತೆಗೆ ಜಮೆಯಾಗುತ್ತದೆ. ಈ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಾದವಿವಾದಗಳು (ಕೆಲವು ಪರವಾಗಿ, ಕೆಲವು ವಿರೋಧವಾಗಿ) ಎದ್ದಿವೆ. ಕೆಲವು ಅಭಿಪ್ರಾಯಗಳಂತೂ ಅತ್ಯಂತ ಕೆಳಮಟ್ಟದಲ್ಲಿ ಇರುವುದು ವಿಷಾದನೀಯ. ಹೆಚ್ಚಿನವರಿಗೆ ಈ ಯೋಜನೆಯ ಆವಶ್ಯಕತೆ  ಅರ್ಥವಾದಂತಿಲ್ಲ. ಇದರ ಸಾಧಕ-ಬಾಧಕಗಳ ಬಗ್ಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸೋಣ.

.ಇದು ಜನಸಂಖ್ಯೆ ವೃದ್ಧಿಸಲು ಕೊಡುತ್ತಿರುವ ಆಮಿಷವೆ? ಖಂಡಿತವಾಗಿಯೂ ಅಲ್ಲ. ಗ್ರಾಮೀಣ ಪ್ರದೇಶಗಳಲ್ಲಿರುವ ಗರ್ಭಿಣಿ ಮಹಿಳೆಯರಿಗೆ ಆವಶ್ಯವಾಗಿ ದೊರೆಯಬೇಕಾದ ಆರೋಗ್ಯ ತಪಾಸಣೆಗಳು ಅಜಾnನದಿಂದಲೋ, ಸೌಕರ್ಯಗಳ ಕೊರತೆಯಿಂದಾಗಿಯೋ ದೊರೆಯದೆ ಇರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಮನೆಯಲ್ಲಿಯೇ ಸುರಕ್ಷಿತವಲ್ಲದ ಹೆರಿಗೆ ಆಗಬಹುದು. ಇದರಿಂದ ತಾಯಂದಿರ ಹಾಗೂ ನವಜಾತ ಶಿಶುಗಳ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಆರೋಗ್ಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡರೆ ನುರಿತ ದಾದಿಯರಿಂದ, ವೈದ್ಯರಿಂದ ತಪಾಸಣೆಯ ಸೌಲಭ್ಯ ದೊರೆಯುತ್ತದೆ. ಆರೋಗ್ಯ ಕೇಂದ್ರಗಳಲ್ಲಿ ಸುರಕ್ಷಿತವಾದ ಹೆರಿಗೆ ತಜ್ಞರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಈ ಕೊಡುಗೆಯು ಮನೆಯಲ್ಲಿನ ಹೆರಿಗೆಗಳನ್ನು ತಪ್ಪಿಸಿ, ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಗರ್ಭಿಣಿ ಮಹಿಳೆಯರಿಗೆ ದೊರಕಿಸಿಕೊಡಲು ಸ್ವಲ್ಪ$ಮಟ್ಟಿಗೆ ಸಹಕರಿಸುತ್ತದೆ. (ಅರ್ಥಾತ್‌ ಈ ಕೊಡುಗೆಯು ಆರೋಗ್ಯ ಕೇಂದ್ರಗಳಲ್ಲಿ ಹೆರುವುದಕ್ಕೆ ಕೊಡುವ ಸೌಲಭ್ಯ).

.ಈ ಹಣವನ್ನು ಏಕೆ ಕೊಡಬೇಕು? ಇದರ ಉಪಯೋಗವೇನು? ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿ, ಬಾಣಂತಿಯರ ಶಿಶುಗಳ ತಪಾಸಣೆ ಮತ್ತು ಹೆರಿಗೆ ಉಚಿತವಲ್ಲವೆ?

ಹೌದು. ಸರ್ಕಾರಿ ಕೇಂದ್ರಗಳಲ್ಲಿ ಸೌಲಭ್ಯಗಳು ಉಚಿತವೇ.ಗರ್ಭಿಣಿಯರಿಗೆ ಬೇಕಾದ ಉತ್ತಮ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ಸರ್ಕಾರ ಪೂರೈಸುವುದಿಲ್ಲ. ಈ ಹಣ ಅದಕ್ಕೆ ವಿನಿಯೋಗವಾಗಬಹುದು. 

