ಕ್ಲಾಸೊಂದು ಖಾಲಿ ಥಿಯೇಟ್ರಾ


Team Udayavani, Jul 17, 2018, 6:00 AM IST

4.jpg

ಇದು ಬಂಕ್‌ನ ಸಮಾಚಾರ. ಹುಡುಗರು (ಹುಡುಗಿಯರು ಕೂಡ) ಕಾಲೇಜಿಗೆ ಅಂತ ಬರ್ತಾರೆ, ಆದರೆ ಕ್ಲಾಸ್‌ಗೆ ಬರಲ್ಲ. ಇನ್ನು ಕೆಲವರು ಕ್ಲಾಸ್‌ಗೆ ಬರ್ತಾರೆ. ಆದರೆ, ಮನಸ್ಸನ್ನು ಎಲ್ಲೋ ಹೊರಗೆ ಕಳುಹಿಸಿ, ಅದನ್ನೂ ಬಂಕ್‌ ಹೊಡ್ಸಿ, ಶರೀರ ಸ್ವಲ್ಪವೂ ಅಲುಗಾಡದಂತೆ ಕಾಪಾಡಿಕೊಂಡು ಲೆಕ್ಚರರ್‌ ಮುಖವನ್ನೇ ನೋಡುತ್ತಿರುತ್ತಾರೆ, ಅದ್ಭುತ ಕೇಳುಗ ಎಂಬಂತೆ!

ಇತ್ತೀಚೆಗೆ ನನ್ನ ಕಾಲೇಜು ಸ್ಟೂಡೆಂಟ್‌ ಒಬ್ಬನ ತಿಂಗಳ ಹಾಜರಾತಿ ಕಡಿಮೆಯಾಗಿತ್ತು. ಅವರ ಪೋಷಕರಿಗೊಂದು ಫೋನ್‌ ಹಾಕಿದೆ. “ಅರೇ… ಡೈಲಿ ಬೆಳಗ್ಗೆ ಕಾಲೇಜಿಗೆ ಅಂತ ಟ್ರಿಮ್‌ ಆಗಿಯೇ ಹೋಗ್ತಾನಲ್ಲ!?’ ಅಂದ್ರು ಅವರ ತಾಯಿ. “ಕಾಲೇಜಿಗೆ ಬರ್ತಾನಮ್ಮ, ಆದ್ರೆ ಕಾಸ್‌ಗೆ ಬರಲ್ವೇ!’ ಅಂದೆ. ಅವರು ಶಾಕ್‌ ಆದರು.

  ಇದು ಎಲ್ಲ ಕಾಲೇಜಿನಲ್ಲೂ ಕಾಣಸಿಗುವ ರಾಮಾಯಾಣ. ಬಂಕ್‌ ಹೊಡೆಯುವುದು ಅಂದರೆ, ಕ್ಲಾಸ್‌ಗೆ ಹಾಜರಾಗದೇ ಹೊರಗಡೆ ಸುತ್ತಾಡಿಕೊಂಡು ಇರೋದು. ತರಗತಿಯಲ್ಲಿ ಪಾಠ ನಡೆಯುವಾಗ, ಹೊರಗೆ ತಿರುಗಾಡುತ್ತಾ ತಮ್ಮ ಲೈಫ್ ಹಾಳು ಮಾಡಿಕೊಳ್ಳುತ್ತಾರೆ. ಒಂದೇ ಬಾರಿಗೆ, ಎರಡು ಕಡೆ ಸಮಾನಾಂತರವಾಗಿ ಹಾಳಾಗುವುದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ!

ಯಾಕೆ ಬಂಕ್‌ ಮಾಡ್ತಾರೆ?
ಇದಕ್ಕೆಲ್ಲ ಮೂಲ ಕಾರಣ, ವಯಸ್ಸು. ನಿಲ್ಲಲು ಇಷ್ಟಪಡದ, ಓಡಲೂ ಮನಸ್ಸು ಮಾಡದಂಥ ಯವ್ವನದ ಆಲಸ್ಯ. ಗಾಳಿಗೆ ನೀರಾಗಿ, ನೀರಿಗೆ ಗಾಳಿಯಾಗಿ ಚಿಮ್ಮುವ ವಯಸ್ಸಿನ ಒಂದು ವಿಚಿತ್ರ ಸ್ಥಿತಿ. ಆ ವಯಸ್ಸಿನೊಂದಿಗೆ ಹೊರಡುವ ಭಾವಗಳು, ಕಲ್ಪನೆಗಳು ಅವರನ್ನು ಹೀಗೆ ಮಾಡಿಸುತ್ತವೆ. ಈ ವಯಸ್ಸಿನಲ್ಲಿ ಅತೀವ ಗೆಳೆತನ ಆರಂಭವಾಗುತ್ತದೆ. ಅದು ನೀನು ಹುಡುಗನಾ? ಹುಡುಗಿಯೋ? ಅಂತ ಕೇಳುವುದಿಲ್ಲ, ಯಾರಾದರೂ ಆಗಿರಬಹುದು. ಗೆಳೆತನ ಚಿಗುರುತ್ತದೆ. ಗೆಳೆತನಕ್ಕೆ ಸೋತು ಬಿದ್ದು, ಗೆಳೆಯರನ್ನೇ ಅನುಸರಿಸಲು ಹೊರಟಾಗ, ಈ ಬಂಕ್‌ ಮೊಳೆಯುತ್ತದೆ. 

