Agri: ಕೃಷಿಗೆ ಸೌರವಿದ್ಯುತ್‌ ಪಂಪ್‌ಸೆಟ್‌ಗಳ ಅಳವಡಿಕೆ: ಜಾರ್ಜ್‌


Team Udayavani, Oct 19, 2023, 11:18 PM IST

george

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ದೀರ್ಘಾವಧಿಯ ಸ್ವಾವಲಂಬನೆ ಸಾಧಿಸಲು ಕೃಷಿಗೆ ಸೌರವಿದ್ಯುತ್‌ ಪಂಪ್‌ಸೆಟ್‌ಗಳ ಅಳವಡಿಕೆ ಅಗತ್ಯವಾಗಿದ್ದು, ಇದರಿಂದ ಸರಕಾರಕ್ಕೆ ವಾರ್ಷಿಕ ಅಂದಾಜು ಒಂದು ಲಕ್ಷ ಕೋಟಿ ರೂ. ಆರ್ಥಿಕ ಹೊರೆ ತಗ್ಗಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಸೋಲಾರ್‌ ನೀರಾವರಿ ಪಂಪ್‌ ತಯಾರಕರೊಂದಿಗೆ ನಡೆಸಿದ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಮೊದಲು ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್‌ ಉತ್ಪಾದನೆ ಆಗುತ್ತಿತ್ತು. ಅನಂತರದಲ್ಲಿ ಮಳೆ ಕೈಕೊಟ್ಟ ಪರಿಣಾಮ ದಿಢೀರ್‌ ಬೇಡಿಕೆ ಹೆಚ್ಚಳವಾಯಿತು. ಪರಿಣಾಮ ಈಗ ಕೊರತೆ ಕಾಡುತ್ತಿದೆ. ವಿದ್ಯುತ್‌ ಕ್ಷೇತ್ರದಲ್ಲಿ ದೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕಾದರೆ, ಸೌರವಿದ್ಯುತ್‌ ಪಂಪ್‌ಸೆಟ್‌ಗಳ ಅಳವಡಿಕೆ ಅಧಿಕ ಆಗಬೇಕು. ಇದರಿಂದ ರೈತರು ಮತ್ತು ಸರಕಾರ ಇಬ್ಬರ ಮೇಲಿನ ಹೊರೆಯೂ ತಗ್ಗಲಿದೆ. ಅಷ್ಟೇ ಅಲ್ಲ, ಪರಿಸರಾತ್ಮಕ ಸುಸ್ಥಿರ ಬೆಳವಣಿಗೆಗೂ ಇದು ಪೂರಕವಾಗಲಿದೆ ಎಂದು ಹೇಳಿದರು.

34 ಲಕ್ಷ ಕೃಷಿ ಪಂಪ್‌ಸೆಟ್‌
ಸುಮಾರು 34 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಇವುಗಳನ್ನು ಸೋಲಾರ್‌ ಪಂಪ್‌ಸೆಟ್‌ಗಳಿಗೆ ಪರಿವರ್ತನೆ ಮಾಡಿದರೆ, ಸರಕಾರಕ್ಕೆ ವಾರ್ಷಿಕ ಒಂದು ಲಕ್ಷ ಕೋಟಿ ರೂ. ಮೊತ್ತದಷ್ಟು ಆರ್ಥಿಕ ಹೊರೆ ತಗ್ಗಲಿದೆ. ಜತೆಗೆ ತೈಲ ಆಮದು ಕೂಡ ಗಣನೀಯವಾಗಿ ಇಳಿಕೆಯಾಗಲಿದೆ. ಪ್ರಸ್ತುತ ವಾರ್ಷಿಕ 1.38 ಬಿಲಿಯನ್‌ ಲೀಟರ್‌ ಡೀಸೆಲ್‌ ಬಳಸಲಾಗುತ್ತಿದೆ. ಈ ಎಲ್ಲ ದೃಷ್ಟಿಯಿಂದ ಸೋಲಾರ್‌ ಪಂಪ್‌ಸೆಟ್‌ಗಳನ್ನು ಉತ್ತೇ ಜಿಸುವ ತುರ್ತು ಅಗತ್ಯ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಸ್ತುತ 6,801 ಕೃಷಿ ಸೋಲಾರ್‌ ಪಂಪ್‌ಸೆಟ್‌ಗಳಿವೆ. ಇದರಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕೆಆರ್‌ಇಡಿಎಲ್‌) 3,710, ಸಣ್ಣ ನೀರಾವರಿ ಇಲಾಖೆಯ 2,075, ಕೃಷಿ ಇಲಾಖೆಯ 201, ಬೆಸ್ಕಾಂನ 310, ಕೆಆರ್‌ಇಡಿಎಲ್‌ ಕೇಂದ್ರದ ಪಿಎಂ- ಕುಸುಮ್‌ ಯೋಜನೆ ಅಡಿ ಅಳವಡಿಸಿರುವ 513 ಪಂಪ್‌ಸೆಟ್‌ಗಳು ಸೇರಿವೆ.

ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆಗೆ ತಗಲುವ ವೆಚ್ಚದಲ್ಲಿ ಹೊಸ ಮತ್ತು ನವಿಕರಿಸಬಹುದಾದ ಇಂಧನ ಸಚಿವಾಲಯದಿಂದ ಶೇ. 30ರಷ್ಟು ಅನುದಾನ ನೀಡಲಿದೆ. ಫ‌ಲಾನುಭವಿಯು ಒಂದು ಲಕ್ಷ ರೂ. (ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಉಚಿತ) ಭರಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ರಾಜ್ಯ ಸರಕಾರ ಭರಿಸುತ್ತದೆ. 2014-15ರಲ್ಲಿ ಸೋಲಾರ್‌ ಪಂಪ್‌ಸೆಟ್‌ ಯೋಜನೆ ಪರಿಚಯಿಸ ಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

ಟಾಪ್ ನ್ಯೂಸ್

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

Supreme Court

BJP ಅರ್ಜಿ ತಿರಸ್ಕರಿಸಿದ ಸುಪ್ರೀಂ; ಪ್ರತಿಸ್ಪರ್ಧಿ ಎಂದರೆ ವೈರಿ ಅಲ್ಲ…

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

doctor 2

Vijayapura;ಭ್ರೂಣಲಿಂಗ ಪತ್ತೆ: ವೈದ್ಯರು ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್

Rave Party: ನಟಿ ಹೇಮಾ ಸಹಿತ 8 ಮಂದಿ ವಿಚಾರಣೆಗೆ ಗೈರು

Rave Party: ನಟಿ ಹೇಮಾ ಸಹಿತ 8 ಮಂದಿ ವಿಚಾರಣೆಗೆ ಗೈರು

ಅಪಘಾತದಲ್ಲಿ ಒಂದೇ ದಿನ 51 ಸಾವು; ರಸ್ತೆ ನಿಯಮ ಪಾಲನೆಗೆ ಎಚ್‌ಡಿಕೆ ಮನವಿ

ಅಪಘಾತದಲ್ಲಿ ಒಂದೇ ದಿನ 51 ಸಾವು; ರಸ್ತೆ ನಿಯಮ ಪಾಲನೆಗೆ ಎಚ್‌ಡಿಕೆ ಮನವಿ

ಚುನಾವಣ ಆಯೋಗದ ಛಾಯಾಚಿತ್ರ ಸ್ಪರ್ಧೆ: ಅಸ್ಟ್ರೋ ಮೋಹನ್‌ಗೆ ಬಹುಮಾನ

ಚುನಾವಣ ಆಯೋಗದ ಛಾಯಾಚಿತ್ರ ಸ್ಪರ್ಧೆ: ಅಸ್ಟ್ರೋ ಮೋಹನ್‌ಗೆ ಬಹುಮಾನ

CM  Siddaramaiah ಸೋಲು ಖಚಿತವಾಗುತ್ತಿದ್ದಂತೆ ಮೋದಿ ವಿಚಿತ್ರ ಮಾತು

CM Siddaramaiah ಸೋಲು ಖಚಿತವಾಗುತ್ತಿದ್ದಂತೆ ಮೋದಿ ವಿಚಿತ್ರ ಮಾತು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-asasas

Kejriwal ಅವಕಾಶವಾದಿ, ಮಣಿಶಂಕರ್‌ ಅಯ್ಯರ್‌ ಬಾಯಿಬಡುಕ: ವಾದ್ರಾ

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

Supreme Court

BJP ಅರ್ಜಿ ತಿರಸ್ಕರಿಸಿದ ಸುಪ್ರೀಂ; ಪ್ರತಿಸ್ಪರ್ಧಿ ಎಂದರೆ ವೈರಿ ಅಲ್ಲ…

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.