ಕಲಾವಿದರಿಗೆ ಆಸರೆಯ ವೇದಿಕೆ ರಂಗಸ್ಥಳ


Team Udayavani, Sep 6, 2019, 5:03 AM IST

b-12

ಯಕ್ಷಗಾನಕ್ಕಾಗಿಯೇ ತೊಡಗಿಸಿಕೊಂಡಿರುವ ಹತ್ತಾರು ವಾಟ್ಸಾಪ್‌ ವೇದಿಕೆಗಳಿವೆ.ಈ ಪೈಕಿ ರಂಗಸ್ಥಳ ವಾಟ್ಸಾಪ್‌ ಗ್ರೂಪ್‌ ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ . ಯಕ್ಷಗಾನ ಕಲಾವಿದರ ಹಿತಾಸಕ್ತಿ , ಸಂಕಷ್ಟಗಳಿಗೆ ಪೂರಕವಾಗಿ ರಂಗಸ್ಥಳ ವಾಟ್ಸಾಪ್‌ ವೇದಿಕೆಯು ಕಾರ್ಯಾಚರಿಸುತ್ತಿದೆ .

2016ರಲ್ಲಿ ಗಣೇಶ್‌ ಕಾಮತ್‌ ಉಳ್ಳೂರುರವರು ಮಿತ್ರರೊಂದಿಗೆ ಯಕ್ಷಗಾನಕ್ಕಾಗಿಯೇ ಮೀಸಲಾದ ಯಕ್ಷಪ್ರೇಮಿಗಳು ಎಂಬ ವಾಟ್ಸಾಪ್‌ ಗ್ರೂಪ್‌ ರಚಿಸಿದರು . ಮುಂದೆ ರಂಗಸ್ಥಳ ಎಂಬ ಹೆಸರಿನಲ್ಲಿ ಈ ಗ್ರೂಪ್‌ ಬೆಳೆಯಿತು . 2017ರಲ್ಲಿ ಹಾಸ್ಯ ಕಲಾವಿದರಾದ ಅರುಣ ಜಾರ್ಕಳರು ಗುಡಿಸಲಲ್ಲಿ ವಾಸಿಸುತ್ತಿರುವ ಫೋಟೊವೊಂದು ವಾಟ್ಸಾಪ್‌ ಗ್ರೂಪ್‌ನ‌ಲ್ಲಿ ಕಾಣಿಸಿಕೊಂಡಿತು. ಜಾರ್ಕಳರಿಗೆಮನೆ ನಿರ್ಮಿಸಲು ನೆರವಾಗುವಂ‡ತೆ ಗ್ರೂಪಲ್ಲಿ ಮನವಿ ಮಾಡಿದಾಗ ಅನೇಕರು ಸಹಾಯಧನ ಘೋಷಿಸಿದರು. ಉತ್ತಮ ಮೊತ್ತ ಕೂಡಿ ಬಂತು . ಇದೇ ಉತ್ಸಾಹದಲ್ಲಿ ಬಡ ಯಕ್ಷಗಾನ ಕಲಾವಿದರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ವಾಟ್ಸಾಪ್‌ ಗ್ರೂಪಲ್ಲೇ ಸಮಾಲೋಚನೆ ನಡೆಯಿತು . ಅಂತಿಮವಾಗಿ ಇದಕ್ಕೊಂದು ಟ್ರಸ್ಟ್‌ ರಚಿಸಲು ತೀರ್ಮಾನ ಕೈಗೊಂಡರು . ತತ್ಪರಿಣಾಮವಾಗಿ ರಂಗಸ್ಥಳ ಫೌಂಡೇಶನ್‌ ಟ್ರಸ್ಟ್‌ ( ರಿ. ) ಎಂಬ ಸಂಸ್ಥೆ ನೋಂದಣೆಗೊಂಡಿತು.

ಯಕ್ಷಗಾನ ಕಲಾವಿದರ ಹಿತರಕ್ಷಣೆಗಾಗಿ ರೂಪುಗೊಂಡ ರಂಗಸ್ಥಳ ಫೌಂಡೇಶನ್‌ ಟ್ರಸ್ಟ್‌ ಎರಡು ವರ್ಷಗಳಿಂದ ಹಲವಾರು ಯಕ್ಷಗಾನ ಕಲಾವಿದರಿಗೆ ನೆರವಾಗಿದೆ. ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಶಕ್ತ ಕಲಾವಿದರಿಗೆ ನೆರವು ನೀಡುವ ಸಂಪ್ರದಾಯವನ್ನು ರಂಗಸ್ಥಳ ಫೌಂಡೇಶನ್‌ ಪಾಲಿಸಿಕೊಂಡು ಬಂದಿದೆ . ಈ ಸಲದ ವಾರ್ಷಿಕೋತ್ಸವ ಸೆ.8ರಂದು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಜರುಗಲಿದೆ .

ಈ ಸಂದರ್ಭದಲ್ಲಿ ಕಲಾವಿದರಾದ ಉದಯ ಕೊಠಾರಿ ಮತ್ತು ನಾರಾಯಣ ದೇವಾಡಿಗರಿಗೆ ಚಿಕಿತ್ಸೆಗಾಗಿ ತಲಾ ರೂ .25,000 ನೀಡಲಾಗುವುದು. ಯಕ್ಷಗಾನ ಮುಖವರ್ಣಿಕೆ ಹಾಗೂ ವೇಷಭೂಷಣಗಳ ಪ್ರಾತ್ಯಕ್ಷಿಕೆ , ಅಗಲಿದ ಹಿರಿಯ ಕಲಾವಿದರಾದ ದಿ .ಮೊಳಹಳ್ಳಿ ಹೆರಿಯ ನಾಯಕ್‌ , ದಿ.ನೀಲಾವರ ಮಹಾಬಲ ಶೆಟ್ಟಿ ಹಾಗೂ ದಿ. ಬೆಲೂ¤ರು ರಾಮ ಬಳೆಗಾರರ ಸಂಸ್ಮರಣೆ ಹಾಗೂ ತಾಳಮದ್ದಳೆ ಕೂಟ ಈ ಸಂದರ್ಭದಲ್ಲಿ ಜರುಗಲಿದೆ .

ಎಂ.ಶಾಂತರಾಮ ಕುಡ್ವ

ಟಾಪ್ ನ್ಯೂಸ್

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.