ಕಾರ್‌, ಕಾರ್‌ ಇಲ್ನೋಡಿ ಸ್ಟಾರ್ಸ್ ಕಾರ್‌


Team Udayavani, Aug 21, 2017, 7:20 AM IST

car.jpg

‘Habit is stronger then reason’ ಎನ್ನುವ ಹಾಗೆ ಕೆಲವೊಮ್ಮೆ ಅಬ್ಟಾ… ಅನ್ನಿಸುವುದೂ ಉಂಟು. ಇಂಥ ಕೆಲವು ಹವ್ಯಾಸಗಳಲ್ಲಿ ಕಾರು ಕ್ರೇಜ್‌ ಕೂಡ ಒಂದು. ಕೆಲವರು ಕಾರು ಓಡಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದರೆ, ಇನ್ನು ಕೆಲವರಿಗೆ ಮನೆ ಅಂಗಳದಲ್ಲಿ ತರಹೇವಾರಿ ಕಾರುಗಳು ನಿಂತಿರಬೇಕು. ಇಷ್ಟೇ ಅಲ್ಲ, ಇದಕ್ಕಿಂತಲೂ ಭಿನ್ನವಾದುದೂ ಇರುತ್ತದೆ. ಕಾರು ಓಡಿಸಲು ಬಂದರೂ ಕೆಲವರು ಕಾರಿನಲ್ಲಿ ಹಿಂದೆ ಕುಳಿತು ದೂರದ ಊರಿಗೆ ಪ್ರಯಾಣ ಬೆಳೆಸುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಗುಡ್ಡ-ಬೆಟ್ಟಗಳ ಅಂಕುಡೊಂಕಾದ ರಸ್ತೆಗಳಲ್ಲಿ ಓಡಿಸುವ ಅಡ್ವೆಂಚರಸ್‌ ಡ್ರೈವ್‌ಗೆ ಹಪಹಪಿಸುವ ಹವ್ಯಾಸಗಳನ್ನೂ ಕೆಲವರು ಬೆಳೆಸಿಕೊಂಡಿರುತ್ತಾರೆ. ಹೌದು. ಕಾರ್‌ ಕ್ರೇಜ್‌ ಅನ್ನೋದೇ ಒಂದು ಬಗೆಯ ಚಟ. ಆಧುನಿಕ ಜಗತ್ತಿನಲ್ಲಿ ಯುವಕ-ಯುವತಿಯರ ಕ್ರೇಜ್‌ಗೆ ಅವಕಾಶಗಳು, ಆಯ್ಕೆಗಳು ಒಂದಲ್ಲ ಎರಡಲ್ಲ, ನೂರಾರು. ಸೂಕ್ಷ್ಮವಾಗಿ ಗಮನಿಸಿದರೆ, ವಾಹನ ಚಾಲನೆ, ಸಂಗ್ರಹದಂಥ ಕ್ರೇಜ್‌ಗೆ ಅಂಟಿಕೊಳ್ಳುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. 

ನಟ ನಟಿಯರ ಕಾರ್‌ ದರ್ಬಾರ್‌
ಯಾರ ಬಳಿಯೂ ಇಲ್ಲದಂಥ ಕಾರು ಅಥವಾ ಅತೀ ದುಬಾರಿ ಕಾರು ಓಡಾಡಿಸಿಕೊಂಡು ಇರಬೇಕೆನ್ನುವುದು ಹಾಲಿವುಡ್‌, ಬಾಲಿವುಡ್‌ ಸೆಲೆಬ್ರಿಟಿಗಳ ಕನಸುಗಳಲ್ಲಿ ಒಂದು. ಕಳೆದ ವರ್ಷ ನಟ ಜಾನ್‌ ಅಬ್ರಹಾಂ  “ಭಾರತದಲ್ಲೇ ಯಾರ ಬಳಿಯೂ ಇಲ್ಲದ ಕಾರು ನನ್ನ ಬಳಿ ಇದೆ’ ಎಂದು ಹೇಳುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. ಯಾವುದದು? ಎಂದು ಕೇಳಿದ್ದಕ್ಕೆ ನಿಸ್ಸಾನ್‌ ಜಿಎಟಿ ಆರ್‌ ಬ್ಲ್ಯಾಕ್‌ ಎಡಿಷನ್‌ ಮಾಡೆಲ್‌ ಎಂದು ಹೇಳಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. ಅಷ್ಟಕ್ಕೂ ಅವರೇನು ಸುಳ್ಳು ಹೇಳಿರಲಿಲ್ಲ. ಆಗಷ್ಟೇ ಬಿಡುಗಡೆಯಾಗಿದ್ದ 2 ಕೋಟಿ ರೂ. ಬೆಲೆಯ ಕಾರಿಗೆ ಅವರೇ ಮೊದಲ ಕಸ್ಟಮರ್‌ ಆಗಿದ್ದರು. ನಿಸ್ಸಾನ್‌ ಕಂಪೆನಿ, ಅವರನ್ನೇ ಹೊಸ ಕಾರ್‌ನ ಅನಾವರಣಕ್ಕೆ ಕರೆಯಿಸಿಕೊಂಡಿತ್ತು ಕೂಡ.

