ಪಾಲಕ್‌ ಸ್ಪೆಷಲ್‌

Team Udayavani, Jan 25, 2019, 12:30 AM IST

w-18.jpg

ಪಾಲಕ್‌ ಸೊಪ್ಪನ್ನು ನಮ್ಮ ಆಹಾರದಲ್ಲಿ  ಬಳಸುವುದರಿಂದ ಕ್ಯಾಲ್ಸಿಯಂನ ಕೊರತೆ ನಿವಾರಣೆ ಆಗುವುದು. ನಮ್ಮ ದೇಹದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಉತ್ಪನ್ನವಾಗುತ್ತದೆ. ರಕ್ತಹೀನತೆಯಿಂದ ಬಾಧೆ ಪಡುವವರಿಗೆ ಈ ಸೊಪ್ಪಿನ ಸೇವನೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.

ಪಾಲಕ್‌ ಮೊಸರು ಬಜ್ಜಿ 
ಬೇಕಾಗುವ ಸಾಮಗ್ರಿ:
1 ಕಪ್‌ ಸಣ್ಣಗೆ ಹೆಚ್ಚಿ ಉಗಿಯಲ್ಲಿ ಬೇಯಿಸಿದ ಪಾಲಕ್‌ ಸೊಪ್ಪು , ಒಂದೂವರೆ ಕಪ್‌ ಮೊಸರು, 1/2 ಕಪ್‌ ಬೇಯಿಸಿದ ಸಿಹಿ ಜೋಳ, ರುಚಿಗೆ ತಕ್ಕಷ್ಟು ಉಪ್ಪು , 1/2 ಚಮಚ ಕೆಂಪುಮೆಣಸಿನ ಪುಡಿ.

ತಯಾರಿಸುವ ವಿಧಾನ: ಮೊಸರಿಗೆ ಉಗಿಯಲ್ಲಿ ಬೇಯಿಸಿದ ಪಾಲಕ್‌ ಸೊಪ್ಪಿನ ಚೂರು, ಉಪ್ಪು, ಬೇಯಿಸಿದ ಸಿಹಿ ಜೋಳ, ಕೆಂಪುಮೆಣಸಿನ ಪುಡಿ ಎಲ್ಲ ಸೇರಿಸಿ ಚೆನ್ನಾಗಿ ಕಲಸಿ. ಈಗ ಪೌಷ್ಟಿಕ ಮೊಸರು ಬಜ್ಜಿ , ಅನ್ನ-ರಾಗಿಮುದ್ದೆಯೊಂದಿಗೆ ತಿನ್ನಲು ಸಿದ್ಧ.

ಪಾಲಕ್‌ ತಾಲಿಪಟ್ಟು 
ಬೇಕಾಗುವ ಸಾಮಗ್ರಿ :
1 ಕಪ್‌ ಗೋಧಿಹಿಟ್ಟು , 1/2 ಕಪ್‌ ಕಡಲೆಹಿಟ್ಟು , 1 ಕಟ್ಟು ಪಾಲಕ್‌ ಸೊಪ್ಪು , 1/4 ಕಪ್‌ ಕೊತ್ತಂಬರಿ ಸೊಪ್ಪು, 1/4 ಚಮಚ ಜೀರಿಗೆ, 1/2 ಚಮಚ ಕೆಂಪುಮೆಣಸು ಪುಡಿ, 1/2 ಚಮಚ ರುಬ್ಬಿದ ಹಸಿಮೆಣಸು ಬೆಳ್ಳುಳ್ಳಿ ಪೇಸ್ಟ್‌ , 1/4 ಕಪ್‌ ನೀರುಳ್ಳಿ ಚೂರು, 3-4 ಚಮಚ ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು .  

