ಈ ವರ್ಷ ಐಪಿಒ ಹರ್ಷ


Team Udayavani, Nov 19, 2021, 6:10 AM IST

ಈ ವರ್ಷ ಐಪಿಒ ಹರ್ಷ

ಕೆಲವು ವರ್ಷಗಳ ಹಿಂದೆ ಷೇರು ಮಾರುಕಟ್ಟೆಯಲ್ಲಿ, ಬ್ಯಾಂಕ್‌ಗಳಲ್ಲಿ ನಿಗದಿತ ಠೇವಣಿ ಇರಿಸಿದ ಬಗ್ಗೆ ಸಮಾಜ ದಲ್ಲಿ ಮೀಸೆಯ ಮೇಲೆ ಕೈ ಆಡಿಸಿ, ಚರ್ಚೆ ಮಾಡುತ್ತಿದ್ದರು. ಆ ಚರ್ಚೆಯ ವಿಚಾರ ಬದಲಾಗಿದೆ. ಅದುವೇ ಐಪಿಒ. ಈ ವರ್ಷ ಹಲವು ಕಂಪೆನಿಗಳ ಇನಿಶಿಯಲ್‌ ಪಬ್ಲಿಕ್‌ ಆಫ‌ರ್‌ (ಐಪಿಒ)ಗಳು ಮಾರುಕಟ್ಟೆಗೆ ಬಂದಿವೆ. ಇನ್ನೂ ಕೆಲವು ಕಂಪೆನಿಗಳು ಶೀಘ್ರದಲ್ಲಿಯೇ ಷೇರು ಮಾರುಕಟ್ಟೆ ಪ್ರವೇಶ ಮಾಡಲಿವೆ. ಇಂಥ ರೀತಿಯ ಹೂಡಿಕೆಯ ಕ್ರಮಗಳು ಸುರಕ್ಷಿತವೇ ಮತ್ತು ಯಾಕೆ ಒಂದರ ಹಿಂದೆ ಒಂದು ಕಂಪೆನಿಗಳು ಐಪಿಒ ಬಗ್ಗೆ ಆಸಕ್ತಿ ತೋರಿಸುತ್ತಿವೆ ಎನ್ನುವುದನ್ನು ನೋಡೋಣ.

ಏನಿದು ಐಪಿಒ?: ಉಳಿದ ಎಲ್ಲ ವಿಚಾರಗಳನ್ನು ಚರ್ಚೆ ಮಾಡುವುದಕ್ಕೆ ಮೊದಲು ಐಪಿಒ ಎಂದರೆ ಏನು ಎನ್ನುವು ದನ್ನು ತಿಳಿದುಕೊಳ್ಳಬೇಕಾಗಿದೆ. ಇನಿಶಿಯಲ್‌ ಪಬ್ಲಿಕ್‌ ಆಫ‌ರಿಂಗ್‌ನ ಸಂಕ್ಷಿಪ್ತ ಪದವೇ ಐಪಿಒ. ಅಂದರೆ ಖಾಸಗಿ ಕಂಪೆನಿ ತನ್ನ ಷೇರುಗಳನ್ನು ಸ್ಟಾಕ್‌ಎಕ್ಸ್‌ಚೇಂಜ್‌ ಮೂಲಕ ಸಾರ್ವಜನಿಕರ ಖರೀದಿಗೆ ಬಿಡುಗಡೆ ಮಾಡುವುದಕ್ಕೆ ಐಪಿಒ ಎನ್ನುತ್ತಾರೆ. ಸುಲಭವಾಗಿ ಹೇಳುವುದಿದ್ದರೆ ಸಾರ್ವ ಜನಿಕರಿಗೆ ಷೇರು ಖರೀದಿಗೆ ಅವಕಾಶ ಮಾಡಿಕೊಟ್ಟು ಬಂಡವಾಳ ಸಂಗ್ರಹ ಮಾಡಿಕೊಳ್ಳುವುದು. ಮೊದಲು ಸಾರ್ವಜನಿಕರಿಂದ ಬಂಡವಾಳ ಸಂಗ್ರಹ ಮಾಡಿದ ಬಳಿಕ ಅದು ಬಾಂಬೆ ಷೇರುಪೇಟೆಯಲ್ಲಿ ಲಿಸ್ಟಿಂಗ್‌ ಆಗುತ್ತದೆ.