ಹಾಗೇ ಶಾರೂಖ್‌ ಖಾನ್‌, ಸಲ್ಮಾನ್‌ ಖಾನ್‌, ಸಂಜಯ್‌ ದತ್‌, ಅಮಿತಾಬ್‌ ಬಚ್ಚನ್‌, ಅಲಿಯಾ ಭಟ್‌, ರಣಬೀರ್‌ ಕಪೂರ್‌, ಅನುಷ್ಕಾ ಶರ್ಮ ಸೇರಿ ಬಹುತೇಕ ಬಾಲಿವುಡ್‌ ನಟ-ನಟಿಯರು ದುಬಾರಿ ಕಾರುಗಳಲ್ಲಿ ಓಡಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಹೆಚ್ಚಿನವರು ರೇಂಜ್‌ ರೋವರ್‌, ರೋಲ್ಸ್‌ ರಾಯ್ಸ, ಜಾಗ್ವಾರ್‌ ಪ್ರಿಯರೂ ಆಗಿದ್ದಾರೆ. ಅವರಂತೆ ದಕ್ಷಿಣ ಭಾರತದ ಬಹುತೇಕ ನಟ-ನಟಿಯರೂ ಇಂಥ ಖಯಾಲಿಗಳಿಂದ ದೂರ ಉಳಿದುಕೊಂಡಿಲ್ಲ. 

ಸ್ಯಾಂಡಲ್‌ವುಡ್‌ಗೆ ಹೋಲಿಸಿಕೊಂಡರೆ ಈ ಕ್ರೇಜ್‌ ಟಾಲಿವುಡ್‌ ಮತ್ತು ಕಾಲಿವುಡ್‌ನ‌ಲ್ಲಿ ಜಾಸ್ತಿ. “ಬಾಹುಬಲಿ’ ಚಿತ್ರದ ಜನಪ್ರಿಯ ನಟ ಪ್ರಭಾಸ್‌ಗೆ ಲಕ್ಸುರಿ ಕಾರುಗಳ ಮೇಲೆ ಅಪಾರ ಪ್ರೀತಿ. ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ರೋಲ್ಸ್‌ ರಾಯ್ಸ ಕಂಪನಿಯ ಬರೋಬ್ಬರಿ 8 ಕೋಟಿ ರೂ. ಮೌಲ್ಯದ ಕಾರು ಪ್ರಭಾಸ್‌ ಬಳಿ ಇದೆ. ಇನ್ನು ರವಿತೇಜರ ಬಳಿ ಹತ್ತಾರು ಕಂಪನಿಗಳ ಐಷಾರಾಮಿ ಕಾರುಗಳಿದ್ದು, ಆ ಪೈಕಿ ಆಸ್ಟಿನ್‌ ಮಾರ್ಟಿನ್‌ ಡಿ-8 ಒಂದು. ಈ ಕಾರಿನ ಬೆಲೆ 8.50 ಕೋಟಿ ರೂ. ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿರೋ ಕಮಲ್‌ ಹಾಸನ್‌ ಬಳಿ ಹಮ್ಮರ್‌ ಎಚ್‌-3, ಭಲೇ ನಟ ವಿಜಯ್‌, ಚಿರಂಜೀವಿ ಬಳಿ 3 ಕೋಟಿಯ ರೋಲ್ಸ್‌ ರಾಯ್ಸ, ವಿಕ್ರಂ ಬಳಿ 2 ಕೋಟಿ ಬೆಲೆಯ ಆಡಿ ಕಾರ್‌ಗಳಿವೆ. ಜೂನಿಯರ್‌ ಎನ್‌.ಟಿ.ಆರ್‌, ಅಜಿತ್‌, ರಜನೀಕಾಂತ್‌ ಅಳಿಯ ಧನುಷ್‌, ಅಜಿತ್‌, ಸೂರ್ಯ, ಮಹೇಶ್‌ ಬಾಬು, ಬಾಲಕೃಷ್ಣ, ಅಲ್ಲು ಅರ್ಜುನ್‌, ಪವನ್‌ ಕಲ್ಯಾಣ್‌, ಸಂಗೀತ ನಿರ್ದೇಶಕ ಹ್ಯಾರಿಸ್‌ ಜಯರಾಮ್‌, ಯುವನ್‌ ಶಂಕರ್‌ ರಾಜ್‌ ಅವರಬಳಿಯೂ ಕೋಟಿ ಕೋಟಿ ಬೆಲೆಯ ಕಾರುಗಳಿವೆ. 

