ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌-ಜೆಡಿಎಸ್‌ ತಂತ್ರ


Team Udayavani, May 5, 2023, 7:07 AM IST

bommayi bjp

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ-ಸವಣೂರು ಕ್ಷೇತ್ರ ಹಲವು ಕಾರಣಗಳಿಂದ ರಾಜ್ಯದ ಗಮನ ಸೆಳೆದಿದೆ. ಈ ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಬೊಮ್ಮಾಯಿ ಮತ್ತೂಮ್ಮೆ ಕಣಕ್ಕಿಳಿದಿದ್ದು, ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಸರತ್ತು ನಡೆಸುತ್ತಿರುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

ಶಿಗ್ಗಾವಿ ಕ್ಷೇತ್ರಕ್ಕೆ ಇಬ್ಬರು ಸಿಎಂಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. ಈ ಕ್ಷೇತ್ರದಿಂದ ಎಸ್‌.ನಿಜಲಿಂಗಪ್ಪ ಅವಿರೋಧ ವಾಗಿ ಆಯ್ಕೆಯಾಗಿ ಸಿಎಂ ಆಗಿದ್ದರು. ಈಗ ಈ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದಾರೆ.

ಬೊಮ್ಮಾಯಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಈ ಸಲ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಜನರ ಮುಂದಿಟ್ಟು ಮತಯಾಚನೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ ತಮ್ಮ ಪ್ರಭಾವದಿಂದಲೇ ಸಿಎಂ ಹುದ್ದೆ ಅಲಂಕರಿಸಿರುವ ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್‌ ಈ ಬಾರಿ ಹೊಸಮುಖವಾಗಿ ಯಾಸೀರ್‌ಖಾನ್‌ ಪಠಾಣ ಕಣಕ್ಕಿಳಿಸಿದ್ದು, ಕಾಂಗ್ರೆಸ್‌ನ ತಂತ್ರಗಾರಿಕೆ ಫಲ ಕೊಡುವುದೇ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿದೆ. ಈ ನಡುವೆ ಯಾಸೀರ್‌ಖಾನ್‌ ಪಠಾಣಗೆ ಕಾಂಗ್ರೆಸ್‌ ಹೈಕಮಾಂಡ್‌ ಮಣೆ ಹಾಕಿದ್ದರಿಂದ ಕ್ಷೇತ್ರ ದಲ್ಲಿ ತನ್ನದೇ ಆದ ಪ್ರಬಲ ಮತ ಬ್ಯಾಂಕ್‌ ಹೊಂದಿ ರುವ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಮುನಿಸಿ ಕೊಂಡಿದ್ದು, ಅವರ ನಿಗೂಢ ನಡೆ ತಲೆನೋವಾಗಿದೆ.

ಕ್ಷೇತ್ರದಲ್ಲಿ ಪಂಚಮಸಾಲಿ, ಮುಸ್ಲಿಂ ಸಮುದಾಯ ಪ್ರಾಬಲ್ಯ ಹೊಂದಿದ್ದು, ಚುನಾವಣೆಯಲ್ಲಿ ನಿರ್ಣಾ ಯಕ ಪಾತ್ರ ವಹಿಸಲಿವೆ. ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಪಂಚಮಸಾಲಿ ಸಮು ದಾಯದ ಶಶಿಧರ ಯಲಿಗಾರ ಎಷ್ಟು ಮತಗಳನ್ನು ಸೆಳೆಯುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.

ಇನ್ನೂ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿಕೊಂಡು ಮೊದಲ ಬಾರಿ ಚುನಾವಣೆಗೆ ಧುಮುಕಿರುವ ರಿಯಲ್‌ ಎಸ್ಟೇಟ್‌ ಉದ್ಯಮಿ ಯಾಸೀರ್‌ಖಾನ್‌ ಪಠಾಣ ಕ್ಷೇತ್ರದ ಜನರಿಗೆ ಹೊಸಮುಖವಾಗಿದ್ದು, ರಾಜಕಾರಣದಲ್ಲಿ ಅಷ್ಟು ಪಳಗಿಲ್ಲ. ಅಲ್ಪಸಂಖ್ಯಾಕ‌ ಮತಗಳನ್ನೇ ನೆಚ್ಚಿಕೊಂಡಿರುವ ಯಾಸೀರ್‌ಖಾನ್‌ ಪಠಾಣಗೆ ತಮ್ಮದೇ ಸಮುದಾಯದ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಮುನಿಸಿ ಕೊಂಡಿರುವುದು ಬಹಳ ಆತಂಕ ಉಂಟು ಮಾಡಿದೆ.