ನಮ್ಮ ದೇಶದ ಮೊದಲ ಐಪಿಒ ಯಾವುದು?: ಎರಡು ವರ್ಷಗಳಿಂದ ಈಚೆಗೆ ಐಪಿಒ ಎಂಬ ಹೆಸರನ್ನು ಎಲ್ಲರೂ ಕೇಳುವಂತೆ, ಚರ್ಚೆ ಮಾಡುವಂತೆ ಆಗಿದೆ ನಿಜ. ಆದರೆ ಈ ಕ್ಷೇತ್ರಕ್ಕೆ ಮೊದಲು ಕಾಲಿರಿಸಿದ್ದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌. ನಮ್ಮ ದೇಶದ ಅರ್ಥ ವ್ಯವಸ್ಥೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ಪದಪುಂಜಗಳನ್ನು ಕೇಳುವುದಕ್ಕೆ ಮೊದಲೇ ಅಂದರೆ 1977ರಲ್ಲಿಯೇ ಸಾರ್ವಜನಿಕರಿಗೆ ಷೇರುಗಳನ್ನು ಮಾರಾಟ ಮಾಡಿ, ಬಂಡವಾಳ ಸಂಗ್ರಹಿಸುವ ಪ್ರಕ್ರಿಯೆಗೆ ಮುಂದಾಗಿತ್ತು. ಆ ವರ್ಷ ರಿಲಯನ್ಸ್‌ ಬಿಡುಗಡೆ ಮಾಡಿದ್ದ ಐಪಿಒ ಷೇರಿನ ಮೊತ್ತ 2.82 ಕೋಟಿ ರೂ. ಕಂಪೆನಿಯ ಸ್ಥಾಪಕ ದಿ| ಧೀರೂಭಾಯಿ ಅಂಬಾನಿ ಅದರ ಜನಪ್ರಿಯತೆ ಮತ್ತು ಹೆಚ್ಚು ಮಂದಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಈ ವರ್ಷ ಐಪಿಒ ವರ್ಷ: ಡಿಜಿಟಲ್‌ ಪಾವತಿ ಕ್ಷೇತ್ರಕ್ಕೆ ಕೇಂದ್ರ ಸರಕಾರ ಹೆಚ್ಚಿನ ರೀತಿಯಲ್ಲಿ ಉತ್ತೇಜನ ನೀಡಿ ರುವುದರಿಂದ ಐಪಿಒ ಹೂಡಿಕೆ ಪ್ರಮಾಣವೂ ಜಿಗಿದಿದೆ. ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಕೆ ಮತ್ತಿತರ ಪ್ರಕ್ರಿ ಯೆಗಳು ನಡೆಯುವುದರಿಂದ  ಹೂಡಿಕೆ ಪ್ರಕ್ರಿಯೆಯನ್ನು  ಸರಳವಾಗಿಸಿದೆ ಎಂದು ಹೇಳಬಹುದು. ಅಂದಹಾಗೆ ಪ್ರಸಕ್ತ ವರ್ಷ ಹೆಚ್ಚಿನ ಸಂಖ್ಯೆಯ ಅಂದರೆ ಇದುವರೆಗೆ 72 ಕಂಪೆನಿಗಳ ಐಪಿಒಗಳು ಮಾರುಕಟ್ಟೆ ಪ್ರವೇಶ ಮಾಡಿವೆ. ಹೀಗಾಗಿ, 2021ನ್ನು ಐಪಿಒಗಳ ವರ್ಷವೆಂದು ಕರೆಯಬಹುದು ಎಂದು ಆರ್‌ಬಿಐನ ಆಗಸ್ಟ್‌ನ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಝೊಮ್ಯಾಟೋ ಯಶಸ್ವಿ: ಆಹಾರ ಪೂರೈಸುವ ಆ್ಯಪ್‌, ಝೊಮ್ಯಾಟೋ ಜು.14ರಿಂದ 16ರ ವರೆಗೆ ಹೂಡಿಕೆ ದಾರರಿಗೆ ಮುಕ್ತವಾಗಿತ್ತು. ಮಾರುಕಟ್ಟೆಯಲ್ಲಿ ಅದಕ್ಕೆ ಭಾರೀ ಬೇಡಿಕೆ ಬಂದಿತ್ತು. ಹೆಚ್ಚಿನ ಪ್ರಮಾಣದಲ್ಲಿ ಅಂದರೆ 38 ಬಾರಿ ಚಂದಾದಾರಿಕೆ (ಹೆಚ್ಚಿನ ಬೇಡಿಕೆ) ಕಂಡು ಕೊಂಡಿತ್ತು. ಅದರ ಯಶಸ್ಸಿನ ಬಳಿಕ ಹೊಸ ಯುಗದ ಐಪಿಒಗಳು ಕ್ಷಿಪ್ರಗತಿಯಲ್ಲಿ ಮಾರುಕಟ್ಟೆಗೆ ಬಂದವು ಮತ್ತು ಬೇಡಿಕೆ ಪಡೆದುಕೊಂಡವು.