ಟಾಲಿವುಡ್‌ನ‌ ರಾಂಚರಣ್‌ ತೇಜ, ನಾಗಾರ್ಜುನ, ಮಲಯಾಳಂನ ಮೋಹನ್‌ ಲಾಲ್‌, ದಕ್ಷಿ$ಣದಲ್ಲಿ ನೆಲೆಕಂಡ ಉತ್ತರದ ಸುಂದರಿ ತ್ರಿಶಾ ಸೇರಿ ಇನ್ನೂ ಅನೇಕ ನಟ-ನಟಿಯರು ಆಡಿ, ಬೆಂಜ್‌, ಬಿಎಂಡಬ್ಲ್ಯು, ಜಾಗÌರ್‌, ರೇಂಜ್‌ ರೋವರ್‌, ಲ್ಯಾಂಬೋರ್ಗಿನಿಯಂಥ ಲಕ್ಸುರಿ ಕಾರುಗಳನ್ನು ಮನೆ ತುಂಬಿಸಿಕೊಂಡಿದ್ದಾರೆ. 

ಕಾರ್‌ಗಳ ಕ್ರೇಜ್‌ ಹೊಂದಿರುವ ನಟ-ನಟಿಯರು ಸ್ಯಾಂಡಲ್‌ವುಡ್‌ನ‌ಲ್ಲೂ ತೀರ ಕಡಿಮೆ ಎನ್ನುವಂತಿಲ್ಲ ವಾದರೂ ಉಳಿದವರಿಗೆ ಹೋಲಿಸಿಕೊಂಡರೆ ಸ್ವಲ್ಪ ಕಡಿಮೆಯೇ. ಆದರೂ ಕೋಟಿ ರೂ.ಗೆ ಹತ್ತಿರದ ಕಾರುಗಳು ಕಳೆದೊಂದು ದಶಕದಲ್ಲಿ ಮಿಂಚೆದ್ದ ಬಹುತೇಕ ನಟ-ನಟಿಯರ ಬಳಿ ಇದ್ದೇ ಇದೆ. ದರ್ಶನ್‌ ಸ್ಯಾಂಡಲ್‌ವುಡ್‌ನ‌ಲ್ಲಿ ಅತಿ ದುಬಾರಿ ಬೆಲೆಯ ಕಾರು ಹೊಂದಿರುವ ನಟ.  ಹಮ್ಮರ್‌, ಜಾಗÌರ್‌, ಕಾಂಟೆಸ್ಸಾ, ಆಡಿ, ರೇಂಜ್‌ ರೋವರ್‌, ಬೆಂಜ್‌, ಫಾರ್ಚೂನರ್‌, ಕೂಪರ್‌ ಕಾರುಗಳನ್ನು ಆತ  ಹೊಂದಿದ್ದಾರೆ. ಆಡಿ ಆರ್‌8 ಇತ್ತೀಚೆಗಷ್ಟೇ ಖರೀದಿಸಿರುವ ಕಾರಾಗಿದೆ.  ಸುದೀಪ್‌ ಕೂಡ ಕಡಿಮೆ ಏನಿಲ್ಲ.  ಜಾಗ್ವಾರ್‌, ಬಿಎಂಡಬ್ಲೂ, ಎಂಡೋವರ್‌ ಹೀಗೆ ಸುದೀಪ್‌ ಹೊಂದಿರುವ ಕಾರ್‌ಗಳ ಪಟ್ಟಿ ಬೆಳೆಯುತ್ತದೆ. ಒಟ್ಟಾರೆ ಇವರಲ್ಲಿ ಹೆಚ್ಚಿನವರಿಗೆ ಕಾರ್‌ಗಳನ್ನು ಖರೀದಿಸುವುದು ಖಯಾಲಿ ಆಗಿದ್ದರೆ, ಕೆಲವರು ಪ್ರತಿಷ್ಠೆಗಾಗಿ ದುಬಾರಿ ಕಾರಿನಲ್ಲಿ ಓಡಾಡುತ್ತಾರೆ.