.ಬಹಳಷ್ಟು ಗ್ರಾಮೀಣ ಬಡಮಹಿಳೆಯರು ದಿನಗೂಲಿ ನೌಕರಿಯಲ್ಲಿರುತ್ತಾರೆ. ಗರ್ಭಿಣಿಯರು ಆರೋಗ್ಯ ತಪಾಸಣೆಗೆಂದು ಆರೋಗ್ಯ ಕೇಂದ್ರಕ್ಕೆ ತೆರಳುವಾಗ ಆ ದಿನದ ಕೂಲಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಅದಲ್ಲದೆ ಆರೋಗ್ಯ ಕೇಂದ್ರ ದೂರದಲ್ಲಿದ್ದರೆ ಅಲ್ಲಿಯವರೆಗಿನ ಪ್ರಯಾಣದ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಬಹಳಷ್ಟು ಮಹಿಳೆಯರು ಒಬ್ಬೊಬ್ಬರಾಗಿಯೇ ಆಸ್ಪತ್ರೆಗೆ ತೆರಳುವ ಮನಸ್ಥೈರ್ಯ ಹೊಂದಿರುವುದಿಲ್ಲ. ಅವರ ಜೊತೆ ಇನ್ನೊಬ್ಬ ಕುಟುಂಬ ಸದಸ್ಯನೂ ತನ್ನ ಕೂಲಿಯನ್ನುಬಿಟ್ಟು, ಪ್ರಯಾಣದ ಖರ್ಚನ್ನು ಭರಿಸಿಕೊಂಡು ಹೋಗಬೇಕಾಗುತ್ತದೆ. ಆರೋಗ್ಯವಾಗಿರುವ ಗರ್ಭಿಣಿಯರು ನೋಂದಣಿಯ ದಿನದಿಂದ ಏಳನೇ ತಿಂಗಳವರೆಗೆ ತಿಂಗಳಿಗೆ ಒಂದು ಬಾರಿ, ಎಂಟನೇ ತಿಂಗಳಿನಲ್ಲಿ ಎರಡು ವಾರಕ್ಕೆ ಒಂದು ಬಾರಿ, ಒಂಬತ್ತನೇ ತಿಂಗಳು ಶುರುವಾಗಿನಿಂದ ಹೆರಿಗೆಯವರೆಗೆ ವಾರಕ್ಕೆ ಒಂದು ಬಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಏನಾದರೂ ತೊಂದರೆಗಳು ಕಂಡುಬಂದಲ್ಲಿ ತಾಲೂಕು ಅಥವಾ ಜಿಲ್ಲಾಸ್ಪತ್ರೆಗಳಿಗೆ ತೆರಳಲು ಅಧಿಕ ವೆಚ್ಚವಾಗುತ್ತದೆ. ಈ ವೆಚ್ಚಗಳನ್ನು ಕುಟುಂಬ ಭರಿಸಲು ಅನುಕೂಲಮಾಡಿಕೊಡುವುದೇ ಈ ಸೌಲಭ್ಯದ ಉದ್ದೇಶವೆನಿಸುತ್ತದೆ.  ಈ ಅನುಕೂಲಗಳನ್ನು ಕಲ್ಪಿಸಿಕೊಟ್ಟ ಮೇಲೆ ಹೆರಿಗೆ ಆರೋಗ್ಯಕೇಂದ್ರಗಳಲ್ಲೇ ನೆರವೇರಬೇಕು ಎಂದು ಆಶಯ.

.ಇದನ್ನು ಎಷ್ಟನೇ ಹೆರಿಗೆಯವರೆಗೆ ಕೊಡಬೇಕು? ಎಲ್ಲಾ ಗರ್ಭಿಣಿ ಸ್ತ್ರೀಯರಿಗೂ ಇದು ದೊರೆಯಬೇಕು (ಮೊದಲನೆಯದಾಗಲಿ, ನಾಲ್ಕನೆಯದಾಗಲಿ).
  
.ಎಲ್ಲಾ ಹೆರಿಗೆಗಳು ಆಸ್ಪತ್ರೆಗಳಲ್ಲಿ ನಡೆದು, ತಾಯಿಮಗು ಆರೋಗ್ಯವಿದ್ದಾಗ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಗರ್ಭನಿರೋಧಕಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಸುಲಭವಾಗುತ್ತದೆ. ಇದನ್ನು ಎರಡು ಮಕ್ಕಳ ನಂತರ ನಿರಾಕರಿಸಿದರೆ ಕುಟುಂಬ ಕಲ್ಯಾಣ ಇಲಾಖೆಯ ಜನಸಂಖ್ಯಾ ನಿಯಂತ್ರಣಕಾರ್ಯ ಪೂರ್ತಿಯಾಗದೇ ಇರಬಹುದು (ಇದು ನನ್ನ ಸ್ವಂತ ಅಭಿಪ್ರಾಯ. ಈ ಬಗ್ಗೆ ಸರ್ಕಾರದ ನಿಲುವು ತಿಳಿದಿಲ್ಲ)