ಜಗತ್ತಿನಲ್ಲಿ ಟ್ರೆಂಡ್‌ :

ಅರ್ನೆಸ್ಟ್‌ ಆ್ಯಂಡ್‌ ಯಂಗ್‌ (ಇವೈ) ವರದಿ ಪ್ರಕಾರ ಪ್ರಸಕ್ತ ವಿತ್ತೀಯ ವರ್ಷದ ಮೂರನೇ ತ್ತೈಮಾಸಿಕದಲ್ಲಿ ಐಪಿಒಗಳ ಪ್ರಭಾವ ಹೆಚ್ಚಾಗಿಯೇ ಇದೆ. ಐರೋಪ್ಯ ಒಕ್ಕೂಟ, ಮಧ್ಯ ಏಷ್ಯಾ, ಭಾರತ, ಆಫ್ರಿಕಾ (ಇಎಂಇಐಎ)ಗಳ ಅರ್ಥ ವ್ಯವಸ್ಥೆಯಲ್ಲಿ ಅದು ಪ್ರಧಾನ ಪಾತ್ರ ವಹಿಸಲಿದೆ.

ಏಕಾಏಕಿ ಬೂಮ್‌ ಏಕೆ? :

ಬಡ್ಡಿದರ ಇಳಿಕೆ: ಎರಡು ವರ್ಷಗಳ ಹಿಂದಿನ ವರೆಗೆ ಹೂಡಿಕೆ ಎಂದರೆ ಜೀವ ವಿಮೆ, ಚಿನ್ನ, ಅಂಚೆ ಕಚೇರಿಯ ಉಳಿತಾಯ ಯೋಜನೆ, ಷೇರುಪೇಟೆ ವಗೈರೆ. ಈಗ ಮಾತೆತ್ತಿದರೆ ಹೊಸ ಹೂಡಿಕೆಗಳ ವಿಚಾರ ಆಕರ್ಷಿಸುತ್ತದೆ. ಬ್ಯಾಂಕ್‌ಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ಇಳಿಕೆಯಾ ಗಿದೆ. ಜತೆಗೆ ಇತರ ಸಾಂಪ್ರದಾಯಿಕ ಹೂಡಿಕೆಗಳಿಗೆ ಅವಕಾಶಗಳಿದ್ದರೂ ವಿವಿಧ ಕಾರಣಗಳಿಂದ ಅಲ್ಲಿ ಹೂಡಿಕೆದಾರರಿಗೆ ನೀಡಲಾಗುತ್ತಿದ್ದ ಬಡ್ಡಿಯ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಹೂಡಿಕೆಗೆ ಒಂದು ಹೊಸ ಅವಕಾಶ ಸೃಷ್ಟಿಯಾಗಿದೆ ಎಂದು ಹೇಳಬಹುದು.

