ವಿದೇಶಕ್ಕೆ ಹೋಗುವ ಮುನ್ನ…


Team Udayavani, Mar 18, 2020, 4:34 AM IST

ವಿದೇಶಕ್ಕೆ ಹೋಗುವ ಮುನ್ನ…

ವಿದೇಶದಲ್ಲಿ ಓದಬೇಕು ಎನ್ನುವುದು ಬಹುತೇಕರ ಕನಸು. ವಿದೇಶದಲ್ಲಿ ಶಿಕ್ಷಣ ಪೂರೈಸಿದರೆ ಉತ್ತಮ ಉದ್ಯೋಗವಕಾಶ ಸಿಗುವ ಜತೆಗೆ ಒಂದೊಳ್ಳೆ ಅನುಭವ ಸಿಗುತ್ತದೆ ಎನ್ನುವ ಕಾರಣಕ್ಕೆ ಅನೇಕರು ಸಾಗರದಾಚೆಯಲ್ಲಿ ಅಧ್ಯಯನ ನಡೆಸಲು ಬಯಸುತ್ತಾರೆ. ಇದೆಲ್ಲ ಹೌದಾದರೂ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವವರು ಕೆಲವು ವಿಷಯಯಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು.

ಗಮ್ಯ ಸ್ಥಳದ ಮಾಹಿತಿ ಇರಲಿ
ನೀವು ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಯೋಜನೆ ಇದ್ದರೆ ವಾಸ ಸ್ಥಾನದ ಬಗ್ಗೆ ಮಾಹಿತಿ ಕಲೆ ಹಾಕಿ. ಅಲ್ಲಿನ ಸಾರಿಗೆ ವ್ಯವಸ್ಥೆ, ಶಿಕ್ಷಣ ಸಂಸ್ಥೆಯಿಂದ ವಾಸ ಸ್ಥಾನಕ್ಕಿರುವ ದೂರ ಮುಂತಾದ ಸಂಗತಿಗಳನ್ನು ಮೊದಲೇ ತಿಳಿದುಕೊಳ್ಳಿ. ಯು.ಎಸ್‌. ಸ್ಟೇಟ್‌ ಡಿಪಾರ್ಟ್‌ಮೆಂಟ್‌ ನಿಯಮಿತವಾಗಿ ಆಯಾ ದೇಶಗಳಿಗೆ ಪ್ರಯಾಣದ ಮಾಹಿತಿಯನ್ನು ನೀಡುತ್ತಿರುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ.

ಕಾನೂನು ತಿಳಿದುಕೊಳ್ಳಿ
ಪ್ರತಿ ದೇಶ ಅದರದ್ದೇ ಆದ ಕಾನೂನು ಹೊಂದಿರುತ್ತದೆ ಮತ್ತು ಸ್ಥಳೀಯವಾಗಿ ಅದರದ್ದೇ ಆದ ರೀತಿ ರಿವಾಜುಗಳಿರುತ್ತವೆ. ಆವು ನಮ್ಮಲ್ಲಿರುವುದಕ್ಕಿಂತ ವಿಭಿನ್ನವಾಗಿರಬಹುದು. ಆದ್ದರಿಂದ ಅವುಗಳನ್ನು ಅರಿತಿರುವುದು ಅನಿವಾರ್ಯ. ಹೀಗಾಗಿ ಈ ಬಗ್ಗೆ ಮೊದಲೇ ಮಾಹಿತಿ ಕಲೆ ಹಾಕಿ. ಇನ್ನು ಕೆಲವು ದೇಶಗಳಲ್ಲಿ ಸೂಕ್ಷ್ಮ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಶಿಕ್ಷಾರ್ಹವಾಗಿರುತ್ತದೆ. ಉದಾಹರಣೆಗೆ ಅಮೇರಿಕದಲ್ಲಿ ಚೀನಾದ ಟಿಬೆಟಿಯನ್‌ ಹೋರಾಟಕ್ಕೆ ಬೆಂಬಲ ಸೂಚಿಸಿದರೆ ಬಂಧಿಸಲಾಗುತ್ತದೆ. ಇಂತಹ ವಿಚಾರ ಗಮನದಲ್ಲಿರಲಿ.

