ಮರ ಕಡಿದವರ ವಿರುದ್ದ ಕ್ರಮಕ್ಕೆ ಆಗ್ರಹ

ನಗರಸಭೆ- ಅರಣ್ಯ ಅಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆ

Team Udayavani, Apr 5, 2022, 3:47 PM IST

tree

ಚಿಕ್ಕಮಗಳೂರು: ರಾಮನಹಳ್ಳಿ ಬಡಾವಣೆಯಲ್ಲಿರುವ ನೀರು ಶುದ್ಧೀಕರಣದ ಘಟಕದ ಆವರಣದಲ್ಲಿದ್ದ ನೂರಾರು ವರ್ಷಗಳ ಹಳೆಯ ಬೆಲೆ ಬಾಳುವ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಹಾಡಹಗಲೇ ಕಡಿದಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ರಾಮನಹಳ್ಳಿ ಬಡಾವಣೆಯಲ್ಲಿರುವ ನೀರು ಶುದ್ಧೀಕರಣದ ಘಟಕದ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಅರಣ್ಯ ಕಾನೂನುಗಳಿಗೆ ಗೌರವ ನೀಡದೆ ಸರ್ವಾಧಿ ಕಾರಿಗಳಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಅರಣ್ಯ ಇಲಾಖೆ ಅನುಮತಿ ಪಡೆಯದೆ ನೂರಾರು ವರ್ಷಗಳ ಹಳೆಯ ಮರಗಳನ್ನು ಹಾಡಹಗಲೇ ಕಡಿಸುವ ಮೂಲಕ ನಗರಸಭೆ ಅಧಿಕಾರಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅಕ್ರಮವಾಗಿ ಮರಗಳನ್ನು ಕಡಿದಿರುವವರು ಹಾಗೂ ಕಡಿಯಲು ಕಾರಣರಾದವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ವಹಿಸದೇ ಮೌನಕ್ಕೆ ಶರಣಾಗಿದ್ದಾರೆಂದು ಆರೋಪಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ| ಕೆ.ಪಿ.ಅಂಶುಮಂತ್‌ ಮಾತನಾಡಿ, ಹಾಡಹಗಲೇ ಮರಗಳ್ಳತನ ಆಗಿದ್ದರೂ ನಗರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈ ಮೂಲಕ ನಗರಸಭೆ ಆಯುಕ್ತರು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಲ್ಲಿನ ಶಾಸಕರು ರಕ್ಷಕರಾಗದೇ ಶೋಷಕರಾಗಿದ್ದಾರೆ. ಹೀಗಾಗಿ ಸರ್ಕಾರಿ ಆಸ್ತಿ ಲೂಟಿಯಾಗುತ್ತಿದೆ. ಈ ಪ್ರಕರಣದ ತಪ್ಪಿತಸ್ಥರಿಗೆ ಕಾನೂನು ಕ್ರಮವಾಗದಿದ್ದರೆ ನಿರಂತರ ಹೋರಾಟ ನಡೆಸುವುದಾಗಿ ತಿಳಿಸಿದರು.

ನಗರದ ಹೃದಯ ಭಾಗದಲ್ಲಿರುವ ಫಿಲ್ಟರ್‌ಬೆಡ್‌ ಆವರಣದಲ್ಲಿ ನೂರಾರು ಮರಗಳಿದ್ದು, ಈ ಮರಗಳು ನಗರದ ಜನರಿಗೆ ಶುದ್ಧ ಗಾಳಿ ನೀಡುವುದರೊಂದಿಗೆ ಹಸಿರಿನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದವು. ಮರಗಳನ್ನು ಕಡಿಯುವಾಗ ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಆದರೆ ಅನುಮತಿ ಇಲ್ಲದೆ ಮರಗಳನ್ನು ಕಡಿದಿದ್ದು, ಇದು ಅರಣ್ಯ ಇಲಾಖೆ ಗಮನಕ್ಕೆ ಬಂದಿದ್ದರೂ ಯಾವುದೇ ದೂರು ದಾಖಲಾಗಿಲ್ಲ. ಈ ಸಂಬಂಧ ಡಿಎಫ್‌ಒ ಸ್ಥಳಕ್ಕಾಗಮಿಸಬೇಕು ಎಂದು ಪಟ್ಟುಹಿಡಿದರು.