ಬೇಕಾಗಿದೆ ಬಂಡವಾಳ: ದೇಶದಲ್ಲಿ ಸದ್ಯ ಇರುವ ಉತ್ತಮ ಅರ್ಥವ್ಯವಸ್ಥೆ ವಿದೇಶಿ ಹೂಡಿಕೆದಾರರಿಗೂ ಆಕರ್ಷಣೆಯಾಗಿದೆ. ಸಾಧ್ಯ ವಾದಷ್ಟು ಅದರ ಸದುಪಯೋಗಪಡೆಯಲು ಮುಂದಾಗಿದ್ದಾರೆ. ಜತೆಗೆ ಕೊರೊನಾ ತೀವ್ರತೆಯಿಂದ ಚೇತರಿಸಿಕೊಳ್ಳುತ್ತಿರುವ ಕಂಪೆನಿಗಳಿಗೆ ತಮ್ಮ ವಹಿವಾಟು ವಿಸ್ತರಿಸಿಕೊಳ್ಳಲು ಕೋಟ್ಯಂತರ ರೂ. ಬಂಡವಾಳ ಅಗತ್ಯ ಬೇಕು. ಹೀಗಾಗಿ, ದೇಶದಲ್ಲಿರುವ ಕಂಪೆನಿಗಳು ಷೇರುಗಳ ಮೂಲಕ, ಖಾಸಗಿ ಹೂಡಿಕೆಗಳ ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾಗಿವೆ.

ಚೀನ ಕಾರಣ: ಮಾರುಕಟ್ಟೆ ಸಂಶೋಧನ ಸಂಸ್ಥೆ ಕೆಪಿಎಂಜಿ ಇಂಡಿಯಾದ ಕಾರ್ಪೋರೆಟ್‌ ಫೈನಾನ್ಸ್‌ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಬಾಲಸುಬ್ರಹ್ಮಣ್ಯನ್‌ ಪ್ರಕಾರ ಚೀನದಲ್ಲಿ ಅಲಿಬಾಬಾ ಕಂಪೆನಿಯ ಮುಖ್ಯಸ್ಥ ಜಾಕ್‌ಮಾ ಸೇರಿದಂತೆ ಹಲವು ಸಿರಿವಂತರು ಹೊಂದಿದ ಕಂಪೆನಿಗಳ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಆ ದೇಶದಲ್ಲಿ ಹೂಡಿಕೆ ಮಾಡಲು ಉದ್ದೇಶಿಸಿದ್ದವರು ಮತ್ತು ಸದ್ಯ ಅಲ್ಲಿ ಕಾರ್ಯ ವೆಸಗುತ್ತಿರುವ ಕಂಪೆನಿಗಳು ಭಾರತದತ್ತ ದೃಷ್ಟಿ ಹರಿಸಿವೆ.

ಹೂಡಿಕೆ ಹೇಗೆ? :

ಐಪಿಒದಲ್ಲಿ ಹೂಡಿಕೆ ಮಾಡಲು ಬಯಸುವವರು ಮೊದಲು ಡಿ-ಮ್ಯಾಟ್‌ ಅಕೌಂಟ್‌ ಹೊಂದಿರಬೇಕು. ಅದನ್ನು ಹೊಂದಲು ಝೆರೋದಾ, ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳ ಮೂಲಕ ಆನ್‌ಲೈನ್‌ ಮೂಲಕ ಖಾತೆ ತೆರೆಯಬೇಕು. ಅದಕ್ಕಾಗಿ ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ವಿಳಾಸ ದೃಢೀಕರಣ ದಾಖಲೆಗಳು ಮತ್ತು ಖಾತೆ ತೆರೆಯಲು ಬೇಕಾಗುವ ದಾಖಲೆಗಳನ್ನು ನೀಡಬೇಕಾಗುತ್ತದೆ.