ಆರೋಗ್ಯ ಸಂರಕ್ಷಣೆಗೆ ಒತ್ತು ನೀಡಿ
ವಿದೇಶಕ್ಕೆ ತೆರಳುವ ಮುನ್ನ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ರೋಗ ನಿರೋಧಕ ಔಷಧಗಳನ್ನು ತೆಗೆದುಕೊಳ್ಳಿ. ಸಾಧಾರಣ ಆರೋಗ್ಯ ವಿಮೆ ವಿದೇಶಗಳಿಗೆ ಅನ್ವಯವಾಗುವುದಿಲ್ಲ. ಆದ್ದರಿಂದ ಟ್ರಿಪ್‌ ಇನ್ಸುರೆನ್ಸ್‌ ಬಗ್ಗೆ ತಿಳಿದುಕೊಳ್ಳಿ. www.insuremytrip.comನಂತಹ ವೆಬ್‌ಸೈಟ್‌ಗಳಿಂದ ವಿಮೆಗಳ ಮಾಹಿತಿ ಪಡೆಯಬಹುದು.

ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಿ
ಪ್ರಧಾನ ದಾಖಲೆಗಳಾದ ಪಾಸ್‌ಪೋರ್ಟ್‌, ವೀಸಾ ಮುಂತಾದವುಗಳ ಜೆರಾಕ್ಸ್‌ ಮಾಡಿ ಪ್ರತ್ಯೇಕ ತೆಗೆದಿಡಿ. ಜತೆಗೆ ಇವುಗಳ ಡಿಜಿಟಲ್‌ ಕಾಪಿ ನಿಮ್ಮ ಮೊಬೈಲ್‌ ಫೋನ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿರಲಿ. ದಾಖಲೆಗಳು ಕಳೆದು ಹೋದರೆ, ಕಳವಾದರೆ ಇವು ಸಹಾಯಕವಾಗುತ್ತವೆ. ರಾಯಭಾರಿ ಕಚೇರಿಗಳಿಗೆ ನಿಮ್ಮ ಫೋನ್‌ ನಂಬರ್‌, ಅಡ್ರೆಸ್‌ ನೀಡಿ. ಸ್ಥಳೀಯ ಭಾಷೆಗಳ ಅರಿವಿರಲಿ. ಕನಿಷ್ಠ ಪಕ್ಷ ಸಹಾಯ ಕೇಳಿವಷ್ಟಾದರೂ ಭಾಷೆ ಬರುವಂತಿರಲಿ.

ಸುರಕ್ಷತೆಗೆ ಆದ್ಯತೆ ನೀಡಿ
ಎಲ್ಲೇ ಹೋದರೂ ಪಿಕ್‌ ಪಾಕೆಟ್‌, ದರೋಡೆ ಎನ್ನುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಸಂಚರಿಸುವಾಗ ಎಚ್ಚರಿಕೆ ವಹಿಸಿ. ಅದರಲ್ಲೂ ರಾತ್ರಿ ಒಬ್ಬಂಟಿಯಾಗಿ ಪ್ರಯಾಣಿಸದಿರಿ. ನಿರ್ಲಕ್ಷ್ಯದಿಂದ ಓಡಾಡಬೇಡಿ. ವಾಸ ಸ್ಥಾನದಲ್ಲಿರುವ ವಸ್ತುಗಳನ್ನು ಸುರಕ್ಷಿತವಾಗಿಡಿ.

ರಾಜಕೀಯ, ನಾಗರಿಕ ಕಲಹಗಳಿಂದ ದೂರವಿರಿ
ಸಾವಿರಾರು ಜನ ಸೇರುವ ಪ್ರತಿಭಟನೆ, ಸರಕಾರದ ವಿರುದ್ಧದ ಹೋರಾಟದಿಂದ ದೂರವಿರಿ. ಕೆಲವೊಮ್ಮೆ ಪ್ರತಿಭಟನೆ ಹಿಂಸೆಗೆ ತಿರುಗಬಹುದು ಅಥವಾ ಇಲ್ಲಿ ಪಿಕ್‌ಪಾಕೆಟ್‌ ನಡೆಯಬಹುದು. ಆದ್ದರಿಂದ ಇದರ ತಂಟೆಗೆ ಹೋಗಬೇಡಿ. ಹೀಗೆ ಎಚ್ಚರಿಕೆಯಿಂದ ಇದ್ದರೆ ವಿದೇಶದಲ್ಲಿ ಉತ್ತಮ ಅನುಭವ ನಿಮ್ಮದಾಗುತ್ತದೆ.

- ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.