ವಾಟ್ಸಾಪ್‌ ಕತೆ : ನೇಪಾಲಿ ಗಾರ್ಡ್‌

Team Udayavani, Oct 20, 2019, 4:00 AM IST

c-10

ನಾನು ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷಾ ಉಪನಿಯಂತ್ರಕನಾಗಿ ಅಧಿಕಾರ ವಹಿಸಿಕೊಂಡು ವಾರವಷ್ಟೇ ಆಗಿತ್ತು. ಆಗ ಇಂಟರ್‌ನೆಟ್‌ ಸೌಲಭ್ಯವಿಲ್ಲದ ಕಾರಣ ಪ್ರಶ್ನೆಪತ್ರಿಕೆಗಳನ್ನು ಕಾಲೇಜುಗಳಿಗೆ ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸುವ ಪದ್ಧತಿ ಇತ್ತು.

ಆ ದಿನ ಬೆಳಿಗ್ಗೆ ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಹೋಗುವ ಹೊಣೆಗಾರಿಕೆ ನನ್ನದಾಗಿತ್ತು. ಪರೀಕ್ಷೆ 10 ಗಂಟೆಗೆ. ಆದ ರೂ ವಿವಿಯಿಂದ ಕಾಲೇಜು ತಲುಪಲು ಒಂದೂವರೆ ಗಂಟೆ ಪ್ರಯಾಣವಿದೆ. ಬೆಳಗ್ಗೆ 7.30ಕ್ಕೆ ಹೊರಡುವ ಒತ್ತಡವಿತ್ತು. ಕಾಲು ಗಂಟೆ ಮೊದಲೇ ವಿವಿ ತಲುಪಿ ಸೆಕ್ಯೂರಿಟಿ ಗಾರ್ಡನ ಬಳಿ ಪರೀಕ್ಷಾಂಗ ವಿಭಾಗದ ಮುಖ್ಯದ್ವಾರದ ಬೀಗದ ಕೈಯನ್ನು ತೆಗೆದುಕೊಂಡು, ಒಳಗಡೆ ಲಾಕರ್‌ನಲ್ಲಿರುವ ಪ್ರಶ್ನೆಪತ್ರಿಕೆಗಳ ಪ್ಯಾಕೆಟನ್ನು ಬ್ರಿàಫ್ಕೇಸಿನಲ್ಲಿ ಹಾಕಿ, ಡ್ರೈವರ್‌ ರಾಮನಿಗೆ ಕಾಯುವುದು ನನ್ನ ಯೋಜ ನೆ ಯಾಗಿತ್ತು.

ಆದರೆ, ನಡೆದದ್ದೇ ಬೇರೆ. ವಿವಿಯ ಸೆಕ್ಯೂರಿಟಿ ಗಾರ್ಡ್‌, “ಸಾರ್‌, ಮೈನೆ ಆಪ್ಕೊ ಪೆಹೆಲೆ ನಹಿ ದೆಖ ಹೈ, ಚಾವಿ ನಹಿ ದೆ ಸಕತ’ (ನಾನು ನಿಮ್ಮನ್ನು ಈ ಮೊದಲು ನೋಡಿಲ್ಲ, ಹಾಗಾಗಿ, ಕೀ ಕೊಡಲಾಗುವುದಿಲ್ಲ) ಎಂದುಬಿಟ್ಟ.

ನಾನು ನನ್ನ ಐಡಿ ಕಾರ್ಡ್‌ ತೋರಿಸಿದೆ. “ಐಸೆ ಕಾರ್ಡ್‌ ತೊ ಕೊಯಿಭೀ ಬನಾ ಸಕ್ತಾ ಹೈ ಸರ್‌’ (ಇಂತಹ ಕಾರ್ಡ್‌ ಯಾರು ಬೇಕಾದರೂ ಮಾಡಿಸಬಹುದು) ಎಂದು ಸುಮ್ಮನಾದ. ನನಗೋ, ಏಳೂವರೆಗೆ ಸಿದ್ಧನಾಗಬೇಕು ಎಂಬ ಒತ್ತಡ ಒಂದೆಡೆ, ಇಲ್ಲಿ ಕೀ ಕೊಡಲಾರೆ ಎನ್ನುತ್ತಿರುವ ಗಾರ್ಡ್‌ನ ಉದ್ಧಟತನ ಇನ್ನೊಂದೆಡೆ. ಏನು ಮಾಡುವುದು ಎಂದು ತೋಚದೆ, ಆತನಿಗೆ ನನ್ನ ಸಂಧಿಗ್ಧ ಪರಿಸ್ಥಿತಿ ವಿವರಿಸ ತೊಡಗಿದೆ. ನನ್ನ ಪರಿಸ್ಥಿತಿಯನ್ನು ಗ್ರಹಿಸಿದ ಆತನೇ ಒಂದು ಪರ್ಯಾಯ ಕ್ರಮವನ್ನು ಸೂಚಿಸಿದ. ಹತ್ತಿರದ ಅಪಾರ್ಟ್‌ಮೆಂಟ್‌ ನಲ್ಲಿರುವ ಯಾರಾದರೂ ಪರೀಕ್ಷಾಂಗ ವಿಭಾಗದ ನೌಕರರನ್ನು ಕರೆಸಿದರೆ, ಅವರ ಹೇಳಿಕೆಯ ನಂತರ ಕೀ ಕೊಡುವ ಆಶ್ವಾಸನೆ ಕೊಟ್ಟ. ಅಷ್ಟರಲ್ಲಿ ದೂರ ದಿಂದ ಡ್ರೈವರ್‌ ರಾಮ ಓಡಿ ಬರುತ್ತಿರುವುದು ಕಂಡಿತು. ಮೊದಲಿನಿಂದಲೂ ಪರೀಕ್ಷಾಂಗ ವಿಭಾಗದ ಕಾರನ್ನು ರಾಮನೇ ಓಡಿಸುತ್ತಿದ್ದರಿಂದ, ಅವನನ್ನು ನೋಡುತ್ತಲೇ ಗಾರ್ಡ್‌ ಕೀಯನ್ನು ನನ್ನ ಕೈಗಿಟ್ಟ. ನಂತರ ಎಲ್ಲವೂ ಸುಖಾಂತ.