ಖಾತೆ ತೆರೆದಾದ ಬಳಿಕ ಹೂಡಿಕೆದಾರನು ನಮೂದಿಸಿರುವ ಬ್ಯಾಂಕ್‌ ಖಾತೆಯ ಮೂಲಕ ಐಪಿಒ ಖರೀದಿಗೆ ಅರ್ಜಿ ಸಲ್ಲಿಸಬೇಕು. ಜತೆಗೆ  ಆತ ಖಾತೆ ಹೊಂದಿರುವ ಬ್ಯಾಂಕ್‌ಗೆ ಐಪಿಒಗೆ ನಿಗದಿಪಡಿಸಲಾಗಿರುವ ಮೊತ್ತವನ್ನು ಪಡೆಯಲು (ಆ್ಯಪ್ಲಿಕೇಶ‌ನ್‌ ಸಪೋರ್ಟೆಡ್‌ ಬೈ ಬ್ಲಾಕ್ಡ್ ಅಕೌಂಟ್‌-ಎಎಸ್‌ಬಿಎ) ಅನುಮತಿ ನೀಡಬೇಕಾಗುತ್ತದೆ.

ನಿಗದಿತ ಮಿತಿಯ ಮೊತ್ತ ಖರೀದಿ ಮಾಡಬೇಕು ಎಂದು ಆನ್‌ಲೈನ್‌ನಲ್ಲಿಯೇ ಸೂಚಿಸಿರುವುದಿಂದ ಕನಿಷ್ಠ ಮಿತಿ ಎಷ್ಟು ಎಂದು ಆಯ್ಕೆ ಮಾಡಲು ಕಷ್ಟವಾಗುವುದಿಲ್ಲ.

ಮಾರುಕಟ್ಟೆಯಲ್ಲಿ ಐಪಿಒ ಬಿಡುಗಡೆ ಮಾಡುವ ಕಂಪೆನಿಯ ದಾಖಲೆಗಳನ್ನು ಎಚ್ಚರಿಕೆಯಿಂದ ಓದಬೇಕು.

ಕಂಪೆನಿಯು ಸಾರ್ವಜನಿಕರಿಂದ ಸಂಗ್ರಹಿ ಸಿದ ಮೊತ್ತವನ್ನು ಯಾವ ರೀತಿ ಬಳಕೆ ಮಾಡುತ್ತದೆ ಎಂಬುದು ಗಮನದಲ್ಲಿರಲಿ.

ಹೂಡಿಕೆ ಮಾಡಿದ ಸಂಸ್ಥೆಯ ಹಿಂದಿನ ವಿತ್ತೀಯ ಸಾಧನೆಗಳನ್ನು ಗಮನಿಸಿ.

ಕಂಪೆನಿಗಳು ಹೇಗೆ ಸಿದ್ಧಗೊಳ್ಳುತ್ತವೆ? :

ಇದೊಂದು ದೀರ್ಘ‌ ಪ್ರಕ್ರಿಯೆ. ಕಂಪೆನಿಗಳು ತಾವು ಹೊಂದಿದ ಆಸ್ತಿ, ಮಾರುಕಟ್ಟೆಯಲ್ಲಿ ಹೊಂದಿರುವ ಬ್ರಾಂಡ್‌ ವ್ಯಾಲ್ಯೂ,  ಯಾವ ಕಾರಣಕ್ಕಾಗಿ ಐಪಿಒ ಹೊರಡಿಸಲು ನಿರ್ಧರಿಸಿದ್ದು ಎಂಬಿತ್ಯಾದಿ ವಿವರಗಳನ್ನು ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ (ಸೆಬಿ)ಗೆ ನೀಡಬೇಕಾಗುತ್ತದೆ. ಅವುಗಳನ್ನು ಪರಿಶೀಲಿಸಿದ ಸೆಬಿ, ಪ್ರಕ್ರಿಯೆಗೆ ಅನುಮೋದನೆ ನೀಡುತ್ತದೆ.

75 ಸಾವಿರ  ಕೋಟಿ ರೂ.: ಮುಂದಿನ 6 ತಿಂಗಳಲ್ಲಿ ದೇಶದ ಕಂಪೆನಿಗಳು ಐಪಿಒ ಮೂಲಕ ಸಂಗ್ರಹಿಸಲಿರುವ ಅಂದಾಜು ಮೊತ್ತ.

