ನುಶ್ರತ್‌ ಎಂಬ ಮಂದಗಾಮಿನಿ

Team Udayavani, Jun 29, 2018, 6:00 AM IST

x-20.jpg

ಕಡಿಮೆ ಬಜೆಟಿನಲ್ಲಿ ತಯಾರಾಗುವ ಬಹುತೇಕ ಹೊಸ ಮುಖಗಳು ಇಲ್ಲವೇ ಮುಖ್ಯವಾಹಿನಿಯಿಂದ ದೂರದಲ್ಲಿರುವ ನಟ-ನಟಿಯರನ್ನು ಹಾಕಿಕೊಂಡು ಮಾಡಿದ ಸಿನೆಮಾವನ್ನು ನೋಡುವ ಅಭ್ಯಾಸ ಇದ್ದರೆ ನುಶ್ರತ್‌ ಭರೂಚ ಎಂಬ ಈ ನಟಿಯ ಪರಿಚಯ ನಿಮಗಿರಬಹುದು. ಮುಂಬಯಿಯವಳೇ ಆಗಿದ್ದರೂ ನುಶ್ರತ್‌ ಇನ್ನೂ ಬಾಲಿವುಡ್‌ನ‌ ಮುಖ್ಯವಾಹಿನಿಗೆ ಸೇರ್ಪಡೆಯಾಗಿಲ್ಲ. ಆದರೆ, ದೂರದಲ್ಲಿದ್ದುಕೊಂಡೇ ತನ್ನ ಛಾಪು ಮೂಡಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾಳೆ. 

ಈ ವರ್ಷ ಬಿಡುಗಡೆಯಾಗಿರುವ ನುಶ್ರತ್‌ಳ ಚಿತ್ರ ಸೋನು ಕೆ ಟಿಟು ಕಿ ಸ್ವೀಟಿ ಎಂಬ ಚಿತ್ರ ಸದ್ದಿಲ್ಲದೆ ನೂರು ಕೋಟಿ ರೂಪಾಯಿ ಕ್ಲಬ್‌ ಸೇರಿದೆ. ಈ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ನಿಧಾನವಾಗಿ ನುಶ್ರತ್‌ ಪ್ರಚಾರಕ್ಕೆ ಬರುತ್ತಿದ್ದಾಳೆ. 2006ರಲ್ಲೇ ಚಿತ್ರರಂಗಕ್ಕೆ ಬಂದಿರುವ ನುಶ್ರತ್‌ 12 ವರ್ಷಗಳಲ್ಲಿ ನಟಿಸಿದ್ದು ಬೆರಳೆಣಿಕೆಯ ಚಿತ್ರಗಳಲ್ಲಿ. ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಕನಿಷ್ಠ ಒಂದು ವರ್ಷದ ಅಂತರವಿರುವುದು ನುಶ್ರತ್‌ಳ ವಿಶೇಷತೆ. ಕಲ್‌ ಕಿಸ್ನೆ ದೇಖಾ, ಪ್ಯಾರ್‌ ಕಾ ಪಂಚ್‌ನಾಮ, ಆಕಾಶ್‌ವಾಣಿ, ಡರ್‌ ಎಟ್‌ ಮಾಲ್‌ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ನುಶ್ರತ್‌ ತೆಲುಗು ಮತ್ತು ತಮಿಳಿನಲ್ಲೂ ಮುಖ ತೋರಿಸಿ ಬಂದಿದ್ದಾಳೆ. ನುಶ್ರತ್‌ ಚಿತ್ರಗಳ ಆಯ್ಕೆಯಲ್ಲಿ ತೀರಾ ಚೂಸಿ ಅಲ್ಲದಿದ್ದರೂ ಅವಳಿಗೆ ಸಿಗುವುದು ಲಘು ದಾಟಿಯ ಸಿನೆಮಾಗಳೇ. ಇದೀಗ ಮೆಂಟಲ್‌ ಹೈ ಕ್ಯಾ ಎಂಬ ಇದೇ ಮಾದರಿಯ ಚಿತ್ರವೊಂದರಲ್ಲಿ ನಟಿಸುತ್ತಿದ್ದಾಳೆ. ಯಥಾಪ್ರಕಾರ ಇದರ ನಾಯಕ, ನಿರ್ದೇಶಕ ಸೇರಿದಂತೆ ಬಹುತೇಕ ಹೊಸಬರೇ. ಆದರೆ, ಕಥೆ ಚೆನ್ನಾಗಿರುವುದರಿಂದ ಚಿತ್ರದ ಮೇಲೆ ನುಶ್ರತ್‌ಗೆ ಭಾರೀ ಭರವಸೆಯಿದೆ. ಏನೇ ಆದರೂ ಸಂಪ್ರದಾಯವಾದಿ ಮುಸ್ಲಿಮ್‌ ಕುಟುಂಬವೊಂದರಲ್ಲಿ ಜನಿಸಿದ ಸಾಮಾನ್ಯ ಹುಡುಗಿ ಬಣ್ಣದ ಹುಚ್ಚು ಬೆಳೆಸಿಕೊಂಡು ಯಶಸ್ವಿ ನಟಿಯಾಗುವತ್ತ ಒಂದೊಂದೇ ಹೆಜ್ಜೆಯಿಡುತ್ತಿರುವುದು ಸಾಧನೆಯೇ ಸರಿ. 

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.