ಅತ್ತೆ, ಮಾವನ ಕೊಂದ್ರೆ ಹೆಂಡತಿ ಸಿಗ್ತಾಳೆ ಅಂದ್ಕೊಂಡೆ


Team Udayavani, Mar 5, 2017, 11:35 AM IST

SENTHIL.jpg

ಬೆಂಗಳೂರು: ಅತ್ತೆ, ಮಾವನನ್ನು ಕೊಲೆ ಮಾಡಿದ್ರೆ, ಹೆಂಡತಿ ನನ್ನೊಂದಿಗೆ ಬರ್ತಾಳೆ ಅಂತಾ ಕೊಲೆ ಮಾಡಿದೆ. ಕೋಣನಕುಂಟೆಯ ಅನ್ನಪೂಣೇಶ್ವರಿ ಲೇಔಟ್‌ನಲ್ಲಿ ಶುಕ್ರವಾರ ಅತ್ತೆ ಮುರುಗಮ್ಮ (55) ಮಾವ ಕುಮಾರ್‌ (60) ಅವರನ್ನು ಹತ್ಯೆಗೈದು ಹೆಂಡತಿ ಮತ್ತು ನೆರೆ ಮನೆಯ ನಿವಾಸಿಗೆ ಚಾಕುವಿನಿಂದ ಇರಿದು ಪರಾರಿಯಾಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ಸೆಂಥಿಲ್‌ ಕುಮಾರ್‌ ಪೊಲೀಸರ ವಿಚಾರಣೆಯಲ್ಲಿ  ಈ ರೀತಿಯ ಹೇಳಿಕೆ ನೀಡಿದ್ದಾನೆ. 

ಕಳೆದ ಐದಾರು ತಿಂಗಳಿಂದ ಪತ್ನಿಯಿಂದ ದೂರ ಇದ್ದೇನೆ. ಸಾಕಷ್ಟು ಬಾರಿ ಮನೆಗೆ ಬಂದು ಪತ್ನಿ ಮತ್ತು ಮಗುವನ್ನು ಕಳುಹಿಸುಂತೆ ಮಾವ ಕುಮಾರ್‌ ಮತ್ತು ಅತ್ತೆ ಮುರುಗುಮ್ಮನನ್ನು ಕೋರಿಕೊಂಡಿದ್ದೆ. ಆದರೆ ಅವರು ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಲಿಲ್ಲ. ಶುಕ್ರವಾರ ಕೂಡ ಪತ್ನಿಯನ್ನು ನನ್ನೊಂದಿಗೆ ಕಳುಹಿಸುವಂತೆ ಪರಿಪರಿಯಾಗಿ ಮನವಿ ಮಾಡಿದೆ.

ಇದಕ್ಕೆ ಅತ್ತೆ-ಮಾವ ಇಬ್ಬರು ಜಗಳ ತೆಗೆದರು. ಇವರಿಬ್ಬರುನ್ನು ಹತ್ಯೆ ಮಾಡಿದರೆ, ಪತ್ನಿ ನನ್ನೊಂದಿಗೆ ಬರುತ್ತಾಳೆ ಎಂದು ಕೊಲೆ ಮಾಡಲು ಸಂಚು ರೂಪಿಸಿದೆ. ಹೀಗಾಗಿ  ರಾತ್ರಿ 8 ಗಂಟೆ ಸುಮಾರಿಗೆ ಮದ್ಯ ಸೇವಿಸಿ ಬಂದು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇಬ್ಬರನ್ನು ಕೊಲೆ ಮಾಡಿದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. 

ರಕ್ಷಣೆಗೆ ಧಾವಿಸಿದ್ದ ಪತ್ನಿ ಮತ್ತು ನೆರೆ ಮನೆಯ ನಿವಾಸಿ ಮಂಜುನಾಥ್‌ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು. ಮಗಳನ್ನು ವಾಪಸ್‌ ಕಳುಹಿಸುವಂತೆ ಕೇಳಿಕೊಂಡಿದ್ದ ಸೆಂಥಿಲ್‌ಗೆ, ತಮ್ಮ ಮನೆಯಲ್ಲಿ ಬಂದು ಇರುವಂತೆ ಅತ್ತೆ-ಮಾವ ತಿಳಿಸಿದ್ದರು.

