ವಿಶ್ವಕಪ್‌ ಎತ್ತಲು ಲಕ್‌ ಬೇಕು!

Team Udayavani, Jul 12, 2019, 5:57 AM IST

new-zeeland

2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಯಲ್ಲಿ ಭಾರತದ ಓಟ ಸೆಮಿಫೈನಲ್‌ನಲ್ಲೇ ಅಂತ್ಯಗೊಂಡಿದೆ. ಲೀಗ್‌ ಹಂತದ ಅಗ್ರ ತಂಡವಾದ ಭಾರತವನ್ನು 4ನೇ ಸ್ಥಾನಿಯಾದ ನ್ಯೂಜಿಲ್ಯಾಂಡ್‌ 18 ರನ್ನುಗಳಿಂದ ಮಣಿಸಿ ಸತತ 2ನೇ ಸಲ ಫೈನಲ್‌ಗೆ ಲಗ್ಗೆ ಇರಿಸಿದೆ.

ಇದರಿಂದ ಮತ್ತೂಮ್ಮೆ ಸ್ಪಷ್ಟಗೊಂಡ ಸಂಗತಿಯೆಂದರೆ, ವಿಶ್ವಕಪ್‌ ಎತ್ತಲು ಕೇವಲ ಸಾಧನೆಯೊಂದೇ ಸಾಲದು, ಅದೃಷ್ಟದ ಬೆಂಬಲವೂ ಇರಬೇಕು ಎನ್ನುವುದು!

ಭಾರತದ ಸಾಧನೆ ಅಮೋಘ
ಈ ಕೂಟದಲ್ಲಿ ಭಾರತದ ಸಾಧನೆ ಅಮೋಘ ಮಟ್ಟದಲ್ಲೇ ಇತ್ತು. ರೋಹಿತ್‌ ಶರ್ಮ ಅವರ 5 ಶತಕಗಳ ವಿಶ್ವದಾಖಲೆ, ಮೊಹಮ್ಮದ್‌ ಶಮಿ ಸಾಧಿಸಿದ ಹ್ಯಾಟ್ರಿಕ್‌, ಜಸ್‌ಪ್ರೀತ್‌ ಬುಮ್ರಾ ಅವರ 18 ವಿಕೆಟ್‌ ಬೇಟೆ, ಧವನ್‌-ರಾಹುಲ್‌ ಬಾರಿಸಿದ ಶತಕ, ವಿರಾಟ್‌ ಕೊಹ್ಲಿ ಅವರ ಸತತ 5 ಅರ್ಧ ಶತಕ, ಜಡೇಜ ಅವರ ಫೈಟಿಂಗ್‌ ಸ್ಪಿರಿಟ್‌, ಎಂದಿನಂತೆ ಪಾಕಿಸ್ಥಾನವನ್ನು ಬಗ್ಗುಬಡಿದದ್ದು, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಸೋಲಿನ ರುಚಿ ತೋರಿಸಿದ್ದು… ಹೀಗೆ ಪಟ್ಟಿ ಬೆಳೆಯುತ್ತದೆ.

ಪಂದ್ಯ ರದ್ದಾದುದರ ಲಾಭ?
ಆದರೆ ನ್ಯೂಜಿಲ್ಯಾಂಡ್‌ ಇಂಥ ಯಾವುದೇ ಪರಾಕ್ರಮ ದಾಖಲಿಸಲಿಲ್ಲ. ಕಿವೀಸ್‌ನದ್ದು ಪಾಕಿಸ್ಥಾನದೊಂದಿಗೆ ಸರಿಸಮ ಸಾಧನೆ. ತಲಾ 11 ಅಂಕ ಸಂಪಾದನೆ. ಆದರೆ ರನ್‌ರೇಟ್‌ ಕೈಹಿಡಿಯಿತು. ಬಹುಶಃ ಭಾರತದೆದುರಿನ ಲೀಗ್‌ ಪಂದ್ಯ ರದ್ದಾದುರಿಂದ ಲಭಿಸಿದ ಒಂದು ಅಂಕದಿಂದ ಲಾಭ ಆಗಿರಬಹುದು. ಏಕೆಂದರೆ, ಈ ಪಂದ್ಯ ನಡೆದು ಭಾರತ ಜಯಿಸಿದಲ್ಲಿ ವಿಲಿಯಮ್ಸನ್‌ ಪಡೆಗೆ ನಾಕೌಟ್‌ ಟಿಕೆಟ್‌ ಬಹುಶಃ ಲಭಿಸುತ್ತಿರಲಿಲ್ಲ!

