ಹೊಸಂಗಡಿ ರಾಜ್ಯ ಹೆದ್ದಾರಿ: ಅಸಮರ್ಪಕ ಸೇತುವೆ ಕಾಮಗಾರಿ

50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ

Team Udayavani, Jul 3, 2019, 5:12 AM IST

hosangady

ಹೊಸಂಗಡಿ: ಉಡುಪಿ – ಶಿವಮೊಗ್ಗ ರಾಜ್ಯ ಹೆದ್ದಾರಿಯ ಹೊಂಸಗಡಿ ಪೇಟೆಯ ತಿರುವಿನಲ್ಲಿರುವ ಸೇತುವೆ ಕಾಮಗಾರಿ ಅಸಮರ್ಪಕವಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೇತುವೆಯಿಂದ ರಸ್ತೆಗೆ ಸಂಪರ್ಕಿಸುವವರೆಗೆ ಡಾಮರೀಕರಣವಾಗದೇ ಇರುವುದರಿಂದ ರಾಡಿಯೆದ್ದು, ಕೆಸರುಮಯವಾಗಿದೆ.

ಕುಂದಾಪುರ, ಸಿದ್ದಾಪುರದಿಂದ ಬಾಳೆಬರೆ ಘಾಟಿ ಮೂಲಕವಾಗಿ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಹೊಸಂಗಡಿ ತಿರುವಿನಲ್ಲಿ ಕೆಲ ತಿಂಗಳ ಹಿಂದೆ ಸೇತುವೆ ಕಾಮಗಾರಿ ನಡೆದಿದೆ. ಆದರೆ ಅದನ್ನು ಪೂರ್ಣಪ್ರಮಾಣದಲ್ಲಿ ಮಾಡದೇ ಇರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

50 ಲಕ್ಷ ರೂ. ವೆಚ್ಚ

ಈ ಸೇತುವೆಗೆ ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿ ಅವರ ನಿರ್ದೇಶನದಡಿ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡು, ಮೇ ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಆಗ ಸೇತುವೆ ಅವ್ಯವಸ್ಥೆಯಿಂದಾಗಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಬಳಿಕ ಸ್ಥಳೀಯ ಜಿ.ಪಂ. ಸದಸ್ಯ ರೋಹಿತ್‌ ಕುಮಾರ್‌ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿ, ದುರಸ್ತಿಗೆ ಅವರ ಮೂಲಕ ಒತ್ತಾಯಿಸಲಾಗಿತ್ತು. ಮತ್ತೆ ದುರಸ್ತಿ ಮಾಡಲಾಗಿ, ಈಗ 15-20 ದಿನಗಳ ಹಿಂದಷ್ಟೇ ಈ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಆದರೆ ಇನ್ನೂ ಕೂಡ ಈ ಸೇತುವೆಗೆ ಪ್ರೊಟೆಕ್ಷನ್‌ ವಾಲ್, ಡಾಮರೀಕರಣ ಇತ್ಯಾದಿ ಕಾಮಗಾರಿ ಆಗಿಲ್ಲ. ಸೇತುವೆ ಕೆಲಸ ಮುಗಿದಿದ್ದರೂ, ರಸ್ತೆಯವರೆಗೆ ಕಾಂಕ್ರೀಟೀಕರಣವಾಗದೇ ಮಣ್ಣಿನ ರಸ್ತೆಯಿಡೀ ಕೆಸರುಮಯವಾಗಿದೆ.

ಅಪಾಯಕಾರಿ ತಿರುವು

ಹೊಸಂಗಡಿ ಪೇಟೆಯಲ್ಲಿರುವ ಈ ಸೇತುವೆ ಸಮೀಪದ ತಿರುವು ಅತ್ಯಂತ ಅಪಾಯಕಾರಿಯಾಗಿದೆ. ಸೇತುವೆ ಕಾಮಗಾರಿಯು ಅಪೂರ್ಣವಾಗಿರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದಲೇ ಸಂಚರಿಸಬೇಕಾಗಿದೆ. ಘನ ವಾಹನಗಳು ಸಂಚರಿಸುವ ರಾಜ್ಯ ಹೆದ್ದಾರಿ ಇದಾಗಿರುವುದರಿಂದ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ.

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

SUNಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

ಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Udupi: ಎದೆ ನೋವಿನಿಂದ ವ್ಯಕ್ತಿ ಸಾವು

Udupi: ಎದೆ ನೋವಿನಿಂದ ವ್ಯಕ್ತಿ ಸಾವು

7

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಮಾಜಿ ಶಾಸಕ ರಘುಪತಿ ಭಟ್‌ ಬಿಜೆಪಿ ಪಕ್ಷದಿಂದ ಉಚ್ಚಾಟನೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಐವರು

Hassan; ಟ್ರಕ್ ಕಾರು ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಕೊನೆಯುಸಿರೆಳೆದ ಆರು ಜನರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.