ಪುರಸಭೆ ವಿರುದ್ಧ  ಆಶ್ರಯ ಕಾಲೋನಿ ನಿವಾಸಿಗಳ ಆಕ್ರೋಶ


Team Udayavani, Jul 5, 2017, 1:40 PM IST

BIJAP-6.jpg

ಮುದ್ದೇಬಿಹಾಳ: ಇಲ್ಲಿಯ ಆಶ್ರಯ ಕಾಲೋನಿಯಲ್ಲಿ 15 ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬಸ್ಥರ ಮೇಲೆ ಸ್ಥಳೀಯ
ಪುರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳು ಏಕಾಏಕಿ ಜಾಗ ಖಾಲಿ ಮಾಡುವಂತೆ ಒತ್ತಾಯಿಸಿ ದೌರ್ಜನ್ಯ ನಡೆಸಿದ್ದು ಕೂಡಲೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಶ್ರಯ ಕಾಲೋನಿ ನಿವಾಸಿಗರು ಮಂಗಳವಾರ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಯಾವುದೇ ಮುನ್ಸೂಚನೆ ನೀಡದೆ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಆಗಮಿಸಿದ ಅಧ್ಯಕ್ಷ ಬಸನಗೌಡ ಪಾಟೀಲ, ಕೂಡಲೇ ಇಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ಕುಟುಂಬಸ್ಥರು ಜಾಗವನ್ನು ಖಾಲಿ ಮಾಡಿಕೊಂಡು ತಮ್ಮ ಹೆಂಡತಿ ಮಕ್ಕಳೊಂದಿಗೆ ತೆರಳಬೇಕು. ಇಲ್ಲವಾದರೆ ಪೊಲೀಸರನ್ನು ಕರೆಸಿ ಜಾಗವನ್ನು ಖಾಲಿ ಮಾಡಿಸಲಾಗುತ್ತದೆ ಎಂದು ನಿವಾಸಿಗರಿಗೆ ಗದರಿಸಿದರು ಎನ್ನಲಾಗಿದೆ. ಇದಕ್ಕೆ ಸಮಜಾಯಿಸಿ ನೀಡಲು ಹೋದವರಿಗೆ ಪುರಸಭೆ ಸದಸ್ಯ ಮೆಹಬೂಬ ಗೊಳಸಂಗಿ ನಿವಾಸಿಗರನ್ನು ತಳ್ಳಾಡಿ ಗುಂಡಾಗಿರಿಯ ವರ್ತನೆಯನ್ನು ತೋರಿದ್ದಾರೆ. ಇವರ ಗುಂಡಾ ವರ್ತನೆ ಬಗ್ಗೆ ಅಧ್ಯಕ್ಷರಿಗೆ ತಿಳಿಸಲು ಹೋದರೆ ಪುರಸಭೆ ಅಧ್ಯಕ್ಷ ಎಂದರೆ ಗೊಳಸಂಗಿ, ಗೊಳಸಂಗಿ ಎಂದರೆ ಪುರಸಭೆ ಅಧ್ಯಕ್ಷ, ಸುಮ್ಮನೆ ನಮ್ಮ ಜೊತೆಗೆ ವಾದ ಮಾಡದೇ ಜಾಗವನ್ನು ಖಾಲಿ ಮಾಡಿ ಇಲ್ಲವಾದರೆ
ಒಳಗೆ ಹಾಕಿಸುತ್ತೇನೆ ಎಂಬ ಬೇಜವಾಬ್ದಾರಿತನ ಉತ್ತರವನ್ನು ನೀಡಿದ್ದಾರೆ ಎಂದು ನಿವಾಸಿಗರು ಮನವಿಯಲ್ಲಿ ತಿಳಿಸಿದ್ದಾರೆ.