.ಇದರ ಬಾಧಕಗಳೇನು?
ಭ್ರಷ್ಟಾಚಾರದಿಂದಾಗಿ ಖಾತೆಯಲ್ಲಿ ಜಮೆ ಮಾಡಿದ ಹಣದ ಅಂಶವನ್ನು ಮಹಿಳೆಯರು  ಕಳೆದುಕೊಳ್ಳಬಹುದು. ಜಮೆಯಾದ ಮೊತ್ತವನ್ನು ಕುಟುಂಬದ ಬೇರೆ ಸದಸ್ಯರು ಇತರ ವೆಚ್ಚಗಳಿಗಾಗಿ ಉಪಯೋಗಿಸಬಹುದು. ಈ ಭಾದಕ‌ಗಳನ್ನು ನಿರ್ಮೂಲನೆ ಮಾಡಿ ಸೌಲಭ್ಯವು ಆ ಮಹಿಳೆಯ ಕಲ್ಯಾಣಕ್ಕೆ ಮಾತ್ರ ದೊರೆಯುವಂತೆ ಮಾಡಿದರೆ  ಈ ಯೋಜನೆ ಅದ್ಭುತವಾದದ್ದು.
ದೇಶದ ಆರೋಗ್ಯಸೂಚಿಗಳಾದ ತಾಯಂದಿರ ಮರಣ ಪ್ರಮಾಣ ಮತ್ತು ಶಿಶುಗಳ ಮರಣ ಪ್ರಮಾಣವನ್ನು ತಗ್ಗಿಸಿ, ಆರೋಗ್ಯ ಸೂಚ್ಯಂಕವನ್ನು ವೃದ್ಧಿಸಲು ಈ ಯೋಜನೆ ಸಹಾಯವಾಗಲೆಂದು ಹಾರೈಸೋಣ.

– ಡಾ. ಉಮಾಮಹೇಶ್ವರಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಫೇಲ್‌ ವಿರಾಟ ರೂಪ; ವೈವಿಧ್ಯ ವೈಭವ

ರಫೇಲ್‌ ವಿರಾಟ ರೂಪ; ವೈವಿಧ್ಯ ವೈಭವ

ಅಧಿವೇಶನಕ್ಕೆ ಸವಾಲು

ಅಧಿವೇಶನಕ್ಕೆ ಸವಾಲು

ನಾವು ನೆಟ್ಟದ್ದರ ಫ‌ಲವನ್ನು ನಾವೇ ಉಣ್ಣಬೇಕೆಂದಿಲ್ಲ!

ನಾವು ನೆಟ್ಟದ್ದರ ಫ‌ಲವನ್ನು ನಾವೇ ಉಣ್ಣಬೇಕೆಂದಿಲ್ಲ!

ಆಂಗ್ಲರ ಸವಾಲು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ

ಆಂಗ್ಲರ ಸವಾಲು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ

ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಗಲಭೆ ನಡೆಸಿದ್ದು ಅಕ್ಷಮ್ಯ: ಡಿಸಿಎಂ ಕಟು ಟೀಕೆ

ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಗಲಭೆ ನಡೆಸಿದ್ದು ಅಕ್ಷಮ್ಯ: ಡಿಸಿಎಂ ಕಟು ಟೀಕೆ

nalin

ರೈತರ ಹೆಸರಿನಲ್ಲಿ ಗೂಂಡಾಗಿರಿ: ನಳಿನ್‍ಕುಮಾರ್ ಕಟೀಲ್ ಖಂಡನೆ

ರೈತರ ಅನ್ನ ತಿಂದು ದ್ರೋಹ ಬಗೆಯಬೇಡಿ : ಕೋಡಿಹಳ್ಳಿ ಚಂದ್ರಶೇಖರ್

ರೈತರ ಅನ್ನ ತಿಂದು ದ್ರೋಹ ಬಗೆಯಬೇಡಿ : ಕೋಡಿಹಳ್ಳಿ ಚಂದ್ರಶೇಖರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

k-20

ಸೆರಗು-ಲೋಕದ ಬೆರಗು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

MUST WATCH

udayavani youtube

ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

udayavani youtube

ದ.ಕ.ಜಿಲ್ಲಾಡಳಿತದಿಂದ 72ನೇ ಗಣರಾಜ್ಯೋತ್ಸವ

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

ಹೊಸ ಸೇರ್ಪಡೆ

ರಫೇಲ್‌ ವಿರಾಟ ರೂಪ; ವೈವಿಧ್ಯ ವೈಭವ

ರಫೇಲ್‌ ವಿರಾಟ ರೂಪ; ವೈವಿಧ್ಯ ವೈಭವ

ಅಧಿವೇಶನಕ್ಕೆ ಸವಾಲು

ಅಧಿವೇಶನಕ್ಕೆ ಸವಾಲು

Untitled-1

ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ: ಪಂಜಾಬ್‌ ಪಂಚ್‌; ಬ್ಯಾಟಿಂಗ್‌ ಮರೆತು ಹೊರಬಿದ್ದ ಕರ್ನಾಟಕ

ನಾವು ನೆಟ್ಟದ್ದರ ಫ‌ಲವನ್ನು ನಾವೇ ಉಣ್ಣಬೇಕೆಂದಿಲ್ಲ!

ನಾವು ನೆಟ್ಟದ್ದರ ಫ‌ಲವನ್ನು ನಾವೇ ಉಣ್ಣಬೇಕೆಂದಿಲ್ಲ!

ಬಿ.ಪಿ.ಎಲ್‌. ಕುಟುಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ

ಬಿ.ಪಿ.ಎಲ್‌. ಕುಟುಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.