ಕೆಪಿಸಿಸಿ ವಕ್ತಾರ ಎಚ್‌.ಎಚ್‌. ದೇವರಾಜ್‌ ಮಾತನಾಡಿ, ಒಬ್ಬ ರೈತ ಮರದ ಕೊಂಬೆಯೊಂದನ್ನು ಕಡಿದರೆ ಅವರನ್ನು ಜೈಲಿಗೆ ಹಾಕಿಸುವ ಪರಿಸರವಾದಿಗಳು ಸದ್ಯ ನಾಪತ್ತೆಯಾಗಿದ್ದಾರೆ. 60-70 ಮರಗಳನ್ನು ಅಕ್ರಮವಾಗಿ ಕಡಿದಿದ್ದು, ನಕಲಿ ಪರಿಸರವಾದಿಗಳು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಲ್ಲಿನ ನಗರಸಭೆ ಆಯುಕ್ತರು ಕಾನೂನು ಕೈಗೆತ್ತಿಕೊಂಡು ಯಾವ ಇಲಾಖೆಯ ಅನುಮತಿಯನ್ನೂ ಪಡೆ ಯದೆ ಮರಗಳನ್ನು ಕಡಿಸಿದ್ದಾರೆ. ಕೂಡಲೇ ನಗರಸಭೆ ಪೌರಾಯುಕ್ತ, ಅಧ್ಯಕ್ಷರು ಹಾಗೂ ಮರ ಕಡಿದವರ ವಿರುದ್ಧ ಅರಣ್ಯ ಇಲಾಖೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಮಹಿಳಾ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ, ನಗರವನ್ನು ಹಸಿರು, ಸುಂದರ ಮಾಡುತ್ತೇವೆ ಎಂದು ಹೇಳುವ ನಗರಸಭೆಯೇ ಮರಗಳನ್ನು ಕಡಿದಿದೆ. ನೀವು ಮಾಡಿದ್ದೇ ಕಾನೂನು ಆಡಿದ್ದೇ ಆಟವಾ ಎಂದು ಟೀಕಿಸಿ, ಸಿ.ಟಿ.ರವಿ ಹಾಗೂ ರಾಜ್ಯ ಸರ್ಕಾರ ಸರ್ವಾಧಿಕಾರಿ ಆಡಳಿತ ನೀಡುತ್ತಿದ್ದು, ಇವರ ಆಳ್ವಿಕೆಯಲ್ಲಿ ಪ್ರಭಾವಿಗಳಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನು ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎ.ಎನ್‌. ಮಹೇಶ್‌, ಎಂ.ಸಿ. ಶಿವಾನಂದಸ್ವಾಮಿ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಂ.ಎಲ್‌. ಮೂರ್ತಿ, ಮಂಜೇಗೌಡ, ರಸೂಲ್‌ ಖಾನ್‌, ನಗರಸಭೆ ಕಾಂಗ್ರೆಸ್‌ ಸದಸ್ಯರು ಇದ್ದರು.

ಟಾಪ್ ನ್ಯೂಸ್

15-

Kundapura: ಕಾರುಗಳ ಢಿಕ್ಕಿ; ಚಾಲಕನಿಗೆ ಗಾಯ

Madhu Bangarappa ಬಿಜೆಪಿಯವರು ಕಲಾಂ ಹೇರ್‌ಕಟ್‌ ಬಗ್ಗೆ ಮಾತನಾಡುವರೇ?

Madhu Bangarappa ಬಿಜೆಪಿಯವರು ಕಲಾಂ ಹೇರ್‌ಕಟ್‌ ಬಗ್ಗೆ ಮಾತನಾಡುವರೇ?