ಯಲಿಗಾರ ಸ್ಪರ್ಧೆಯಿಂದ ಸಂಚಲನ: ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಲಿಂಗಾಯತ ಸಮುದಾಯದ ಶಶಿಧರ ಯಲಿಗಾರ ಜೆಡಿಎಸ್‌ನಿಂದ ಕಣಕ್ಕಿಳಿ ದಿದ್ದಾರೆ. ರಾಜಕೀಯ ಅನುಭವ ಇಲ್ಲದಿದ್ದರೂ ಸಮಾಜ ಸೇವಾ ಕಾರ್ಯ ಗಳಿಂದ ಗುರುತಿಸಿ ಕೊಂಡಿರುವ ಯಲಿಗಾರ ಸಿಎಂ ಬೊಮ್ಮಾಯಿ ಅವರನ್ನು ಎದುರಿಸಬೇಕಿದೆ. ಈ ಇಬ್ಬರು ಲಿಂಗಾಯತ ಸಮುದಾಯದ ಅಭ್ಯರ್ಥಿ ಗಳಾಗಿದ್ದು, ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಯಲಿಗಾರ, ಎಷ್ಟರ ಮಟ್ಟಿಗೆ ಪೈಪೋಟಿ ನೀಡುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

~ ವೀರೇಶ ಮಡ್ಲೂರ

ಟಾಪ್ ನ್ಯೂಸ್

1-wwewq

Video call;ಪಂಜಾಬ್ ಸಚಿವ ಯುವತಿಗೆ ಖಾಸಗಿ ಅಂಗ ತೋರಿದ ವಿಡಿಯೋ ವೈರಲ್!

HDK (3)

Prajwal Revanna ಬರುತ್ತಿರುವುದು ಸಮಾಧಾನ ತಂದಿದೆ:ಎಚ್ ಡಿಕೆ ಹೇಳಿದ್ದೇನು?

Rajiv-Kumar

Jammu and Kashmir; 35 ವರ್ಷದಲ್ಲೇ ಗರಿಷ್ಠ ಮತದಾನ: ಶೀಘ್ರ ವಿಧಾನಸಭೆಗೆ?

1-wqeewqe

Maharashtra;ಎಐಎಂಐಎಂ ನಾಯಕನ ಮೇಲೆ ಗುಂಡಿನ ದಾಳಿ: ಉದ್ವಿಗ್ನತೆ

1-asdsadsad

Hubballi; ರೈಲ್ವೆ ಮೇಲ್ಸೇತುವೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ

1-aaaaaaa

Insults ; ಮತ್ತೆ ಆರ್ ಸಿಬಿ, ಕೊಹ್ಲಿಗೆ ಟಾಂಗ್ ನೀಡಿ ಆಕ್ರೋಶಕ್ಕೆ ಗುರಿಯಾದ ರಾಯುಡು

ಔಷಧೀಯ ಸಂಶೋಧನಾ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ: ಜಗದೀಪ್ ಧನಕರ್

ಔಷಧೀಯ ಸಂಶೋಧನಾ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ: ಜಗದೀಪ್ ಧನಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-wwewq

Video call;ಪಂಜಾಬ್ ಸಚಿವ ಯುವತಿಗೆ ಖಾಸಗಿ ಅಂಗ ತೋರಿದ ವಿಡಿಯೋ ವೈರಲ್!

1-aasasa

Bidar: ಬ್ರೇಕ್ ಫೇಲ್ ಆಗಿ ಆಲದ ಮರಕ್ಕೆ‌ ಢಿಕ್ಕಿಯಾದ ಸಾರಿಗೆ ಬಸ್

HDK (3)

Prajwal Revanna ಬರುತ್ತಿರುವುದು ಸಮಾಧಾನ ತಂದಿದೆ:ಎಚ್ ಡಿಕೆ ಹೇಳಿದ್ದೇನು?

Rajiv-Kumar

Jammu and Kashmir; 35 ವರ್ಷದಲ್ಲೇ ಗರಿಷ್ಠ ಮತದಾನ: ಶೀಘ್ರ ವಿಧಾನಸಭೆಗೆ?

1-wqeewqe

Maharashtra;ಎಐಎಂಐಎಂ ನಾಯಕನ ಮೇಲೆ ಗುಂಡಿನ ದಾಳಿ: ಉದ್ವಿಗ್ನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.