ಹಳ್ಳಾಡಿ ಸುಬ್ರಾಯ ಮಲ್ಯ ಪ್ರಶಸ್ತಿಗೆ ಪರಮೇಶ್ವರ ಹೆಗಡೆ 


Team Udayavani, Jun 29, 2018, 6:00 AM IST

x-5.jpg

ನಾಲ್ಕು ತಲೆಮಾರುಗಳಿಂದ ಯಕ್ಷ ಪರಂಪರೆ ಮುಂದುವರೆಸುತ್ತಿರುವ ಹಳ್ಳಾಡಿ ಮಲ್ಯ ಮನೆತನದ ದಿವಂಗತ ಸುಬ್ರಾಯ ಮಲ್ಯರ ಯಕ್ಷ ಪ್ರತಿಭೆ ಆರಾಧನೆ ಅದ್ವಿತೀಯವಾದುದು. ಇವರ ಅದ್ಭುತ ಯಕ್ಷ ಪ್ರತಿಭೆಯಿಂದಾಗಿ ಇವರನ್ನು “ದಶಾವತಾರ’ ಎಂದು ಸಂಭೋದಿಸಲಾಗುತ್ತಿತ್ತು. ಪ್ರಸ್ತುತ ಈ ಮನೆತನದ ಯಕ್ಷ ಆರಾಧನೆಯನ್ನು ಸುಬ್ರಾಯ ಮಲ್ಯರ ಮಗ ರಾಕೇಶ್‌ ಮಲ್ಯ (ಚೆಂಡೆ ಕಲಾವಿದ) ಮತ್ತು ಮಗಳು ಅರುಣ್‌ ಪೈ ಮುಂದುವರಿಸುತ್ತಿದ್ದು, ಅದರಲ್ಲೂ ಕಿರಣ್‌ ಪೈ ಯಕ್ಷರಂಗದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ “ಸುಮುಖ’ ಕಲಾಕೇಂದ್ರ ಸ್ಥಾಪಿಸಿ ಯಕ್ಷ ತರಬೇತಿ ನೀಡುತ್ತಿದ್ದಾರೆ. ಶಿವಮೊಗ್ಗದ “ಶ್ರೀ ವಾಗೆªàವಿ ಮಹಿಳಾ ಯಕ್ಷ ಮಂಡಳಿ’ಯ ಕಲಾವಿದೆ “ಸುಮುಖ’ ಕಲಾಕೇಂದ್ರದ ಪ್ರಥಮ ವಾರ್ಷಿಕೋತ್ಸವದಂದು ತನ್ನ ತಂದೆಯ ಹೆಸರಿನಲ್ಲಿ “ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ’ ನೀಡುವ ಪರಂಪರೆಯನ್ನು ಪ್ರಾರಂಭಿಸಿದ್ದಾರೆ. ಯಕ್ಷ ಕಲಾವಿದ ಐನಬೈಲ್‌ ಪರಮೇಶ್ವರ ಹೆಗಡೆಯವರಿಗೆ ಈ ಚೊಚ್ಚಲ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನಿಸಲಾಯಿತು. 

ಮೂವತ್ತಕ್ಕೂ ಅಧಿಕ ವರ್ಷಗಳಿಂದ ಯಕ್ಷ ಭಾಗವತ, ಯಕ್ಷಗುರು/ನಿರ್ದೇಶಕ ಪಾತ್ರಧಾರಿ, ಮದ್ದಳೆ – ಚೆಂಡೆ ಕಲಾಕಾರರಾಗಿ ತೊಡಗಿಸಿಕೊಂಡಿರುವ ಐನಬೈಲ್‌ ಪರಮೇಶ್ವರ ಹೆಗಡೆಯವರು ಉ.ಕ. ಜಿಲ್ಲೆಯ ಸಿದ್ಧಾಪುರ ತಾಲೂಕಿನ ಐನಬೈಲ್‌ ಗಣಪತಿ ಹೆಗಡೆ ಮತ್ತು ಸುಭದ್ರಾ ದಂಪತಿಯ ಪುತ್ರ. ತಂದೆಯ ಅಪೇಕ್ಷೆಯಂತೆ ಭಾಗವತರಾಗಿ ಯಕ್ಷರಂಗಕ್ಕೆ ಧುಮುಕಿದರು. ಬಾಳೆಗದ್ದೆ ಕೃಷ್ಣ ಭಾಗವತ, ಶಿರಳಗಿ ಮಂಜುನಾಥ ಭಟ್ಟ ಮತ್ತು ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಇವರ ಯಕ್ಷ ಗುರುಗಳು.

ತಾಳಗಳ ತಳಸ್ಪರ್ಶಿ ಜ್ಞಾನ, ಸುಮಧುರ ಶೈಲಿಯಲ್ಲಿ ಗಾಯನ, ಸುಶ್ರಾವ್ಯ ಶಾರೀರ, ಯಕ್ಷಕಲೆಯಲ್ಲಿ ಪ್ರೌಢಿಮೆ ಹೊಂದಿರುವ ಇವರು ಸೋಂದಾ ಮೇಳದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸುವುದರೊಂದಿಗೆ ನಾಡಿನಾದ್ಯಂತ ಅಸಂಖ್ಯಾತ ಯಕ್ಷ/ತಾಳ ಮದ್ದಳೆಗಳಲ್ಲಿ ಭಾಗವಹಿಸಿ ಯಕ್ಷ ಕಲಾರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಬಭುವಾಹನ, ಧರ್ಮಾಂಗದ, ಸಾಲ್ವ , ಕೃಷ್ಣ, ಚಂದ್ರಹಾಸ, ಅಭಿಮನ್ಯು ಇತ್ಯಾದಿ ಪಾತ್ರಗಳಲ್ಲಿ ಇವರ ಅನನ್ಯ ಪ್ರತಿಭೆ ಪ್ರತಿಫ‌ಲಿಸುತ್ತದೆ. ಹೀಗೆಯೇ ಯಕ್ಷಗುರು/ನಿರ್ದೇಶಕರಾಗಿ ಅದೆಷ್ಟೋ ಪ್ರತಿಭೆಗಳನ್ನು ನೀಡಿದ್ದಾರೆ. “ಯಕ್ಷ ಕಲಾ ಬ್ರಹ್ಮ’, “ಯಕ್ಷ ಗುರು’, “ವೃತ್ತಿ ಕೌಶಲ್ಯ’ ಇವೆಲ್ಲ ಬಿರುದುಗಳ ಜೊತೆಗೆ ಹಲವಾರು ಸನ್ಮಾನ/ಗೌರವಗಳು ಅರಸಿ ಬಂದಿವೆ.

ಸಂದೀಪ್‌ ನಾಯಕ್‌ ಸುಜೀರ್‌ 

ಟಾಪ್ ನ್ಯೂಸ್

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.