ಧೋನಿ ರನೌಟ್‌: ಇಬ್ಬರಿಗೆ ಹೃದಯಾಘಾತ, ಸಾವು

Team Udayavani, Jul 12, 2019, 1:08 PM IST

ಕೋಲ್ಕತ/ಪಾಟ್ನಾ: ಬುಧವಾರ ನ್ಯೂಜಿಲೆಂಡ್‌ ವಿರುದ್ಧ ಧೋನಿ ರನೌಟ್‌ ಆಗುತ್ತಿದ್ದಂತೆ, ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದು ವರದಿಯಾಗಿದೆ.

ಪ.ಬಂಗಾಳದ ಹೂಗ್ಲಿ ಜಿಲ್ಲೆಯ ಸಿಕಂದರಾಬ್‌ನ 33 ವರ್ಷದ ಶ್ರೀಕಾಂತ್‌ ಮೈಟಿ, ಬಿಹಾರದಲ್ಲಿ 49 ವರ್ಷದ ಅಶೋಕ್‌ ಪಾಸ್ವಾನ್‌ ಸಾವನ್ನಪ್ಪಿದ್ದಾರೆ. ಒಡಿಶಾದ ಕಾಳಹಂದಿ ಜಿಲ್ಲೆಯ ಸಿಂಘ ಭಾದಿ ಹಳ್ಳಿಯ 25 ವರ್ಷದ ಸಂಬರು ಭೊಯಿ, ಗುರುವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸೈಕಲ್‌ ಅಂಗಡಿ ಇಟ್ಟುಕೊಂಡಿದ್ದ ಶ್ರೀಕಾಂತ್‌ ಮೈಟಿ ಮೊಬೈಲ್‌ನಲ್ಲಿ ಕ್ರಿಕೆಟ್‌
ನೋಡುತ್ತಿದ್ದರು. ಧೋನಿ ಔಟಾದ ಕೂಡಲೇ ಜೋರಾಗಿ ಧಡ್‌ ಎಂಬ ಶಬ್ದ ಕೇಳಿದೆ. ಅಕ್ಕಪಕ್ಕದ ವ್ಯಕ್ತಿಗಳು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರೂ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಇಂತಹ ಘಟನೆ ಬಿಹಾರದಲ್ಲೂ ನಡೆದಿದೆ.

ಕಿಶನ್‌ಗಂಜ್‌ ಮೂಲದ ವ್ಯಕ್ತಿಯೊಬ್ಬರು ಧೋನಿ ಔಟಾದ ಕೂಡಲೇ ಹೃದಯಾಘಾತ ಕ್ಕೊಳಗಾಗಿದ್ದಾರೆ. ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೊಂದು ಕಡೆ ಒಡಿಶಾದಲ್ಲಿ ನಡೆದ ಆತ್ಮಹತ್ಯೆ ಯತ್ನಕ್ಕೆ ಭಾರತ ತಂಡ ಸೋಲು ಕಾರಣವಾಗಿದೆ. ಆದರೆ ಚಿಕಿತ್ಸೆಯ ಬಳಿಕ ಯುವಕ ಸಂಬರು ಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ .

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