ನ್ಯೂಜಿಲ್ಯಾಂಡ್‌ ಸಾಮಾನ್ಯ ತಂಡ
ಹಾಗೆ ನೋಡಿದರೆ ನ್ಯೂಜಿಲ್ಯಾಂಡ್‌ ತೀರಾ ಸಾಮಾನ್ಯ ತಂಡ. ಬಲಾಬಲ ಹಾಗೂ ಸಾಧನೆ ಲೆಕ್ಕಾಚಾರದಲ್ಲಿ ಪಾಕ್‌, ಬಾಂಗ್ಲಾ, ವಿಂಡೀಸ್‌ಗಿಂತಲೂ ಕೆಳಮಟ್ಟದ್ದು. ತಂಡದ ಆರಂಭಿಕರ ರನ್‌ ಬರಗಾಲಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ವಿಲಿಯಮ್ಸನ್‌-ಟೇಲರ್‌ ಜತೆಗೂಡಿದ ಬಳಿಕವಷ್ಟೇ ಇನ್ನಿಂಗ್ಸಿಗೊಂದು ಜೀವ. ಇವರಿಬ್ಬರು ನಿರ್ಗಮಿಸಿದ ಬಳಿಕ ಮತ್ತೆ ವಿಲವಿಲ. ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಓಕೆ. ಇದರೊಂದಿಗೆ ಕೈಹಿಡಿದ ಅದೃಷ್ಟ ಎನ್ನುವುದು ತಂಡವನ್ನು ಮತ್ತೆ ಫೈನಲಿಗೆ ತಂದು ನಿಲ್ಲಿಸಿದೆ. ರವಿವಾರ ಅದು ಚಾಂಪಿಯನ್‌ ಆಗಿ ಮೂಡಿಬಂದರೂ ಅಚ್ಚರಿ ಇಲ್ಲ.

ಆಗ, 5 ಶತಕ ಬಾರಿಸಿದ ರೋಹಿತ್‌ ಶರ್ಮ ಅವರಂಥ ಆಟಗಾರನಿಗೆ ಕಪ್‌ ಮರೀಚಿಕೆಯಾದರೆ, 2 ಸೊನ್ನೆಯೊಂದಿಗೆ ಬರೀ 167ರಷ್ಟು ರನ್‌ ಮಾಡಿದ ಮಾರ್ಟಿನ್‌ ಗಪ್ಟಿಲ್‌ ಕಪ್‌ ಎತ್ತಿ ಹಿಡಿಯಬಹುದು! ಇದಕ್ಕೇ ಹೇಳುವುದು, ಅದೃಷ್ಟದ ಪಾತ್ರ ಸಾಧನೆಗಿಂತ ಮಿಗಿಲು ಎನ್ನುವುದು!

1992-2019:
ಒಂದು ಸಾಮ್ಯ
1992ರ ವಿಶ್ವಕಪ್‌ ನೆನಪಿಸಿಕೊಳ್ಳಿ. ಅದು ಕೂಡ ರೌಂಡ್‌ ರಾಬಿನ್‌ ಲೀಗ್‌ ಮಾದರಿಯದ್ದಾಗಿತ್ತು. ಅಂದಿನ ಚಾಂಪಿಯನ್‌ ತಂಡವಾದ ಪಾಕಿಸ್ಥಾನ ಲೀಗ್‌ ಹಂತದಲ್ಲಿ 3 ಸೋಲುಂಡಿತ್ತು. ಇಂಗ್ಲೆಂಡ್‌ ಎದುರು ಜುಜುಬಿ 74ಕ್ಕೆ ಕುಸಿದಿತ್ತು. ಇಂಗ್ಲೆಂಡ್‌ ಒಂದಕ್ಕೆ 24 ರನ್‌ ಮಾಡಿದಾಗ ಮಳೆ ಸುರಿಯಿತು. ಪಂದ್ಯ ರದ್ದುಗೊಂಡಿತು. ಇಲ್ಲಿ ಲಭಿಸಿದ ಒಂದು ಅಂಕದಿಂದಲೇ ಪಾಕಿಸ್ಥಾನದ ಅದೃಷ್ಟದ ಬಾಗಿಲು ತೆರೆಯಿತು. ಅದು 9 ಅಂಕಗ ಳೊಂದಿಗೆ 4ನೇ ಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿತು. ಅಲ್ಲಿ ಅಗ್ರಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿತು. ಲೀಗ್‌ನಲ್ಲಿ ತನ್ನನ್ನು 74ಕ್ಕೆ ಕೆಡವಿದ್ದ ಇಂಗ್ಲೆಂಡನ್ನೇ ಫೈನಲ್‌ನಲ್ಲಿ ಕೆಡವಿ ಕಪ್‌ ಎತ್ತಿತು!ಈ ಸಲವೂ ನ್ಯೂಜಿಲ್ಯಾಂಡ್‌ 3 ಲೀಗ್‌ ಪಂದ್ಯ ಸೋತಿದೆ. 4ನೇ ಸ್ಥಾನದೊಂದಿಗೆ ನಾಕೌಟ್‌ ಪ್ರವೇಶಿಸಿದೆ. ಅಗ್ರಸ್ಥಾನಿ ಭಾರತವನ್ನು ಕೆಡವಿದೆ. ಮುಂದಿನ ಫ‌ಲಿತಾಂಶಕ್ಕೆ ರವಿವಾರ ರಾತ್ರಿ ತನಕ ಕಾಯೋಣ!

ಟಾಪ್ ನ್ಯೂಸ್

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.