ಡ್ರಗ್ಸ್ ಸಾಗಾಟ: ಐವರು ಪಾಕ್ ಪ್ರಜೆಗಳ ಬಂಧನ
Team Udayavani, Jan 7, 2020, 2:06 AM IST
ಅಹಮದಾಬಾದ್: ಬರೋಬ್ಬರಿ 175 ಕೋ. ರೂ. ಮೌಲ್ಯದ ಅಮಲು ಪದಾರ್ಥಗಳನ್ನು ಗುಜರಾತ್ಗೆ ಕಳ್ಳಸಾಗಣೆ ಮಾಡುತ್ತಿದ್ದ ಐವರು ಪಾಕಿಸ್ಥಾನಿ ಪ್ರಜೆಗಳನ್ನು ಗುಜರಾತ್ ಕರಾವಳಿಯಾಚೆ ಸೋಮವಾರ ಬಂಧಿಸಲಾಗಿದೆ.
ಮೀನುಗಾರಿಕಾ ದೋಣಿಯೊಂದರಲ್ಲಿ ಪ್ರಯಾಣಿಸುತ್ತಿದ್ದ ಇವರನ್ನು ಸಮುದ್ರ ಮಧ್ಯೆಯೇ ವಶಕ್ಕೆ ಪಡೆಯಲಾಗಿದೆ. ಇವರ ಬಳಿ 175 ಕೋ. ರೂ. ಮೌಲ್ಯದ 35 ಪ್ಯಾಕೆಟ್ ಹೆರಾಯಿನ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.