ಆ ಕ್ಷಣಕ್ಕೆ ಆ ಗಾರ್ಡ್‌ನ ವರ್ತನೆ ನನಗೆ ಉದ್ಧಟತನ ಅನ್ನಿಸಿರಬಹುದು. ಆದರೆ, ಯಾರಾ ದರೂ ಕರ್ತವ್ಯ ನಿಷ್ಠೆಯ ಬಗ್ಗೆ ಮಾತನಾಡುವಾಗ ಅಥವಾ ಆಲೋಚಿಸಿದಾಗ ಆ ನೇಪಾಲಿಗಾರ್ಡ್‌ನ ಮುಖ ಇಂದಿಗೂ ಕಣ್ಣೆದುರು ಬರುತ್ತದೆ.

ಮಧುಕರ ಮಲ್ಯ ಎಚ್‌.

ಸೃಷ್ಟಿಯ ಸೋಜಿಗ
ಪಡಸಾಲೆಯಲ್ಲೊಂದು ಕೂಸು ಹುಟ್ಟಿತು. ಸರಿ ಸುಮಾರು ಅದೇ ಸಂದರ್ಭ ಅಡುಗೆ ಮನೆಯ ಮೂಲೆಯಲ್ಲಿ ಬೆಕ್ಕು ಮರಿ ಇಟ್ಟಿತು.

ಶಿಶುವಿನ ಹಸಿವರಿತು ಹೆತ್ತವಳು ಹಾಲುಣಿಸುವಳು. ಶುದ್ಧ ಜಳಕ ಮಾಡಿಸುವಳು. ಮುದ್ದಾಡುತ್ತ ಮಲಗಿಸುವಳು. ಅವಳೇನು, ಮನೆಮಂದಿಗಳೆಲ್ಲ ಕಾಲ ಕಾಲಕ್ಕೆ ಕಂದನ ಆರೈಕೆಯಲ್ಲಿಯೇ ನಿರತರು. ಬಂಧುಗಳು ಆಗಮಿಸುವರು. ಶುಭ ಹಾರೈಸಿ ಹೋಗುವರು.

ಮಗು ಬೆಳೆಯುವ ವಿವಿಧ ಹಂತಗಳನ್ನು ನೋಡಿ ಎಲ್ಲರೂ ಪುಳಕಗೊಳ್ಳುವರು. ಏನೇ ಇರಲಿ, ಪಾಪು ಎದ್ದು ಅಂಬೆಗಾಲಿಕ್ಕಲು ಸಹಜವಾಗಿ ಹತ್ತು ತಿಂಗಳ ಅವಧಿ ತುಂಬಬೇಕಲ್ಲವೆ?  ಅತ್ತ ಬೆಕ್ಕಿನ ಬಿಡಾರದಲ್ಲಿ ಅಮ್ಮನ ಮಡಿಲಲ್ಲಿ ಬಿದ್ದುಕೊಂಡಿದ್ದ ಮರಿಗಳೆರಡು ಬೆಳೆದು ಓಡಲಾರಂಭಿಸಿವೆ. ತಿಂಗಳೊಂದು ಕಳೆದಿಲ್ಲ, ಅಷ್ಟ ರಲ್ಲಿಯೇ ಅಂಗಳವಿಡೀ ಅವುಗಳ ತಕಥೈ ಆಟದ ಸಡಗರ.
ಏನು ಸೃಷ್ಟಿಯ ಸೋಜಿಗವೋ !

ಸುಬ್ರಹ್ಮಣ್ಯ ಬೈಪಾಡಿತ್ತಾಯ

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.