15 ವರ್ಷಗಳ ಹಿಂದೆ ಶಾಸಕ ಸಿ.ಎಸ್‌. ನಾಡಗೌಡ ಮೌಖೀಕವಾಗಿ ಹೇಳಿದ ಪ್ರಕಾರ ಅಲ್ಲಲ್ಲಿ ಖಾಲಿಯಿರುವ ಜಾಗದಲ್ಲಿ ಯಾರಿಗೂ ತೊಂದರೆಯಾಗದಂತೆ ಗುಡಿಸಲುಗಳನ್ನು ಹಾಕಿಕೊಂಡು ಜೀವನ ನಡೆಸಲಾಗುತ್ತಿದೆ. ಈಗ ಪುರಸಭೆಯವರು ಏಕಾಏಕಿ ಜಾಗ ಖಾಲಿ ಮಾಡಿ ಎಂದರೆ ನಾವೆಲ್ಲರೂ ಎಲ್ಲಿಗೆ ಹೋಗಬೇಕೆಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ನಿರಾಶ್ರಿತರು ತಹಶೀಲ್ದಾರ್‌ ಅವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು. ಪ್ರತಿಭಟನೆಯಲ್ಲಿ ಆಶ್ರಯ ಕಾಲೋನಿ ನಿವಾಸಿಗರಾದ ಆರ್‌.ಎ. ಬಿರಾದಾರ, ದಾವಲಸಾಬ ಶೇಖ, ಪ್ರಭು ಬಡಿಗೇರ, ಬಾಬು ವಾಲೀಕಾರ, ಕಂಬಪ್ಪ ಚಲವಾದಿ, ಸೋಮು ಚಲವಾದಿ, ಭೀಮಣ್ಣ ತಾಳಿಕೋಟಿ, ಭೀಮಣ್ಣ ನಾಯಕಮಕ್ಕಳ, ದೇವೇಂದ್ರ ಚಲವಾದಿ ಇದ್ದರು.

ಟಾಪ್ ನ್ಯೂಸ್

1-wew-ewe

Gujarat; ಗೇಮಿಂಗ್‌ ಸೆಂಟರ್‌ ಬೆಂಕಿ ದುರಂತ ಸಾವಿನ ಸಂಖ್ಯೆ 33ಕ್ಕೆ : ಹೈಕೋರ್ಟ್‌ ವಿಚಾರಣೆ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ; ಇಂದು “ಎಲ್ಲೋ ಅಲರ್ಟ್‌’

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಸರಣಿ ರಜೆ ಶಾಲಾ ಮಕ್ಕಳ ಬೇಸಗೆ ರಜೆ ಮುಕ್ತಾಯ; ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸ್ತೋಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

ಚರಂಡಿಗೆ ಆಟೋ ಬಿದ್ದು ಚಾಲಕ ಸಾವು ಪ್ರಕರಣ; ತಾತ್ಕಾಲಿಕ ಮುಂಜಾಗ್ರತೆ ಕ್ರಮ

rahul gandhi

Adani ಗಾಗಿ ಕೆಲಸ ಮಾಡುವಂತೆ ಮೋದಿಗೆ ಬಹುಶಃ ದೇವರು ಹೇಳಿರಬೇಕು: ರಾಹುಲ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura ಆಕಸ್ಮಿಕ ಬೆಂಕಿ: ನೂರಾರು ಲಿಂಬೆ ಗಿಡ ಹಾನಿ

Vijayapura; ಆಕಸ್ಮಿಕ ಬೆಂಕಿ: ನೂರಾರು ಲಿಂಬೆ ಗಿಡ ಹಾನಿ

accident

Vijayapura:ಆಯುತಪ್ಪಿ ಬಿದ್ದ ಮಹಿಳೆಯ ಕಾಲಿನ ಮೇಲೆ ಹರಿದ ಬಸ್

police crime

Vijayapura ಜಿಲ್ಲೆಯ ವೈದ್ಯ ಸೇರಿ ಇಬ್ಬರಿಗೆ ಆನ್‍ಲೈನ್ ವಂಚನೆ : 68.77 ಲಕ್ಷ ರೂ. ಪಂಗನಾಮ

15-indi

Indi: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತ್ಯು

1-wqewewqe

Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Maldives Muizzu

ಮುಕ್ತ ವ್ಯಾಪಾರಕ್ಕೆ ಭಾರತ- ಮಾಲ್ದೀವ್ಸ್‌ ಒಪ್ಪಂದ

1-wew-ewe

Gujarat; ಗೇಮಿಂಗ್‌ ಸೆಂಟರ್‌ ಬೆಂಕಿ ದುರಂತ ಸಾವಿನ ಸಂಖ್ಯೆ 33ಕ್ಕೆ : ಹೈಕೋರ್ಟ್‌ ವಿಚಾರಣೆ

1-qwu

Qatar ವಿಮಾನ ಆಗಸ‌ದಲ್ಲಿ ಓಲಾಡಿ 12 ಮಂದಿಗೆ ಗಾಯ

Vimana 2

Bird hit; ಲೇಹ್‌ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್‌

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Cyclone ಬಾಂಗ್ಲಾ ಕರಾವಳಿಗೆ ರೆಮಲ್‌; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.