ಮಳೆಗಾಲ ಬಳಿಕ ಜೇನು ಮೇಳ

|ಅಕ್ಟೋಬರ್‌ನಲ್ಲಿ ಮೂರು ದಿನ ಕಾಲ ಆಯೋಜನೆಗೆ ಚಿಂತನೆ |ಜೇನು ಸಾಕಾಣಿಕೆ ವಿಧಾನ-ಲಾಭ ಮಾಹಿತಿ ಲಭ್ಯ |

Team Udayavani, May 31, 2019, 9:55 AM IST

hubali-tdy-2..

ಧಾರವಾಡ: ಬೇಸಿಗೆಯಲ್ಲಿ ಮಾವು ಮೇಳದ ಮೂಲಕ ಮಾವಿನ ಹಣ್ಣಿನ ರುಚಿ ಸವಿದಿರುವ ಧಾರವಾಡಿಗರಿಗೆ ಮಳೆಗಾಲ ಅಂತ್ಯದ ಬಳಿಕ ಜೇನು ಮೇಳವೂ ಲಭ್ಯವಾಗಲಿದೆ.

ಹೌದು. ಇಂತಹ ಮೇಳ ಆಯೋಜನೆಗೆ ಧಾರವಾಡದ ತೋಟಗಾರಿಕೆ ಇಲಾಖೆ ಮುಂದಾಗಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಮಾವು ಮೇಳ ಹಾಗೂ ಅದರ ಜತೆ ಸಸ್ಯಸಂತೆ ಕೈಗೊಂಡು ಯಶಸ್ಸು ಪಡೆದ ತೋಟಗಾರಿಕೆ ಇಲಾಖೆ, ಈಗ ಇದೇ ಮೊದಲ ಬಾರಿಗೆ ಜೇನು ಮೇಳ ಆಯೋಜನೆಗೆ ಚಿಂತನೆ ಕೈಗೊಂಡಿದೆ. ಅದಕ್ಕಾಗಿ ಈಗಿನಿಂದಲೇ ಒಂದಿಷ್ಟು ತಯಾರಿ ಮಾಡಿಕೊಳ್ಳುತ್ತಲಿದೆ. ದೇಸಿಯ ಜೇನು ತಳಿಗಳಲ್ಲಿ ವೈವಿಧ್ಯತೆಯಿದ್ದು, ಹೆಜ್ಜೇನು, ಕೋಲು ಜೇನು, ತುಡುವಿ ಜೇನು, ಮುಜೆಂಟಿ ಜೇನು ತಳಿಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ವಿದೇಶಿ ತಳಿ ಎಪಿಸ್‌ ಮೆಲ್ಲಿಪೆರಾವನ್ನು ವ್ಯಾಪಕವಾಗಿ ಜೇನು ಸಾಕಾಣಿಕೆಯಲ್ಲಿ ಬಳಲಾಗುತ್ತಿದೆ. ಜೇನು ಸಾಕಾಣಿಕೆ ವಿಧಾನ, ಅದರ ಲಾಭಗಳು ಸೇರಿದಂತೆ ವಿವಿಧ ಮಾಹಿತಿಗಳು ಮೇಳದಲ್ಲಿ ಲಭ್ಯವಾಗಲಿದೆ.

