ಟಿಕ್‌ ಟಾಕ್‌ ವಿಷಯ

Team Udayavani, Jul 12, 2019, 5:00 AM IST

ಅಪರೂಪಕ್ಕೆ ಯಾವುದಾದರೊಂದು ಸಮಾರಂಭ ಅಥವಾ ಹೀಗೆ ಹೊರಗಡೆ ಸಿಕ್ಕಾಗ ನೆಂಟರು ಕೇಳುವುದುಂಟು, “”ಮತ್ತೆ ಹೇಗಿದ್ದೀರಾ? ಮನೆಯವರು ಹೇಗಿದ್ದಾರೆ? ಮಕ್ಕಳು ಏನ್‌ ಮಾಡ್ತಾ ಇದ್ದಾರೆ ಹುಷಾರಾಗಿದ್ದಾರಾ?” ಅಂತ. ಆಗ ಅಮ್ಮನೋ, ಅಪ್ಪನೋ ಹೇಳುವುದುಂಟು- “”ಅದನೇನ್‌ ಕೇಳ್ತಿರಾ ಬಿಡಿ, ಅದೇನೋ ಗೊತ್ತಿಲ್ಲ. ಇತ್ತೀಚೆಗೆ ಮಗಳು ರೂಮ್‌ ಒಳಗೆ ಹೋಗಿ ಬಾಗಿಲು ಹಾಕಿಕೊಳ್ತಾಳೆ. ಕಣ್‌ ತುಂಬಾ ಕಾಡಿಗೆ ಹಚ್ಚಿಕೊಳ್ತಾಳೆ, ಸುಮ್‌ ಸುಮ್ನೆ ಅಳ್ತಾಳೆ ನಗ್ತಾಳೆ, ಕುಣಿತಾಳೆ ನಿಮಿಷಗೊಂದು ಬಟ್ಟೆ ಬದಲಾಯಿಸುತ್ತಾಳೆ. ಹೊತ್ತು ಗೊತ್ತು ಇಲ್ಲದೆ ಮುಖ ತುಂಬಾ ಮೇಕಪ್‌ ಮಾಡ್ತಾಳೆ, ಏನೇನೋ ಬೊಬ್ಬೆ ಹೋಡಿತಾಳೆ, ಹೀಗೆಲ್ಲಾ ಆಡ್ತಾಳೆ ಏನ್‌ ಸಮಸ್ಯೆ ಅನ್ನೋದೆ ಗೊತ್ತಾಗ್ತ ಇಲ್ಲ”. ಪಾಪ ಅವರಿಗೇನು ಗೊತ್ತು. ಅದು ಟಿಕ್‌ಟಾಕ್‌ ಒಂದು ಕಾಯಿಲೆ ಎಂದು!

