ಸಚಿನ್ ದಾಖಲೆ ಮುರಿದ ಇಕ್ರಮ್
Team Udayavani, Jul 6, 2019, 5:01 AM IST
ಲಾರ್ಡ್ಸ್: ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ 92 ಎಸೆತಕ್ಕೆ 86 ರನ್ ಸಿಡಿಸಿದ್ದ ಅಫ್ಘಾನಿಸ್ತಾನದ 18 ವರ್ಷದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಇಕ್ರಮ್ ಅಲಿಖೀಲ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ 27 ವರ್ಷದ ಹಿಂದಿನ ದಾಖಲೆ ಮುರಿದಿದ್ದಾರೆ. 1992 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ 18 ವರ್ಷದ ಸಚಿನ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 84 ರನ್ ಸಿಡಿಸಿದ್ದರು, ಕಿರಿಯ ವಯಸ್ಸಿಗೆ ವಿಶ್ವಕಪ್ನಲ್ಲಿ ಹೆಚ್ಚು ರನ್ ಸಿಡಿಸಿದ್ದ ದಾಖಲೆಗೆ ಸಚಿನ್ ಪಾತ್ರರಾಗಿದ್ದರು. ಇದೀಗ ಇಕ್ರಮ್ ಈ ದಾಖಲೆ ಮುರಿದಿದ್ದಾರೆ.