ನಾಳೆ ಬೆಳಗ್ಗೆ ಏನು ತಿಂಡಿ ಮಾಡಲಿ?

ಭಾರತೀಯ ಮಹಿಳೆಯನ್ನು ಸದಾ ಕಾಡುವ ಪ್ರಶ್ನೆ

Team Udayavani, Jun 14, 2019, 5:20 AM IST

family_eating_dining-1024x5361a

ಇವತ್ತು ಕೂಡ ಬೆಂಡೇಕಾಯಿಯಾ? ನಾನು ಹೇಗಮ್ಮಾ ಊಟ ಮಾಡ್ಲಿ?'”ನನಗೆ ಹಿಡಿಸದ್ದು ಯಾಕ್ಮಾಡ್ತೀಯಾ? ಬೇರೇನಾದ್ರೂ ಮಾಡಾºರದಿತ್ತಾ? ಒಟ್ಟಿನಲ್ಲಿ ನಾನು ಊಟ ಮಾಡುವುದು ನಿಮಗಿಷ್ಟವಿಲ್ಲ”ನೀನು ಯಾವಾಗ್ಲೂ ತಂಗಿಗೆ ಇಷ್ಟವಾದ ತಿಂಡಿನೇ ಮಾಡ್ತೀಯಾ?”

– ಹೀಗೆ ಇದು ನಮ್ಮ ಭಾರತೀಯ ಪ್ರತಿಯೊಂದು ಮನೆಯಲ್ಲಿ ಊಟ-ತಿಂಡಿಯ ವಿಚಾರದಲ್ಲಿ ನಡೆಯುವ ಸಂಗತಿಗಳು. ಒಂದು ಮನೆಯಲ್ಲಿ ನಾಲ್ಕಾರು ಜನ ಇರುವಲ್ಲಿ “ನನಗೆ ಅದು ತಿಂಡಿ ಬೇಡ, ಇದು ಬೇಡ’ ಎಂದು ಮೂಗು ಮುರಿಯುವ ಮಕ್ಕಳು, ಹಿರಿಯರು ಇರುವಲ್ಲಿ “ಇವತ್ತೇನು ತಿಂಡಿ ಮಾಡಲಿ?’ ಎನ್ನುವುದೇ ಪ್ರತಿಯೊಬ್ಬ ಮನೆಯ ಅಮ್ಮನನ್ನು ಕಾಡುವ ದಿನನಿತ್ಯದ ಪ್ರಶ್ನೆ.

ಹೌದು, ಮನೆ ಎಂದ ಮೇಲೆ ಅಲ್ಲಿ ಹಿರಿಯರು, ಕಿರಿಯರು ಒಟ್ಟಾಗಿ ಇರುವುದು ಸಹಜ. ಉಪ್ಪಿಟ್ಟು , ಇಡ್ಲಿ, ದೋಸೆ, ಅನ್ನ-ಸಾಂಬಾರು ಮಾಡಿದರೆ ಹಿರಿಯರಿಗೆ ಹಿತವೆನಿಸುತ್ತದೆ. ಮಕ್ಕಳಿಗೆ ಪುಲಾವ್‌, ರೈಸ್‌ಬಾತ್‌, ಪೂರಿ, ಪನ್ನೀರ್‌ ಇಷ್ಟವಾಗುತ್ತದೆ. ಮಕ್ಕಳು ಇಡ್ಲಿ-ದೋಸೆ ಮುಟ್ಟುವುದಿಲ್ಲ. ಅಜ್ಜ-ಅಜ್ಜಿಗೆ ರೈಸ್‌ಬಾತ್‌ ಬೇಡ. ಒಬ್ಬೊºಬ್ಬರಿಗೆ ಒಂದೊಂದು ರೀತಿಯ ತಿಂಡಿ ಮಾಡಬೇಕಾಗುತ್ತದೆ. ಹೀಗಿರುವಾಗ ಅವರ ಬೇಕು-ಬೇಡಗಳ ಕಡೆಗೆ ಸ್ಪಂದಿಸುವುದೇ ತಾಯಿಯಾದವಳಿಗೆ ದೊಡ್ಡ ಸವಾಲು.