80,200  ಕೋಟಿ ರೂ. : ಇದುವರೆಗೆ ದೇಶದ ಕಂಪೆನಿಗಳು ಸಂಗ್ರಹಿಸಿರುವ ಮೊತ್ತ

78 : ಇದುವರೆಗೆ ಬಿಡುಗಡೆ ಯಾಗಿರುವ ಐಪಿಒಗಳು (ಜನವರಿಯಿಂದ ಅಕ್ಟೋಬರ್‌)

40: ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಐಪಿಒಗಳು

ಸದ್ಯ ಬಿಡುಗಡೆಯಾಗಿರುವ  ಪ್ರಮಖ ಐಪಿಒಗಳು :

ಕಂಪೆನಿ            ಬಂಡವಾಳ  (ಕೋಟಿ ರೂ.ಗಳಲ್ಲಿ)

ಒನ್‌ 97  ಕಮ್ಯೂನಿಕೇಷನ್ಸ್‌  (ಪೇಟಿಎಂ) 18,300.00

ಝೊಮ್ಯಾಟೋ             9,375.00

ಡೆಕ್ಜಿವರಿ            7,460.00

ಎಪಿಐ ಹೋಲ್ಡಿಂಗ್ಸ್‌

(ಫಾರ್ಮ್ ಈಸಿ)            6,250.00

ಪಿ.ಬಿ.ಫಿನ್‌ಟೆಕ್‌

(ಪಾಲಿಸಿ ಬಜಾರ್‌)        5,700.00

ಎಫ್ಎಸ್‌ಎನ್‌ ಇ-ಕಾಮರ್ಸ್‌ ವೆಂಚರ್ಸ್‌ (ನೈಕಾ)           5,352.00

ಡ್ರೂಮ್‌ ಟೆಕ್ನಾಲಜಿ      3,000.00

ಕಾರ್‌ ಟ್ರೇಡ್‌ ಟೆಕ್‌        2,998.50

ಒನ್‌ ಮೊಬಿಕ್ವಿಕ್‌ (ಮೊಬಿ ಕ್ವಿಕ್‌) 1,900.00

ಲಿ ಟ್ರವೆನ್ಯೂಸ್‌ (ಲೆಕ್ಸಿಗೋ)       1,600.00

ಈಸಿ ಟ್ರಿಪ್‌ ಪ್ಲಾನರ್ಸ್‌

(ಈಸ್‌ ಮೈ ಟ್ರಿಪ್‌)         510.00

ಎಲ್‌ಐಸಿಗೆ ಕಾಯುತ್ತಿದ್ದಾರೆ :

ಸರಕಾರಿ ಸ್ವಾಮ್ಯದ ಜೀವ ವಿಮಾ ನಿಗಮ (ಎಲ್‌ಐಸಿ)  ಐಪಿಒ ಮುಂದಿನ ವಿತ್ತೀಯ ವರ್ಷದಲ್ಲಿ ಬಿಡುಗಡೆಯಾಗಲಿದೆ. ದೇಶದ ಐಪಿಒಗಳ ಐಪಿಒ ಎಂದು ಈಗಾಗಲೇ ವಿತ್ತೀಯ ಕ್ಷೇತ್ರದಲ್ಲಿ ಬಣ್ಣನೆಗೊಂಡಿರುವ ಎಲ್‌ಐಸಿಯ  ಮೌಲ್ಯ  7 ಸಾವಿರ ಕೋಟಿ ರೂ.ಗಳಿಂದ 8 ಸಾವಿರ ಕೋಟಿ ರೂ. ವರೆಗೆ ಇರಬಹುದೆಂದು ಅಂದಾಜಿಸ ಲಾಗುತ್ತಿದೆ. ಸರಕಾರಿ ವಿಮಾ ಕಂಪೆನಿಯ ಶೇ.5-ಶೇ.10ರಷ್ಟು ಷೇರುಗಳ ಮಾರಾಟ ಮಾಡುವ ಬಗ್ಗೆ ಪ್ರಕ್ರಿಯೆಗಳು ವಿವಿಧ ಹಂತಗಳಲ್ಲಿವೆ. ಸದ್ಯ ದೇಶದ ಜೀವ ವಿಮೆ ಮಾರುಕಟ್ಟೆಯ ಶೇ.60ರಷ್ಟರಲ್ಲಿ ಎಲ್‌ಐಸಿ ಹಿಡಿತವೇ ಇದೆ.

