ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳ ಅಸಹಕಾರವೇ ಸಮಸ್ಯೆ

Team Udayavani, Oct 11, 2017, 12:11 PM IST

2hu.jpg

ಹುಬ್ಬಳ್ಳಿ: ಕೇಂದ್ರದ ವಿಶೇಷ ಅನುದಾನದಡಿ (ಸಿಎಸ್‌ ಎಫ್‌) ಬಿಡನಾಳ ಕ್ರಾಸ್‌ನಿಂದ ಕಿತ್ತೂರು ಚೆನ್ನಮ್ಮ ವೃತ್ತದ ವರೆಗೆ ರಸ್ತೆ ಅಗಲೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದ್ದು, ಅಧಿಕಾರಿಗಳ ಆಡಳಿತಾತ್ಮಕ ವೈಫಲ್ಯ ಹಾಗೂ ಅಸಹಕಾರದಿಂದ ಸಮಸ್ಯೆಯಾಗುತ್ತಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಡಿ) ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಈ ಮಾರ್ಗದ ಕೆಲವೆಡೆ ಯುಜಿಡಿ ಪೈಪ್‌ಲೈನ್‌ ಚಿಕ್ಕದಾಗಿವೆ. ಹೀಗಾಗಿ ಅದು ಕಟ್ಟಿಕೊಂಡು ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. 

ಕಾಮಗಾರಿ ಆರಂಭಕ್ಕೂ ಮುನ್ನವೇ ಪಾಲಿಕೆ ಆಯುಕ್ತರು ಈ ಕುರಿತು ಗಮನ ಹರಿಸಿ ಕ್ರಮಕೈಗೊಂಡಿದ್ದರೆ ಹಾಗೂ ವಿದ್ಯುತ್‌ ಕಂಬ ತೆರವು ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಪಿಸಿಕೊಟ್ಟಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಈಗ ಆಡಳಿತಾತ್ಮಕ ವೈಫಲ್ಯ ಹಾಗೂ ಇಲಾಖೆಗಳ ಅಧಿಕಾರಿಗಳ ನಡುವಿನ ಅಸಹಕಾರದಿಂದಾಗಿ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದರೆ ಮತ್ತೆ ಒಂದೆರಡು ವರ್ಷದಲ್ಲಿ ರಸ್ತೆ ಅಗೆಯುವ ಪ್ರಸಂಗ ಬರುತ್ತದೆ ಎಂದರು.

ರಸ್ತೆ ನಿರ್ಮಾಣದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ, ತುರ್ತು ನಿಧಿಯಡಿ ಯುಜಿಡಿ ಕಾಮಗಾರಿ ಸೇರಿದಂತೆ ಇನ್ನಿತರೆ ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ತಿಳಿಸಲಾಗುವುದು. ಅದಕ್ಕೆ ಅವಶ್ಯವಾದ ಹಣವನ್ನು ವಿಶೇಷ ಅನುದಾನದಡಿ ಬಿಡುಗಡೆಗೊಳಿಸುವ ಕಾರ್ಯ ಮಾಡಲಾಗುವುದು ಎಂದರು. 

ಒಟ್ಟಾರೆ 54 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಸಿಸಿ ರಸ್ತೆಗೆ 36 ಕೋಟಿ ರೂ. ಟೆಂಡರ್‌ ಆಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ನ್ಯೂ ಇಂಗ್ಲಿಷ್‌ ಸ್ಕೂಲ್‌ ವೃತ್ತದಿಂದ ಕೆ.ಸಿ. ವೃತ್ತ ವರೆಗೆ ಭೂಸ್ವಾಧೀನ ಮಾಡಿಕೊಟ್ಟರೆ ಕಾಮಗಾರಿ ಬೇಗನೆ ಮುಗಿಯುತ್ತದೆ. ಆದರೆ ಕಾಮಗಾರಿ ವಿಳಂಬವಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ, ಮಹಾಪೌರ ಡಿ.ಕೆ. ಚವ್ಹಾಣ, ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ, ಬಿಜೆಪಿ ಮುಖಂಡರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಶಿವು ಮೆಣಸಿನಕಾಯಿ, ನಾರಾಯಣ ಜರತಾರಘರ, ಮಲ್ಲಿಕಾರ್ಜುನ ಸಾವುಕಾರ, ಶಂಕರಪ್ಪ ಛಬ್ಬಿ, ಎನ್‌ಎಚ್‌ಡಿ ಅಧಿಕಾರಿಗಳು, ಪಾಲಿಕೆ ವಲಯಾಧಿಕಾರಿ ಇತರರಿದ್ದರು.  

ಟಾಪ್ ನ್ಯೂಸ್

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಹ್ಲಾದ ಜೋಶಿ

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

prahlad-joshi

CM ಸಿದ್ದರಾಮಯ್ಯ ಬುಡಕ್ಕೆ ನೀರು ಬಂದಿದ್ದಕ್ಕೆ ಯಡಿಯೂರಪ್ಪ ಗುರಿ: ಕೇಂದ್ರ ಸಚಿವ ಜೋಶಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.