ಪ್ರೀತಿಯ ಹಿಂದೆ ಬಿದ್ದವರು…
ಬಂಕ್‌ ಮನಃಸ್ಥಿತಿಗೆ ಇನ್ನೊಂದು ಪ್ರಮುಖ ಕಾರಣ, ಪ್ರೀತಿ. ಬಹುಶಃ ಇತ್ತೀಚಿನ ದಿನಗಳಲ್ಲಿ ಪ್ರೀತಿ ಭಾವ ಮೂಡಿಸಿಕೊಳ್ಳದೇ ಕಾಲೇಜು ದಿನಗಳನ್ನು ಯಾರೊಬ್ಬರೂ ಮುಗಿಸಲಾರರೇನೋ ಎನ್ನುವ ಹಾಗೆ ಯುವ ಜನಾಂಗ ಆಡುತ್ತಿದೆ. ಪ್ರೀತಿ ಪ್ರೇಮದ ಸೆಳೆತಕ್ಕೆ ಕ್ಲಾಸ್‌ಗೆ ಚಕ್ಕರ್‌ ಬೀಳುತ್ತದೆ.

ಲೆಕ್ಚರರ್‌ ಬೋರ್‌ ಹೊಡಿಸ್ತಾರಾ?
ಕೋಚಿಂಗ್‌ ಕ್ಲಾಸ್‌ ಮೇಲಿನ ಅತಿಯಾದ ಅವಲಂಬನೆಯು ಕಾಲೇಜುಗಳಲ್ಲಿ ಕ್ಲಾಸ್‌ನ ಮೇಲಿನ ಆಸಕ್ತಿಯನ್ನು ಕಸಿದು ಬಿಡುತ್ತದೆ. ಆಕರ್ಷಕವಲ್ಲದ ಪಠ್ಯಕ್ರಮಗಳು ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಸೋತಿವೆ. ಕಾಲೇಜು ವಾತಾವರಣ, ಅತಿಯಾದ ಬಿಗಿ ಅಥವಾ ಅತಿಯಾದ ಸಲುಗೆ , ಕ್ಲಾಸ್‌ಮೇಟ್‌ಗಳೆಂಬ ದಾರಿ ತಪ್ಪಿಸುವ ಮಾರ್ಗಿಗಳು, ಇಷ್ಟವಾಗದ ಲೆಕ್ಚರರ್‌ಗಳು ಮತ್ತು ಅವರ ಬೋಧನಾ ಶೈಲಿ, ಇಂಥ ವಯಸ್ಸನ್ನೇ ಕಾದು ಕುಳಿತಂತೆ ಒಕ್ಕರಿಸಿಕೊಂಡು ಬಿಡುವ ಹಲವು ಕೆಟ್ಟ ಹವ್ಯಾಸಗಳು, ಜೀವನಕ್ಕೆ ಸಂಬಂಧವೇ ಇಲ್ಲದಂಥ ಬೋಧನಾ ವಿಷಯಗಳು, ವಿದ್ಯಾರ್ಥಿಗಳ ಅಭಿರುಚಿಯನ್ನು ಅರಿತುಕೊಳ್ಳದ ಕಾಲೇಜುಗಳು, ವಿದ್ಯಾರ್ಥಿ ಸಂಘಗಳೆಂಬ ರಾಜಕೀಯ ದಾಳ ಹಾಗೂ ತನ್ನಷ್ಟಕ್ಕೆ ತಾನು ಓದಿಕೊಳ್ಳಬಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಇತ್ಯಾದಿ ಕಾರಣಗಳು ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಕ್ಲಾಸ್‌ಗೆ ಬರದಂತೆ ಮಾಡಿವೆ!

ಬಂಕ್‌ಗೆ ಬ್ರೇಕ್‌ ಹಾಕೋದು ಹೇಗೆ?
1. ಬಯೋಮೆಟ್ರಿಕ್‌, ಜಿಪಿಎಸ್‌ ಟ್ರ್ಯಾಕ್‌, ಸಿಸಿ ಕ್ಯಾಮೆರಾ ಇವೆಲ್ಲವನ್ನೂ ಬಳಸಿ ವಿದ್ಯಾರ್ಥಿಗಳ ಮೇಲೆ ನಿಗಾ ಇಟ್ಟು ಕ್ಲಾಸ್‌ ಒಳಗೆ ಎಳೆದು ತಂದು ಕೂರಿಸಬಹುದು (ಕೆಲವರು ಅದಕ್ಕೂ ಬಗ್ಗುವುದಿಲ್ಲ). ಆದರೆ, ಕ್ಲಾಸ್‌ನಲ್ಲಿ ಕೂತವರ ಮನಸ್ಸು ಚಕ್ಕರ್‌ ಹೊಡೆಯದಂತೆ ನೋಡಿಕೊಳ್ಳುವುದೂ ಮುಖ್ಯ. ಹಾಜರಾತಿಗಾಗಿ ತರಗತಿಗೆ ಬಂದು ಕೂತರೆ ತಾನೇ ಏನು ಪ್ರಯೋಜನಾ? 

