ವಿವಿಧ ಕಾಲೇಜಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಬೃಹತ್‌ ಪ್ರತಿಭಟನೆ..!

ದ್ವಿತೀಯ ಪಿಯು ಮಧ್ಯವಾರ್ಷಿಕ ಪರೀಕ್ಷೆಗೆ ವಿರೋಧ

Team Udayavani, Nov 17, 2021, 1:12 PM IST

ಮಧ್ಯವಾರ್ಷಿಕ ಪರಿಕ್ಷೆಗೆ ವಿರೋಧ

ಮೈಸೂರು: ಪದವಿ ಪೂವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್‌ ಆರ್ಗನೈಜೇಷನ್‌ (ಎಐಡಿಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ರಾಮಸ್ವಾಮಿ ವೃತ್ತದ ಬಳಿ ಮಂಗಳವಾರ ವಿವಿಧ ಕಾಲೇಜಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ ನಡೆಸಿ ಪ್ರತಿವರ್ಷದಂತೆ ಅಂತಿಮ ಪರೀಕ್ಷೆಯನ್ನು ಮಾತ್ರ ನಡೆಸಬೇಕೆಂದು ಆಗ್ರಹಿಸಿದರು. ಸುತ್ತೋಲೆಯ ಪ್ರಕಾರ, ಈಗ ನಡೆಯುವ ಮಧ್ಯವಾರ್ಷಿಕ ಪರೀಕ್ಷೆ ರಾಜ್ಯ ಬೋರ್ಡ್‌ ಪರೀಕ್ಷೆಯಾಗಿ ನಡೆಯಲಿದ್ದು, ನವೆಂಬರ್‌ 29ರಿಂದ ಪರೀಕ್ಷೆಗಳು ಆರಂಭವಾಗಲಿವೆ.

ಇನ್ನೂ 15 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಯಾವು ದೇ ಪೂರ್ವ ಸೂಚನೆ ಇಲ್ಲದೇ, ಪೂರ್ವ ತಯಾರಿ ಇಲ್ಲದೆ ಏಕಾಏಕಿ ಬೋರ್ಡ್‌ ಪರೀಕ್ಷೆಯೊಂದನ್ನು ಎದುರಿಸಲು ಸಾಧ್ಯವೇ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪ್ರಶ್ನಿಸಿದರು. ಕೋವಿಡ್‌ನಿಂದ ವಿದ್ಯಾರ್ಥಿಗಳು ಪ್ರಥಮ ಪಿಯು ಪರೀಕ್ಷೆ ಬರೆಯದೆಯೇ ಬಡ್ತಿ ಪಡೆದಿದ್ದಾರೆ. ಎರಡು ವರ್ಷಗಳು ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯದ ಕಾರಣ ವಿದ್ಯಾರ್ಥಿಗಳು ಕಲಿಕಾ ಪದ್ಧತಿ ಹಾಗೂ ವಿಧಾನ ಸ್ವಲ್ಪಮಟ್ಟಿಗೆ ನಿಧನವಾಗಿದೆ. ಹೀಗಾಗಿ ಪರೀಕ್ಷೆ ಸಿದ್ಧರಾಗಲು ಹೆಚ್ಚಿನ ಸಮಯ ಬೇಕಿದೆ.

ಇದನ್ನೂ ಓದಿ:- ಜನ್ಮದಿನದಂದೇ ನೇತ್ರದಾನಕ್ಕೆ ಶಾಸಕರ ನೋಂದಣಿ

ಕಾಲೇಜು ಪುನಾರಂಭ ಕೂಡ 3 ತಿಂಗಳು ವಿಳಂಬವಾಗಿದೆ. ಇದರಿಂದ ಪಠ್ಯಕ್ರಮ ಪೂರ್ಣಗೊಂಡಿಲ್ಲ. ಇಂಥ ಸಮಯದಲ್ಲಿ ರಾಜ್ಯ ಸರ್ಕಾರ ಮಧ್ಯವಾರ್ಷಿಕ ಪರೀಕ್ಷೆಯನ್ನು ಬೋರ್ಡ್‌ ಪರೀಕ್ಷೆ ಮಾದರಿ ನಡೆಸುತ್ತದೆ ಎಂಬ ಹಠಾತ್‌ ನಿರ್ಧಾರ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ ಎಂದರು. ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಧ್ಯಕ್ಷ ಸುಭಾಷ್‌, ಉಪಾಧ್ಯಕ್ಷ ಅಷಿ ಯಾ ಬೇಗಂ, ಕಾರ್ಯದರ್ಶಿ ಚಂದ್ರಕಲಾ, ವಿದ್ಯಾ ರ್ಥಿಗಳು ಮಯೂರ್‌, ಪ್ರಶಾಂತ, ಪಾರ್ಥಿ ವ್‌, ಸ್ವಾತಿ, ಕಾವ್ಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾಲೇಜು ಮಟ್ಟದಲ್ಲಿ ಮಧ್ಯ ವಾರ್ಷಿಕ ಪರೀಕ್ಷೆ ನಡೆಸಿ