ಟಾಪ್ ನ್ಯೂಸ್

Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Martin’s team announced the release date of the film

Martin: ಬಂತು ಸ್ಟಾರ್ ಸಿನಿಮಾ; ಧ್ರುವ ಸರ್ಜಾ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿದ ತಂಡ

Cops Suspended: ಪೋರ್ಷೆ ಕಾರು ಅಪಘಾತ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸರಿಬ್ಬರ ಅಮಾನತು

Cops Suspended: ಪೋರ್ಶೆ ಕಾರು ಅಪಘಾತ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸರಿಬ್ಬರ ಅಮಾನತು

Udupi: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

Udupi: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

1-hunsur

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವು

Lok Sabha Polls: ನವದೆಹಲಿ, ಹರಿಯಾಣ ಸೇರಿದಂತೆ 8 ರಾಜ್ಯಗಳಲ್ಲಿ 6ನೇ ಹಂತದ ಮತದಾನ ಆರಂಭ

Lok Sabha Polls: ನವದೆಹಲಿ, ಹರಿಯಾಣ ಸೇರಿದಂತೆ 8 ರಾಜ್ಯಗಳಲ್ಲಿ 6ನೇ ಹಂತದ ಮತದಾನ ಆರಂಭ

sಬರದ ಬೆನ್ನಲ್ಲೇ ರೈತರಿಗೆ ಬಿತ್ತನೆ ಬೀಜ ದರ ಏರಿಕೆಯ ಆಘಾತ

ಬರದ ಬೆನ್ನಲ್ಲೇ ರೈತರಿಗೆ ಬಿತ್ತನೆ ಬೀಜ ದರ ಏರಿಕೆಯ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cyber crime

Cambodia ಸೈಬರ್‌ ಕ್ರೈಮ್‌ ಹಬ್‌: ಭಾರತೀಯರಿಂದಲೇ ಭಾರತೀಯರ ಟಾರ್ಗೆಟ್‌!

Puri Jagannath Temple: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದಲ್ಲಿ ಏನಿದೆ?

Puri Jagannath Temple: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದಲ್ಲಿ ಏನಿದೆ?

Buddha Poornima: ಭಗವಾನ್‌ ಬುದ್ಧನ ಆದರ್ಶದಿಂದ ವಿಶ್ವಶಾಂತಿ

Buddha Poornima: ಭಗವಾನ್‌ ಬುದ್ಧನ ಆದರ್ಶದಿಂದ ವಿಶ್ವಶಾಂತಿ

Chabahar

Chabahar ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಟಾಗಿಲು

one year for siddaramaiah govt

ಗ್ಯಾರಂಟಿ ಸರಕಾರಕ್ಕೆ ವರ್ಷದ ಗೋರಂಟಿ!; ಹಲವು ಸವಾಲುಗಳ ನಡುವೆಯೂ ಭರವಸೆ ಈಡೇರಿಸಿದ ಸರಕಾರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Martin’s team announced the release date of the film

Martin: ಬಂತು ಸ್ಟಾರ್ ಸಿನಿಮಾ; ಧ್ರುವ ಸರ್ಜಾ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿದ ತಂಡ

Cops Suspended: ಪೋರ್ಷೆ ಕಾರು ಅಪಘಾತ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸರಿಬ್ಬರ ಅಮಾನತು

Cops Suspended: ಪೋರ್ಶೆ ಕಾರು ಅಪಘಾತ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸರಿಬ್ಬರ ಅಮಾನತು

Udupi: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

Udupi: ನಡುರಸ್ತೆಯಲ್ಲಿ ಗ್ಯಾಂಗ್ ವಾರ್; ಹೊಡೆದಾಟದ ವಿಡಿಯೋ ವೈರಲ್

1-hunsur

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.