2. ಮುಖ್ಯವಾಗಿ ನಮ್ಮ ವಿವಿಗಳು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಏನು ಬೇಕೋ ಅದನ್ನು ಕಲಿಸಬೇಕಿದೆ. ಪಠ್ಯಕ್ರಮದ ವಿಚಾರಗಳು ಬದಲಾಗಬೇಕಿವೆ. “ಓದು, ಬರೆ, ಪಾಸ್‌ ಮಾಡು, ಮನೆಗೆ ಹೋಗು’ ಎಂಬುದಷ್ಟೇ ಶಿಕ್ಷಣವಲ್ಲ.

3. ಬೋಧಿಸುವ ಸಿಬ್ಬಂದಿಯೂ ಅಷ್ಟೇ ನಿಷ್ಠೆಯಿಂದ ತೊಡಗಿಸಿಕೊಳ್ಳಬೇಕಿದೆ. ಆ ವಯಸ್ಸಿನ ಶಕ್ತಿಯನ್ನು ಸರಿಯಾದ ನಿಟ್ಟಿನಲ್ಲಿ ಬಳಕೆಯಾಗುವಂತೆ ಮಾಡಲು ಮಾರ್ಗದರ್ಶನ, ಸಲಹೆಗಳು ಸಕ್ರಿಯವಾಗಬೇಕಿವೆ.

ಬಂಕ್‌ ಹಾಕೋರೆಲ್ಲ ದೀಪಿಕಾ ಆಗೋಲ್ಲ!
ನಿಜ, ಕೆಲವರು ಕ್ಲಾಸ್‌ಗೆ ಬಂಕ್‌ ಹಾಕೋಕೂ ಒಳ್ಳೆಯ ಕಾರಣ ಇರುತ್ತೆ. ತರಗತಿಯ ಆಚೆಗೆ ತಮಗೊಂದು ಭವಿಷ್ಯವಿದೆ ಎಂದು ಪಕ್ಕಾ ಆದವರಿಗೆ, ಕ್ಲಾಸ್‌ ಯಾವತ್ತೂ ಆಕರ್ಷಣೆ ಆಗುವುದೇ ಇಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ದೀಪಿಕಾ ಪಡುಕೋಣೆ. ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ದೀಪಿಕಾಗೆ ಕ್ಲಾಸ್‌ಮೇಟ್‌ ಆಗಿದ್ದವರೊಬ್ಬರು ಫೇಸ್‌ಬುಕ್‌ನಲ್ಲಿ “ಪದ್ಮಾವತಿ’ಯ ಬಂಕ್‌ ರಹಸ್ಯ ಬಿಚ್ಚಿಟ್ಟಿದ್ದರು. “ದೀಪಿಕಾ ನನ್ನ ಸಹಪಾಠಿ ಆಗಿದ್ದಳು. ಕಾಲೇಜು ಮುಗಿಸುವ 6 ತಿಂಗಳು ಮೊದಲು ಆಕೆ ಮುಂಬೈಗೆ ಹೋಗಿದ್ದಳು. ಬ್ಯಾಡ್ಮಿಂಟನ್‌, ಮಾಡೆಲಿಂಗ್‌ ಕಾರಣಕ್ಕಾಗಿ ದೀಪಿಕಾ ಆಗಾಗ್ಗೆ ಕ್ಲಾಸ್‌ಗೆ ಬಂಕ್‌ ಹಾಕುತ್ತಿದ್ದಳು. ಅವಳು ಎಷ್ಟು ಎತ್ತರವಿದ್ದಳೆಂದರೆ, ಒಮ್ಮೆ ಫೀಸ್‌ ಕಟ್ಟಲು ಅವಳ ಹಿಂದೆ ನಿಂತಿದ್ದೆ. ಅವಳ ಮುಂದೆ ಏನೂ ಕಾಣಿಸುತ್ತಲೇ ಇರಲಿಲ್ಲ. ಅವಳ ಜತೆ ನಿಲ್ಲಬೇಕೆಂದು ಮತ್ತೆ ಮತ್ತೆ ಬಯಸುತ್ತಿದ್ದೆ. ಆದರೆ, ಅವಳು ಬಂಕ್‌ ಹಾಕುತ್ತಿದ್ದರಿಂದ ಇನ್ನೊಂದು ಸುಸಂದರ್ಭ ಒದಗಿಬರಲೇ ಇಲ್ಲ’ ಎಂದಿದ್ದರು.

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.