14

Bantwala: ಪದ್ಮನಾಭ ಸಾಮಂತ್‌ ಸಾವಿನ ಪ್ರಕರಣ; ತನಿಖೆಗೆ ವಿಶೇಷ ತಂಡ ರಚನೆ

1-wqeqwewwqe

Bengaluru ಸಾವರ್ಕರ್ ಮೇಲ್ಸೇತುವೆ ಫಲಕಕ್ಕೆ ಮಸಿ ಬಳಿದ NSUI ಕಾರ್ಯಕರ್ತರ ಬಂಧನ

1-rerre

Shivamogga; ಚಂದ್ರಶೇಖರ ನಿವಾಸದಲ್ಲಿ ಸಿಐಡಿ ತಂಡ ತನಿಖೆ: ಪೆನ್ ಡ್ರೈವ್ ವಶಕ್ಕೆ

12-kaup

Kaup: ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ಮೋರಿಗೆ ಢಿಕ್ಕಿ ಹೊಡೆದು ಪಲ್ಟಿ

1-asdd-asd

Channagiri: ದುಷ್ಕರ್ಮಿಗಳಿಂದ ದಾಳಿಗೊಳಗಾದ ಪೊಲೀಸ್ ಠಾಣೆಗೆ ರಘುಪತಿ ಭಟ್ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Tragedy: ಕೆರೆಗೆ ಈಜಲು ಹೋದ ಬಾಲಕ ನೀರುಪಾಲು… ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Tragedy: ಕೆರೆಗೆ ಈಜಲು ಹೋದ ಬಾಲಕ ನೀರುಪಾಲು… ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

15

Accident: ಬೈಕ್-ಕ್ಯಾಂಟರ್ ಮುಖಾಮುಖಿ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಯುವತಿಯ ನಾಲಿಗೆ ಕಟ್

Snake: ಹಾವು ಕಚ್ಚಿದ್ರು ಮುಳ್ಳು ಚುಚ್ಚಿದೆ ಎಂದು ಮಲಗಿದ್ದ ವ್ಯಕ್ತಿ ಬೆಳಗಾಗುತ್ತಲೇ ಮೃತ್ಯು

Snake: ಹಾವು ಕಚ್ಚಿದ್ರು ಮುಳ್ಳು ಚುಚ್ಚಿದೆ ಎಂದು ಮಲಗಿದ್ದ ವ್ಯಕ್ತಿ ಬೆಳಗಾಗುತ್ತಲೇ ಮೃತ್ಯು

King Cobra: ಅಡುಗೆ ಕೋಣೆಯಲ್ಲಿ ಅವಿತು ಕುಳಿತ ದೈತ್ಯ ಕಾಳಿಂಗ ಸರ್ಪ, ಬೆಚ್ಚಿಬಿದ್ದ ಮನೆ ಮಂದಿ

King Cobra: ಅಡುಗೆ ಕೋಣೆಯಲ್ಲಿ ಅವಿತು ಕುಳಿತ ದೈತ್ಯ ಕಾಳಿಂಗ ಸರ್ಪ, ಬೆಚ್ಚಿಬಿದ್ದ ಮನೆ ಮಂದಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

15-

Kundapura: ಕಾರುಗಳ ಢಿಕ್ಕಿ; ಚಾಲಕನಿಗೆ ಗಾಯ

Madhu Bangarappa ಬಿಜೆಪಿಯವರು ಕಲಾಂ ಹೇರ್‌ಕಟ್‌ ಬಗ್ಗೆ ಮಾತನಾಡುವರೇ?

Madhu Bangarappa ಬಿಜೆಪಿಯವರು ಕಲಾಂ ಹೇರ್‌ಕಟ್‌ ಬಗ್ಗೆ ಮಾತನಾಡುವರೇ?

14

Bantwala: ಪದ್ಮನಾಭ ಸಾಮಂತ್‌ ಸಾವಿನ ಪ್ರಕರಣ; ತನಿಖೆಗೆ ವಿಶೇಷ ತಂಡ ರಚನೆ

1-wqeqwewwqe

Bengaluru ಸಾವರ್ಕರ್ ಮೇಲ್ಸೇತುವೆ ಫಲಕಕ್ಕೆ ಮಸಿ ಬಳಿದ NSUI ಕಾರ್ಯಕರ್ತರ ಬಂಧನ

1-rerre

Shivamogga; ಚಂದ್ರಶೇಖರ ನಿವಾಸದಲ್ಲಿ ಸಿಐಡಿ ತಂಡ ತನಿಖೆ: ಪೆನ್ ಡ್ರೈವ್ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.