ಹೀಗಾಗಿ ಆರೋಪಿ ಸೆಂಥಿಲ್‌ನನ್ನು ಕಳೆದ ಒಂದೂವರೆ ತಿಂಗಳಿಂದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಮೀನು ಮಾರಾಟ ಅಂಗಡಿಯೊಂದರಲ್ಲಿ ಮಾವ ಕುಮಾರ್‌ ಅವರೆ ಕೆಲಸಕ್ಕೆ ಸೇರಿಸಿದ್ದರು ಎಂದು ಪೊಲೀಸರು ವಿವರಿಸಿದರು. ಕೃತ್ಯವೆಸಗಿದ ಬಳಿಕ ಸೆಂಥಿಲ್‌ ನೆಲಮಂಗಲದ ಬಳಿ ಇರುವ ಸಂಬಂಧಿಕರೊಬ್ಬರ ಮನೆಗೆ ಹೋಗುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.  ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ಪತ್ನಿ ಸತ್ಯಾವತಿ (30) ಮತ್ತು ನೆರೆ ಮನೆ ನಿವಾಸಿ ಮಂಜುನಾಥ್‌ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಷಕರಿಲ್ಲದ ವೇಳೆ ಕರೆದೊಯ್ದು ವಿವಾಹ
ಬಂಧಿತ ಆರೋಪಿ ಸೆಂಥಿಲ್‌ ಸತ್ಯಾವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಪೋಷಕರ ವಿರೋಧವಿತ್ತು. ಮನೆಯಲ್ಲಿ ಸತ್ಯಾವತಿ ಪೋಷಕರು ಇಲ್ಲದ ವೇಳೆ ಆಕೆಯನ್ನು ಕರೆದುಕೊಂಡು ಹೋಗಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದ. ವಿವಾಹವಾದ ಬಳಿಕ ಸತ್ಯಾವತಿಯನ್ನು ತಮಿಳುನಾಡಿನ ತಿರುಪತ್ತೂರಿಗೆ ಕರೆದೊಯ್ದು ತನ್ನ ಪೋಷಕರೊಂದಿಗೆ ವಾಸವಿದ್ದ.

ಬಟ್ಟೆ ಅಂಡಿಯೊಂದರಲ್ಲಿ ಕೆಲಸಕಿದ್ದ ಸೆಂಥಿಲ್‌ ಮದ್ಯ ವ್ಯಸನಿಯಾಗಿದ್ದ. ಕುಡಿದು ಬಂದು ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಸತ್ಯಾವತಿ ಪೋಷಕರು ಆಕೆಯನ್ನು ಕರೆತಂದು ತಮ್ಮ ಬಳಿ ಇರಿಸಿಕೊಂಡಿದ್ದರು. 

ಟಾಪ್ ನ್ಯೂಸ್

16

Pakistani Actor: ಪಾಕಿಸ್ತಾನದ ದಿಗ್ಗಜ ನಟ ತಲತ್ ಹುಸೇನ್ ನಿಧನ

Modi 2

SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ

15

ಕಪಿಲ್‌ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ

Channagiri riot; 25 accused arrested in four cases

Channagiri riot; ನಾಲ್ಕು ಪ್ರಕರಣಗಳಲ್ಲಿ 25 ಮಂದಿ ಆರೋಪಿಗಳ ಬಂಧನ

14

ʼಮಾರ್ಟಿನ್‌ʼ ಬಳಿಕ ʼಕೆಡಿʼ ಬಗ್ಗೆ ಬಿಗ್‌ ನ್ಯೂಸ್‌ ಕೊಟ್ಟ ಧ್ರುವ: ಈ ವರ್ಷ ರಿಲೀಸ್‌ ಪಕ್ಕಾ

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

AAP;  ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Rave Party: ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್‌

Arrested: 34.82 ಕೋಟಿ ರೂ.ನ ಬಿಟ್‌ಕಾಯಿನ್‌ ಕಳ್ಳತನ; ಆರೋಪಿಯ ಬಂಧನ

Arrested: 34.82 ಕೋಟಿ ರೂ.ನ ಬಿಟ್‌ಕಾಯಿನ್‌ ಕಳ್ಳತನ; ಆರೋಪಿಯ ಬಂಧನ

5

ಕೌಟುಂಬಿಕ ವಿಚಾರಕ್ಕೆ ಐಎಎಸ್‌ಅಧಿಕಾರಿ ಫೋನ್‌ ಕದ್ದಾಲಿಕೆ: ಮಾಜಿ ಐಪಿಎಸ್‌ ವಿರುದ್ಧ ಕೇಸ್‌

Bengaluru: ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ರೋಗಿ ಮೇಲೆ ಹಲ್ಲೆ?

Bengaluru: ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ರೋಗಿ ಮೇಲೆ ಹಲ್ಲೆ?

3

Snakes: ಹುಷಾರ್‌! ಮನೆಗೂ ಬರಬಹುದು ಹಾವುಗಳು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

16

Pakistani Actor: ಪಾಕಿಸ್ತಾನದ ದಿಗ್ಗಜ ನಟ ತಲತ್ ಹುಸೇನ್ ನಿಧನ

Modi 2

SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ

15

ಕಪಿಲ್‌ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ

Channagiri riot; 25 accused arrested in four cases

Channagiri riot; ನಾಲ್ಕು ಪ್ರಕರಣಗಳಲ್ಲಿ 25 ಮಂದಿ ಆರೋಪಿಗಳ ಬಂಧನ

14

ʼಮಾರ್ಟಿನ್‌ʼ ಬಳಿಕ ʼಕೆಡಿʼ ಬಗ್ಗೆ ಬಿಗ್‌ ನ್ಯೂಸ್‌ ಕೊಟ್ಟ ಧ್ರುವ: ಈ ವರ್ಷ ರಿಲೀಸ್‌ ಪಕ್ಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.