ಸೆಮಿಫೈನಲ್‌ ಪಂದ್ಯಕ್ಕೆ ನಿಧಾನಗತಿಯ ಪಿಚ್‌: ಟೀಕೆ

Team Udayavani, Jul 11, 2019, 10:24 AM IST

ಭಾರತ-ನ್ಯೂಜಿಲೆಂಡ್‌ ನಡುವಿನ ಸೆಮಿಫೈನಲ್‌ ಪಂದ್ಯ ನಡೆದ ಓಲ್ಡ್‌ ಟ್ರಾಫ‌ರ್ಡ್‌ ಅಂಕಣಕ್ಕೆ ಮಾಜಿ ಕ್ರಿಕೆಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.

ಇದು ಒಳ್ಳೆಯ ಅಂಕಣವಾಗಿ ಕಾಣುತ್ತಿಲ್ಲ. ಬಹಳ ನಿಧಾನಗತಿಯಲ್ಲಿತ್ತು ಮತ್ತು ಸ್ವಲ್ಪಮಟ್ಟಿಗೆ ತಿರುವು ತೆಗೆದುಕೊಳ್ಳುತ್ತಿತ್ತು. 240 ರನ್‌ ಇಲ್ಲಿನ ದೊಡ್ಡ ಮೊತ್ತವಾಗಲಿದೆ ಎಂದು ಆಸ್ಟ್ರೇಲಿಯದ ಮಾರ್ಕ್‌ ವಾ ಟ್ವೀಟ್‌ ಮಾಡಿದ್ದರು.

ವಿಶ್ವಕಪ್‌ ಪಿಚ್‌ಗಳು ಹೊಲಸಿನಿಂದ ಕೂಡಿವೆ ಎಂದು ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಮಾರ್ಕ್‌ ಬುಚರ್‌ ಟೀಕಿಸಿದ್ದಾರೆ. ಭಾರೀ ಮೊತ್ತದ ಹಣ ತೆತ್ತು ಈ ಕಳಪೆ ಗುಣಮಟ್ಟದ ಪಿಚ್‌ನಲ್ಲಿ ಸೆಮಿಫೈನಲ್‌ ಪಂದ್ಯ ವೀಕ್ಷಿಸಲು ಬಂದ ಪ್ರೇಕ್ಷಕರಲ್ಲಿ ಕ್ಷಮೆ ಕೇಳಬೇಕು ಎಂದು ಇಂಗ್ಲೆಂಡಿನ ಗ್ರೇಮ್‌ ಫ್ಲವರ್‌ ಹೇಳಿದ್ದಾರೆ.

ಈ ವಿಶ್ವಕಪ್‌ನಲ್ಲಿ ಪಿಚ್‌ ಗಳಿಗೆ ಏನಾಗಿದೆ ಎಂಬುದು ಗೊತ್ತಿಲ್ಲ. ಐಸಿಸಿಯೇ ಆದೇಶ ನೀಡಿರಬಹುದೇ ಎಂಬುದು ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಪಾಲ್‌ ನ್ಯೂಮನ್‌ ಪ್ರಶ್ನೆ.

ಐಸಿಸಿ ನಿರಾಕರಣೆ: ನಿಧಾನಗತಿಯ ಪಿಚ್‌ ಸಿದ್ಧಪಡಿಸುವಂತೆ ಮೈದಾನದ ಸಿಬ್ಬಂದಿಗೆ ಐಸಿಸಿ ಆದೇಶ ನೀಡಿದೆ ಎಂಬ ಆರೋಪವನ್ನು ನಿರಾಕರಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ), ನಾವು ಕ್ರೀಡಾಸ್ಫೂರ್ತಿಯ ಪಿಚ್‌ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದೆವು ಎಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