ಹುಡುಗ ಹೇಗಿರಬೇಕು…


Team Udayavani, Jan 20, 2017, 3:45 AM IST

Cuppls-00.jpg

ಹದಿನೈದು-ಇಪ್ಪತ್ತು ವರ್ಷದ ಹಿಂದೆ ನೀನು ಮದುವೆಯಾಗೋ ಹುಡುಗ ಹೇಗಿರಬೇಕೆಂದು ಕೇಳಿದ್ದರೆ, ಒಳ್ಳೆಯವನಾಗಿರಬೇಕು, ಒಳ್ಳೆ ಕೆಲಸದಲ್ಲಿರಬೇಕು, ಕುಡಿಯಬಾರದು, ಸಿಗರೇಟ್‌ ಸೇದಬಾರದು, ನನ್ನನ್ನು ಚೆನ್ನಾಗಿ ನೋಡ್ಕೊàಬೇಕು, ತುಂಬ ಪ್ರೀತಿಸಬೇಕು ಅಂತಿದ್ದರೇನೋ.

ಹಾಗೆ ನೋಡಿದರೆ ನಾವು ಹುಡುಗಿಯರು, ವಿ ಹ್ಯಾವ್‌ ಕಮ್‌ ಎ ಲಾಂಗ್‌ ವೇ. ನಮ್ಮ ಅಜ್ಜಿಯ ಕಾಲದಲ್ಲಿ ಅವರಿಗೆ ಹುಡುಗ ಹೇಗಿರಬೇಕು ಎಂದು ಕೇಳುವ ಪರಿಪಾಠವೇ ಇರಲಿಲ್ಲ. 13, 14ಕ್ಕೆಲ್ಲ  ಮದುವೆಯಾಗಿ 15, 16ಕ್ಕೆ  ಮಗು ಕೈಯ್ಯಲ್ಲಿರೋದು. ಆ ಕಾಲದ ಬಹಳಷ್ಟು ಜನ ಹೆಂಗಸರು ತಮ್ಮ ಗಂಡನನ್ನು ನೋಡಿದ್ದು ಮದುವೆ ಮನೆಯಲ್ಲೇ. ಕಾಲ ಬದಲಾಯಿತು. ಸಮಾಜವನ್ನ ಎದುರಿಸಿ ಬಹಳಷ್ಟು ಜನ ಪ್ರೀತಿಸಿ ಮದುವೆಯಾಗುವ ಧೈರ್ಯ ಮಾಡಿದರು. ಕೆಲವರು ಗೆದ್ದರು, ಕೆಲವರ ಬದುಕು ದಿಕ್ಕಾಪಾಲಾಯಿತು. ಆದರೂ ಮೆಜಾರಿಟಿ ತಂದೆತಾಯಿ ತೋರಿಸಿದವರನ್ನೇ ಮದುವೆಯಾದರು. ಅಷ್ಟರಲ್ಲಿ ಹುಡುಗಿಗೆ ಹುಡುಗ ಇಷ್ಟ ಆದನೋ ಇಲ್ಲವೋ ಎಂದು ಕೇಳುವಷ್ಟಾದರೂ ಬದಲಾಗಿತ್ತು.ಈಗ ಸಂಬಂಧಗಳ definitions change ಆಗಿದೆ. ಮದುವೆ ಮನೆಯಲ್ಲಿ ಹುಡುಗನನ್ನು ನೋಡಿದೆ ಅನ್ನೋ ಕಾಲದಿಂದ I am dating a guy its just been six months lets see where does it go  ಅನ್ನುವವರೆಗೆ ಬಂದಿದ್ದೇವೆ.

