ವೀರೂ ಬರ್ತ್ಡೇಗೆ ಟ್ವೀಟ್ ಮಳೆ…
Team Udayavani, Oct 20, 2019, 11:45 PM IST
ಹೊಸದಿಲ್ಲಿ: ಕ್ರಿಕೆಟಿನಿಂದ ದೂರವಾದ ಬಳಿಕ ಸೆಹವಾಗ್ ಟ್ವಿಟರ್ನಲ್ಲಿ “ಫೋರ್, ಸಿಕ್ಸ್’ ಬಾರಿಸಿ ಅಭಿಮಾನಿಗಳಿಗೆ ಧಾರಾಳ ಮನೋರಂಜನೆ ನೀಡುತ್ತಿದ್ದಾರೆ. ರವಿವಾರ ಅವರ 41ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಬಂದ ಶುಭ ಹಾರೈಕೆಗಳು ಹಾಗೂ ಅವುಗಳಿಗೆ ಸೆಹವಾಗ್ ನೀಡಿರುವ ಚುರುಕಿನ ಉತ್ತರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಸಂಭ್ರಮ ಮುಂದೆಯೂ ಇರುತ್ತದೆ
“ವಿಶೇಷ ಸ್ನೇಹಿತನಿಗೆ ವಿಶೇಷವಾದ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಹುಟ್ಟುಹಬ್ಬ ಖುಷಿ ಮತ್ತು ನಗುವಿನಿಂದ ತುಂಬಿರಲಿ. ನಿಮ್ಮ ಈ ದಿನ ಮತ್ತು ವರ್ಷ ಅಮೋಘವಾಗಿರಲಿ ಬ್ರದರ್’ ಎಂದು ವಿವಿಎಸ್ ಲಕ್ಷ್ಮಣ್ ಹಾರೈಸಿದ್ದಾರೆ. ಇದಕ್ಕೆ ಸೆಹವಾಗ್, “ನಿಮ್ಮ ಮಾತೇ ಶ್ರೇಷ್ಠ ಸಹೋದರ. ಸಂಭ್ರಮ ಇಂದೂ ಇದೆ, ಮುಂದೆಯೂ ಇರುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
“ನಿರಂತರವಾಗಿ ನೀಡುತ್ತಿರುವ ಸ್ಫೂರ್ತಿಗೆ, ನಗುವಿಗೆ ಧನ್ಯವಾದಗಳು’ ಎಂಬ ಮಾಯಾಂಕ್ ಅಗರ್ವಾಲ್ ಟ್ವೀಟ್ಗೆ, “ಈಗ ನೀವೇ ನನಗೆ ಮತ್ತು ಕ್ರಿಕೆಟನ್ನು ಪ್ರೀತಿಸುವ ನನ್ನಂಥವರಿಗೆ ಸ್ಫೂರ್ತಿಯಾಗಿದ್ದೀರಿ. ಅವಕಾಶ ಸಿಕ್ಕಿದಾಗ ರನ್ ಗಳಿಸಲು ಇರುವ ಹಸಿವನ್ನು ಹೇಗೆ ನೀಗಿಸಿಕೊಳ್ಳಬೇಕೆಂದು ನೀವು ತೋರಿಸಿದ್ದೀರಿ. ಸದಾ ಶುಭ ಹಾರೈಕೆಗಳು’ ಎಂದು ಜವಾಬಿತ್ತಿದ್ದಾರೆ.
ಬಿಸಿಸಿಐ ಮಧ್ಯರಾತ್ರಿ ಟ್ವೀಟ್
ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಬಿಸಿಸಿಐ ಸೆಹವಾಗ್ಗೆ ಹುಟ್ಟುಹಬ್ಬದ ಶುಭ ಹಾರೈಸಿ ಟ್ವೀಟ್ ಮಾಡಿತು. ಬಿಸಿಸಿಐ ಸಮಯ ಪಾಲನೆಯನ್ನು ಮೆಚ್ಚಿಕೊಂಡ ಸೆಹವಾಗ್ “ಎಲ್ಲವೂ ಟೈಮಿಂಗ್ನ ಮೇಲೆ ನಿಂತಿದೆ. ಮಧ್ಯರಾತ್ರಿ ವೀಡಿಯೊ ಅಪ್ಲೋಡ್ ಮಾಡಿದ್ದೀರಿ. ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup ಕಾಮೆಂಟರಿ ಪ್ಯಾನೆಲ್ ಸೇರಿದ ಡಿ.ಕೆ; ಇಲ್ಲಿದೆ ವೀಕ್ಷಕ ವಿವರಣೆಗಾರರ ಪಟ್ಟಿ
IPL: ಸಿರಾಜ್, ದಯಾಳ್, ವೈಶಾಖ್ ಗೆ ಮುಗಿಯಿತಾ ಆರ್ ಸಿಬಿ ಪಯಣ; ಕೋಚ್ ಫ್ಲವರ್ ಹೇಳಿದ್ದೇನು?
Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ
ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?
T20 series; ಯುಎಸ್ ವಿರುದ್ಧ ಸರಣಿ ಸೋತ ಬಾಂಗ್ಲಾ ಹುಲಿಗಳು; ಎರಡನೇ ಪಂದ್ಯದಲ್ಲೂ ಸೋಲು
MUST WATCH
ಹೊಸ ಸೇರ್ಪಡೆ
“ಅನ್ಯ ರಾಜ್ಯಕ್ಕೆ ಹೂಡಿಕೆ: ಕಾಂಗ್ರೆಸ್ ದುರಾಡಳಿತ’; ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
Cyclone ; ಪಶ್ಚಿಮ ಬಂಗಾಳದಲ್ಲಿ ರೆಡ್ ಅಲರ್ಟ್: ಭಾನುವಾರ ರಾತ್ರಿ ಅಪ್ಪಳಿಸಲಿರುವ ಚಂಡಮಾರುತ
Fake ID Card; `ಹವಾ ಮೆಂಟೇನ್’ಗೆ ನಕಲಿ ಐಬಿ ವೇಷ ; ಪೊಲೀಸರ ಅತಿಥಿಯಾದ ಯುವಕ
Elephant Survey ನಾಗರಹೊಳೆ ಉದ್ಯಾನವನದಲ್ಲಿ 2ನೇ ದಿನದ ಆನೆ ಗಣತಿ ಯಶಸ್ವಿ
D. K. Shivakumar ಅಪಪ್ರಚಾರ ಮಾಡುವವರಿಗೆ ನಾಚಿಕೆಯಾಗಬೇಕು