ತಯಾರಿಸುವ ವಿಧಾನ: ಸ್ವಚ್ಛಗೊಳಿಸಿ ಸಣ್ಣಗೆ ತುಂಡು ಮಾಡಿದ ಪಾಲಕ್‌ ಸೊಪ್ಪು , ಗೋಧಿಹಿಟ್ಟು-ಕಡಲೆಹಿಟ್ಟು , ಕೊತ್ತಂಬರಿಸೊಪ್ಪಿನ ಚೂರು, ನೀರುಳ್ಳಿ ಚೂರು, ಜೀರಿಗೆ, ಹಸಿಮೆಣಸು-ಬೆಳ್ಳುಳ್ಳಿ ಪೇಸ್ಟ್‌, ಉಪ್ಪು , ಸ್ವಲ್ಪ ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಎಣ್ಣೆ ಪಸೆ ಮಾಡಿದ ಬಾಳೆಲೆಯಲ್ಲಿ ರೊಟ್ಟಿ ತಟ್ಟಿ , ತವಾ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ರೊಟ್ಟಿ ಎರಡೂ ಬದಿ ಕೆಂಪಗೆ ಬೇಯಿಸಿ ತೆಗೆಯಿರಿ. ಈಗ ರೊಟ್ಟಿಯನ್ನು ಚಟ್ನಿಯ ಜೊತೆ ಸವಿಯಿರಿ.

ಪಾಲಕ್‌ ವಡೆ 
ಬೇಕಾಗುವ ಸಾಮಗ್ರಿ:
1 ಕಪ್‌ ಕಡಲೆಬೇಳೆ, 2-3 ಹಸಿಮೆಣಸು, ಸಣ್ಣಗೆ ತುಂಡು ಮಾಡಿದ 2 ಕಪ್‌ ಪಾಲಕ್‌ ಸೊಪ್ಪು , ಸಣ್ಣಗೆ ತುಂಡು ಮಾಡಿದ 1/4 ಕಪ್‌ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು , 1/2 ಚಮಚ ಅಮೂcರ್‌ ಪುಡಿ ಯಾ ನಿಂಬೆರಸ, ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಕಡಲೆಬೇಳೆಯನ್ನು 2 ಗಂಟೆ ನೆನೆಸಿ. ನಂತರ ತೊಳೆದು ಗಟ್ಟಿಗೆ ತರಿ ತರಿಯಾಗಿ ರುಬ್ಬಿ  ಪಾತ್ರೆಗೆ ಹಾಕಿ. ನಂತರ ಪಾಲಕ್‌ ಸೊಪ್ಪಿನ ಚೂರು, ಹಸಿಮೆಣಸು ಚೂರು, ಉಪ್ಪು , ಈರುಳ್ಳಿ ಚೂರು, ಅಮೂcರ್‌ ಪುಡಿ ಸೇರಿಸಿ ಗಟ್ಟಿಗೆ ಬೆರೆಸಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ ವಡೆ ತಟ್ಟಿ ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿದು ತೆಗೆಯಿರಿ. ಈಗ ಸ್ವಾದಿಷ್ಟ ವಡೆ ಸಂಜೆಯ ಕಾಫಿಯೊಂದಿಗೆ ಸವಿಯಲು ಚೆನ್ನ.

ಪಾಲಕ್‌ ದಾಲ್‌ 
ಬೇಕಾಗುವ ಸಾಮಗ್ರಿ:
1 ಕಟ್ಟು ಪಾಲಕ್‌ ಸೊಪ್ಪು , 1/2 ಕಪ್‌ ತೊಗರಿಬೇಳೆ, 3-4 ಒಣಮೆಣಸು, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ, ಚಿಟಿಕೆ ಅರಸಿನ, 2 ಚಮಚ ಹುಳಿರಸ, ಉಪ್ಪು ರುಚಿಗೆ ತಕ್ಕಷ್ಟು , ಚಿಟಿಕೆ ಇಂಗು, 1 ಚಮಚ ಎಣ್ಣೆ .