ಎಲ್ಲರೂ ಹಾಗಿಲ್ಲದಿರಬಹುದು. ಆದರೂ ಬಹಳಷ್ಟು ಬದಲಾಗಿದ್ದೇವೆ. ಒಂದು ಹದಿನೈದು- ಇಪ್ಪತ್ತು ವರ್ಷದ ಹಿಂದೆ ನೀನು ಮದುವೆಯಾಗೋ ಹುಡುಗ ಹೇಗಿರಬೇಕೆಂದು ಕೇಳಿದ್ದರೆ, ಒಳ್ಳೆಯವನಾಗಿರಬೇಕು, ಒಳ್ಳೆ ಕೆಲಸದಲ್ಲಿರಬೇಕು, ಕುಡಿಯಬಾರದು, ಸಿಗರೇಟ್‌ ಸೇದಬಾರದು, ನನ್ನ ಚೆನ್ನಾಗಿ ನೋಡ್ಕೊàಬೇಕು. ತುಂಬ ಪ್ರೀತಿಸಬೇಕು ಅಂತಿದ್ದರೇನೋ.ನಾನು ಡಿಗ್ರಿ ಮಾಡುತ್ತಿದ್ದಾಗ ನಮ್ಮ ಸೈಕಾಲಜಿ ಲೆಕ್ಚರರ್‌ ಸಂಬಂಧ, ಮದುವೆಗಳ ಬಗ್ಗೆ ಮಾತನಾಡುತ್ತ ಹುಡುಗಿ ಮದುವೆಯಾಗುವಾಗ ಸಾಮಾಜಿಕವಾಗಿ, ಆರ್ಥಿಕವಾಗಿ, ಬುದ್ಧಿವಂತಿಕೆಯಲ್ಲಿ ತನಗಿಂತ ಮೇಲಿನ ಸ್ತರದಲ್ಲಿರುವವರನ್ನು ಮದುವೆಯಾದರೆ ಅಂಥ ಮದುವೆ ಅಂಥವರ ಜೊತೆ ಜೀವನ ಸುಸೂತ್ರವಾಗಿರುತ್ತೆ ಅಂತ ಸ್ಟಡೀಸ್‌ ಹೇಳುತ್ತೆ ಅಂದಿದ್ದರು. ಇನ್ನೂ ಮದುವೆಯಾಗದ ಒಂದಷ್ಟು ಸ್ನೇಹಿತೆಯರನ್ನು ನಿಮ್ಮ ಹುಡುಗ ಹೇಗಿರಬೇಕು ಅಂತ ಕೇಳಿದರೆ ನಿಜಕ್ಕೂ ಆಶ್ಚರ್ಯಕರವಾದ ಉತ್ತರಗಳು ಸಿಗುತ್ತವೆ. 

ಒಂದಷ್ಟು ಹುಡುಗಿಯರು ಅವನಿಗೆ ಫ್ಯಾಷನ್‌ ಸೆನ್ಸ್‌ ಇಲ್ಲದಿದ್ದರೆ ವೇಸ್ಟು. ನಾನ್‌ ಪೇಟ್ರಿಯಾರ್ಕಲ್‌ ಸೊಸೈಟಿಯಲ್ಲಿ ನಂಬಿಕೆಯಿರಬೇಕು, ನನಗೆ “ಹೀಗೇ ಇರು’ ಅಂತ ಆರ್ಡರ್‌ ಮಾಡೋಕೆ ಬಂದ್ರೆ ಅವತ್ತೇ ಬ್ರೇಕಪ್‌. ಅಲ್ಲದೆ ತುಂಬ ಮುಖ್ಯವಾದದ್ದು he should listen to meeeeeee…  ಎಂದು ರಾಗವಾಗಿ ಬಿಯಾನ್ಸನ If I were a boy’ ಹಾಡಲು ಶುರು ಮಾಡಿದಳು ಒಬ್ಬಳು. ಇದಲ್ಲದೆ ಅವನಿಗೆ ಯಾವುದಾದರೂ ಕಲೆಯಲ್ಲಿ ಆಸಕ್ತಿ ಇರಬೇಕು, ನನ್ನ ಆಸಕ್ತಿಗಳನ್ನು ಪ್ರೋತ್ಸಾಹಿಸಬೇಕು. ಪೈಂಟಿಂಗು, ಕುಕ್ಕಿಂಗ್‌, ಆ್ಯಕ್ಟಿಂಗ್‌ ಅಥವಾ ಯಾವುದಾದರೂ ಒಂದು ಇನ್ಸುಟ್ರಾಮೆಂಟ್‌ ನುಡಿಸಲು ಬರಬೇಕು ಅಂದಳು ಮುದ್ದು ಮುಖದ ಚೆಲುವೆ. ಶ್ರೀಮಂತನಲ್ಲದಿದ್ದರೂ ಸುಖವಾಗಿ ಇರುವುದಕ್ಕೆ ಸಾಕಾಗುವಷ್ಟಾದರೂ ದುಡಿಯಬೇಕೆಂದು ಕೆಲವರು ಹೇಳಿದರೆ, “ಇಲ್ಲಪ್ಪತುಂಬಾ ಶ್ರೀಮಂತನೇ ಆಗಿರಬೇಕು’ ಎಂದರು ಒಂದಷ್ಟು ಜನ. ಮತ್ತೂಬ್ಬಳಂತೂ “ನನಗೆ ಕ್ಯಾಲಿಫೋರ್ನಿಯಾದ ಹುಡುಗನೇ ಬೇಕು’ ಎಂದಳು.

