ಧೋನಿ ಔಟಾದಾಗ ಫೋಟೋಗ್ರಾಪರ್‌ ಅತ್ತಿದ್ದು ನಿಜವೇ ?

Team Udayavani, Jul 14, 2019, 12:27 PM IST

ಹೊಸದೆಹಲಿ: ಇತ್ತೀಚೆಗಷ್ಟೇ ನಡೆದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಕಿವೀಸ್‌ ವಿರುದ್ದ ಟೀಂ ಇಂಡಿಯಾ ಸೋಲನುಭವಿಸಿದ ಬಳಿಕ ಒಂದು ಫೋಟೋ ಭಾರಿ ಜನಪ್ರಿಯವಾಗಿತ್ತು. ಧೋನಿ ಔಟ್‌ ಆಗುವ ಸಂದರ್ಭದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆದರೆ ಆ ವೈರಲ್‌ ಫೋಟೋದ ಅಸಲೀಯತ್ತು ಈಗ ಬಯಲಾಗಿದೆ.

ಯಾವ ಫೋಟೋ, ಯಾವ ಘಟನೆ ?
ಸೆಮಿ ಫೈನಲ್‌ ಪಂದ್ಯಾಟದಲ್ಲಿ ಭಾರತ ಇನ್ನೇನು ಸೋತೇ ಬಿಡ್ತು ಎನ್ನುವಾಗ ಧೋನಿ ಮತ್ತು ಜಡೇಜಾ ಸೇರಿ ಭಾರತ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆಟದ ಕೊನೆಯಲ್ಲಿ ಧೋನಿ ಬೀಸಿ ಹೊಡೆಯಬೇಕು ಎನ್ನುವಾಗ ರನ್‌ ಔಟ್‌ ಆಗಿ ಪೆವಿಲಿಯನ್‌ ಸೇರಿದ್ರು. ಆ ಮೂಲಕ ಕೋಟ್ಯಾಂತರ ಭಾರತೀಯರ ವಿಶ್ವಕಪ್‌ ಆಸೆ ನುಚ್ಚುನೂರಾಗಿತ್ತು.

ಪಂದ್ಯ ಮುಗಿದ ನಂತರ ಆ ಒಂದು ಫೋಟೋ ಮಾತ್ರ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಧೋನಿ ರನ್‌ ಔಟ್‌ ಆದಾಗ ಫೋಟೋಗ್ರಾಫರ್‌ ಒಬ್ಬ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯವದು. ಭಾರತ ತಂಡವನ್ನು ಜಯದ ಹಾದಿಗೆ ತಲುಪಿಸುತ್ತಾರೆ ಎಂದು ಧೋನಿ ಮೇಲೆ ಇಟ್ಟಿದ್ದ ಭರವಸೆ ಸುಳ್ಳಾದಾಗ ಫೋಟೋಗ್ರಾಫರ್‌ ಈ ರೀತಿ ಅತ್ತಿದ್ದಾನೆ ಎಂದು ವಿಶ್ಲೇಷಣೆಗಳು ನಡೆದಿತ್ತು.

ಅಸಲೀಯತ್ತೇನು?
ಆದರೆ ಈ ವೈರಲ್‌ ಫೋಟೋದ ಫಾಕ್ಟ್‌ ಚೆಕ್‌ ಮಾಡಿದಾಗ ಗೊತ್ತಾದ ಅಸಲೀಯತ್ತೇನು ಗೊತ್ತಾ? ಆ ಫೋಟೋಗ್ರಾಫರ್‌ ಭಾರತೀಯನೇ ಅಲ್ಲ. ಅದರಲ್ಲೂ ಅದು ಕ್ರಿಕೆಟ್‌ ಆಟದ ವೇಳೆ ತೆಗೆದ ಚಿತ್ರವೇ ಅಲ್ಲ. ಮತ್ತೇನು ? ಮುಂದೆ ಓದಿ.

ಆ ಛಾಯಾಗ್ರಾಹಕನ ಹೆಸರು ಮೊಹಮ್ಮದ್‌ ಅಲ್‌ ಅಜಾ಼ವಿ. ಆತ ಇರಾಕ್‌ ದೇಶದ ಪ್ರಜೆ. 2019ರ ಜನವರಿಯಲ್ಲಿ ನಡೆದ ಏಶ್ಯಾನ್‌ ಕಪ್‌ ಫುಟ್‌ ಬಾಲ್‌ ಕೂಟದ ವೇಳೆ  ಸೆರೆಹಿಡಿಯಲಾದ ಚಿತ್ರವಿದು.

ಯುಏಇಯಲ್ಲಿ ನಡೆದಿದ್ದ ಕಾಲ್ಚೆಂಡು ಆಟದ ಕೂಟದಲ್ಲಿ ತವರು ದೇಶ ಸೋತಾಗ ಅಜಾ಼ವಿ ದುಖಿತನಾಗಿದ್ದ.  ಈ ಚಿತ್ರವನ್ನು ಏಶ್ಯಾನ್‌ ಕಪ್‌ 2023 ಎಂಬ ಟ್ವೀಟರ್‌ ಖಾತೆಯಲ್ಲಿ ಅಪ್ಲೋಡ್‌ ಮಾಡಲಾಗಿತ್ತು ಕೂಡಾ. ಆದರೆ ಯಾರೋ ಈ ಚಿತ್ರವನ್ನು ಧೋನಿ ರನ್‌ ಔಟ್‌ ದೃಶ್ಯದ ಜೊತೆ ಸೇರಿಸಿ ವೈರಲ್‌ ಮಾಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