ತಯಾರಿಸುವ ವಿಧಾನ: ತೊಗರಿಬೇಳೆಯನ್ನು ಸ್ವಲ್ಪ ನೀರು ಸೇರಿಸಿ ಬೇಯಿಸಿ. ಪಾಲಕ್‌ ಸೊಪ್ಪಿನ ಸ್ವಲ್ಪ ಭಾಗವನ್ನು ಬೇಯಿಸಿಡಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ ಕೊತ್ತಂಬರಿ, ಜೀರಿಗೆ, ಕೆಂಪುಮೆಣಸು ಹಾಕಿ ಹುರಿದು ಬೇಯಿಸಿದ ಪಾಲಕ್‌ ಸೊಪ್ಪು ಸೇರಿಸಿ ರುಬ್ಬಿ. ನಂತರ ಬೇಯಿಸಿದ ತೊಗರಿಬೇಳೆ, ರುಬ್ಬಿದ ಮಿಶ್ರಣ, ತುಂಡು ಮಾಡಿದ ಪಾಲಕ್‌  ಹಸಿ ಸೊಪ್ಪು ಸೇರಿಸಿ ಬೇಯಿಸಿ. ನಂತರ ಉಪ್ಪು , ಹುಳಿರಸ, ಅರಸಿನ ಪುಡಿ ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಇಂಗು, ಸಣ್ಣ ತುಂಡು ಕೆಂಪು ಮೆಣಸು ಹಾಕಿ ಒಗ್ಗರಣೆ ಕೊಡಿ. ಈಗ ಪೌಷ್ಟಿಕ ದಾಲ್‌ ಅನ್ನ, ಚಪಾತಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

ಪಾಲಕ್‌ ಕಟ್ಲೆಟ್‌ 
ಬೇಕಾಗುವ ಸಾಮಗ್ರಿ:
1 ಕಪ್‌ ಪಾಲಕ್‌ ಸೊಪ್ಪು , 2 ಹಸಿಮೆಣಸು, ಬೆಂದ ಆಲೂ 2, 1/2 ಚಮಚ ಜೀರಿಗೆ ಪುಡಿ, 1/2 ಚಮಚ ಖಾರದ ಪುಡಿ, 1/4 ಕಪ್‌ ಕೊತ್ತಂಬರಿ ಸೊಪ್ಪು , 3 ಚಮಚ ಬ್ರೆಡ್‌ ಪುಡಿ, ಉಪ್ಪು ರುಚಿಗೆ ತಕ್ಕಷ್ಟು , 4 ಚಮಚ ಎಣ್ಣೆ.

ತಯಾರಿಸುವ ವಿಧಾನ: ಪಾಲಕ್‌ ಸೊಪ್ಪು , ಕೊತ್ತಂಬರಿ ಸೊಪ್ಪು ಚೆನ್ನಾಗಿ ತೊಳೆದು ಸಣ್ಣಗೆ ತುಂಡು ಮಾಡಿ. ನಂತರ ಹಸಿಮೆಣಸು ಚೂರು, ಬೇಯಿಸಿ ಮಸೆದ ಆಲೂ, ಉಪ್ಪು , ಜೀರಿಗೆ ಪುಡಿ, ಖಾರದ ಪುಡಿ, ಬ್ರೆಡ್‌ ಪುಡಿ ಹಾಕಿ ಸರಿಯಾಗಿ ಕಲಸಿ. ನಂತರ ಉಂಡೆ ಮಾಡಿ ಕಟ್ಲೆàಟು ಆಕಾರ ಕೊಟ್ಟು ತವಾದಲ್ಲಿ ಎಣ್ಣೆ ಹಾಕಿ ಎರಡೂ ಬದಿ ಕೆಂಪಗೆ ಬೇಯಿಸಿ ತೆಗೆಯಿರಿ. ಈಗ ರುಚಿಯಾದ ಕಟ್ಲೆàಟು ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.