ತಮ್ಮ ಪ್ರತಿಭೆಯನ್ನು ಆನಾವರಣಗೊಳಿಸಲು ಅದೆಷ್ಟೋ ವೇದಿಕೆಗಳಿವೆ, ಅದೆಷ್ಟೋ ದಾರಿಗಳಿವೆ. ಅದ್ಯಾವುದೂ ವೇದಿಕೆಗಳೇ ಅಲ್ಲ. ಟಿಕ್‌ ಟಾಕ್‌ ಒಂದೇ ಉತ್ತಮ ವೇದಿಕೆಯೆಂದು ವಯಸ್ಸಿನ ಹಂಗಿಲ್ಲದೆ ಮೆರೆಯುತ್ತಿದ್ದಾರೆ ಜನರು. ಬೀದಿ ಬೀದಿಗಳಲ್ಲಿ ಜೋಪಡಿ ಗಳನ್ನು ಹಾಕಿಕೊಂಡು ನಾಟಕ, ನೃತ್ಯ, ಹಾಡುಗಳನ್ನು ಪ್ರದರ್ಶಿಸಿ ಅದೆಷ್ಟೋ ಪ್ರತಿಭೆಗಳು ಸಾವಿರಾರು ಜನ ಗುರುತಿಸುವಂತಹ ಸಾಧನೆ ಮಾಡಿದ್ದಾರೆ. ಅದೆಷ್ಟೋ ಜನ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ, ಅದೃಷ್ಟದ ಬಾಗಿಲೂ ತೆರೆದಿದೆ. ಆದರೆ, ಇದುವರೆಗೆ ಯಾರೊಬ್ಬರಿಗೂ ಟಿಕ್‌ಟಾಕ್‌ನಲ್ಲಿ ಹೊರ ಹಾಕಿದ ಪ್ರತಿಭೆಗೆ ಪ್ರಶಸ್ತಿ ದೊರತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಸಾವಿನ ಬಾಗಿಲು ತೆರೆಯುತ್ತಲೇ ಇದೆ. ಇನ್ನು, ಇದೊಂದು ಮನರಂಜನೆಯ ತಾಣವಾಗಿ ಪರಿಣಮಿಸಿದ್ದು, ಕೆಲವರು ಪ್ರತಿಭೆಯೆಂದು ತಮ್ಮ ಭಾವನೆಗಳನ್ನು ಹೊರಹಾಕಲು ಇದನ್ನು ಬಳಸುತ್ತಾರೆ. ಅದರಲ್ಲಿಯೂ ದುಃಖ, ವಿರಹ ಗೀತೆಗಳು, ಡ್ಯಾನ್ಸ್‌, ಮೋಜು-ಮಸ್ತಿ, ಕುಸ್ತಿ, ಲವ್‌ ಫೇಲ್ಯೂರ್‌ ಹೀಗೆ ಹಲವಾರು ದೃಶ್ಯಗಳನ್ನು ಭಾವನೆಗಳ ಮೂಲಕ ಇದರಲ್ಲಿ ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ಹೆಣ್ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಇತ್ತ ಇದ್ದ ಕಡ್ಡಿಯನ್ನು ಅತ್ತ ಇಡಲು ಹೇಳಿದರೆ ಹತ್ತು ಸಲ ಹಿಂದೆಮುಂದೆ ನೋಡ್ತಾರೆ. ಅದೇ ಟಿಕ್‌ಟಾಕ್‌ನಲ್ಲಿ ಕೇವಲ ಕೆಲ ಲೈಕ್‌ಗಳಿಗಾಗಿ ಹತ್ತು ಬಿಂದಿಗೆ ನೀರು ತರಲು ತಯಾರಿರುತ್ತಾರೆ, ಬಹು ಗಾತ್ರದ ಕಲ್ಲು ಎತ್ತಲು ಹಿಂದೆಮುಂದೆ ನೋಡಲ್ಲ, ಎಷ್ಟೇ ಆಳವಿದ್ದರೂ ಪರವಾಗಿಲ್ಲ ನದಿಗೆ ಧುಮುಕಲು ಹೋಗಿ ಅದೆಷ್ಟೋ ಜನ ನೀರು ಪಾಲಾಗಿ¨ªಾರೆ. ಇವರು ಮಾದರಿಯ ಬೈಕ್‌ ಸ್ಟಂಟ್‌ಗೂ ಸಿದ್ಧ. ಯಾರ ಸೇವೆಗೂ ಸಿದ್ಧ. ಇತ್ತ ಕನ್ನಡದ ಬಗೆಗಿನ ಅಭಿಮಾನ ಟಿಕ್‌ ಟಾಕ್‌ನಲ್ಲಿ ಉಕ್ಕುವುದೇನು? ಜತೆಗೆ ದೊಡ್ಡ ದೊಡ್ಡ ಸಿನೆಮಾ ಡೈಲಾಗ್‌ಗಳೇನು? ಹೀಗೆ ಶೋಕಿಗಾಗಿ ತೋರಿಸುವ ಪ್ರತಿಭೆಗೇನೂ ಕಮ್ಮಿಯಿಲ್ಲ. ಇವುಗಳೆಲ್ಲದರ ಹಿಂದೆ ಸಾವುನೋವುಗಳು ಸಂಭವಿಸುವ ಅರಿವಿದ್ದರೂ, ಇಲ್ಲದಂತೆ ಇರುತ್ತಾರೆ.

ಕೇವಲ 30 ಸೆಕೆಂಡಿನ ಟ್ಯಾಲೆಂಟ್‌ಗಾಗಿ ಜೀವವನ್ನೇ ಕಳೆದುಕೊಂಡವರು ಅದೆಷ್ಟೋ ಜನ ಎಂದು ನಮಗೆ ಗೊತ್ತಿದೆ. ಒಮ್ಮೆ ಇದರ ಚಕ್ರವ್ಯೂಹದೊಳಗೆ ಸಿಲುಕಿದರೆ ಮತ್ತೆ ಹೊರ ಬರಲು ಅಷ್ಟು ಸುಲಭವಿಲ್ಲ. ಟಿಕ್‌ಟಾಕ್‌ಪ್ರಿಯರು ದಿನದಿಂದ ದಿನಕ್ಕೆ ಫಾಲೋವರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾ ವುನೋವುಗಳ ಸಂಖ್ಯೆಯು ಹೆಚ್ಚುತ್ತಲೇ ಇದೆ.