ಮೆಸ್ಸಿಗೂ ದುಬಾರಿ ಕಾರೇ ಸರ್ವಸ್ವ
ಅರ್ಜೆಂಟೀನಾ ತಂಡದ ಶ್ರೇಷ್ಠ ಫ‌ುಟ್ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿಗೆ ವಿಪರೀತ ಕಾರ್‌ ಕ್ರೇಜ್‌. ಅದೆಷ್ಟೆಂದರೆ ದುಬಾರಿ ಕಾರುಗಳನ್ನು ಹೊಂದಿರಬೇಕೆನ್ನುವ ಹೆಬ್ಬಯಕೆ ಅವರದು. ಮೆಸ್ಸಿ ಸಂಗ್ರಹದಲ್ಲಿ ಸಾಕಷ್ಟು ದುಬಾರಿ ಕಾರುಗಳಿವೆ. ಆಡಿ, ಫೆರಾರಿ, ಮಸೆರಟಿ ಕಂಪನಿಗಳಿಗೆ ಸೇರಿದ ನ್ಪೋರ್ಟ್ಸ್ ಕಾರುಗಳು ಅವರ ಫೇವರಿಟ್‌. ಮಸೆರಿಟಿ ಗ್ರ್ಯಾನ್‌ ಟರಿಸ್ಮೋ ಎಂಸಿ ಸ್ಟ್ರಾಡಾಲ್‌ ಹಾಗೂ ಇದೇ ಕಂಪನಿಯ ಎಸ್‌ ಕಾಂಪಾಕ್ಟ್ ಮೆಸ್ಸಿ ಬಳಿ ಇರುವ ಅತ್ಯಂತ ದುಬಾರಿ ಕಾರು. ಮೂರ್‍ನಾಲ್ಕು ಸೆಕೆಂಡ್‌ಗಳಲ್ಲಿ 0-100 ವೇಗದಲ್ಲಿ ಚಲಿಸುವ ಸಾಮರ್ಥ್ಯದ ಬೊಂಬಾಟ್‌ ಕಾರು. ಉಳಿದಂತೆ ಟೊಯೊಟಾ ಪ್ರಯಾಸ್‌, ಲೆಕ್ಸಸ್‌ 4 àಲ್ಸ್‌ ಡ್ರೆ„ವ್‌, ಆಡಿ8 ಸ್ಪೈಡರ್‌, ಆಡಿ ಕ್ಯೂ ಸರಣಿಯ ಕಾರುಗಳು ಹಾಗೂ ಡೋಡ್ಜ್ ಎಸ್‌ಆರ್‌ಟಿ8 ಹೈಎಂಡ್‌ ಕಾರುಗಳು ಹಾಗೂ ಫೆರಾರಿ ಎಫ್430 ಸ್ಪೈಡರ್‌  ಮೆಸ್ಸಿ ಸಂಗ್ರಹದಲ್ಲಿವೆ.