ಒಂದು ಮನೆಯಲ್ಲಿ ಇಬ್ಬರು ಮಕ್ಕಳು ಇದ್ದಾರೆ ಎಂದಿಟ್ಟುಕೊಳ್ಳೋಣ. ಅವರಲ್ಲಿ ಒಬ್ಬರು, “ನೀನು ಅಕ್ಕನಿಗೆ ಇಷ್ಟವಾದದ್ದನ್ನೇ ಮಾಡ್ತೀಯಾ. ನನ್ನ ಇಷ್ಟಕಷ್ಟ ನಿನಗೆ ಬೇಕಾಗಿಲ್ಲ” ಅಂತ ಎರಡನೆ ಮಗು ಅದನ್ನು ಬಾಯಿಗೂ ಇಡದೆ ಮುಖ ಊದಿಸಿ ಉಪವಾಸ ಕೈಗೊಂಡುಬಿಡುತ್ತದೆ. ಮಕ್ಕಳ ಇಂತಹ ವರ್ತನೆಯಿಂದ ತಾಯಿಗೆ ಸಹಿಸಲು ಕಷ್ಟವಾಗುತ್ತದೆ. ಹಾಗಂತ ಮನೆಯಲ್ಲಿ ನಿತ್ಯ ಊಟ, ತಿಂಡಿ ತಯಾರಿಸದೇ ಇರಲು ಸಾಧ್ಯವೆ? ತರಕಾರಿ, ಅಕ್ಕಿಬೇಳೆಗಳ ಬೆಲೆ ದುಬಾರಿಯಾಗುವ ಈ ದಿನಗಳಲ್ಲಿ ಅಮ್ಮನಾದವಳು ಮಕ್ಕಳಿಗೆ ಅರ್ಥ ಮಾಡಿಸುತ್ತಾಳೆ. “ಎಲ್ಲ ಮನೆಗಳಲ್ಲೂ ಮಕ್ಕಳ ಬಳಿ ವಿಚಾರಿಸಿಯೇ ಊಟ, ತಿಂಡಿ ತಯಾರಿಸ್ತಾರಾ? ಹೊರಗಡೆ ಹೋದಲ್ಲೆಲ್ಲ ತೆಪ್ಪಗೆ ಉಂಡು ಬರೋದಿಲ್ವಾ ನೀವು. ಮನೆಯಲ್ಲಿ ಹೀಗ್ಯಾಕೆ? ಆಹಾರ ಪೋಲು ಮಾಡುವುದಕ್ಕೆ ಅರ್ಥವಿದೆಯೆ? ಏನು ಮಾಡಿ ಬಡಿಸ್ತಾರೋ ಅದನ್ನು ಉಣ್ಣಲು ಕಲಿಯಬೇಕು. ಜಾಣರಲ್ವ ನೀವು” ಎಂದು ನಯವಾಗಿ ಗದರಿಸುತ್ತಾಳೆ. ಮಕ್ಕಳು ಕ್ಯಾಂಟೀನ್‌ನಲ್ಲಿ ತಿನ್ನಲು ಅಭ್ಯಾಸ ಮಾಡಿದರೆ ಆರೋಗ್ಯದ ಕತೆ ಏನು? ಹಾಗಾಗಿ “ಮನೆಯ ಆಹಾರವೇ ಉಣ್ಣಬೇಕು. ಹೋದ ಕಡೆಗಳಲ್ಲೆಲ್ಲ ನೀವು ಬಯಸಿದ ತಿಂಡಿ ತಿನಿಸೇ ತಂದು ಎದುರಿಗಿಡೋಲ್ಲ” ಅಂತ ತಿದ್ದುತ್ತಾಳೆ. “ಮಕ್ಕಳಿಗೆ ದುಡ್ಡು ಕೊಡಬೇಡಿ’ ಎಂದು ಅಪ್ಪನಿಗೆ ತಾಕೀತು ಮಾಡುತ್ತಾಳೆ. ಅಮ್ಮನ ಕಾಳಜಿ ಎಷ್ಟು ಅಲ್ಲವೆ?

ವಾರವಿಡೀ ಅಡುಗೆ ಮಾಡಿ ಸುಸ್ತಾಗಿರುವ ಅಮ್ಮ ಮಕ್ಕಳಿಗೂ ತನ್ನ ಕಷ್ಟ ಅರಿವಾಗಲಿ ಎಂದು “ದಿನಾ ನಾನೇ ಅಡುಗೆ ಮಾಡ್ತೇನಲ್ಲ, ನಾಳೆ ಭಾನುವಾರ. ನಾನು ಏನೂ ತಯಾರಿಸುವುದಿಲ್ಲ. ನೀವುಗಳು ಸೇರಿ ನನಗೂ ಅಪ್ಪನಿಗೂ ಏನೇನು ಮಾಡಿ ಕೊಡ್ತೀರಿ ನೋಡೋಣ” ಅಂತ ಹೇಳುವಾಗ ಮಕ್ಕಳು ಸುಮ್ಮನಾಗುತ್ತಾರೆ !

-ಕೃಷ್ಣವೇಣಿ ಕಿದೂರ್‌

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.