2018ರ ಒಂದು ವರದಿಯ ಪ್ರಕಾರ ಜಗತ್ತಿನಾದ್ಯಂತ 500 ಮಿಲಿಯನ್‌ಗಿಂತಲೂ ಅಧಿಕ ಮಂದಿ ತಮ್ಮ ಮೊಬೈಲ್‌ನಲ್ಲಿ ಟಿಕ್‌-ಟಾಕ್‌ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಸೆನ್ಸಾರ್‌ ಟವರ್‌ ವರದಿ ಪ್ರಕಾರ ಭಾರತವೇನೂ ಕಮ್ಮಿ ಇಲ್ಲವೆಂಬಂತೆ, ಸರಿ ಸುಮಾರು 88.6 ಮಿಲಿಯನ್‌ನಷ್ಟು ಜನರು ಟಿಕ್‌ಟಾ ಕ್‌ ಬಳಸುತ್ತಿ¨ªಾರೆ. ಟಿಕ್‌ಟಾ ಕ್‌ ಆ್ಯಪ್‌ ಆನ್ನು ಮೊದಲ ಬಾರಿಗೆ ಚೀನಾ 2017ರಲ್ಲಿ ಆರಂಭಿಸಿತು. ಮದ್ರಾಸ್‌ ಸರ್ಕಾರವು ಇತ್ತೀಚೆಗೆ ಟಿಕ್‌ಟಾ ಕನ್ನು ಬ್ಯಾನ್‌ ಮಾಡಿ, ಪ್ಲೇ ಸ್ಟೋರ್‌ನಿಂದ ಟಿಕ್‌ಟಾ ಕ್‌ ಆ್ಯಪ್‌ ಅನ್ನು ತೆಗೆದು ಹಾಕಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಆದೇಶವನ್ನು ಹಿಂಪಡೆದುಕೊಂಡಿದೆ. ಟಿಕ್‌ಟಾಕ್‌ ವಿರುದ್ಧ ಸಮರ ಸಾರಲು ಮಹಿಳಾ ಆಯೋಗವೂ ಸಿದ್ಧವಾಗಿದೆ.

ಇನ್ನಾದರೂ ಪೋಷಕರು ಮಕ್ಕಳ ಮೊಬೈಲ್‌ಗ‌ಳನ್ನು ಆಗಾಗ ಪರಿಶೀಲಿಸಿಕೊಂಡು ಟಿಕ್‌ ಟಾಕ್‌ ಖಾತೆಯನ್ನು ತೆರೆಯದಂತೆ ಗಮನ ವಹಿಸುವುದು ಉತ್ತಮ.

ಆಶಿತಾ ಎಸ್‌. ಗೌಡ
ಪತ್ರಿಕೋದ್ಯಮ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊನ್ನೆ ಪೇಟೆಯಲ್ಲಿ ಪರಿಚಯದವರೊಬ್ಬರು ಸಿಕ್ಕಿದಾಗ, ಮಾತಿನ ಮಧ್ಯೆ "ಮುಗಿಯಿತೇ ಬಿ.ಎಡ್‌ ಕೋರ್ಸ್‌?' ಎಂದು ಕೇಳಿದರು. "ಇಲ್ಲಾ, ಇನ್ನು ಒಂದು ಸೆಮಿಸ್ಟರ್‌ ಇದೆ' ಎಂದಾಗ,...

  • ಸಾಮಾನ್ಯವಾಗಿ "ಹಾಸ್ಟೆಲ್‌'ಎಂದೊಡನೆ ಮೂಗುಮುರಿಯುವ ಜನರೆಡೆಯಲ್ಲಿ ನಾನೊಬ್ಬಳು ವಿಚಿತ್ರ ಹಾಸ್ಟೆಲ್‌ ಪ್ರೇಮಿ! ನನಗಂತೂ ಬಹಳ ವರ್ಷಗಳಿಂದ ಹಾಸ್ಟೆಲ್‌ನಲ್ಲಿದ್ದುಕೊಂಡು...

  • ಇಂಜಿನಿಯರಿಂಗ್‌ ಕಾಲೇಜ್‌ ಅಂದ್ರೆ ಹಾಗೇ. ಎಡೆಬಿಡದೆ ನಡೆಯುವ ಕ್ಲಾಸುಗಳು. ಹೇಗೋ ಆಗುತ್ತಿವೆ ಎನ್ನುವ ಲ್ಯಾಬ್‌ಗಳು, ವರ್ಕ್‌ಶಾಪ್‌, ಲೆಕ್ಚರರ್, ಅಟೆಂಡೆನ್ಸ್‌-...

  • ಈಗಿನ ಮಕ್ಕಳು ಇಂಥ ಆಟಗಳನ್ನು ಆಡುವು ದು ತುಂ ಬ ಕಡಿಮೆ. ಆಡಿದರೆ ಅದು ಹಳ್ಳಿ ಹುಡುಗರೇ ಇರಬೇಕು. ತಂತ್ರಜ್ಞಾನ ಬಂದ ಮೇಲಂತೂ ಮೊಬೈಲ್‌ಗ‌ಳು, ಲ್ಯಾಪ್‌ಟಾ ಪ್‌, ಕಂಪ್ಯೂಟರ್‌ಗಳ ...

  • ಇದು ನಮ್ಮೂರಿನ ಸರಕಾರಿ ಬಾವಿಕಟ್ಟೆ. ಮುಂಜಾನೆಯಿಂದ ಮಂಕಾಗಿರುವ ಈ ಬಾವಿಕಟ್ಟೆಗೆ ಕಳೆ ಬರುವುದೇ ಮುಸ್ಸಂಜೆ ಆರರ ಹೊತ್ತು. ಮುಂಜಾನೆಯಿಂದ ಹಿಡಿದು ಮಟಮಟ ಮಧ್ಯಾಹ್ನದವರೆಗೂ...

ಹೊಸ ಸೇರ್ಪಡೆ

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ "ಬೆಂಗಳೂರು ಟೆಕ್‌ ಸಮಿಟ್‌'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ...

  • ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ...

  • ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು...