ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಹೈಜಾಕ್: ಸಿಂಧನೂರು ತಾಲೂಕಿನಲ್ಲಿ ಗೋಲ್‍ಮಾಲ್ ಬಯಲು


Team Udayavani, Feb 28, 2022, 5:39 PM IST

ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಹೈಜಾಕ್: ಸಿಂಧನೂರು ತಾಲೂಕಿನಲ್ಲಿ ಗೋಲ್‍ಮಾಲ್  ಬಯಲು

ಸಿಂಧನೂರು: ಕೆಪಿಸಿಸಿ ಸೂಚನೆ ಪ್ರಕಾರ ನಡೆಯುತ್ತಿರುವ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಬೋಗಸ್ ಸಾಧನೆ ತೋರಿಸಿ, ವಾಮಮಾರ್ಗದಲ್ಲಿ ಪಕ್ಷಕ್ಕೆ ಕೆಟ್ಟು ಹೆಸರು ತರುತ್ತಿರುವ ವ್ಯಕ್ತಿಗಳನ್ನು ಹೈಕಮಾಂಡ್ ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್  ಪಂಪನಗೌಡ ಬಾದರ್ಲಿ ಒತ್ತಾಯಿಸಿದರು.

ಅವರು ನಗರದ ಅನ್ನದಾನೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೆಪಿಸಿಸಿ ನಿಯಮದ ಪ್ರಕಾರ ಈಗಾಗಲೇ ಬ್ಲಾಕ್ ಕಾಂಗ್ರೆಸ್ ನೋಂದಣಿ ಅಭಿಯಾನ ನಡೆಸಿದೆ. ಆದರೆ, ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಹೆಸರೇಳಿಕೊಂಡು ಕೆಲವು ಯುವಕರು ಬೋಗಸ್ ನೋಂದಣಿಯನ್ನು ಆರಂಭಿಸಿದ್ದು, ಗಮನಕ್ಕೆ ಬಂದಿದೆ. ಪಕ್ಷಕ್ಕೆ ಕೆಟ್ಟು ಹೆಸರು ತರುವ ಇಂತಹ ಕೆಲಸವನ್ನು ನಾವು ಖಂಡಿಸುತ್ತೇವೆ ಎಂದರು.

ಬೋಗಸ್ ಮಾಡಿದ್ದು ನಿಜ:

ಸಿರುಗುಪ್ಪ ತಾಲೂಕಿನ ಉಪ್ಪಾರಹೊಸಳ್ಳಿಯ ಬನ್ನಿಗೌಡ ಮಾತನಾಡಿ, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚಿದಾನಂದು ರಾಯಡು ಅವರು ನಮ್ಮನ್ನು ಕಳುಹಿಸಿದ್ದು, ಬಸನಗೌಡ ಬಾದರ್ಲಿ ಪರವಾಗಿ ಸಿಂಧನೂರು ತಾಲೂಕಿನಲ್ಲಿ ಮತದಾರರ ಪಟ್ಟಿ ಹಿಡಿದು ನೋಂದಣಿ ಮಾಡಿಸಲು ಹೇಳಿದ್ದರು. ನಾವು ಬೋಗಸ್ ರೀತಿಯಲ್ಲಿ ನೊಂದಣಿ ಮಾಡಿದ್ದು, ನಿಜ. ನಾನೊಬ್ಬನೇ ಅಲ್ಲ; ಪ್ರತಿ ಗ್ರಾಮದಲ್ಲೂ ಐದಾರು ಜನರನ್ನು ನಿಯೋಜಿಸಿದ್ದಾರೆ. ನಮಗೆ ದಿನಕ್ಕೆ 500 ರೂ.ಕೂಲಿ ಕೊಡುವುದಾಗಿ ಹೇಳಿದ್ದು, ಸಕ್ರ್ಯೂಟ್ ಹೌಸ್‍ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ನಾನು ಮಾಡಿದ್ದು, ತಪ್ಪೆಂದು ಗೊತ್ತಾಗಿದೆ. ಆದರೆ, ಬಾಬುಗೌಡ ಬಾದರ್ಲಿ ಅವರು ನಮಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಊಟ, ಉಪಾಹಾರ ಕೊಟ್ಟು, ಇದ್ದದ್ದನ್ನು ಹೇಳಲು ತಿಳಿಸಿದ್ದಾರೆ ಎಂದರು.