ಕ್ರಿಕೆಟಿಗರ ಕಾರೂ, ಕ್ರೇಜೂ
ಕ್ರಿಕೆಟ್‌ ಆಟಗಾರರು ಕಾರು ಖಯಾಲಿಯಿಂದ ಹೊರತಾಗಿಲ್ಲ. ಕಳೆದೆರಡು ದಶಕಗಳಲ್ಲಿ ಬಂದು ಹೋಗಿರುವ ಹಾಗೂ ಸದ್ಯ ತಂಡದಲ್ಲಿರುವ ಸ್ಟಾರ್‌ ಆಟಗಾರರೂ ಒಂದಲ್ಲಾ ಒಂದು ರೀತಿಯಿಂದ ಲಕ್ಸುರಿ ಕಾರಿನ ಬಗ್ಗೆ ಆಸಕ್ತಿ ಹೊಂದಿದ್ದಾರೆ. ದಿಗ್ಗಜ ಸಚಿನ್‌ ತೆಂಡುಲ್ಕರ್‌ಗೆ ಕಾರ್‌ ಬಗ್ಗೆ ಇರುವ ಮೋಹದಿಂದಲೇ ಫಾರ್ಮುಲಾ ಒನ್‌ ಮುಖ್ಯಸ್ಥ ಬೆರ್ನಿ ಎಕ್ಲುಸ್ಟೋನ್‌ ಹಿಂದೊಮ್ಮೆ ಆಹ್ವಾನ ನೀಡಿ ಕರೆಸಿಕೊಂಡಿದ್ದು.  ಫೆರಾರಿ ಕಾರುಗಳನ್ನು ತೆಂಡೂಲ್ಕರ್‌ ‌ ಇಷ್ಟಪಡುತ್ತಿದ್ದರು. ಅವರಲ್ಲಿ ಪೋರ್ಷೆ, ಮರ್ಸಿಡೀಸ್‌ ಬೆಂಜ್‌, ಬಿಎಂಡಬ್ಲ್ಯು ಕಂಪನಿಗಳ ಪ್ರಮುಖ ಕಾರುಗಳಿವೆ. 

ಬಗೆ ಬಗೆಯ ಬೈಕ್‌ಗಳನ್ನು ಹೊಂದಿರುವ ಧೋನಿಗೆ ಹಮ್ಮರ್‌ ಇಷ್ಟವಾದ ಕಾರು. ಇನ್ನೊಂದು ವಿಶೇಷ ಏನೆಂದರೆ ಧೋನಿಗೆ ಬೈಕ್‌ಗಳನ್ನು ತಮಗಿಷ್ಟವಾಗುವಂತೆ ವಿನ್ಯಾಸಗೊಳಿಸುವ ಹವ್ಯಾಸವಿದೆ. ಆಡಿ ಕಾರುಗಳನ್ನು ಅತಿಯಾಗಿಯೇ ಇಷ್ಟಪಡುವ ವಿರಾಟ್‌ ಕೋಹ್ಲಿ, ಹಮ್ಮರ್‌ ಪ್ರಿಯಕರ ಹರ್ಭಜನ್‌ ಸಿಂಗ್‌, ರವೀಂದ್ರ ಜಡೇಜಾ, ಯುವರಾಜ್‌ ಸಿಂಗ್‌ ಅವರೂ ಧೋನಿ ಸಾಲಿಗೆ ಸೇರುವವರೇ ಆಗಿದ್ದಾರೆ. ಕೋಹ್ಲಿ ಸಾಮಾನ್ಯವಾಗಿ ಆಡಿಯ ಅತಿ ದುಬಾರಿ ನ್ಪೋರ್ಟ್ಸ್ ಕಾರುಗಳಲ್ಲಿಒಂದಾದ ಆರ್‌8 10 ಪ್ಲಸ್‌ ಕಾರಿನಲ್ಲೇ ಓಡಾಡುತ್ತಾರೆ. ವೀರೇಂದ್ರ ಸೆಹವಾಗ್‌ ಬಳಿ ನಾಲ್ಕು ಕೋಟಿ ರೂ. ಮೌಲ್ಯದ ಬೆಂಟಿÉ ಕಾಂಟಿನೆಂಟಲ್‌ ಫ್ಲೈಯಿಂಗ್‌ ಸ್ಟಾರ್‌ ಕಾರು ಇದೆ.

– ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.