ಪಾಕ್‌ ನಾಯಕನನ್ನು ನಿಂದಿಸಿ ಕ್ಷಮೆ ಕೇಳಿದ ಅಭಿಮಾನಿ!

Team Udayavani, Jun 23, 2019, 5:46 AM IST

ಲಂಡನ್‌: ಭಾರತದೆದುರಿನ ಸೋಲಿನ ಬಳಿಕ ಪಾಕಿಸ್ಥಾನ ತಂಡದ ನಾಯಕ ಸರ್ಫ‌ರಾಜ್‌  ಅಹ್ಮದ್‌ಗೆ ಅಭಿಮಾನಿಯೊಬ್ಬ ಪ್ರಾಣಿಯಂತೆ ಶರೀರ ಬೆಳೆಸಿದ್ದೀಯ ಎಂದು ಬೈದು ಬಳಿಕ ಕ್ಷಮೆ ಯಾಚಿಸಿದ ವಿದ್ಯಮಾನವೊಂದು ಸಂಭವಿಸಿದೆ.

ಅಭಿಮಾನಿಯೊಬ್ಬ ಮಾಲ್‌ವೊಂದರಲ್ಲಿ ಸರ್ಫ‌ರಾಜ್‌ ತಮ್ಮ ಮಗನೊಂದಿಗೆ ಇದ್ದಾಗ ಸೆಲ್ಫಿàಗೆ ಮನವಿ ಮಾಡಿದ್ದಾನೆ. ಇದಕ್ಕೆ ಸರ್ಫ‌ರಾಜ್‌ ಒಪ್ಪಿದ್ದಾರೆ. ಆ ವೇಳೆ ಆತ ಸೆಲ್ಫಿà ಬದಲು ವೀಡಿಯೊ ಮಾಡಿದ್ದಾನೆ. “ನೀವು ಪಾಕಿಸ್ಥಾನವನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಆದರೆ ನೀವೇಕೆ ಪ್ರಾಣಿಯಂತೆ ಶರೀರ ಬೆಳೆಸಿದ್ದೀರಿ?’ ಎಂದು ಕೇಳುವುದು ಆ ವೀಡಿಯೊದಲ್ಲಿ ದಾಖಲಾಗಿದೆ. ಪುತ್ರನೊಂದಿಗೆ ಇದ್ದಾಗ ಈ ರೀತಿ ಸಫ‌ìರಾಜ್‌ಗೆ ಅವಮಾನ ಮಾಡಿರುವುದನ್ನು ಅಭಿಮಾನಿಗಳು ಟೀಕಿಸಿದ್ದಾರೆ. ಇದರಲ್ಲಿ ಭಾರತೀಯರೂ ಇದ್ದಾರೆ.

ಪಾಕ್‌ ನಾಯಕನೊಂದಿಗೆ ಅಸಭ್ಯವಾಗಿ ನಡೆದುಕೊಂಡ ಅಭಿಮಾನಿ ಅನಂತರ ಕ್ಷಮೆ ಕೇಳಿದ್ದಾನೆ. “ಆ ವೀಡಿಯೊ ಹೇಗೆ ರೆಕಾರ್ಡ್‌ ಆಯಿತೋ, ಹೇಗೆ ವೈರಲ್‌ ಆಯಿತೋ ಗೊತ್ತಿಲ್ಲ. ಅವರ ಜತೆಗಿರುವುದು ಮಗನೆಂಬುದೂ ನನಗೆ ಗೊತ್ತಿರಲಿಲ್ಲ’ ಎಂದಿದ್ದಾನೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