ಹೈಕಮಾಂಡ್‍ಗೆ ದೂರು:

ಸಾಕ್ಷಿ ಸಮೇತ ಬೋಗಸ್ ಸದಸ್ಯತ್ವ ಅಭಿಯಾನ ನಡೆಸಿ, ನಾಯಕರ ದಿಕ್ಕು ತಪ್ಪಿಸುವ ಈ ಬೆಳವಣಿಗೆ ಕುರಿತು ಹೈಕಮಾಂಡ್‍ಗೆ ದೂರು ಸಲ್ಲಿಸಲಾಗುವುದು ಎಂದು ಪಂಪನಗೌಡ ಬಾದರ್ಲಿ ಹೇಳಿದರು. ಈಗಾಗಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವೀಕ್ಷಕರ ಗಮನಕ್ಕೆ ತರಲಾಗಿದೆ. ಯಾವುದೇ ಕೊಠಡಿಯಲ್ಲಿ ಕುಳಿತು ಬೋಗಸ್ ಮೊಬೈಲ್ ನಂಬರ್ ಕೊಟ್ಟು, ಮುಂದಿನ ದಿನಗಳಲ್ಲಿ ಪಕ್ಷವನ್ನು ಹಳ್ಳ ಹಿಡಿಸುವ ಇಂತಹ ಪ್ರಯತ್ನಗಳನ್ನು ನಾವು ಒಪ್ಪುವುದಿಲ್ಲ ಎಂದರು.

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜಾ ಹುಸೇನ್, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಹಗೀರದಾರ್, ಜಿ.ಪಂ.ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ್ ಹಿರೇಗೌಡರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್.ವೈ, ಮುಖಂಡರಾದ ಪ್ರಭುರಾಜ್ ಕರ್ಪೂರಮಠ, ಛತ್ರಪ್ಪ ಕುರುಕುಂದಿ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಸೇರಿದಂತೆ ಅನೇಕರು ಇದ್ದರು.

ಇನ್ನೂರರಿಂದ ಮುನ್ನೂರು ಜನ ಯುವಕರನ್ನು ಬೋಗಸ್ ಸದಸ್ಯತ್ವ ಅಭಿಯಾನ ನಡೆಸಲು ಸಿಂಧನೂರಿಗೆ ಕರೆಸಲಾಗಿದೆ. ಸಿಂಧನೂರಿನಲ್ಲಿ ಒಬ್ಬರೇ ಕಾಂಗ್ರೆಸ್ ಲೀಡರ್ , ಅದು ಹಂಪನಗೌಡ ಬಾದರ್ಲಿ. ಅವರಿಗೆ ಚ್ಯುತಿ ತರಲು ವಾಮಮಾರ್ಗವನ್ನು ನಾವು ಸಹಿಸಲ್ಲ.-ಜಾಫರ್ ಜಾಹಗೀರದಾರ್, ನಗರಸಭೆ ಮಾಜಿ ಅಧ್ಯಕ್ಷ, ಸಿಂಧನೂರು.

ಟಾಪ್ ನ್ಯೂಸ್

1-wew-ewe

Gujarat; ಗೇಮಿಂಗ್‌ ಸೆಂಟರ್‌ ಬೆಂಕಿ ದುರಂತ ಸಾವಿನ ಸಂಖ್ಯೆ 33ಕ್ಕೆ : ಹೈಕೋರ್ಟ್‌ ವಿಚಾರಣೆ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

rahul gandhi

Adani ಗಾಗಿ ಕೆಲಸ ಮಾಡುವಂತೆ ಮೋದಿಗೆ ಬಹುಶಃ ದೇವರು ಹೇಳಿರಬೇಕು: ರಾಹುಲ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K Annamalai

K Annamalai; ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಅಣ್ಣಾಮಲೈ

raichur

Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ

Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Maldives Muizzu

ಮುಕ್ತ ವ್ಯಾಪಾರಕ್ಕೆ ಭಾರತ- ಮಾಲ್ದೀವ್ಸ್‌ ಒಪ್ಪಂದ

1-wew-ewe

Gujarat; ಗೇಮಿಂಗ್‌ ಸೆಂಟರ್‌ ಬೆಂಕಿ ದುರಂತ ಸಾವಿನ ಸಂಖ್ಯೆ 33ಕ್ಕೆ : ಹೈಕೋರ್ಟ್‌ ವಿಚಾರಣೆ

1-qwu

Qatar ವಿಮಾನ ಆಗಸ‌ದಲ್ಲಿ ಓಲಾಡಿ 12 ಮಂದಿಗೆ ಗಾಯ

Vimana 2

Bird hit; ಲೇಹ್‌ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್‌

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.