ನನಗನ್ನಿಸುವುದು ಇಷ್ಟು , ನನ್ನ ಹತ್ರ ಒಂದು ಹಳೇ ಕಂಪ್ಯೂಟರ್‌ ಇತ್ತು. ಅದರಲ್ಲಿ ಒಂದು ಸ್ಲೆ„ಡ್‌ ಶೋ. ಒಬ್ಬಳು ಚಂದದ ಹುಡುಗಿ ಪಫೆìಕ್ಟ್ ಮ್ಯಾನ್‌ಗೆ ಕಾಯ್ತಾ ಒಂದು ಪಾರ್ಕಿನ ಬೆಂಚಿನ ಮೇಲೆ ಕೂತಿರ್ತಾಳೆ. ಮಧ್ಯದಲ್ಲಿ ಹುಡುಗ ಹೇಗಿರಬೇಕು ಎಂದು ಹೇಳುವ ಒಂದಷ್ಟು ಸ್ಲೆ„ಡ್‌. ಕೊನೆ ಸ್ಲೆ„ಡಲ್ಲಿ ಹಾಗೇ ಅವಳ ಸ್ಕೆಲಿಟನ್‌ ಇರುತ್ತೆ. ಏಕೆಂದರೆ, ನಾವಂದುಕೊಂಡ ಎಲ್ಲಾ ಗುಣಗಳೂ ಇರುವ ಹುಡುಗ ಸಿಗುವುದು ಕಷ್ಟ. ಹುಡುಗರೂ ಮನುಷ್ಯರೇ ತಾನೇ. ನಮಗಿಷ್ಟವಾಗುವವರಲ್ಲಿ ನೀವಂದುಕೊಂಡ ಒಂದೆರೆಡು ಕ್ವಾಲಿಟಿಗಳು ಇಲ್ಲದಿದ್ದರೂ, ಅದನ್ನೂ ಮೀರಿಸುವಷ್ಟು ಪ್ರೀತಿ ಇದ್ದರೆ ಸಾಕೇನೋ.

ಒಟ್ಟಿನಲ್ಲಿ ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ದುಃಖ ಹಗುರವೆನುತಿರೆ
ಪ್ರೇಮವೆನಲು ಹಾಸ್ಯವೇ
ಎಂದು ಕೆ. ಎಸ್‌. ನರಸಿಂಹಸ್ವಾಮಿ ಹಾಡಿದಷ್ಟು ಸುಲಭವಾಗಿಲ್ಲ ಈಗ. ಈಗಿನ ಹುಡುಗಿ ಬುದ್ಧಿವಂತೆಯಾಗಿದ್ದಾಳೆ. ಸ್ವಾವಲಂಬಿಯಾಗಿದ್ದಾಳೆ. ಹೇಗೋ ಯಾರನ್ನೋ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವವಳಲ್ಲ. ಅವಳ ಲಿಸ್ಟು ದೊಡ್ಡದಿದೆ. ಆದರೆ, ಅವಳು ಹುಡುಕುವುದು ನಿಜವಾದ ಪ್ರೀತಿಗೆ. ಸುಲಭವಲ್ಲದ, ಒಬ್ಬರನ್ನೊಬ್ಬರು ಬಿಟ್ಟಿರಲಾರದ ಆವರಿಸಿಕೊಳ್ಳುವ ಪ್ರೀತಿಗೆ. ಹುಡುಗ ನಿಜವಾಗಿ ಪ್ರೀತಿಸಿ ಅವಳನ್ನು ಅರ್ಥಮಾಡಿಕೊಂಡರೆ ಆ ಲಿಸ್ಟಲ್ಲಿ  ಬೇಡದ್ದನ್ನು ಅಳಿಸಿಹಾಕುತ್ತಾಳೆ.

– ಸಿರಿ

ಟಾಪ್ ನ್ಯೂಸ್

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.