ಸರ್ಕಾರ ಮಧ್ಯ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್‌ ಪರೀಕ್ಷೆಯಾಗಿ ನಡೆಸುವುದನ್ನು ಬಿಟ್ಟು, ಕಾಲೇಜು ಮಟ್ಟದಲ್ಲಿ ನಡೆಸಬೇಕು. ಅಂತಿಮ ಪರೀಕ್ಷೆಯನ್ನು ಮಾತ್ರ ನಡೆಸಬೇಕು. ಶೈಕ್ಷಣಿಕ ವೇಳಾಪಟ್ಟಿ ವಿಸ್ತರಿಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳನ್ನು ಜೂನ್‌ ತಿಂಗಳಿಗೆ ನಿಗದಿಪಡಿಸಬೇಕು ಹಾಗೂ ಯಾವುದೇ ಸುತ್ತೋಲೆಗಳನ್ನು ಶೈಕ್ಷಣಿಕ ವರ್ಷದಲ್ಲಿ ಹೊರಡಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಟಾಪ್ ನ್ಯೂಸ್

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

13

Tragic: ಗುಜರಾತ್‌ ಗೇಮಿಂಗ್‌ ಜೋನ್‌ ನಲ್ಲಿ ಬೆಂಕಿ ಅವಘಡ: ಕನಿಷ್ಠ 20 ಮಂದಿ ಸಜೀವ ದಹನ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

11

ಎಸ್‌ಐಟಿ ಉಲ್ಲೇಖೀಸಿರುವ ಕಾನೂನುಬದ್ಧ ನಿಯಮಗಳು ಸಿಎಂ ಗಮನಕ್ಕೆ ಬಂದಿಲ್ಲವೇ?‌: ಎಚ್‌ಡಿಕೆ

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಷ್ಟು ಜನರಿಗೆ ಎಂಎಲ್ಸಿ ಸ್ಥಾನ ಕೊಡುವುದು? ನಮ್ಮ ಕಷ್ಟ ನಿಮಗೆ ಅರ್ಥವಾಗಲ್ಲ: ಸಿಎಂ

ಎಷ್ಟು ಜನರಿಗೆ ಎಂಎಲ್ಸಿ ಸ್ಥಾನ ಕೊಡುವುದು? ನಮ್ಮ ಕಷ್ಟ ನಿಮಗೆ ಅರ್ಥವಾಗಲ್ಲ: ಸಿಎಂ

Mysore; ಒಂದು ವರ್ಷದಿಂದ ಕಟ್ಟಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

Mysore; ಒಂದು ವರ್ಷದಿಂದ ಪಾವತಿಸಿಲ್ಲ ಮೋದಿ ವಾಸ್ತವ್ಯ ಹೂಡಿದ್ದ ಹೋಟೆಲ್ ಕೊಠಡಿ ಬಾಡಿಗೆ!

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ನನ್ನ ಮಗ ಸತ್ತು ಹೋಗಿ 8 ವರ್ಷ ಆಗಿದೆ…; ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

1-hunsur

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವು

ಪುತ್ರ ಯತೀಂದ್ರಗೆ ವಿ. ಪರಿಷತ್‌ ಟಿಕೆಟ್‌: ಸಿದ್ದರಾಮಯ್ಯ ಸುಳಿವು

ಪುತ್ರ ಯತೀಂದ್ರಗೆ ವಿ. ಪರಿಷತ್‌ ಟಿಕೆಟ್‌: ಸಿದ್ದರಾಮಯ್ಯ ಸುಳಿವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

19

Sullia: ವಾಹನಗಳಿಗೆ ಕಾರು ಢಿಕ್ಕಿ; ಹಾನಿ

17

Belthangady: ಅಪಘಾತದ ಗಾಯಾಳು ಯುವಕ ಸಾವು

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Udupi: ಎದೆ ನೋವಿನಿಂದ ವ್ಯಕ್ತಿ ಸಾವು

Udupi: ಎದೆ ನೋವಿನಿಂದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.