ಏನಿದು ಜೇನು ಮೇಳ: ಜಿಲ್ಲೆಯಲ್ಲಿ ಜೇನು ಕೃಷಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ರೈತರು-ಸಾರ್ವಜನಿಕರಿಗೆ ಜಾಗೃತಿ ಮಾಡಿಸಲು ಮೇಳದ ಅವಶ್ಯಕತೆ ಅರಿತ ತೋಟಗಾರಿಕೆ ಇಲಾಖೆ ಇಂತಹದೊಂದು ಮೇಳ ಆಯೋಜನೆಯತ್ತ ಹೆಜ್ಜೆ ಹಾಕಿದೆ. ಜೇನು ತುಪ್ಪದ ಉತ್ಪಾದನೆಯ ಹೆಚ್ಚಳ ಜತೆ ಅದರ ಉಪ ಉತ್ಪನ್ನಗಳ ಉತ್ಪಾದನೆ, ಮಾರಾಟ ಬಗ್ಗೆ ಜಾಗೃತಿ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಕಲ್ಪಿಸುವ ಉದ್ದೇಶ ಈ ಮೇಳ ಹೊಂದಿದೆ. ಅದಕ್ಕಾಗಿ ಮೂರು ದಿನಗಳ ಕಾಲ ಮೇಳ ಆಯೋಜಿಸಲು ಚಿಂತಿಸಲಾಗಿದ್ದು, ಮಾವು ಮೇಳದಂತೆ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲೇ ಮಳಿಗೆಗಳನ್ನು ನಿರ್ಮಿಸಿ ಆ ಮೂಲಕ ಜೇನು ಕೃಷಿ ಬಗ್ಗೆ ಪ್ರಾತ್ಯಕ್ಷಿತೆ ನೀಡಲು ಯೋಚಿಸಲಾಗಿದೆ.

ಜೇನು ಉಪ ಉತ್ಪನ್ನಗಳ ಪ್ರದರ್ಶನ: ಜೇನು ಕೃಷಿ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಮೀಸಲಿರುವ ಐದು ಕೋಟಿ ಅನುದಾನದಲ್ಲಿ ಧಾರವಾಡ ಜಿಲ್ಲೆಗಾಗಿ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಹೀಗಾಗಿ ಜೇನು ಕೃಷಿ ತರಬೇತಿ, ಜೇನು ಕುಟುಂಬ, ಪೆಟ್ಟಿಗೆ ಸಹಾಯಧನ ರೂಪದಲ್ಲಿ ಆಸಕ್ತ ರೈತರಿಗೆ ವಿತರಿಸುವ ಬಗ್ಗೆ ಜಾಗೃತಿ ಮೂಡಿಸಲು ಈ ಮೇಳವನ್ನು ಬಳಸಿಕೊಳ್ಳಲು ಮುಂದಾಗಿದೆ. ಇಷ್ಟೆ ಅಲ್ಲ ಜೇನಿನ ಉಪ ಉತ್ಪನ್ನಗಳಾದ ಪರಾಗ, ರಾಜಶಾಯಿ ರಸ, ಜೇನು ಮೇಣ ಸೇರಿದಂತೆ ಇತರೆ ಉತ್ಪನ್ನಗಳ ಬಗ್ಗೆ ಪ್ರದರ್ಶನ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಜೇನು ಕೃಷಿ ರೈತರು ಹಾಗೂ ಜೇನು ತುಪ್ಪ ತಯಾರಿಕಾ ಕಂಪನಿಗಳ ಜತೆ ಮಾತುಕತೆ ನಡೆಸಲಾಗಿದೆ. ಒಟ್ಟಿನಲ್ಲಿ ಜೇನು ಕೃಷಿ ಜತೆಗೆ ರುಚಿಗಟ್ಟಾದ ಜೇನು ತುಪ್ಪ ಸೇರಿದಂತೆ ಅದರ ಇನ್ನಿತರ ಉಪಉತ್ಪನ್ನಗಳು ಸಹ ಮೇಳದಲ್ಲಿ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲು ತಯಾರಿ ನಡೆದಿದೆ.

ಜಿಲ್ಲೆಯ ಅಳ್ನಾವರ, ನವಲೂರ, ಮಂಡಿಹಾಳ, ಕುಂದಗೋಳ ಸೇರಿದಂತೆ ಒಟ್ಟು 50 ಜನ ರೈತರು ಜೇನು ಕೃಷಿ ಮಾಡುತ್ತಿದ್ದಾರೆ. ಅವರಿಂದ ವರ್ಷಕ್ಕೆ 2 ರಿಂದ 4 ಕೆ.ಜಿ. ಜೇನು ತುಪ್ಪ ಉತ್ಪಾದನೆ ಆಗುತ್ತಿದೆ. ಆ ಪೈಕಿ ಅದು ಅವರವರ ಮನೆಗಾಗಿ ಬಳಕೆ ಆಗುತ್ತಿದ್ದರೆ ಕೆಲವೊಂದಿಷ್ಟು ಮಾರಾಟ ಆಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಜೇನು ಕೃಷಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮೇಳ ಸಹಕಾರಿ ಆಗಲಿದ್ದು, ಈ ಮೇಳ ಯಶಸ್ಸು ಕಂಡರೆ ಪ್ರತಿ ವರ್ಷವೂ ಮಾಡುವ ಚಿಂತನೆ ತೋಟಗಾರಿಕೆ ಇಲಾಖೆಗೆ ಇದೆ.

• ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

Modi 2

SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ

15

ಕಪಿಲ್‌ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ

Channagiri riot; 25 accused arrested in four cases

Channagiri riot; ನಾಲ್ಕು ಪ್ರಕರಣಗಳಲ್ಲಿ 25 ಮಂದಿ ಆರೋಪಿಗಳ ಬಂಧನ

14

ʼಮಾರ್ಟಿನ್‌ʼ ಬಳಿಕ ʼಕೆಡಿʼ ಬಗ್ಗೆ ಬಿಗ್‌ ನ್ಯೂಸ್‌ ಕೊಟ್ಟ ಧ್ರುವ: ಈ ವರ್ಷ ರಿಲೀಸ್‌ ಪಕ್ಕಾ

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

AAP;  ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

9

Crime: 4 ತಿಂಗಳಿನಲ್ಲಿ 1646 ಅಪರಾಧ ಪ್ರಕರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pune-Bangalore ಹೊಸ ಹೆದ್ದಾರಿಗೆ ಚಾಲನೆ ನೀಡಲು ಸಿದ್ಧತೆ

Pune-Bangalore ಹೊಸ ಹೆದ್ದಾರಿಗೆ ಚಾಲನೆ ನೀಡಲು ಸಿದ್ಧತೆ

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

Drugs Case; ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಪಂಜಾಬ್ ಅನ್ನು ಮೀರಿಸಲಿದೆ; ಜೋಶಿ

hubli

Hubli:ಬಸ್‌ ಸೋರದಿದ್ದರೂ ಕೊಡೆ ಹಿಡಿದು ಚಾಲನೆ; ಮೋಜಿಗಾಗಿ ಮಾಡಿದ ತಪ್ಪಿಗೆ ಅಮಾನತು ಶಿಕ್ಷೆ

sಬರದ ಬೆನ್ನಲ್ಲೇ ರೈತರಿಗೆ ಬಿತ್ತನೆ ಬೀಜ ದರ ಏರಿಕೆಯ ಆಘಾತ

ಬರದ ಬೆನ್ನಲ್ಲೇ ರೈತರಿಗೆ ಬಿತ್ತನೆ ಬೀಜ ದರ ಏರಿಕೆಯ ಆಘಾತ

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Modi 2

SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ

15

ಕಪಿಲ್‌ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ

Channagiri riot; 25 accused arrested in four cases

Channagiri riot; ನಾಲ್ಕು ಪ್ರಕರಣಗಳಲ್ಲಿ 25 ಮಂದಿ ಆರೋಪಿಗಳ ಬಂಧನ

14

ʼಮಾರ್ಟಿನ್‌ʼ ಬಳಿಕ ʼಕೆಡಿʼ ಬಗ್ಗೆ ಬಿಗ್‌ ನ್ಯೂಸ್‌ ಕೊಟ್ಟ ಧ್ರುವ: ಈ ವರ್ಷ ರಿಲೀಸ್‌ ಪಕ್ಕಾ

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.